ಮಡಿಕೇರಿ ಏ.22 NEWS DESK : ಸೋಮವಾರಪೇಟೆಯ ಖಾಸಗಿ ಕಲ್ಯಾಣ ಮಂಟದಲ್ಲಿ ಪರಿಶಿಷ್ಟ ಜನಾಂಗದವರ ಕುಂದುಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಶಿಷ್ಟ ಜನಾಂಗದವರ ಕುಂದುಕೊರತೆ ಸಭೆಯಲ್ಲಿ ಸುಮಾರು 48 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ದುರಸ್ತಿ, ಹಕ್ಕುಪತ್ರ ವಿತರಿಸುವುದು, ಮನೆ ದಾಖಲಾತಿ, ಅಕ್ರಮ ಸಕ್ರಮ, ಜಾಗ ಅತಿಕ್ರಮಣ ತೆರವುಗೊಳಿಸುವುದು, ಜಮೀನಿಗೆ ತೆರಳಲು ದಾರಿ ಬಿಡಿಸುವುದು, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕೃಷಿ, ಆಹಾರ, ಸೆಸ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ, ಹಕ್ಕುಪತ್ರ, ನಿವೇಶನ ಒದಗಿಸುವುದು, ಮನೆ ನಿರ್ಮಾಣ, ಕೃಷಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಇಂದಿನ ಕುಂದುಕೊರತೆ ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು. ಈ ಸಂದರ್ಭದಲ್ಲಿ ಮಾತನಾಡಿದ ಕುಂಬೂರಿನ ಸೋಮಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ಸಮಸ್ಯೆಗಳಿದ್ದು,…
ಲೇಖಕ: admin
ಸೋಮವಾರಪೇಟೆ ಏ.22 NEWS DESK : ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೋಮಹವನಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಮೂಡಿಗೆರೆಯ ತಂತ್ರಿಗಳಾದ ಶಿವಪ್ರಸಾದ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಭುವನೇಂದ್ರ, ಕಾರ್ಯದರ್ಶಿ ಅನಿಲ್ ಶೆಟ್ಟಿ, ಖಜಾಂಚಿ ಏಳುಮಲೈ ಇದ್ದರು.
ಮಡಿಕೇರಿ ಏ.22 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.23 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ತಂಬುಕುತ್ತಿರ ಮತ್ತು ಚಿರಿಯಪಂಡ, 10ಕ್ಕೆ ಕನ್ನಂಡ ಮತ್ತು ಕರಿನೆರವಂಡ, 11ಕ್ಕೆ ಅಮ್ಮಾಟಂಡ ಮತ್ತು ನಂದಿನೆರವಂಡ, ಮಧ್ಯಾಹ್ನ 12ಕ್ಕೆ ಪೆಬ್ಬಟಿರ ಮತ್ತು ದಾಸಂಡ ಹಾಗೂ 1 ಗಂಟೆಗೆ ಅಳಮೇಂಗಡ ಮತ್ತು ಚೊಟ್ಟೆಯಂಡಮಾಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಂಡಂಡ ಮತ್ತು ಪುದಿಯೊಕ್ಕಡ, 10ಕ್ಕೆ ಮುಕ್ಕಾಟಿರ (ಕುಂಜಲಗೇರಿ) ಮತ್ತು ಮೂಕೊಂಡ, 11ಕ್ಕೆ ಸಣ್ಣುವಂಡ ಮತ್ತು ಹಂಚೆಟ್ಟಿರ, ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತು ಕರವಂಡ, 1ಕ್ಕೆ ಮುಕ್ಕಾಟಿರ (ಕುಂಬಳದಾಳು) ಮತ್ತು ಸಿದ್ದಂಡ ಹಾಗೂ 2 ಗಂಟೆಗೆ ನೆರವಂಡ ಮತ್ತು ಬೊಳ್ಳೆರ *ಮೈದಾನ 3* ಮಹಿಳಾ ಕ್ರಿಕೆಟ್ ಬೆಳಿಗ್ಗೆ 10 ಗಂಟೆಗೆ ನಾಟೋಳಂಡ ಮತ್ತು ಮೇವಡ, 11ಕ್ಕೆ ಒಡಿಯಂಡ ಮತ್ತು ಮಂದನೆರವಂಡ, ಮಧ್ಯಾಹ್ನ 12ಕ್ಕೆ ಅರಮಣಮಾಡ ಮತ್ತು ಕಲಿಯಂಡ,…
ಮಡಿಕೇರಿ ಏ.22 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.22 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಮೋಟನಾಳಿರ ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ ಮೋಟನಾಳಿರ 25 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೋಟನಾಳಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಗಳನ್ನು ಗಳಿಸಿತು. ಚೌರೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 89 ರನ್ ಗಳನ್ನು ಸೇರಿಸಿ ಸೋಲು ಕಂಡಿತು. ಮಚ್ಚಮಾಡ ಮತ್ತು ಸರ್ಕಂಡ ನಡುವಿನ ಪಂದ್ಯದಲ್ಲಿ ಮಚ್ಚಮಾಡ 57 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಚ್ಚಮಾಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್ ಗಳನ್ನು ಸೇರಿಸಿತು. ಸರ್ಕಂಡ 6 ಓವರ್ ಗಳಲ್ಲಿ…
ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ನಡೆದ 10ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ ಬಿದ್ದಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಮತ್ತಿತರ ಕ್ರೀಡಾಕೂಟಗಳಲ್ಲಿ ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಸಾವಿರಾರು ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲ್ಲಿ ಡಾಮಿನೇಟರ್ ಮಾರ್ಗೊಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ವಿನಾಯಕ ಕೊಡಗು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಗೇರ ಫ್ರೆಂಡ್ಸ್ ಸುಳ್ಯ ಪ್ರಥಮ ಹಾಗೂ ಭರತ್ ಫ್ರೆಂಡ್ಸ್ ಬೆಳ್ಳಾರಿಮಾಡು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಮಹಿಳೆಯರ ಸ್ಪರ್ಧೆಯಲ್ಲಿ ಡಾಮಿನೇಟರ್ ಚೆಯ್ಯಂಡಾಣೆ ಪ್ರಥಮ ಮತ್ತು ಕಿಗ್ಗಾಲು ವಾರಿಯರ್ಸ್ ದ್ವಿತೀಯ ಸ್ಥಾನವನ್ನು ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಷಣ್ಮುಗ ಹೆಬ್ಬೆಟ್ಟಗೇರಿ ಎ ಮತ್ತು…
ಮಡಿಕೇರಿ ಜ.22 NEWS DESK : ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಮಾಜದ ವಾರ್ಷಿಕ ಮಹಾಸಭೆಯು ಮೇ 1 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧ್ಯಕ್ಷರಾದ ಟಿ.ಜಿ.ಗಣೇಶ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ವಿಎಸ್ಎಸ್ಎನ್ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ .ಆರ್.ಸುಬ್ರಹ್ಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಬಿಸಿಲಿನ ತೀವ್ರತೆಯ ಪರಿಣಾಮ : ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ಅಸಮರ್ಪಕವಾದಾಗ ಹೀಟ್ ಎಕ್ಸಾಸ್ಷನ್ ಅಥವಾ ಹೀಟ್ ಸ್ಟ್ರೋಕ್ ಉಂಟಾಗಬಹುದು : ಬರಹ : ಡಾ|| ಕೆ.ಬಿ.ಸೂರ್ಯ ಕುಮಾರ್, ಮಡಿಕೇರಿ* ಈಗಂತೂ ಬೇಸಿಗೆಯ ಕಾಲ. ಈ ಸಮಯದಲ್ಲಿ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಬಿಸಿಲಿನ ತೀವ್ರತೆ , ತಾಪ, ತಡೆಯಲಾರದಷ್ಟು ಹೆಚ್ಚಾಗಿದೆ. ಇದು ಎಲ್ ನೀನೋ ಎಂಬ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗಿ, ತಾಪಮಾನದಲ್ಲಿನ ಏರುಪೇರಿನಿಂದ ಉಂಟಾಗುತ್ತಿರುವ ಬದಲಾವಣೆ. ಇದರಿಂದ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ, ಅತಿ ಬಿಸಿಲಿನ ಮತ್ತು ಬರಗಾಲದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ದಿನಗಳಲ್ಲಿ ಹೊರಗೆ ಕೆಲಸ ಮಾಡುವುದು ಅಥವಾ ಪ್ರಯಾಣಿಸುವುದು ಅನಿವಾರ್ಯವಾಗಿರುವುದರಿಂದ, ಅದರ ತೀವ್ರತೆಯಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. *ಆರೋಗ್ಯ ಸಮಸ್ಯೆಗಳು* >> ಬಿಸಿಲಿನಲ್ಲಿ ದೀರ್ಘಕಾಲ ಕಾಲ ಕಳೆಯುವವರು ದೇಹದಲ್ಲಿ ನೀರಿನ ಕೊರತೆಯನ್ನು (ಡಿಹೈಡ್ರೇಶನ್) ಅನುಭವಿಸುತ್ತಾರೆ. ಇದರಿಂದ ತಲೆಸುತ್ತು, ದೌರ್ಬಲ್ಯ, ನಿಶಕ್ತಿ, ಚರ್ಮ ಒಣಗುವುದು, ತೀವ್ರ…
ಮಡಿಕೇರಿ NEWS DESK ಏ.22 : ನಿರ್ಗತಿಕರು, ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಸಂತೈಸುತ್ತಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ ನಿಂದ ತುರ್ತು ಆರೋಗ್ಯ ಸೇವಾ ಘಟಕವನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ರಾಜು ಬಾಯ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎನ್.ಚರಣ್ ಉಪಾಧ್ಯಕ್ಷರಾಗಿ ಷರೀಫ್ ಎಂ.ಯು ಹಾಗೂ ಕಾರ್ಯದರ್ಶಿಯಾಗಿ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಮಾತನಾಡಿದ ವಿಕಾಸ್ ಜನತಾ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಅವರು ತುರ್ತು ಆರೋಗ್ಯ ಸೇವಾ ಘಟಕದ ಮೂಲಕ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಅನಾರೋಗ್ಯ ಪೀಡಿತರು ಹಾಗೂ ಅಸಹಾಯಕರ ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಿ ಚಿಕಿತ್ಸೆಯನ್ನು ಒದಗಿಸಲು ಸಹಕಾರ ನೀಡಲಾಗುವುದು. ಅಲ್ಲದೆ ಆರೋಗ್ಯ ಸಂಬoಧಿತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಲಾಗುವುದು ಮತ್ತು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದರು. ವಿಕಾಸ್ ಜನತಾ ಸೇವಾ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಿ.ಕರಿಯಪ್ಪ, ಅಧ್ಯಕ್ಷ ನವೀನ್ ಬಿ.ಕೆ ಹಾಗೂ ಗೌರವ ಅಧ್ಯಕ್ಷ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ…
ಮಡಿಕೇರಿ ಏ.21 NEWS DESK : ಆದಿ ಶಂಕರಾಚಾರ್ಯರು 8 ನೇ ಶತಮಾನದಲ್ಲಿ ಜನಿಸಿ ರಾಷ್ಟ್ರದಲ್ಲಿ ಅದ್ವೈತ ವೇದಾಂತ ಸಿದ್ಧಾಂತದ ಪ್ರವರ್ತಕರಾಗಿ ಬೆಳಕು ಚೆಲ್ಲಿದ್ದಾರೆ ಎಂದು ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾಂಬಾ ದಂಪತಿಯ ಪುತ್ರರಾಗಿ ಜನಿಸಿದ ಶಂಕರಾಚಾರ್ಯ ಅವರು, ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ವೇದ ಉಪ ನಿಷತ್ತುಗಳಿಗೆ ಭಾಷ್ಯ ಬರೆದು ರಾಷ್ಟ್ರದದ್ಯಾಂತ ಸಂಚರಿಸಿ ಅದ್ವೈತ ತತ್ವವನ್ನು ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು. ಶಂಕರಾಚಾರ್ಯರು 8ನೇ ವಯಸ್ಸಿನಲ್ಲಿಯೇ ವೇದಗಳನ್ನು ಅಧ್ಯಯನ ಮಾಡಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದರು. 8ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಗೋವಿಂದ ಭಗವತ್ಪಾದರ ಬಳಿ ಶಿಷ್ಯರಾಗಿ ಬೆಳೆದರು ಎಂದು ಬಿ.ಜಿ.ಅನಂತಶಯನ ಅವರು ವಿವರಿಸಿದರು. ಅದ್ವೈತ ಸಿದ್ಧಾಂತದಲ್ಲಿ ಬ್ರಹ್ಮವೇ…
ಮಡಿಕೇರಿ ಏ.21 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆಯು ಶನಿವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು. ಬಳಗದಲ್ಲಿ ಪ್ರಾರಂಭ ಹಂತದಿಂದಲೂ, ಸದಸ್ಯರಾಗಿ, ಬಳಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿ, ಬಳಗದ ಯಶಸ್ಸಿಗೆ ಕಾರಣರಾಗಿ, ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರನ್ನು ಅಗಲಿದ ಹಿರಿಯ ಚೇತನ ಕುಶಾಲನಗರದಲ್ಲಿ ವಾಸವಿದ್ದ ಕಮಲ ಕರಿಯಪ್ಪ, ಹಿರಿಯ ಗಾಯಕರು, ಬಳಗದ ನಿರ್ದೇಶಕರೂ ಆಗಿದ್ದ ಮಡಿಕೇರಿಯ ಲಿಯಾಕತ್ ಅಲಿ ಹಾಗೂ ಬಳಗದ ಸಕ್ರೀಯ ಸದಸ್ಯರಾಗಿದ್ದ ತಮ್ಮಯ್ಯನವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಟಿ.ಪಿ.ರಮೇಶ್ ರವರು,ಇವರುಗಳ ಸಾಹಿತ್ಯ ಪರಿಷತ್ತಿನ, ಬಳಗದ ಸೇವೆಯನ್ನು ಸ್ಮರಿಸಿ ಮಾತನಾಡಿದರು. ಬಳಗದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಟಿ.ಪಿ.ರಮೇಶ್ ಧತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಮಹಾಸಭೆಯನ್ನು ನಡೆಸುವುದರ ಬಗ್ಗೆ ಚರ್ಚಿಸಲಾಯಿತು. ಲೋಕನಾಥ್ ಅಮೇಚೂರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ ಕಾಮತ್, ಟಿ.ಪಿ.ರಮೇಶ್, ಕೆ.ಟಿ.ಬೇಬಿಮ್ಯಾಥ್ಯೂ, ಉಮೇಶ್, ಕೋಶಾಧಿಕಾರಿ, ಕಡ್ಲೇರ ತುಳಸಿ ಮೋಹನ್, ಸುನೀತಾ ಪ್ರೀತು ಸಭೆಯಲ್ಲಿ ಹಾಜರಿದ್ದರು. ಕಾರ್ಯದರ್ಶಿ ಭಾರತಿ ರಮೇಶ್…






