ಮಡಿಕೇರಿ, NEWS DESK ಆ. 30 – ನಗರದ ರೋಟರಿ ವುಡ್ಸ್ ಸಂಸ್ಥೆ ವತಿಯಿಂದ ನಮ್ಮ ಹಬ್ಬ ನಮ್ಮ ಸೇವೆ ಯೋಜನೆಯ ಅಂಗವಾಗಿ ರಕ್ಷಾ ಬಂಧನ್ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು.
ಮಡಿಕೇರಿ ನಗರ ಪೊಲೀಸ್ ಠಾಣೆ, , ನಗರ ಮಹಿಳಾ ಪೊಲೀಸ್ ಠಾಣೆ ಮತ್ತು ಮಡಿಕೇರಿ ಮಹಿಳಾ ಕಾಲೇಜ್ ನಲ್ಲಿರಕ್ಷಾ ಬಂಧನ್ ಆಚರಿಸಲಾಯಿತು.
ರಕ್ಷಾ ಸೂತ್ರವು ಕೇವಲ ಹಬ್ಬದ ದಿನ ಕ್ಯೆಗೆ ಕಟ್ಟುವ ದಾರವಲ್ಲ, ಅದು ರಕ್ಷಣೆ, ನಂಬಿಕೆ ಮತ್ತು ಶುಭಾಶಯಗಳನ್ನು ಸದಾ ಸಾರುವ ಪವಿತ್ರ ಸಂಕೇತವಾಗಿದೆ, ವೇದ ಕಾಲದಿಂದಲೂ ಯಜ್ಞ, ಪೂಜೆ ಮತ್ತು ಶುಭ ಕಾರ್ಯಗಳ ವೇಳೆ ಪವಿತ್ರ ಮಂತ್ರಗಳಿಂದ ಅಭಿಮಂತ್ರಿಸಿದ ರಕ್ಷಾಸೂತ್ರವನ್ನು ಕಟ್ಟುವ ಸಂಪ್ರದಾಯವಿದೆ… ಈ ದಾರವು ದುಷ್ಟಶಕ್ತಿಗಳಿಂದ ರಕ್ಷಿಸಿ ದ್ಯೆರ್ಯ, ಶುಭ ಮತ್ತು ಪವಿಕ ಕ್ರಪೆಯನ್ನು ನೀಡುತ್ತದೆ ಎಂಬ ನಂಬಿಕೆ ಇತ್ತು..ಕಾಲಕ್ರಮೇಣ ಇದೇ ಸಂಪ್ರದಾಯ ಕುಟುಂಬಗಳಲ್ಲಿಯೂ ಬೆಳೆದು, ಪರಸ್ಪರರ ಒಳಿತು, ಕ್ಷೇಮ ಮತ್ತು ಜವಾಬ್ದಾರಿಯನ್ನು ನೆನಪಿಸುವ ಪವಿತ್ರ ಬಂಧನವಾಯಿತು, ಆದ್ದರಿಂದ ರಕ್ಷಾ ಸೂತ್ರದ ಮಹತ್ವ ಅದನ್ನು ಕಟ್ಟುವ ಭಕ್ತಿ, ನಂಬಿಕೆ ಮತ್ತು ಒಬ್ಬರನ್ನೊಬ್ಬರು ರಕ್ಷಿಸುವ ಸಂಕಲ್ಪ ಇದರಲ್ಲಿದೆ. ಎಂದು ರೋಟರಿ ಜಿಲ್ಲಾ *”ನಮ್ಮ ಹಬ್ಬ ನಮ್ಮ ಹೆಮ್ಮೆ”* ಯೋಜನೆಯ ಸಂಚಾಲಕರಾದ . ಸಂಪತ್ ಕುಮಾರ್ ಎಸ್. ಎಸ್ ,ಹೇಳಿದರು.
ಈ ಸಂಧರ್ಭ ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಮತ್ತು ಕಾರ್ಯದರ್ಶಿ, ಸ್ಮಿತಾ ಚೆಂಗಪ್ಪ ಹಾಜರಿದ್ದು ರಾಖಿ ಕಟ್ಟುವುದರ ಮೂಲಕ ಹಬ್ಬದ ಮಹತ್ವದ ಸಂದೇಶವನ್ನು ಸಾರಿದರು.








