ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಶೖತಿಲಯ ತಂಡದಿಂದ ಕೊಡಗು ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಕೊಡಗು ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಸಹಯೋಗದಲ್ಲಿ ಆಯೋಜಿತವಾದ ಶ್ರೀರಾಘವೇಂದ್ರ ಆರಾಧನೆ, ವಿಶ್ವಸಂಗೀತ ದಿನದ ಅಂಗವಾಗಿನ ದಾಸರ ಕೀತ೯ನೆ ಕಾಯ೯ಕ್ರಮವನ್ನು ಉದ್ಗಾಟನಾ ಕಾಯ೯ಕ್ರಮದಲ್ಲಿ ಡಾ.ಉದಯಶಂಕರ್ ಮಾತನಾಡಿದರು. , ದಾಸ ಪರಂಪರೆ ಈ ನಾಡಿನಲ್ಲಿ ಶ್ರೀಮಂತವಾಗಿದೆ. ಎಂಥ ಸಂಕಷ್ಟ, ಸವಾಲು ಎದುರಾದರೂ ದೇವರು ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತಾನೆ ಎಂಬ ನಂಬಿಕೆಯನ್ನು ದಾಸ ಪರಂಪರೆ ಸೃಷ್ಟಿಸಿದೆ ಎಂದೂ ಅವರು ಹೇಳಿದರು.
ಕೊಡಗು ಬ್ರಾಹ್ಮಣ ವಿದ್ಯಾಭಿವೖದ್ದಿ ನಿದಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಇಂಥ ಕಾರ್ಯಕ್ರಮಗಳಿಗೆ ಸಹಯೋಗ ನೀಡುತ್ತದೆ ಎಂದರು. ಕಲಾ ಸಂಸ್ಕೃತಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದೂ ಅವರು ಹೇಳಿದರು..
ಹಿರಿಯ ಪತ್ರಕತ೯ ಜಿ. ಚಿದ್ವಿಲಾಸ್ ಮಾತನಾಡಿ, ನಮ್ಮೊಳಗಿನ ನೋವು, ಸಂಕಟವನ್ನು ಮರೆ ಮಾಚುವಂಥ ಶಕ್ತಿ ಸಂಗೀತ ಪ್ರಕಾರಕ್ಕಿದೆ. ಅಂದಿನ ಕಾಲದಲ್ಲಿಯೇ ಹರಿದಾಸರು ಭಕ್ತಿ ಸಂಗೀತದ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಗೆ ಕಾರಣರಾಗಿದ್ದರು ಎಂದರು ಸಂಗೀತ, ಕೀರ್ತನೆಗಳು ತಮ್ಮಲ್ಲಿ ಹೊಂದಿರುವ ಅಘಾದ ಪ್ರಭಾವದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಂಗೀತ, ಭಜನೆ, ಯೋಗ, ಧ್ಯಾನ್ಸದತ್ತ ಇಂದಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಸಕ್ತರಾಗುತ್ತಿದ್ದಾರೆ ಎಂದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಂಸ್ಕೖತಿಕ ಕಾಯ೯ಕ್ರಮಗಳು ಅಪರೂಪವಾಗಿದೆ. ಕಲಾವಿದರೂ ಕಡಮೆ ಇದ್ದಾರೆ ಎಂಬ ಕೆಲವೇ ವಷ೯ಗಳ ಹಿಂದಿನ ದೂರುಗಳಿಗೆ ಅಪವಾದ ಎಂಬಂತೆ ಹೆಚ್ಚಿನ ಕಲಾವಿದರು ಸಕ್ರಿಯರಾಗಿ ಜಿಲ್ಲೆಯಲ್ಲಿ ಕಲಾಕಾಯ೯ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿದ್ದರೂ ಜಿಲ್ಲಾ ಕೇಂದ್ರ ಮಡಿಕೇರಿ, ತಾಲೂಕು ಕೇಂದ್ರಗಳಲ್ಲಿ ಕಲಾವಿದರಿಗೆ ಉತ್ತಮ ಗುಣಮಟ್ಟದ ಸಕಾ೯ರಿ ಕಲಾಭವನ ಇನ್ನೂ ದೊರಕದೇ ಇರುವುದು ವಿಪಯಾ೯ಸ. ಈ ನಿಟ್ಟಿನಲ್ಲಿ ಕಲಾವಿದರೆಲ್ಲರೂ ಒಗ್ಗಟ್ಟಾಗಿ ಸಕಾ೯ರದ ಗಮನ ಸೆಳೆದು ಉತ್ತಮ ಕಲಾಭವನ ಶೀಘ್ರವಾಗಿ ದೊರಕುವಂತೆ ಮಾಡಬೇಕಾಗಿದೆ ಎಂದರು.
ಶೖತಿಲಯ ತಂಡದ ಅಧ್ಯಕ್ಷೆ ವೀಣಾ ಎಸ್. ಹೊಳ್ಳ ಮಾತನಾಡಿ, 7 ವರ್ಷಗಳ ಹಿಂದೆ 4 ಮಹಿಳೆಯರಿಂದ ಆರಂಭವಾದ ಶೃತಿ ಲಯ ತಂಡ ಇಂದು 13 ಮಹಿಳೆಯರೊಂದಿಗೆ ಜಿಲ್ಲೆ ಮಾತ್ರ ಅಲ್ಲದೆ ರಾಜ್ಯದ ವಿವಿಡೆದೆ ಸಂಗೀತದ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದೆ ಈ ಮೂಲಕ ಯುವ ಪೀಳಿಗೆಯಲ್ಲಿ ಸಂಗೀತದ ಅಭಿರುಚಿ ಉಂಟು ಮಾಡಿದ ತೃಪ್ತಿ ತಂದಿದೆ ಎಂದರು.
ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಯೋಗದಲ್ಲಿ ಆಯೋಜಿತ ದಾಸರ ಕೀತ೯ನೆ ಕಾಯ೯ಕ್ರಮದಲ್ಲಿ ಜಿಲ್ಲೆಯ 15 ತಂಡಗಳು ಪಾಲ್ಗೊಂಡಿದ್ದವು.
ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು. ಜಯಲಕ್ಷ್ಮಿ ಕೆ ಮತ್ತು ತಂಡ. ಮಡಿಕೇರಿ., ಆರ್ಯ ವೈಷ್ಯ ಭಜನಾ ತಂಡ, ಕುಶಾಲನಗರ, ವಿಜಯ ವಿನಾಯಕ ತಂಡ, ಮಡಿಕೇರಿ. ದೇವರಕೊಲ್ಲಿ ಭಜನಾ ತಂಡ, ಭಗವತಿ ವಿಪ್ರ ಮಹಿಳಾ ಸಂಘ, ಗೋಣಿಕೊಪ್ಪ, ಮೇಘಾ ಭಟ್ ಮತ್ತು ತಂಡ, ಮಡಿಕೇರಿ. ಕೋದಂಡ ರಾಮ ಭಜನಾ ತಂಡ. ಮಡಿಕೇರಿ , ಪ್ರಜ್ಞಾ ಕಲಾ ಕೇಂದ್ರ ಮಡಿಕೇರಿ, ಶ್ರೀ ವತ್ಸ ಸಂಘ, ಮಡಿಕೇರಿ, ಕನ್ನಿಕಾ ಪರಮೇಶ್ವರಿ ತಂಡ ಮಡಿಕೇರಿ., ನೃತ್ಯ ಭಜನೆ ತಂಡ ಉಡುವತ್ ಮೊಟ್ಟೆ (ಎ ), ನೃತ್ಯ ಭಜನೆ ತಂಡಉಡುವತ್ ಮೊಟ್ಟೆ(ಬಿ ), ರಾಮಾಂಜನೇಯ ಭಜನಾ ಮಂಡಳಿ ಮಹಿಳೆಯರ ತಂಡ , ರಾಮಾಂಜನೇಯ ಭಜನಾ ಪುರುಷರ ತಂಡ. ಮಡಿಕೇರಿಯಿಂ ದಿನವಿಡೀ ದಾಸರಕೀತ೯ನೆಯ ವೈಭವ ಕಂಡುಬಂತು.








