ಮಡಿಕೇರಿ, NEWS DESK ಆ 31– ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ *ಗೋಲ್ಡನ್ ಸಾರ್ಜೆಂಟ್ ಜೇಷ್ಟ ಸುಬ್ಬಯ್ಯ ಎಂ.ಹೆಚ್* ಅವರು ಪ್ರತಿಷ್ಠಿತ ಅಖಿಲ ಭಾರತ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಈ ಶಿಬಿರವು 2026ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 11 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ.
ಫೈರಿಂಗ್ (ಗ್ರೂಪಿಂಗ್) ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ 3 ಕೆಡೆಟ್‌ಗಳ ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಜೇಷ್ಟ ಸುಬ್ಬಯ್ಯ ಒಬ್ಬರಾಗಿದ್ದಾರೆ.
ಕರ್ನಾಟಕದ ವಿವಿಧೆಡೆ ನಡೆದ 7 ಆಯ್ಕೆ ಶಿಬಿರಗಳಲ್ಲಿ ಜೇಷ್ಟ ಸುಬ್ಬಯ್ಯ ಭಾಗವಹಿಸಿ, ಗ್ರೂಪಿಂಗ್ ಶೂಟಿಂಗ್ ಸ್ಪರ್ಧೆಯಲ್ಲಿ 1.2 ಸೆಂ.ಮೀ ಗ್ರೂಪಿಂಗ್ ಸಾಧನೆ ಮಾಡುವ ಮೂಲಕ ಈ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ತಿಳಿಸಿದ್ದಾರೆ.
ಜೇಷ್ಟ ಸುಬ್ಬಯ್ಯ ಮರಗೋಡುವಿನ ಕೃಷಿಕ ಮಂಡಿರ ಎಂ.ವಿ. ಹರೀಶ್ ಮತ್ತು ವಿಮಾ ದಂಪತಿಯ ಪುತ್ರನಾಗಿದ್ದು 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಯ ಕೆಡೆಟ್ ಆಗಿದ್ದಾನೆ.








