ಲೇಖಕ: admin

ಮಡಿಕೇರಿ ಮೇ 29 NEWS DESK  : ಶಿಕಾರಿಪುರ ನ್ಯಾಯಾಲಯ ಸಂಘದ ಆವರಣದಲ್ಲಿ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ  ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರ ಪರವಾಗಿ ಮತಯಾಚಿಸಿ, ಇಬ್ಬರೂ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ನ್ಯಾಯಾಲಯ ಸಂಘದ ಪದಾಧಿಕಾರಿಗಳು, ವಕೀಲರು, ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

Read More

ಮಡಿಕೇರಿ ಮೇ 29 NEWS DESK :  ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಬಿಜೆಪಿಯ ವಿವಿಧ ನಾಯಕರು, ಮುಖಂಡರೊಂದಿಗೆ ತೆರಳಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಲ್ಲಿ ಮತಯಾಚಿಸಿದರು. ಈ ಸಂದರ್ಭ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಡಿ.ಎಸ್. ಅರುಣ್, ಮಡಿಕೇರಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಜಿಲ್ಲಾ ವಕ್ತಾರ ತಳೂರ್ ಕಿಶೋರ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಚಲನ್ ಕುಮಾರ್, ವಿ.ಕೆ.ಲೋಕೇಶ್, ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಸಂಚಾಲಕರಾದ ಡಾ.ನವೀನ್, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಾಲ್ತೇಶ್ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರು ಹಾಜರಿದ್ದರು.

Read More

ನಾಪೋಕ್ಲು ಮೇ 29 NEWS DESK : ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸವನ್ನು ಒಳಗೊಂಡ ಸಂಸ್ಥೆಯನ್ನು ಶೀಘ್ರದಲ್ಲಿ ಸ್ಥಾಪಿಸಿ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಕೊಡಗು ಜಿಲ್ಲಾ ಖಾಜಿ ಎಂ.ಎಂ.ಅಬ್ದುಲ್ ಫೈಜಿ ಉಸ್ತಾದ್ ಹೇಳಿದರು. ನಾಪೋಕ್ಲುವಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಬುಖಾರ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಸೈಯದ್ ಉಮರಲಿ ಶಿಯಾಬ್ ತಂಗಳ್, ಪೂಕಳಂ ಅಬ್ದುಲ್ ಉಸ್ತಾದ್ ,ಟ್ರಸ್ಟ್ ಅಧ್ಯಕ್ಷ ಹಮೀದ್ ಹಾಜಿ ಬೆಟ್ಟಗೇರಿ, ಬುಖಾರದ ಕೇರಳ ಘಟಕದ ಅಧ್ಯಕ್ಷ ಸುರೂರ್ ಮೊಯಿದು ಹಾಜಿ , ಕಾರ್ಯದರ್ಶಿ ಅಬ್ದುಲ್ ರಹಿಂ ರಿಜ್ವ, ಕೋಶಾಧಿಕಾರಿ ನಾಸಿರ್ ಹಾಜಿ, ಪ್ರಮುಖರಾದ ಬಶೀರ್ ಆರಂಗಡಿ ,ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ, ಹೆಚ್ ಅಬ್ದುಲ್ ರಹಿಮಾನ್, ಬುಕಾರ ಸಂಸ್ಥೆಯ ಕೊಡಗು ಘಟಕದ ಸಂಚಾಲಕ ಪಿ.ಎ0.ಅಬ್ದುಲ್ ರಶೀದ್, ಚೇರಿ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್ ಅಲಿ ಹಳೆತಾಲೂಕು,ಬ್ಲಾಕ್ ಕಾಂಗ್ರೆಸ್…

Read More

ಸುಂಟಿಕೊಪ್ಪ ಮೇ 29 NEWS DESK : ಮಾದಾಪುರ ಸಮೀಪದ ಕುಂಬೂರುವಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಪವಿತ್ರ ಕುಟುಂಬ  ದೇವಾಲಯದಲ್ಲಿ ಪ್ರಥಮ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದವನ್ನು ನೀಡಲಾಯಿತು. ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯದಲ್ಲಿ ಹಟ್ಟಿಹೊಳೆ ಜಪಸರಮಾತೆ ದೇವಾಲಯದ ಧರ್ಮಗುರುಗಳಾದ ರೇ.ಫಾ.ಗಿಲ್ಬರ್ಟ್ ಡಿಸಿಲ್ವ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರು ರೇ.ಪಾ.ನವೀನ್ ಕುಮಾರ್ ಹಾಗೂ ಪವಿತ್ರ ಕುಟುಂಬ ದೇವಾಲಯದ ಧರ್ಮಗುರುಗಳಾದ ರಾಜೇಶ್ ಅಡಂಬರ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದವನ್ನು ನೀಡಿದರು. ಮಾದಾಪುರ, ಸುಂಟಿಕೊಪ್ಪ, ಹಟ್ಟಿಹೊಳೆ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.  

Read More

ಮೂರ್ನಾಡು ಮೇ 29 NEWS DESK : ಕಾಂತೂರು ಗ್ರಾಮದ ಕೆರೆಮನೆ ಸ್ಥಳದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಮೇ 30 ಮತ್ತು 31ರಂದು ನಡೆಯಲಿದೆ. ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶಿಲಾವಿಗ್ರಹ ಪ್ರತಿಷ್ಠಾಪನೆಯು ಇರಿಟ್ಟಿಯ ನಾಗರಾಜ ಮಹೇಶ್‍ಭಟ್ ಮತ್ತು ಗಣಪತಿಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ. ಮೇ 30 ರಂದು ಬೆಳಗ್ಗೆ 10ಗಂಟೆಗೆ ಮಹಾಸಂಕಲ್ಪ, ಗಣಪತಿ ಪೂಜೆ, ದೀಪಲಕ್ಷಿಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಾತೃಕಾ ಪೂಜೆ, ರಕ್ಷಾಬಂಧನ, ಅಂಕುರಾರ್ಪಣೆ, ಬ್ರಹ್ಮಕೂರ್ಚಹವನ, ಮಧುಪರ್ಕ ಪೂಜೆ, ಅಷ್ಠಮೂರ್ತಿಪ್ರಾರ್ಥನೆ, ಸಂಜೆಯ ವೇಳೆಗೆ ಕಲಶ ಸ್ಥಾಪನೆ, ಮೂರ್ತಿ ಪರಿಗ್ರಹಣ, ದೇವಾಲಯ ಪರಿಗ್ರಹಣ, ಗಣಹೋಮ, ವಾಸ್ತುಹೋಮ, ರಾಕ್ಷೋಘ್ನ ಹೋಮ, ಅಧಿವಾಸ ಹೋಮಪೂಜೆ, ಮಹಮಂಗಳಾರತಿ ಮತ್ತು ದಿಗ್ಭಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ನಸಂತರ್ಪಣೆ ನೆರವೇರಲಿದೆ. ಮೇ 31 ರಂದು ಬೆಳಗ್ಗೆ 6.30ಗಂಟೆಗೆ ಗಣಪತಿಹೋಮ, ವಿಗ್ರಹಪ್ರತಿ ಷ್ಠಾಪನೆ, ರತ್ನನ್ಯಾಸ, ಪೀಠನ್ಯಾಸ ಹೋಮ, ಪಂಚಸೂಕ್ತ ಹೋಮ, ಪ್ರತಿಷ್ಠಾಹೋಮ, ಕಲಾಹವನಾದಿಗಳು, ಪೂರ್ಣಾಹುತಿ, ಕಲಶಕುಂಭಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರಸೇವೆ, ಮಹಾನೈವೇದ್ಯ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ…

Read More

ಮಡಿಕೇರಿ ಮೇ 29 NEWS DESK : ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಅಸಹಜ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಸುಂಟಿಕೊಪ್ಪ ಸಮೀಪ ಕೊಡಗರಳ್ಳಿ ಗ್ರಾಮದ ಪಂಪ್ ಹೌಸ್ ಬಳಿ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಮೃತಪಟ್ಟಿದೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಜಿಲ್ಲೆಯ ವಿವಿಧೆಡೆ ಎರಡು ಕಾಡಾನೆಗಳ ಮೃತದೇಹ ಪತ್ತೆಯಾಗಿತ್ತು.

Read More

ಮಡಿಕೇರಿ ಮೇ 29 NEWS DESK : ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಹಣ ಮೀಸಲಿಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಿಸಿ, ರಾಜ್ಯ ಶಿಕ್ಷಣ ನೀತಿ ಜಾರಿಗೂ ಮುನ್ಸೂಚನೆ ಸಿಕ್ಕಿದೆ ಎಂದು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಹೇಳಿದರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಈ ಹಿಂದೆ ಶಿಕ್ಷಕರ ಕೇತ್ರವನ್ನು ಪ್ರತಿನಿಧಿಸಿದ್ದವರು ಗೆದ್ದ ಬಳಿಕ ಕ್ಷೇತ್ರದ ಕಡೆ ತಿರುಗಿಯೂ ನೋಡಲಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೇ ಅವರು ಕೇವಲ ವಿದೂಷಿಯ ಪಾತ್ರ ನಿರ್ವಹಿಸಿದ್ದರು. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮಂಜುನಾಥ್ ಕುಮಾರ್ ಹೇಳಿದರು. ಶಿಕ್ಷಕರ ಸಮಸ್ಯೆಗಳನ್ನು ಅರಿತು ಅದನ್ನು ಪರಿಹರಿಸಲು ಓರ್ವ ಶಿಕ್ಷಕನಿಂದಲೇ ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಬಾರಿ ಜೂ.3ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸುವಂತೆ ಮನವಿ ಮಾಡಿದರು.

Read More

ಮಡಿಕೇರಿ ಮೇ 29 NEWS DESK : ಶಿಕ್ಷಕರು ಹಾಗೂ ಪದವೀಧರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಡಿಕೇರಿಗೆ ಆಗಮಿಸಿದ ಸಚಿವರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮತ್ತು ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರುಗಳ ಗೆಲುವಿಗೆ ಪಣ ತೊಡುವಂತೆ ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ರಾಜ್ಯ ಸರಕಾರಿ ಚುನಾವಣೆ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದ್ದು ಹೆಮ್ಮೆ ಎನಿಸಿದೆ. ರಾಜ್ಯದಲ್ಲಿ 43 ಸಾವಿರ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲದೇ ನೂತನ ಪಿಂಚಣಿ ವ್ಯವಸ್ಥೆಯನ್ನು ಬದಲಿಸಿ ಮತ್ತೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೂ ನೀತಿ ಸಂಹಿತೆ ಮುಕ್ತಾಯವಾದ ಬಳಿಕ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಿಕ್ಷಕರು ಮತ್ತು ಪದವೀಧರರು…

Read More

ಮಡಿಕೇರಿ ಮೇ 28 NEWS DESK : ಮುಂದಿನ ವರ್ಷ ನಡೆಯಲಿರುವ ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಹಾಕಿ ಹಬ್ಬಕ್ಕೆ ಮುದ್ದಂಡ ಕುಟುಂಬಸ್ಥರು ಪೂರ್ವಭಾವಿ ತಯಾರಿಯಲ್ಲಿ ತೊಡಗಿದ್ದಾರೆ. ನಗರದ ಹೊರ ವಲಯದ ಕರವಲೆ ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯದಲ್ಲಿ ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿ ಹಾಕಿ ಹಬ್ಬದ ಯಶಸ್ಸಿಗಾಗಿ ಪ್ರಾರ್ಥಿಸಿದರು. 2025 ರಲ್ಲಿ ಹಾಕಿ ಹಬ್ಬ ನಡೆಸಲು ಮುದ್ದಂಡ ಕುಟುಂಬಕ್ಕೆ ಕೊಡವ ಹಾಕಿ ಅಕಾಡೆಮಿ ಅಧಿಕೃತವಾಗಿ ಹಕ್ಕೋಲೆ (ಹಕ್ಕುಪತ್ರ) ನೀಡುವ ಮೂಲಕ ಶುಭ ಹಾರೈಸಿತು. ಈ ಸಂದರ್ಭ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ, ಉಪಾಧ್ಯಕ್ಷರುಗಳಾದ ಕುಕ್ಕೇರ ಜಯ ಚಿಣ್ಣಪ್ಪ, ಬರಕಡ ಡೀನಾ ಪೂವಯ್ಯ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ, ಎಲ್ಲಾ ನಿರ್ದೇಶಕರುಗಳು, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಮುದ್ದಂಡ.ಬಿ.ದೇವಯ್ಯ, ಕಾರ್ಯಕಾರಿ ಮಂಡಳಿಯ ಮುದ್ದಂಡ…

Read More

ಸೋಮವಾರಪೇಟೆ ಮೇ 28 NEWS DESK : ಚನ್ನಾಪುರ ಗ್ರಾಮದೇವತೆಯ ವಾರ್ಷಿಕ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮದಲ್ಲಿರುವ ದೇವರ ಬನದಲ್ಲಿ ಗ್ರಾಮದ ಹಿರಿಯರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಕೃತಿಯ ಅರಾಧಕರಾಗಿದ್ದ ನಮ್ಮ ಹಿರಿಯರು, ಬಸರಿ ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ನೂರಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಅದನ್ನು ಇಂದಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ಗ್ರಾಮ ದೇವತೆಗೆ ಪೂಜೆ ಸಲ್ಲಿಸದ ನಂತರವೇ ನಡೆಯುತ್ತವೆ. ನಂಬಿದವರನ್ನು ತಾಯಿ ಯಾವತ್ತು ಕೈಬಿಟ್ಟಿಲ್ಲ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎನ್.ಅಶ್ವಥ್ ಹೇಳಿದರು. ಕಾರ್ಯದರ್ಶಿ ಸಿ.ಎಸ್.ವೀರೇಶ್, ಸಿ.ಎನ್.ಅಶೋಕ್, ಸಿ.ಎ.ಗಣೇಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Read More