
ಮಡಿಕೇರಿ ಆ.27 NEWS DESK : ಕೊಡಗು ಜಿಲ್ಲೆಯ ಮಡಿಕೇರಿ ನಗರದ ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಸೆ.14 ರಂದು ನಡೆಯಲಿರುವ ಗಣೇಶೋತ್ಸವ’ ಹಬ್ಬದ ಪ್ರಯುಕ್ತ ಭಕ್ತಾದಿಗಳು ಒಡೆದ ಈಡುಗಾಯಿಗಳನ್ನು ದೇವಾಲಯದ ವತಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಆಸಕ್ತ ಬಿಡ್ಡುದಾರರಿಂದ ಬಹಿರಂಗ ಹರಾಜು ಮಾಡಲಾಗುವುದು. ಈಡುಗಾಯಿ ಬಹಿರಂಗ ಹರಾಜು ಸೆ.8 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಕಚೇರಿಯಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕ ಬಿಡ್ಡುದಾರರು ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಸಕ್ತ ಬಿಡ್ಡುದಾರರು ರೂ.10,000 ಮುಂಗಡ ಠೇವಣಿ ಹಣವನ್ನು “ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ” (Executive Officer, Sri Omkareshwara Temple, Madikeri) ಅವರ ಹೆಸರಿನಲ್ಲಿ ಡಿ.ಡಿ. ಅಥವಾ ನಗದು ಮೂಲಕ ಪಾವತಿಸಿ ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಎ.ಸಿ.ದೇವಯ್ಯ ಅಧ್ಯಕ್ಷರು, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಮೊ. 9448899567 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.









