ಮಡಿಕೇರಿ ಜೂ.28 NEWS DESK : ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂರ್ಗ್ ವಿಲೇಜ್ ಅಭಿವೃದ್ಧಿ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು. ರಾಜಾಸೀಟು ಪ್ರವೇಶ ದ್ವಾರದ ಟಿಕೆಟ್ ಕೌಂಟರ್ ಬಳಿ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸೆಲ್ಟರ್ ನಿರ್ಮಾಣ ಮಾಡುವ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡದರು. ರಾಜಾಸೀಟನ್ನು ಮತ್ತಷ್ಟು ಕಂಗೋಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರೇಟರ್ ರಾಜಾಸೀಟು ಅಭಿವೃದ್ಧಿ ಸಂಬಂಧ ಬಾಕಿ ಇರುವ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕು. ಅಗತ್ಯ ಇರುವ ಕಡೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ನಗರಸಭೆಯಿಂದ ನೀರು ಸಂಪರ್ಕ ಪಡೆಯುವುದು ಸೇರಿದಂತೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೋಗೀಶ್ ಮಾತನಾಡಿ, ರಾಜಾಸೀಟು, ಕೂರ್ಗ್ ವಿಲೇಜ್ ಅಭಿವೃದ್ಧಿ ಜೊತೆಗೆ ಗದ್ದುಗೆ ಉದ್ಯಾನವನ ಹಾಗೂ ನೆಹರು…
ಲೇಖಕ: admin
ಮಡಿಕೇರಿ ಜೂ.28 NEWS DESK : ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಪ್ರತಿಯೊಬ್ಬರಿಗೂ ಆರೋಗ್ಯ ಶಿಕ್ಷಣ ನೀಡುವಂತಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟೈ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋರಿದರು. ಮನೆಯಲ್ಲಿನ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರಲ್, ಫಾಟ್, ತೆಂಗಿನ ಚಿಪ್ಪು ಸೇರಿದಂತೆ ಇತರೆ ಕಡೆಗಳಲ್ಲಿ ನೀರು ಶೇಖರಣೆಯಾಗದಂತೆ ಗಮನಹರಿಸಬೇಕು. ತೊಟ್ಟಿ, ಡ್ರಮ್, ಬಕೆಟ್‍ಗಳನ್ನು ವಾರಕ್ಕೊಮ್ಮೆ ಉಜ್ಜಿ ಸ್ವಚ್ಛಗೊಳಿಸಬೇಕು. ಸೊಳ್ಳೆಯ ಮೊಟ್ಟೆಗಳು ನೀರಿಲ್ಲದಿದ್ದರೂ ಒಂದು ವರ್ಷದವರೆಗೆ ಬದುಕಲಿವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಸ್ವಚ್ಚಗೊಳಿಸಬೇಕು ಎಂದು ಸತೀಶ್ ಕುಮಾರ್ ಕರೆ ನೀಡಿದರು. ಡೆಂಗ್ಯೂ ಜ್ವರವು ಹಗಲು ಹೊತ್ತಿನಲ್ಲಿ ಈಡಿಸ್ ಈಜಿಪ್ಟೈ…
ಮಡಿಕೇರಿ ಜೂ.28 NEWS DESK : ಬೆಂಗಳೂರಿನ ಬನ್ನೇರುಘಟ್ಟದ ಪ್ರಖ್ಯಾತ ಫೋರ್ಟಿಸ್ ಆಸ್ಪತ್ರೆ ವತಿಯಿಂದ ಜು.7 ರಂದು ಮೊಣಕಾಲು ಮತ್ತು ಹಿಪ್ ಬದಲಿ ಉಚಿತ ಶಿಬಿರ ಮಡಿಕೇರಿಯಲ್ಲಿ ನಡೆಯಲಿದೆ. ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಹರ್ಷ ಹೆಲ್ತ್ ಕೇರ್ ಕ್ಲಿನಿಕ್‍ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಆಥ್ರ್ರೋಸ್ಕೋಫಿ ಮತ್ತು ಸ್ಪೋಟ್ರ್ಸ್ ಮೆಡಿಸಿನ್ ಟ್ರಾಮಾ ಕನ್ಸಲ್ಟೆಂಟ್ ಹಾಗೂ ಹಿರಿಯ ಸಲಹೆಗಾರರಾದ ಡಾ. ಕೆ.ಯೋಗೇಶ್, ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು, ನಡೆಯಲು ಕಷ್ಟವಾಗುವಿಕೆ, ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ, ಕೀಹೋಲ್ ಮೂಳೆ ಚಿಕಿತ್ಸೆಯ ಕಾರ್ಯಾಚರಣೆಗಳು, ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಕುರಿತು ಉಚಿತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ. ಶಿಬಿರದಲ್ಲಿ ಸಿ.ಜಿ.ಹೆಚ್.ಎಸ್., ಬಿಎಸ್‍ಎನ್‍ಎಲ್, ಕೆಇಬಿ, ರೈಲ್ವೆ ಸಿಬ್ಬಂದಿ ಮತ್ತು ಎಬಿವೈ (ಪೊಲೀಸ್) ಉಚಿತ ಸಮಾಲೋಚನೆ ನಡೆಯಲಿದೆ. ನಿಗಧಿತ ಭೇಟಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಅವಿನಾಶ್-7829128776 ಸಂಪರ್ಕಿಸಬಹುದಾಗಿದೆ.
ಸುಂಟಿಕೊಪ್ಪ ಜೂ.28 NEWS DESK : ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಚೇರಳ-ಶ್ರೀಮಂಗಲದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಗ್ರಾಮದ ನಿವಾಸಿ ಹೊಸಮನೆ ಪೂವಯ್ಯ ಅವರ ತೋಟಕ್ಕೆ ನುಗ್ಗಿರುವ 4 ಕಾಡಾನೆಗಳ ಹಿಂಡು ಅಡಿಕೆ, ಕಾಫಿಗಿಡಗಳನ್ನು ಧ್ವಂಸಗೊಳಿಸಿದೆ. ಪ್ರತೀ ವರ್ಷ ಆನೆದಾಳಿಯಿಂದ ರೈತರು ಕಂಗಾಲಾಗಿದ್ದು, ಕಾಫಿ ತೋಟಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳು ಭಯಪಡುವಂತಾಗಿದೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಕಾಡಿಗಟ್ಟಬೇಕು ಮತ್ತು ಆನೆ ಕಂದಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದ ಗ್ರಾಮಸ್ಥರು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪ ಜೂ.28 NEWS DESK : 7ನೇ ಹೊಸಕೋಟೆ ಯುವಕನೋರ್ವ ಸೈಕಲ್ ಮೂಲಕ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು. 7ನೇ ಹೊಸಕೋಟೆಯ ನಿವಾಸಿ ಪ್ರಶಾಂತ್ ಬೈಸಿಕಲ್ ಮೂಲಕ ಸಂಚರಿಸಿ ರಾಜ್ಯದ 31 ಜಿಲ್ಲೆಗಳಿಗೆ 26 ದಿನಗಳಲ್ಲಿ ತೆರಳಿ ಪ್ರತೀ ಜಿಲ್ಲೆಯಲ್ಲಿ ಒಂದೊಂದು ಗಿಡವನ್ನು ನೆಡುವ ಮೂಲಕ ನೆಲ-ಜಲ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಪ್ರಶಾಂತ್ 7ನೇ ಹೊಸಕೋಟೆ ಗ್ರಾಮದ ಸುರೇಶ ಹಾಗೂ ಉಷಾ ದಂಪತಿಗಳ ಪುತ್ರ.
ಮಡಿಕೇರಿ ಜೂ.28 NEWS DESK : ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನೋಟ್ ಪುಸ್ತಕ ಹಾಗೂ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯು ದಾನಿಗಳಾದ ಬಸವನಕೊಪ್ಪ ಮಹೇಂದ್ರ ಕುಮಾರ್ ಸಹಕಾರದೊಂದಿಗೆ ವಿತರಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರು, ದಾನಿಗಳು ಹಾಜರಿದ್ದರು.
ಮಡಿಕೇರಿ ಜೂ.28 NEWS DESK : ಕೊಡಗು ಜಿಲ್ಲಾ ಪೊಲೀಸ್ ಮತ್ತು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನಾಚರಣೆ ನಡೆಯಿತು. ಮರಗೋಡಿನ ಭಾರತಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಯುವ ಜನಾಂಗವು ಕ್ಷಣಿಕ ಸುಖದ ಆಸೆಗೆ ಬಿದ್ದು ತಮ್ಮ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು, ಡ್ರಗ್ಸ್ ನಂತಹ ಮಾದಕ ವಸ್ತುಗಳ ಸಂಪರ್ಕಕ್ಕೆ ಬಂದವರು ಎಂದೂ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಾದಕ ವಸ್ತುಗಳ ಬಳಕೆ ಮಾಡಿದವರು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ದುಶ್ಚಟಗಳ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು. ಡ್ರಗ್ಸ್ ಪೂರೈಕೆ ಮತ್ತು ಬಳಕೆಯ ಕುರಿತು ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ವ್ಯಸನ ಮುಕ್ತ ಸಮಾಜದ ನಿರ್ಮಾಣವಾಬೇಕು ಎಂದು ಕರೆ ನೀಡಿದರು. ವಿದ್ಯಾಸಾಗರ ಕಲಾವೇದಿಕೆ ಕುಶಾಲನಗರ ಇ.ರಾಜು…
ಟಿ.ಶೆಟ್ಟಿಗೇರಿ ಜೂ.28 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಕಾರ್ಯಕರ್ತರು ಟಿ.ಶೆಟ್ಟಿಗೇರಿ ಶ್ರೀ ಕೊರಕೋಟು ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಭು ಸುಬ್ಬಯ್ಯ, ಹಿರಿಯ ಮುಖಂಡ ಅಪ್ಪಚಂಗಡ ಪಿ.ಮೋಟಯ್ಯ, ಟಿ .ಶೆಟ್ಟಿಗೇರಿ ಪಂಚಾಯಿತಿ ಮಾಜಿ ಅಧ್ಯಕ್ಷ ಪೆಮ್ಮಂಡ ರಾಜ ಕುಶಾಲಪ್ಪ, ಆಲೆಮಾಡ ಸೋಮಣ್ಣ, ತೀತಿರ ದೊರೆ ಗಣಪತಿ ಮತ್ತು ಹಲವಾರು ಕಾರ್ಯಕರ್ತರು ಪೊನ್ನಣ್ಣ ಅವರು ಜನಪರ ಕೆಲಸಗಳಿಗೆ ಮತ್ತಷ್ಟು ಮತ್ತಷ್ಟು ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸಿದರು. ಶ್ರೀ ಅಯ್ಯಪ್ಪ ದೇವಾಲಯದ ಅರ್ಚಕ ವಸಂತ ಪೂಜೆ ನೆರವೇರಿಸಿದರು.
ಸುಂಟಿಕೊಪ್ಪ ಜೂ.28 NEWS DESK : ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವಕ್ಕೆ ಮಡಿಕೇರಿ ಸಂತ ಮೈಕಲ್ಸ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ರೇ.ಫಾ. ಸಂಜಯ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಮೂಲಕ ಚಾಲನೆ ನೀಡಿದರು. ರೇ.ಫಾ. ಸಂಜಯ್ ಕುಮಾರ್ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಿದರು. ವಾರ್ಷಿಕೋತ್ಸವದ ಅಂಗವಾಗಿ 3 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಬಲಿಪೂಜೆ, ಆರಾಧನೆ ನೆರವೇರಲಿದೆ. ಇಂದು ಸಂಜೆ ಬಲಿಪೂಜೆ ಹಾಗೂ ಆರಾಧನೆಯನ್ನು ಡೊರ್ನಹಳ್ಳಿಯ ಸಂತ ಅಂತೋಣಿ ಬಸಿಲಿಕಾ ಆಡಳಿತಾಧಿಕಾರಿ ವಂ.ಗುರುಗಳಾದ ಪ್ರವೀಣ್ ಪೇಧ್ರು ನೇರವೇರಿಸಲಿದ್ದಾರೆ. ಜೂ.29 ರಂದು ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ವಂ.ರೇ.ಫಾ. ಅವಿನಾಶ್ ಹಾಗೂ ಧರ್ಮಗುರುಗಳಾದ ವಿಜಯಕುಮಾರ್ ನೇರವೇರಿಸಲಿದ್ದಾರೆ. ಜೂ.30 ರಂದು ಸಂಜೆ 5.30 ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಅಡಂಬರ ಗಾಯನ ಬಲಿಪೂಜೆ ನೆರವೇರಲಿದೆ. ಪರಮ ಪ್ರಸಾದ ಆರಾಧನೆಯನ್ನು ಹೆಚ್.ಡಿಕೋಟೆಯ ಸೈಂಟ್ ಮೇರಿಸ್ ಚರ್ಚ್‍ನ ಬರ್ನಾಡ್ ಪ್ರಕಾಶ್ ಬಾರ್ನಿಸ್ ನೇರವೇರಿಸಲಿದ್ದಾರೆ ಎಂದು ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ.…
ಕುಶಾಲನಗರ ಜೂ.28 NEWS DESK : ಸಮುದಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರೋಟರಿ ಸದಸ್ಯರು ತಮ್ಮ ಯೋಜನೆಗಳ ಚಮತ್ಕಾರ ಅನಾವರಣಗೊಳಿಸಬೇಕು ಎಂದು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ರಾಜ್ಯಪಾಲ ಡಾ. ಸಿ.ಆರ್.ಪ್ರಶಾಂತ್ ಕರೆ ನೀಡಿದ್ದಾರೆ. ಕುಶಾಲನಗರ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದರು. ಮಹಿಳಾ ಶಕ್ತಿ ಮೂಲಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲು ಸಾಧ್ಯ ಎಂದ ಅವರು, ರೋಟರಿಯಲ್ಲಿ ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ ಎಂದರು. ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಕುಶಾಲನಗರ ರೋಟರಿ ಕಾರ್ಯ ವೈಖರಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರೋಟರಿ ಕುಶಾಲನಗರದ ನೂತನ ಅಧ್ಯಕ್ಷರಾಗಿ ಸಿ ಬಿ ಹರೀಶ್ ,ಕಾರ್ಯದರ್ಶಿಯಾಗಿ ಡಿ.ಡಿ.ಕಿರಣ್ ಅವರು ಆಯ್ಕೆಗೊಂಡಿದ್ದು ಅವರ ತಂಡಕ್ಕೆ ಪ್ರಮಾಣವಚನ ಬೋಧಿಸಿದರು. ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಸುನೀತಾ ಮಹೇಶ್ ಅವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಈ…






