ಲೇಖಕ: admin

ಮಡಿಕೇರಿ ಜು.9 NEWS DESK : ಕರ್ನಾಟಕದ ಪ್ರಸಿದ್ಧ ಆಟೋಮೊಬೈಲ್ ಡೀಲರ್ ಗಳಲ್ಲಿ ಒಂದಾಗಿರುವಂತ ಬೆಂಗಳೂರಿನ ಟ್ರೈಡೆಂಟ್ ಟ್ರಕಿಂಗ್( ಭಾರತ್ ಬೆಂಜ್) ವತಿಯಿಂದ ಭಾಗಮಂಡಲದ ಕೆವಿಜಿ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಿತು. ಕಂಪನಿಯ ಹೆಚ್.ಆರ್. ಕಮಲಾಕರ್  ಕಂಪನಿಯ ಕುರಿತು ಮತ್ತು ಉದ್ಯೋಗಿಗಳಿಗಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಭಾರತ್ ಬೆಂಜ್ ಮೈಸೂರು ಶಾಖೆಯ ವರ್ಕ್ಸ್ ಮ್ಯಾನೇಜರ್ ನವನೀತ್ ಮತ್ತು ಅಸಿಸ್ಟೆಂಟ್ ವರ್ಕ್ಸ್ ಮ್ಯಾನೇಜರ್ ಶಿವಕುಮಾರ್ ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಇರುವಂತಹ ಅವಕಾಶಗಳ ಬಗ್ಗೆ ವಿವರಿಸಿದರು. ಈ ಸಂದರ್ಭಭಾರತ ಬೆಂಜಿನ ಉದ್ಯೋಗಿಗಳಾಗಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಚಂದ್ರಶೇಖರ್, ಪ್ರಸನ್ನ ಮತ್ತು ಪ್ಲೇಸ್ಮೆಂಟ್ ಆಫೀಸರ್ ಕೆ.ಸಿ. ಉದಯಕುಮಾರ್ ಹಾಜರಿದ್ದರು. ಎಂಎಂವಿ ವೃತ್ತಿ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದರು.

Read More

ಮಡಿಕೇರಿ ಜು.9 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ 50ನೇ ಜನ್ಮದಿನಾಚರಣೆ ಪ್ರಯುಕ್ತ ಅಯ್ಯಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಚ್ಚತಾ ಅಭಿಯಾನ ನಡೆಯಿತು. ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷರಾದ ಪುಷ್ಪಾ, ಸದಸ್ಯರಾದ ಆಚೀರ ಕಾವೇರಮ್ಮ ಹಾಗೂ ಅಯ್ಯಂಗೇರಿ ಗ್ರಾಮದ ಕಾಂಗ್ರೇಸ್ ವಲಯ ಅಧ್ಯಕ್ಷ ಎಂ.ಎಂ.ಮೊಹಮ್ಮದ್ ಭಾಗವಹಿಸಿದ್ದರು.

Read More

ಸೋಮವಾರಪೇಟೆ ಜು.8 NEWS DESK : ನೇರುಗಳಲೆ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿರುವ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕೆ ನೂತನ ಶಾಲಾ ಬಸ್ ಸೇವೆಗೆ ಸಮಿತಿಯ ವತಿಯಿಂದ ಚಾಲನೆ ನೀಡಲಾಯಿತು. ಶಾಲೆಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಶಾಲಾ ಸಮಿತಿಯವರು ರೂ. 4ಲಕ್ಷ ವೆಚ್ಚದಲ್ಲಿ ಮಿನಿ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ಬೋಜೇಗೌಡ, ಗೌರವ ಸಲಹೆಗಾರ ಎಸ್.ಎಂ.ಡಿಸಿಲ್ವಾ, ವಿ.ಎಂ.ವಿಜಯ, ವಿ.ಎಂ.ಶಿವದಾಸ್, ವಿನೋದ್‍ಕುಮಾರ್, ನಿರ್ದೇಶಕರುಗಳಾದ ಗಿರೀಶ್ ಮಲ್ಲಪ್ಪ, ಕೆ.ಆರ್.ಕಿರಣ್, ಎ.ಜಿ.ಅಜಿತ್, ಕಾರ್ಯದರ್ಶಿ ಸಂಭ್ರಮ್, ಖಜಾಂಚಿ ಎ.ಹೆಚ್.ತಿಮ್ಮಯ್ಯ, ಉಪಾಧ್ಯಕ್ಷರುಗಳಾದ ಪುಷ್ಪಾವತಿ, ಶೈಲಾ, ಪಿಡಿಓ ಗಣೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಮಕ್ಕಳ ಪೋಷಕರು ಇದ್ದರು.

Read More

ಮಡಿಕೇರಿ ಜು.8 NEWS DESK : ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಮಡಿಕೇರಿ ನಗರದಲ್ಲಿರುವ ಭಿಕ್ಷುಕರಿಗೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವೆಟರ್ ವಿತರಿಸಲಾಯಿತು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೊಡಗು ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಮಹಿಳಾ ಜಿಲ್ಲಾ ಸಂಚಾಲಕಿ ಪ್ರೇಮ, ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎಲ್.ಕುಮಾರ್ ಹಾಗೂ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ನಿರ್ಗತಿಕರಿಗೆ ಸ್ವೇಟರ್ ವಿತರಿಸಿ, ಶಾಸಕ ಪೊನ್ನಣ್ಣ ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.

Read More

ಕುಶಾಲನಗರ ಜು.9 NEWS DESK  : ಕುಶಾಲನಗರದ ಖ್ಯಾತ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ ಅವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 60ಕ್ಕೂ ಅಧಿಕ ವರ್ಷಗಳಿಂದ ನಾಟಿ ಔಷಧಿ ನೀಡುವ ಮೂಲಕ ಜಿಲ್ಲೆ ಮತ್ತು ನೆರೆ ಜಿಲ್ಲೆಗಳ ಮಕ್ಕಳಿಗೆ ಬಾಲ ಸಂಜೀವಿನಿ ಆಗಿರುವ ಲೀಲಾವತಿ ಗಣಪತಿ ( ಕೊಡಗರಮ್ಮ ) ಅವರನ್ನು ಕಾಯಕ ರತ್ನ ಪ್ರಶಸ್ತಿ – 2024 ಕ್ಕೆ ಕೊಡಗು ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ.ಹುಲಿಕಲ್ ನಟರಾಜ್ ತಿಳಿಸಿದ್ದಾರೆ. ಈ ತಿಂಗಳ 13 ರಂದು ಬೀದರ್ ಜಿಲ್ಲೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯದ ಒಟ್ಟು 35 ಮಂದಿ ಸಾಧಕರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಗು ಜಿಲ್ಲೆ ಅಧ್ಯಕ್ಷೆ ವನಿತಾ ಚಂದ್ರಮೋಹನ್…

Read More

ನಾಪೋಕ್ಲು ಜು.9 NEWS DESK : ನಾಪೋಕ್ಲು – ಭಾಗಮಂಡಲ ಮುಖ್ಯರಸ್ತೆಯ ಚೋನಕೆರೆ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಮುರಿದುಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ವಾಹನಗಳು ಕುರುಳಿ -ಎಮ್ಮೆ ಮಾಡು ಮುಖಾಂತರ ಬಳಸು ರಸ್ತೆಯಲ್ಲಿ ಸಾಗಿದವು. ಬಲ್ಲಮಾವಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಣವಟ್ಟಿರ ಕುಶಾಲಪ್ಪ , ನಾಪೋಕ್ಲು ಗ್ರಾ.ಪಂ ಸದಸ್ಯ ಮಾಚೇಟಿರ ಕುಶು ಕುಶಾಲಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿ ಕಾಳೇಗೌಡ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ರಸ್ತೆ ಗಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಸಂಜೆಯ ವೇಳೆಗೆ ಮರವನ್ನು ತೆರವುಗೊಳಿಸಲಾಯಿತು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜು.9 NEWS DESK : ಡೆಂಗ್ಯೂ ಪ್ರಕರಣ ಹೆಚ್ಚಳ ಹಿನ್ನೆಲೆ ಮಡಿಕೇರಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ‘ಕಿಂಗ್ ಫಾಗಿಂಗ್’ ಮಾಡಲಾಗುತ್ತಿದೆ ಎಂದು ಪೌರಾಯುಕ್ತರಾದ ವಿಜಯ್ ತಿಳಿಸಿದ್ದಾರೆ. 

Read More

ಮಡಿಕೇರಿ ಜು.8 NEWS DESK : ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನಾಯಕ ಹಾಗೂ ಸಮಸ್ತ ಮುಶಾವರ ಸದಸ್ಯರಾದ, ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಖಾಝಿಗಳಾಗಿರುವ ಸೈಯದ್ ಫಜಲ್ ಕೋಯಮ್ಮ ತಂಙಳ್ ಕೂರ ರವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ನಿಧನಕ್ಕೆ ಮಾಜಿ ಕೊಡಗು ವಕ್ಫ್ ಬೋರ್ಡ್ ಅಧ್ಯಕ್ಷರು, ಹೊದ್ದೂರು ಗ್ರಾ.ಪಂಸದಸ್ಯರಾದ ಎಂ.ಬಿ ಹಮೀದ್ ಸಂತಾಪ ಸೂಚಿಸಿದ್ದಾರೆ.  

Read More

ಮಡಿಕೇರಿ ಜು.8 NEWS DESK  : ವಿದ್ಯಾರ್ಥಿಗಳು ಜೀವನದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕೆಂದು ಸಾಹಿತಿ ರಜಿತ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಜಿತ ಕಾರ್ಯಪ್ಪ ಅವರು, ಪಾಲಕರು, ಗುರುಗಳು, ಹಿರಿಯರನ್ನು ಗೌರವಿಸುವ ಮಹತ್ವ ಸಾರಿದರು. ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಮತ್ತು ಅವರನ್ನು ರೂಪಿಸಿದ ಶಾಲೆಯನ್ನು ನೆನಪಿಸಿಕೊಳ್ಳಬೇಕು ಮತ್ತು ಉತ್ತಮ ನಾಗರಿಕರಾಗಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಅನುವು ಮಾಡಿಕೊಡುವ ಗುಣಾತ್ಮಕ ಶಿಕ್ಷಣಕ್ಕಾಗಿ ಶ್ರಮಿಸಬೇಕು ಎಂದರು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ವಿದ್ಯೆ ಎಂಬುವುದು ಕದಿಯಲಾಗದ ಸಂಪತ್ತು, ವಿದ್ಯಾವಂತರು ದೇಶಕ್ಕೆ ಆಸ್ತಿಯಾಗಬೇಕು. ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ…

Read More

*ಜನಪ್ರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಜನ್ಮ ದಿನದ ಶುಭಾಶಯಗಳು*

Read More