ಮಡಿಕೇರಿ ಜ.17 NEWS DESK : ಕೊಡಗು ಪತ್ರಕತ೯ರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಜ.18 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿ ಆಯೋಜಿತವಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮತ್ತು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಕ್ರಿಕೆಟ್ ಪಂದ್ಯಾಟವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ, ಎಂ.ಪಿ. ಸುಜಾಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಕನಾ೯ಟಕ ಸಕಾ೯ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್ ಪಾಲ್ಗೊಳ್ಳಲಿರುವ ಸಭಾ ಕಾಯ೯ಕ್ರಮವನ್ನು ಸಮಾಜಸೇವಕರು, ಉದ್ಯಮಿಗಳಾದ ನಾಪಂಡ ಮುತ್ತಪ್ಪ ನಾಪಂಡ ಮುದ್ದಪ್ಪ ಉದ್ಘಾಟಿಸಲಿದ್ದಾರೆ. ಕ್ರೀಡಾಪಟುಗಳ ಜೆಸಿ೯ಯನ್ನು ಉದ್ಯಮಿ, ಸಮಾಜಸೇವಕ ಎಡಕೇರಿ ಪ್ರಸನ್ನ ಅನಾವರಣಗೊಳಿಸಲಿದ್ದಾರೆ. ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ನಗರಸಭಾಧ್ಯಕ್ಷೆ ಕಲಾವತಿ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಸಭೆಯ ಮಾಜಿ ಸಬಾಧ್ಯಕ್ಷ ಕೆ.ಜಿ.ಬೋಪಯ್ಯ, ಕನಾ೯ಟಕ ಕ್ರಿಕೆಟ್ ಅಕಾಡೆಮಿ ಸಂಚಾಲಕ ಚೇನಂಡ ಪೃಥ್ವಿ ದೇವಯ್ಯ ಹೈಕೋಟ್೯ನ ಹಿರಿಯ ವಕೀಲ ಹಾಗೂ…
ಲೇಖಕ: admin
ಮಡಿಕೇರಿ ಜ.17 NEWS DESK : ನಗರದ ಹಿಂದೂಸ್ತಾನಿ ಶಾಲಾ ವ್ಯಾಪ್ತಿಯಲ್ಲಿ ಎಸ್ ಐ ಆರ್ ಮ್ಯಾಪಿಂಗ್ ಪರಿಷ್ಕರಣೆ ಬಿರುಸುಗೊಂಡಿದೆ. ವಾರ್ಡ್ ಸಂಖ್ಯೆ 10ರ ಕ್ರಮ ಸಂಖ್ಯೆ 216 ಹಿಂದೂಸ್ತಾನಿ ಶಾಲಾ ವ್ಯಾಪ್ತಿಯಲ್ಲಿ ಬಿ.ಎಲ್.ಓ(BLO) ಸುಮತಿ ಅವರು ಸುಮಾರು ಶೇ.70 ರಷ್ಟು ಎಸ್‍ಐಆರ್ ಮ್ಯಾಪಿಂಗ್ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ನಗರ ಸಭಾ ಸದಸ್ಯರಾದ ಮುಸ್ತಪ ತಾವೇ ಖುದ್ದಾಗಿ ನಿಂತು ಮತದಾರರ ಹೆಸರುಗಳ ಪರಿಷ್ಕರಣೆಗೆ ಸಹಕರಿಸಿದರು. ನಂತರ ಮಾತನಾಡಿದ ಅವರು, ಬಾಕಿ ಉಳಿದಿರುವ ಮತದಾರರು ಶೀಘ್ರ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮಡಿಕೇರಿ ಜ.17 NEWS DESK : ಕೊಡಗಿನ ಜಮ್ಮಾಬಾಣೆಯ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಉಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ತಕ್ಷಣ ಅನುಷ್ಠಾನಗೊಳಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ಬಿಜೆಪಿಯ ಪ್ರಮುಖರು, ನ್ಯಾಯಾಲಯ ತೀರ್ಪಿನಲ್ಲಿ ಆದೇಶಿಸಿರುವಂತೆ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುದಾಗಿ ಎಚ್ಚರಿಕೆ ನೀಡಿದರು. 2011 ರಲ್ಲಿ ಅಂದಿನ ಬಿಜೆಪಿ ಸರಕಾರವು ಕೊಡಗಿನ ಜ್ವಲಂತ ಸಮಸ್ಯೆಯಾದ ಜಮ್ಮಾ ಬಾಣೆಯ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 2(20) ಮತ್ತು ನಿಯಮ 80ಕ್ಕೆ ತಿದ್ದುಪಡಿ ತಂದಿದ್ದು, ಇದು ರಾಜ್ಯ ಸರಕಾರದ ಪತ್ರದಲ್ಲಿ ಪ್ರಕಟಣೆಗೊಂಡಿದೆ. ಇದನ್ನು ಪ್ರಶ್ನಿಸಿ ಕೆಲವರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ರಿಟ್ ಅರ್ಜಿಗಳ ಬಗ್ಗೆ ಸುದೀರ್ಘವಾದ ವಾದ ವಿವಾದಗಳು ನಡೆದು ಉಚ್ಚ ನ್ಯಾಯಾಲಯವು ಜುಲೈ 2024 ರಲ್ಲಿ ಸುದೀರ್ಘವಾದ ತೀರ್ಪನ್ನು ನೀಡಿ ರಿಟ್ ಪಿಟಿಷನ್ ಅನ್ನು…
ಮಡಿಕೇರಿ ಜ.17 NEWS DESK : ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದ ಶಿವಲಿಂಗಕ್ಕೆ ಚೆನ್ನೈ ಮೂಲದ ರಮೇಶ್ ಪ್ರಕಾಶ್ ಹಾಗೂ ಕುಟುಂಬಸ್ಥರು ಬೆಳ್ಳಿಯ ನಾಗರೂಪವನ್ನು ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಇವರು ಶಿವಲಿಂಗಕ್ಕೆ ಬೆಳ್ಳಿಯ ಕವಚ ಅರ್ಪಿಸಿದ್ದರು. ಇದೀಗ ಮತ್ತೆ ಸಮಾರು 700 ಗ್ರಾಂ ತೂಕದ ಬೆಳ್ಳಿಯ ನಾಗರೂಪವನ್ನು ಸಮರ್ಪಣೆ ಮಾಡಿದ್ದಾರೆ. ನಾಗರೂಪವನ್ನು ಹಸ್ತಾಂತರಿಸುವ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯ ಅಂಬೆಕಲ್ ಕುಶಾಲಪ್ಪ, ಸಂತೋಷ್ ಭಟ್, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಸಿಬ್ಬಂದಿ ವರ್ಗ, ಭಕ್ತರು ಹಾಗೂ ಅರ್ಚಕ ವರ್ಗದವರು ಹಾಜರಿದ್ದರು.
ಮಡಿಕೇರಿ ಜ.17 NEWS DESK : ಹಿರಿಯ ರಾಜಕಾರಣಿ, ಮುತ್ಸದ್ದಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರು ಹಾಗೂ ನಾಡು ಕಂಡ ಹಿರಿಯ ಮುತ್ಸದಿ ರಾಜಕಾರಣಿಗಳಾದ ಭೀಮಣ್ಣ ಖಂಡ್ರೆ ನಿಧನ ಸುದ್ದಿ ತಿಳಿದು ಅತೀವ ದುಃಖವಾಗಿದೆ. ನಾಡಿನ ಅನೇಕ ಯಶಸ್ವಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಇವರ ಅಗಲಿಕೆಯು ಕರ್ನಾಟಕಕ್ಕೆ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ, ಅವರ ಕುಟುಂಬ ವರ್ಗಕ್ಕೂ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಮಡಿಕೇರಿ ಜ.17 NEWS DESK : ಭಾರತೀಯ ವಿದ್ಯಾ ಭವನ ಕೊಡಗು ಕೇಂದ್ರದ ವತಿಯಿಂದ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ಉಚಿತ ಶ್ರವಣ ಶಿಬಿರ ನಡೆಯಿತು. ಶಿಬಿರವನ್ನು ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ದಿನೇಶ್ ಬಿ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಮೈಸೂರುವಿನಲ್ಲಿರುವ ಕೇಳುವಿಕೆ, ಮಾತು ಮತ್ತು ಇಂಪ್ಲಾಂಟ್ ಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕೇಳುವಿಕೆ ಸಮಸ್ಯೆಗಳ ಕ್ಷೇತ್ರದಲ್ಲಿ ಖ್ಯಾತಿ ಪಡೆದ ತಜ್ಞರಾದ ಡಾ.ರಾಧಾ ಸಿಂಹಾದ್ರಿ ಶಿಬಿರದ ನೇತೃತ್ವ ವಹಿಸಿದ್ದರು. ಭಾರತೀಯ ವಿದ್ಯಾ ಭವನದ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಾಶ್ಯಪ್ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದರು.
ಕುಶಾಲನಗರ ಜ.17 NEWS DESK : ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿಯು ಲೋಕಕಲ್ಯಾಣಾರ್ಥ ಅಗ್ನಿ ಪ್ರವೇಶ ಮಾಡಿರುವುದಾಗಿ ಪುರಾಣಗಳು ಹೇಳುತ್ತವೆ. ಅಂತಹ ಪುಣ್ಯ ದಿನವನ್ನು ಆರ್ಯವೈಶ್ಯರು ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆಯನ್ನು ನೆರವೇರಿಸಿ ಆಚರಿಸುವುದು ವಾಡಿಕೆ ಎಂದು ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ತಿಳಿಸಿದ್ದಾರೆ. ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ದೀಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಜ.20 ವಾಸವಿ ಮಾತೆಯು ವಿಶ್ವರೂಪ ದರ್ಶನ ನೀಡುವ ಪುಣ್ಯ ದಿನ. ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಅಂದು ವಿಶೇಷ ಹೋಮ ಹವನ ನೆರವೇರಿಸಲಾಗುತ್ತದೆ ಎಂದರು. ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ಬಿ.ಎಲ್.ಸತೀಶ್ ಮಾತನಾಡಿ, 5 ದಿನಗಳ ಕಾಲ ವಾಸವಿ ದೀಕ್ಷೆಯನ್ನು ಸ್ವೀಕರಿಸಿ, ಅಯ್ಯಪ್ಪ ಮಾಲಾಧಾರಿಗಳ ರೀತಿಯಲ್ಲಿ ವೃತ್ತವನ್ನು ಆಚರಿಸಿ, 19ನೇ ತಾರೀಖು ಸೋಮವಾರ ಕಟ್ಟು ಕಟ್ಟುತ್ತೇವೆ. ಕಟ್ಟು ತಲೆಯ ಮೇಲೆ ಹೊತ್ತುಕೊಂಡು ಮಾಲಾಧಾರಿಗಳು ನಗರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಮರಳಿ ನಮ್ಮ ದೇವಸ್ಥಾನಕ್ಕೆ ಬಂದು ಪೂಜೆ, ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ದೇವಸ್ಥಾನದ ಪ್ರಧಾನ ಅರ್ಚಕ…
ಬೆಂಗಳೂರು ಜ.17 NEWS DESK : ಬೆಂಗಳೂರು ಹಬ್ಬದಲ್ಲಿ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದ್ದು, ಬೆಂಗಳೂರಿನ ನಾಗರಿಕರಿಗೆ ಇದೊಂದು ಸುಸಂದರ್ಭ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜಿಸಿದ್ದ “ಬೆಂಗಳೂರು ಹಬ್ಬ 2026 ಅನ್ನು ಉದ್ಘಾಟನೆ ಮಾಡಿ, ಜನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಮತ್ತು ಯುವ ಜನಾಂಗಕ್ಕೆ ತಲುಪಿಸುವುದು ಇದರ ಉದ್ದೇಶ. ಎಲ್ಲ ಊರುಗಳಲ್ಲಿ ಹಮ್ಮಿಕೊಳ್ಳುವ ಜಾತ್ರೆ, ಉತ್ಸವಗಳು ಜಾತಿ, ಧರ್ಮಗಳನ್ನು ಮರೆತು ಮನುಷ್ಯರಾಗಬೇಕು ಎನ್ನುವ ಸಂದೇಶವನ್ನು ಸಾರುತ್ತದೆ. ಮನುಷ್ಯರು ಪರಸ್ಪರ ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಯಾವುದೇ ಧರ್ಮವು ದ್ವೇಷಿಸಲು ಹೇಳುವುದಿಲ್ಲ ಎಂದರು. ಕನ್ನಡ ನಾಡಿನಲ್ಲಿ ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಅನೇಕರು ಬಾಳಿ ಹೋಗಿದ್ದಾರೆ. ಇವರೆಲ್ಲರೂ ನಾವೆಲ್ಲ ಮನುಷ್ಯರೇ ಎಂದು ಸಾರಿ ಸಾರಿ ಹೇಳಿದವರು. ಬಸವಣ್ಣ ಜಾತಿ, ಧರ್ಮ, ವರ್ಗ,…
ಕುಶಾಲನಗರ ಜ.17 NEWS DESK : ನಾಡು ಕಂಡ ಧೀಮಂತ ನಾಯಕ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಗಾಂಧೀಜಿ ಯವರ ವಿಚಾರಧಾರೆಗಳ ಚಿಂತಕ, ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ನಿಧನಕ್ಕೆ ಕೊಡಗು ವೀರಶೈವ ಮಹಾಸಭಾದ ವತಿಯಿಂದ ಸಂತಾಪ ಕೋರಲಾಯಿತು. ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಆವರಣದಲ್ಲಿ ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಸಹ ಕಾರ್ಯದರ್ಶಿ ಎಂ.ಎಸ್.ಗಣೇಶ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಕಾರ್ಯದರ್ಶಿ ಧರ್ಮೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೋಶಾಧಿಕಾರಿ ಕೆ.ಪಿ.ಪರಮೇಶ್, ಸಮಾಜದ ಪ್ರಮುಖರಾದ ಎಂ.ಎಸ್.ಲೋಕೇಶ್, ಸಹಕಾರ ಸಂಘಧ ಸಿಇಒ ಬಸವಣ್ಣಯ್ಯ, ಕಾವ್ಯ, ಭೂಮಿಕಾ, ಪರಶಿವಮೂರ್ತಿ ಇದ್ದರು.
ಕುಶಾಲನಗರ ಜ.17 NEWS DESK : ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಜ.25 ರಂದು ಕುಶಾಲನಗರದಲ್ಲಿ ಸೀಸನ್ 1ರ ಸ್ವರ ಸಂಭ್ರಮ ಮತ್ತು ಕರೋಕೆ ಗಾಯನ ಸಮಾರಂಭ ಏರ್ಪಡಿಸಲಾಗಿದೆ ಎಂದು ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷರಾದ ಡಾ.ನಯನ ಹರಿಶ್ಚಂದ್ರ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಶಾಲನಗರ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಡುಗಾರರು ನೊಂದಣಿ ಮಾಡಿಕೊಳ್ಳಬೇಕಾಗಿದೆ. ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಹರಿಣಿ ಪ್ರಭಾಕರ್ ಕೊಡಗು ಜಿಲ್ಲಾಧ್ಯಕ್ಷರಾದ ನಯನ ಹರಿಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಥೆಯ ಕಾನೂನು ಸಲಹೆಗಾರರಾದ ಕೆ ಎಸ್ ಚಂದ್ರಶೇಖರ್, ನಿವೃತ್ತ ಅಧಿಕಾರಿ ಹರೀಶ್ ಚಂದ್ರ ಬಿದ್ರುಪಣೆ ಉದ್ಯಮಿ ಬಿ…






