ಲೇಖಕ: admin

ಮಡಿಕೇರಿ ಆ.22 NEWS DESK : ಕೇಂದ್ರ ಸರ್ಕಾರದ ಆಲಿಮ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆ ನೀಡುವ ಸಂಬಂಧ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗಲು ತಾಲ್ಲೂಕುವಾರು ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್, 27 ರಂದು ಕುಶಾಲನಗರ ತಾಲ್ಲೂಕಿಗೆ ಕುಶಾಲನಗರ ರೋಟರಿ ಸಭಾಂಗಣ, ಆಗಸ್ಟ್, 28 ರಂದು ಸೋಮವಾರಪೇಟೆ ತಾಲ್ಲೂಕಿಗೆ ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣ, ಆಗಸ್ಟ್, 29 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ಆಗಸ್ಟ್, 30 ಮತ್ತು 31 ರಂದು ಮಡಿಕೇರಿ ತಾಲ್ಲೂಕಿಗೆ ಮಡಿಕೇರಿಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗಣದಲ್ಲಿ ಸಾಧನ ಸಲಕರಣೆಗಳನ್ನು ನೀಡುವ ಸಂಬಂಧ ಮೌಲ್ಯಮಾಪನ ಶಿಬಿರ ನಡೆಯಲಿದೆ. ಈ ದಿನಾಂಕಗಳಂದು ಶಿಬಿರಗಳಲ್ಲಿ ಭಾಗವಹಿಸುವ ವಿಶೇಷಚೇತನರು ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ…

Read More

ಮಡಿಕೇರಿ ಆ.22 NEWS DESK : ಕೊಡವ ಕೂಟಾಳಿಯಡ ಕೂಟದ ಮಹಾಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆ  ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷರಾದ ಚಂಗುಲಂಡ ಸೂರಜ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷರಾಗಿ ಬೊಜ್ಜಂಗಡ ಚೆಂಗಪ್ಪ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಬೊಜ್ಜಂಗಡ ಭವ್ಯ ದೇವಯ್ಯ, ಸಲಹೆಗಾರರಾಗಿ ಚೊಟ್ಟಂಡ ಪ್ರಭು ಸೋಮಯ್ಯ, ನಿರ್ದೇಶಕರಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್, ಕಾಳಮಂಡ ರಾಬಿನ್, ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತ ವಾಸುದೇವ ಹಾಗೂ ಮಾಚಿಮಾಡ ಡಿಂಪಲ್ ವಾಸು ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್ ಹಾಗೂ ಸದಸ್ಯರು ಹಾಜರಿದ್ದರು.

Read More

ವಿರಾಜಪೇಟೆ ಆ.22 NEWS DESK : ಯರವ ಸಮಾಜದ ವತಿಯಿಂದ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿಗಳನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯರವ ಸಮಾಜದ ಅಧ್ಯಕ್ಷ ಸಿದ್ದಪ್ಪ ಅವರು ಶಾಲೆಯ ಒಟ್ಟು 15 ಕ್ರೀಡಾಪಟುಗಳಿಗೆ ಜರ್ಸಿಗಳನ್ನು ವಿತರಿಸಿದರು. ನಂತರ ಮಾತನಾಡಿದ ಸಿದ್ದಪ್ಪ, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಅವಕಾಶದ ಕೊರತೆ ಹಿನ್ನೆಲೆಯಲ್ಲಿ ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಎರವ ಸಮಾಜ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಗಳನ್ನು ಗುರುತಿಸಿ ಅಲ್ಲಿನ ಕ್ರೀಡಾಪಟುಗಳನ್ನು ಉತ್ತೇಜಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎರವ ಸಮಾಜದ ಉಪಾಧ್ಯಕ್ಷ ಪಿ.ಎಂ.ರಘು, ಸಮಿತಿ ಸದಸ್ಯರಾದ ಶಶಿ, ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಎಂ. ರಾಘವೇಂದ್ರ, ನವೀನ್ ಬಾಸಿತ್ ಮೊದಲಾದವರು ಪಾಲ್ಗೊಂಡಿದ್ದರು.

Read More

ಮಡಿಕೇರಿ  ಆ.22 NEWS DESK : ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕೆ.ಶೈಲಶ್ರೀ ಅವರಿಗೆ ಶ್ರೀನಿವಾಸ ವಿಶ್ವವಿದ್ಯಾನಿಲಯ ಪೋಸ್ಟ್ ಡಾಕ್ಟರಲ್ ಪದವಿ ಲಭಿಸಿದೆ. ಇವರು ಪ್ರೊಫೆಸರ್ ಪಿ.ಎಸ್. ಐತ್ತಾಲ್, ಡೈರೆಕ್ಟರ್ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಅ ಎನಾಲಿಸಿಸ್ ಆಫ್ ಸೋಷಿಯೋ ಎಕನಾಮಿಕ್ ಫ್ಯಾಕ್ಟರ್ಸ್ ಎಫೆಕ್ಟಿಂಗ್ ಸೇವಿಂಗ್ಸ್ ಇನ್ವೆಸ್ಟ್ಮೆಂಟ್ ಹ್ಯಾಬಿಟ್ಸ್ ಅಂಡ್ ಸ್ಪೆಂಡಿಂಗ್ ಬಿಹೇವಿಯರ್- ಅ ಸ್ಟಡಿ ವಿದ್ ರೆಫರೆನ್ಸ್ ಟು ವಿಮೆನ್ ಟೀಚರ್ಸ್ ಇನ್ ಕೊಡಗು ಡಿಸ್ಟ್ರಿಕ್ಟ್  ಆಫ್ ಕರ್ನಾಟಕ” ಎಂಬ ಸಂಶೋಧನಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾನಿಲಯ ಪೋಸ್ಟ್ ಡಾಕ್ಟರಲ್ ಪದವಿಯನ್ನು ನೀಡಿ ಗೌರವಿಸಿದೆ.

Read More

ಸುಂಟಿಕೊಪ್ಪ ಆ.22 NEWS DESK : ಶ್ರೀ ವಿನಾಯಕ ಸೇವಾ ಸಮಿತಿ ಅಣ್ಣಪ್ಪಸ್ವಾಮಿ ದೇವಸ್ಥಾನ ಶ್ರೀ ದೇವಿ 11ನೇ ವರ್ಷದ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪುನೀತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಆಯ್ಕೆಗೊಳಿಸಲಾಗಿದೆ. ಉಪಾಧ್ಯಕ್ಷರಾಗಿ ಮನುಕುಮಾರ್, ಖಜಾಂಜಿಯಾಗಿ ಮೋಹನ ಸಹ ಕಾರ್ಯದರ್ಶಿಗಳಾಗಿ ಶಿವಪ್ರಸಾದ್,ಅನಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿ, ಮುರುಗ, ಬಿಂದು ಮಣಿ,ವಸಂತ,ದಯಾನಂದ,ಕಿರಣ್,ಸುಧಿ ಸಂಜು ಗೌರವ ಅಧ್ಯಕ್ಷರುಗಳಾಗಿ ಶಿವಪ್ಪ, ರಾಜ,ಆನಂದ,ರಾಜುರೈ,ಶರತ್,ವಿವೇಕ್ ರೈ, ಕುಶಾಲಪ್ಪ ಇವರುಗಳನ್ನು ಆಯ್ಕೆಗೊಳಿಸಲಾಯಿತು.

Read More

ಅಬುಧಾಬಿ  NEWS DESK ಆ.21 : ಕೋವಿಡ್ ಕಾಲದಲ್ಲಿ ದುಬೈ ಪೊಲೀಸರು ಮತ್ತು ದುಬೈ ಹೆಲ್ತ್ ಅಥಾರಿಟಿ ಜೊತೆ ಸೇರಿ ಮಾಡಿದ ಸಮಾಜ ಸೇವೆಗಾಗಿ ವತನನಿ ಅಲ್ ಎಮರಾಥಿ ಸಂಸ್ಥೆ ವತಿಯಿಂದ ದುಬೈ ಎಕ್ಸ್ಪೋ ವೇದಿಕೆಯಲ್ಲಿ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ರಾಶಿದ್ ಅಲ್ ಮಕ್ತುಮ್ ಅವರು ನೇರವಾಗಿ ಪಾಲ್ಗೊಂಡ ಕೋವಿಡ್ ವಾಲಂಟೀರ್ಸ್ ಧನ್ಯತಾ ಸಮಾರಂಭದಲ್ಲಿ ರಫೀಕಲಿ ಕುಂಡಂಡ ಕುಂಜಿಲ ಅವರು ಕೋವಿಡ್ ಹೀರೋಸ್ ಪ್ರಶಸ್ತಿ ಪಡೆದಿದ್ದಾರೆ, ಪ್ರಶಸ್ತಿಯನ್ನು ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಹುಮಾನಿಟೇರಿಯನ್ ಅಂಡ್ ಚಾರಿಟಿ ಕಚೇರಿಗೆ ತೆರಳಿ ಪಡೆದುಕೊಂಡರು.ಕೋವಿಡ್ ಕಾಲದಲ್ಲಿ ತಮ್ಮ ಮನೆಯ ಬಾಗಿಲ ಹೊರಗೆ ಸಹ ಬರಲು ಹೆದರುತ್ತಿದ್ದ, ತಿಂಗಳುಗಟ್ಟಲೆ ಹೊರಹೋಗಲಾಗದೆ ಊಟಕ್ಕೂ ಸಹ ಕಷ್ಟಪಡುತ್ತಿದ್ದ ಜನರಿಗೆ ಮತ್ತು ಕೋವಿಡ್ ಸೋಂಕು ಹಿಡಿದು ಸಂಕಷ್ಟದಲ್ಲಿದ್ದ ಜನರಿಗೆ ತಮ್ಮ ಆರೋಗ್ಯವನ್ನು ಚಿಂತಿಸದೆ ರಸ್ತೆಗೆ ಇಳಿದು  ಅನ್ನ, ನೀರು ಮತ್ತು ಔಷಧಿಗಳನ್ನು ತಲುಪಿಸಿದ್ದ ಹಾಗೂ ಕೋವಿಡ್ ಸೋಂಕಿತರನ್ನು ಆಸ್ಪತ್ರೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದ…

Read More

ಕುಶಾಲನಗರ NEWS DESK ಆ.21 : ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿಂದ ಹಾರಂಗಿ ಸಂಗಮ ತನಕ ಕಾವೇರಿ ನದಿ ತಟದ ಹಲವು ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಮೂಲಕ  ಮಹಾ ಆರತಿ ಕಾರ್ಯಕ್ರಮ ನಡೆಯಿತು. ಭಾಗಮಂಡಲ ಕುಂದಚೇರಿ, ಕಕ್ಕಬೆ, ಗುಹ್ಯ ಕೂಡುಗದ್ದೆ, ಕುಶಾಲನಗರ, ಕೊಪ್ಪ, ಗುಮ್ಮನ ಕೊಲ್ಲಿ,ಮುಳ್ಳುಸೋಗೆ, ಕೂಡು ಮಂಗಳೂರು ಮತ್ತಿತರ ಸ್ಥಳಗಳಲ್ಲಿ ನಮಾಮಿ ಕಾವೇರಿ ತಂಡದ ಸ್ಥಳೀಯ ಸದಸ್ಯರು ನದಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಸ್ವಚ್ಛ ಕಾವೇರಿಗಾಗಿ ಮತ್ತು ನಾಡಿನ ಕ್ಷೇಮಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡ ಮತ್ತು ಕಾವೇರಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು. ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ತಾಲೂಕು ಎಸ್ ಎನ್ ಡಿಪಿ ಶಾಖೆ ಮತ್ತು ಶ್ರೀ ಮುತ್ತಪ್ಪ ದೇವಾಲಯ ಆಡಳಿತ ಮಂಡಳಿ ಸಹಯೋಗದೊಂದಿಗೆ ನಮಾಮಿ ಕಾವೇರಿ ತಂಡದ ಸದಸ್ಯರು 162 ನೆಯ…

Read More

ಚಿಕ್ಕಮಗಳೂರು NEWS DESK ಆ.21 : ತರೀಕೆರೆ ತಾಲೂಕಿನ ರೈತರ ಹಿತರಕ್ಷಣ ಸಮಿತಿಯ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಇಂದು ಭಾಗವಹಿಸಿ ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ಖಂಡಿಸಿ ಮಾತನಾಡಿದ ಚಂದ್ರು “ಅನೇಕ ದಶಕಗಳಿಂದ ಅರಣ್ಯ ಇಲಾಖೆಯ ಜಮೀನುಗಳಲ್ಲಿ ಕೃಷಿ ಕಾರ್ಯವನ್ನು ಮಾಡುತ್ತಿರುವ ಸಣ್ಣ ಸಣ್ಣ ಹಿಡುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲವೆಂದು ರಾಮನಗರ ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಆದೇಶ  ಹೊರಡಿಸಿದ್ದಾರೆ. ಈ ರೀತಿಯ ಆದೇಶವನ್ನು  ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಯಾಕೆ ಮಾಡುತ್ತಿಲ್ಲ ” ಎಂದು  ಪ್ರಶ್ನಿಸಿದರು. ” ಈ ಬಗ್ಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಅರಣ್ಯ ಸಚಿವ ಖಂಡ್ರೆ ಅವರ ಬಳಿ ಮಾತನಾಡುತ್ತೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೂ ಮಾತನಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಮುಂದಾಗುತ್ತೇನೆ” ಎಂದು ರೈತರಿಗೆ ಆಶ್ವಾಸನೆ ನೀಡಿದರು. ಪ್ರತಿಭಟನೆಯಲ್ಲಿ…

Read More

ಸುಂಟಿಕೊಪ್ಪ NEWS DESK ಆ.21 : ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಅವರು ಮಾತನಾಡಿ ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿರುವುದು ಸಾಧನೆಯ ಒಂದು ಪ್ರತೀಕವಾಗಿದೆ ಎಂದು ಬಣ್ಣಿಸಿದರು. ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯರಾದ ವೀಣಾ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದ್ದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದರು. ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ದರಿರಬೇಕು. ಹಾಗಾದಾಗ ಮಾತ್ರ ಮಹಿಳೆಯರ ಮೇಲಿನ…

Read More

ಸುಂಟಿಕೊಪ್ಪ NEWS DESK ಆ.21 : ಶ್ರೀಗೌರಿ ಗಣೇಶ ಹಬ್ಬವನ್ನು ಆಚರಣೆಯ ಸಂದರ್ಭ ಆಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸುವುದು, ಹಬ್ಬದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ಮುಖ್ಯ, ಅದೇ ರೀತಿಯಲ್ಲಿ ಕಾನೂನು ಪರಿಪಾಲಿಸಬೇಕು. ಯಾವುದೇ ಅನಾಹುತಗಳು ಸಂಭವಿಸಿದರೆ ಆಯೋಜಕರೆ ನೇರ ಹೊಣೆಗಾರರು ಎಂದು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ತಿಳಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಗಣೇಶೋತ್ಸವ ಸಮಿತಿಗಳು ಪಾಲಿಸಬೇಕು. ವಿವಿಧ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಮುಂಜಾಗೃತಾ ಕ್ರಮವಾಗಿ ಶ್ರೀಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು. ಇದರಿಂದ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಕರಿಯಾಗಲಿದೆ ಎಂದರು. ವಿದ್ಯುತ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ಸೂಕ್ಷ್ಮತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಶ್ರೀಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಇಬ್ಬರು ಪದಾಧಿಕಾರಿಗಳು ಕಾವಲು ಇರಬೇಕು. ಸ್ಥಳದ ಪೂರ್ವಾಪರ ಮಾಹಿತಿಯನ್ನು ಹೊಂದಿರಬೇಕು. ವಿಸರ್ಜನೆಯ ವೇಳೆ…

Read More