ಲೇಖಕ: admin

ಮಡಿಕೇರಿ NEWS DESK ಜೂ.23 : ಕೊಡವಲ್ಯಾಂಡ್, ಕೊಡವ ಸಂಸ್ಕೃತಿ, ಆಚಾರ ವಿಚಾರಗಳ ರಕ್ಷಣೆ ಮತ್ತು ಕೊಡವರ ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಯ ಮೂಲಕ ಕಳೆದ 36 ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಜೂ.26ರಂದು “ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು” ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ವಿಕ್ರಮ್ ಹೆಗಡೆ ಅವರು “ಕೊಡವ ಧಾರ್ಮಿಕ ಆಚರಣೆ, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ” ಕುರಿತು ವಿಷಯ ಮಂಡಿಸಲಿದ್ದಾರೆ. ಸುಪ್ರೀo ಕೋರ್ಟ್ ಹಾಗೂ ನ್ಯೂಯಾರ್ಕ್ ನ ವಕೀಲರಾದ ಹಿಮಾ ಲಾರೆನ್ಸ್ ವಿಕ್ರಮ್ ಹೆಗಡೆ ಅವರು “ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ…

Read More

ಮಡಿಕೇರಿ NEWS DESK ಜೂ.23 : ಲವ್ ಜಿಹಾದ್ ಮತ್ತು ಮತಾಂತರ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂ.30 ರಂದು ಕುಶಾಲನಗರದಲ್ಲಿ ಬೃಹತ್ ಜನಜಾಗೃತಿ ಜನಾಂದೋಲನ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಜನಾಂದೋಲನಕ್ಕೆ ಹಿಂದೂ ಜಾಗರಣಾ ವೇದಿಕೆ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದರು. ಕುಶಾಲನಗರದ ಹಿಂದೂ ಮಹಿಳೆ ಹಾಗೂ ಆಕೆಯ ಮಗನನ್ನು ಮತಾಂತರ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಸಂಬಂಧ ಎರಡು ಮಳಿಗೆೆಗಳನ್ನು ಮುಚ್ಚಿರುವುದನ್ನು ಹೊರತು ಪಡಿಸಿದರೆ ಸಮಗ್ರ ತನಿಖೆಗೆ ಮುಂದಾಗಿಲ್ಲವೆಂದು ಆರೋಪಿಸಿದರು. ಈ ಹಿಂದೆ ಗುಡ್ಡೆಹೊಸೂರು ವಿಭಾಗದ ಹಿಂದೂ ಮಹಿಳೆಯೊಬ್ಬರು ಲವ್ ಜಿಹಾದ್ ಗೆ ಸಿಲುಕಿ ಮತಾಂತರಗೊಂಡಿದ್ದಳು. ಬಳಿಕ ಎನ್‌ಐಎ ತನಿಖೆಯೊಂದರ ಸಂದರ್ಭ ಮಹಿಳೆ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಲವ್ ಜಿಹಾದ್ ಮತ್ತು ಮತಾಂತರಗಳ ಬಗ್ಗೆ…

Read More

  ಮಡಿಕೇರಿ ಜೂ.23 NEWS DESK :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಿಂದ ಪಾಲಿಬೆಟ್ಟ ಟಾಟಾ ಕಂಪನಿ ಲಿಮಿಟೆಡ್ ಪಾಲಿಬೆಟ್ಟ ಕ್ಯಾಂಪೇನ್ ನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 100 ದಿನಗಳ ಕ್ಷಯ ಮುಕ್ತ ಅಭಿಯಾನ ಸಂಬಂಧ ಶಿಬಿರ ನಡೆಯಿತು. ಕ್ಷಯ ಗುರುತಿಸುವ ಸಂಬಂಧ ಕಫ ಸಂಗ್ರಹಣೆ ಹಾಗೂ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಅಂದರೆ ಕ್ಷಯ ರೋಗಾಣುಗಳು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಹೊರಬಂದ ರೋಗಾಣುಗಳು ಗಾಳಿಯ ಮುಖಾಂತರ ಆರೋಗ್ಯವಂತ ವ್ಯಕ್ತಿಯ ಮೂಗು ಮತ್ತು ಬಾಯಿಯ ಮುಖಾಂತರ ಶ್ವಾಸಕೋಶ ಕ್ಷಯ ಪ್ರವೇಶ ಮಾಡಿ ಸೋಂಕುಂಟು ಮಾಡುತ್ತದೆ ಎಂದರು. ಸೋಂಕನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸುವ ಒಂದು ಸುಲಭ ವಿಧಾನ ಹಾಗೂ ಸೋಂಕುಳ್ಳ ವ್ಯಕ್ತಿ ಆರೋಗ್ಯ ಸಂಸ್ಥೆಯಲ್ಲಿ ತಲುಪದೇ ವ್ಯಕ್ತಿಯ ವಾಸಸ್ಥಳ ಅಥವಾ ಅನುಕೂಲವಾಗುವ ನಿಗದಿತ ಜಾಗದಲ್ಲಿ ಎಕ್ಸರೇ ಮಾಡಿ ಕ್ಷಯ ಗುರುತಿಸಬಹುದಾಗಿದೆ ಎಂದು ಹೇಳಿದರು. ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ಪ ಹಾಗೂ ಟಾಟಾ ಕಂಪನಿಯ ಆರ್‍ಐಎಚ್‍ಪಿ ವೈದ್ಯಾಧಿಕಾರಿಗಳಾದ ಡಾ.ಚಂದ್ರು ಅವರು…

Read More

ಮಡಿಕೇರಿ ಜೂ.23 NEWS DESK : ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ, ಕಾಯ೯ದಶಿ೯ಯಾಗಿ ಸ್ಮಿತಾ ಚಂಗಪ್ಪ ಮತ್ತು ವಲಯ ಸೇನಾನಿಯಾಗಿ  ಕೆ.ವಸಂತ್ ಕುಮಾರ್  ನೇಮಕಗೊಂಡಿದ್ದಾರೆ.  ರೋಟರಿ ವುಡ್ಸ್ ಸಂಸ್ಥೆಗೆ 5 ನೇ ವಷ೯ದ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ ಕಾಯ೯ದಶಿ೯ಯಾಗಿ ಸ್ಮಿತಾ ಚಂಗಪ್ಪ ಆಯ್ಕೆ ಮೂಲಕ ರೋಟರಿ ವುಡ್ಸ್ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ, ಕಾಯ೯ದಶಿ೯ಯನ್ನು ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ. ರೋಟರಿ ವುಡ್ಸ್, ಮತ್ತು ಆಲೂರು ಸಿದ್ದಾಪುರ ರೋಟರಿ ಸಂಸ್ಥೆಗಳಿಗೆ    ರೋಟರಿ ವುಡ್ಸ್ ಮಾಜಿ ಅಧ್ಯಕ್ಷ  ಕೆ. ವಸಂತ್ ಕುಮಾರ್ ವಲಯ ಸೇನಾನಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಕಾಯ೯ದಶಿ೯ ಹಾಗೂ ಆಡಳಿತ ಮಂಡಳಿ ನಿದೇ೯ಶಕರಿಗೆ ಪದಗ್ರಹಣ ಸಮಾರಂಭವು ಜೂನ್ 27 ರಂದು ಶನಿವಾರ ಸಂಜೆ 6.30 ಗಂಟೆಗೆ  ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿತವಾಗಿದೆ. ಬೆಂಗಳೂರು ರೋಟರಿ ಸಂಸ್ಥೆಯ ಮಾಜಿ ಗವನ೯ರ್ ಎಲಿಜಬೆತ್  ಚೆರಿಯನ್ ಪದಗ್ರಹಣ ನೆರವೇರಿಸಲಿದ್ದು, ರೋಟರಿ ಸಹಾಯಕ ಗವನ೯ರ್ ಎಂ.ಡಿ. ರಂಗಸ್ವಾಮಿ,  (2026-27)  ಪಿ.ಎಂ.…

Read More

ಮಡಿಕೇರಿ ಜೂ.23 NEWS DESK : ಕುಶಾಲನಗರ ಸಮೀಪದ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.  ಸೋಮವಾರಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ  ಕೃಷ್ಣಪ್ಪ  ಜ್ಯೋತಿ ಬೆಳಗಿಸಿ ಯೋಗದಿನವನ್ನು  ಉದ್ಘಾಟಿಸಿದರು. ವಿದ್ಯಾರ್ಥಿಗಳು  ದೈಹಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ದೈಹಿಕ ಆರೋಗ್ಯ ಸದೃಢವಾಗಿಬೇಕಾದರೆ ದಿನನಿತ್ಯ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ ಕೃಷ್ಣಪ್ಪ ಎಂದು ಕರೆ ನೀಡಿದರು.  ಕಾಯ೯ಕ್ರಮದ ಮುಖ್ಯ ಅತಿಥಿ  ಡಾ.ಶಶಾಂಕ್ ಅತ್ವಾರ್  ಮಾತನಾಡಿ, , ಯೋಗದ ಮಹತ್ವ : ಯೋಗದ  ಉಗಮದ ಬಗ್ಗೆ  ಮಾಹಿತಿ ನೀಡಿದರಲ್ಲದೆ, ಗುರು ಪರಂಪರೆಯ ಬಗ್ಗೆಯೂ ತಿಳಿಸಿ, ವಿದ್ಯಾರ್ಥಿಗಳು ಶಿಸ್ತು, ಸಂಯ ಮ ಸಮಯ ಪಾಲನೆಯನ್ನು ರೂಢಿಸಿಕೊಳ್ಳಬೇಕು ಎಂದು  ಸಲಹೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷ  ಟಿ.ಕೆ ಸುಧೀರ್  ಮಾತನಾಡಿ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು   ದಿನನಿತ್ಯ ಮಾಡುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು  ಹೇಳಿದರು.  ಯೋಗ ದಿನದ ಅಂಗವಾಗಿ ಶಾಲೆಯ ಯೋಗ ಶಿಕ್ಷಕ  ಶಿವರಾಮ   ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ  ಶಾಲಾ ಆಡಳಿತ ಮಂಡಳಿಯ…

Read More

ಮಡಿಕೇರಿ NEWS DESK ಜೂ.23 : ಮಡಿಕೇರಿಯ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆ ತೀವ್ರ ತಪಾಸಣೆ ನಡೆಸಲಾಯಿತು. ಇ-ಮೇಲ್ ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ನ್ಯಾಯಾಲಯದ ಕಟ್ಟಡಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು. ಈ ಘಟನೆ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯಕ್ಕೆ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಪ್ರವೇಶವನ್ನು ತಪಾಸಣೆ ಪೂರ್ಣಗೊಳ್ಳುವವರೆಗೆ ನಿರ್ಬಂಧಿಸಲಾಗಿತ್ತು. ನ್ಯಾಯಾಧೀಶರ ಕೊಠಡಿಗಳು, ನ್ಯಾಯಾಲಯ ಕೊಠಡಿಗಳು, ಆವರಣ, ವಾಹನ ಪಾರ್ಕಿಂಗ್ ಪ್ರದೇಶ, ಕಚೇರಿಗಳು, ಸಮೀಪದ ಕ್ಯಾಂಟೀನ್‌ನಲ್ಲೂ ಶೋಧ ಕಾರ್ಯ ನಡೆಸಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರಲಿಲ್ಲ. ಆ ಬಳಿಕವೇ ನ್ಯಾಯಾಲಯಕ್ಕೆ ತೆರಳಲು ಪೊಲೀಸರು ಅನುಮತಿಸಿದರು. ಈ ಕುರಿತು ಪ್ರತಿಕ್ರಿಯೆ…

Read More

ಮಡಿಕೇರಿ NEWS DESK ಜೂ.23 : ಕೊಡವಲ್ಯಾಂಡ್, ಕೊಡವ ಸಂಸ್ಕೃತಿ, ಆಚಾರ ವಿಚಾರಗಳ ರಕ್ಷಣೆ ಮತ್ತು ಕೊಡವರ ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಯ ಮೂಲಕ ಕಳೆದ 36 ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಜೂ.26ರಂದು “ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು” ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ವಿಕ್ರಮ್ ಹೆಗಡೆ ಅವರು “ಕೊಡವ ಧಾರ್ಮಿಕ ಆಚರಣೆ, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ” ಕುರಿತು ವಿಷಯ ಮಂಡಿಸಲಿದ್ದಾರೆ. ಸುಪ್ರೀo ಕೋರ್ಟ್ ಹಾಗೂ ನ್ಯೂಯಾರ್ಕ್ನ ವಕೀಲರಾದ ಹಿಮಾ ಲಾರೆನ್ಸ್ ವಿಕ್ರಮ್ ಹೆಗಡೆ ಅವರು “ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ…

Read More

ಮಡಿಕೇರಿ NEWS DESK ಜೂ.23 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಮಾರ್ಚ್ 22 ರಿಂದ ಜೀರ್ಣೋದ್ಧಾರ ಕಾರ್ಯ ಆರಂಭಗೊAಡಿದ್ದು, ಇದೀಗ ಬಹುತೇಕ ಕಾಮಗಾರಿ ಮುಕ್ತಾಯದ ಹಂತದತ್ತ ಸಾಗಿದೆ. ರೂ. 1 ಕೋಟಿಗೂ ಅಧಿಕ ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ಗುಡಿಯ ಕೆಲಸವನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಧಿವಿಧಾನಗಳನ್ನು ಪ್ರಾರಂಭಿಸಲಾಗಿತ್ತು. ಕಪ್ಪುಶಿಲೆಯಲ್ಲಿ ಗರ್ಭಗುಡಿಯ ಕೆಲಸ ನಿರ್ವಹಿಸಲಾಗುತ್ತಿದೆ. ಮುರುಡೇಶ್ವರದ ಶ್ರೀಧರ್ ನಾಯಕ್ ಅವರು ಶಿಲೆಗಳನ್ನು ತಯಾರಿಸಿದ್ದಾರೆ. ದೇವಾಲಯ ಎತ್ತರದ ಪ್ರದೇಶದಲ್ಲಿರುವುದರಿಂದ ಬೃಹತ್ ಕ್ರೇನ್‌ನ ಸಹಾಯದಿಂದ ಅತ್ಯಂತ ಸಾಹಸಮಯ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಪ್ರಸ್ತುತ ಗಣಪತಿ ಗುಡಿ ಮತ್ತು ಮೇಲ್ಚಾವಣಿ ಕೆಲಸ ಪ್ರಗತಿಯಲ್ಲಿದೆ, ತಾಮ್ರದ ಹೊದಿಕೆ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಸುಮಾರು 90 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ನವೀಕರಣ ಕೆಲಸಕ್ಕೆ ನಾಡಿನವರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ನೆರವು ನೀಡಿದ್ದಾರೆ. ಇದೀಗ ಬಾಕಿ…

Read More

ವಿರಾಜಪೇಟೆ ಜೂ.22 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ಕಾವೇರಿ ಯೋಗ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.  ಕಾವೇರಿ ಯೋಗ ಕೇಂದ್ರದ ಯೋಗ ತರಬೇತುದಾರರಾದ ಸೀತಾರಾಂ ರೈ ಅವರು ವಿದ್ಯಾರ್ಥಿಗಳಿಗೆ ಯೋಗದಿನಾಚರಣೆಯ ಮಹತ್ವದ ಕುರಿತು ವಿವರಿಸಿದರು. ಯೋಗ ಅಭ್ಯಾಸವೂ ವ್ಯಕ್ತಿಗಳ ಮಾನಸಿಕ ಹಾಗೂ ದೈಹಿಕವಾಗಿ ಸದೃಢನಾಗಿ ಮಾಡುತ್ತದೆ. ದಿನದ 45 ನಿಮಿಷಗಳ ಕಾಲ ಪ್ರತಿಯೊಬ್ಬರು ಯೋಗವನ್ನು ಮಾಡಬೇಕು ಎಂದರು. “ಯೋಗವು ಕೇವಲ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಒಂದು ಜೀವನ ವಿಧಾನವಾಗಿದೆ. ಯೋಗಾಭ್ಯಾಸದಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ತಾಡಾಸನ ದೇಹದ ಭಂಗಿಯನ್ನು ಸರಿಪಡಿಸಿ ಸಮತೋಲನವನ್ನು ಹೆಚ್ಚಿಸುತ್ತದೆ, ವೃಕ್ಷಾಸನ ಏಕಾಗ್ರತೆ ಮತ್ತು ದೇಹದ ಸಮತೋಲನವನ್ನು ಸುಧಾರಿಸುತ್ತದೆ, ತ್ರಿಕೋನಾಸನ ಸೊಂಟ, ಕಾಲು ಮತ್ತು…

Read More

ಮಡಿಕೇರಿ ಜೂ.22 NEWS DESK : ನಗರದ ಪ್ರಮುಖ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಡಿಕೇರಿ – ನಗರಸಭೆಯು ಅಳವಡಿಸಿರುವ “ಶುದ್ಧ ನಗರಸಭೆಯ ಕುಡಿಯುವ ನೀರಿನ ಘಟಕ”ವು ಕಳೆದ ಕೆಲವು ದಿನಗಳಿಂದ ದುರಸ್ತಿಯಲ್ಲಿದ್ದು, ಕಾರ್ಯನಿರ್ವಹಿಸದ ಸ್ಥಿತಿಯಲ್ಲಿದೆ. ಇದರಿಂದಾಗಿ ನಿತ್ಯ ಸಂಚರಿಸುವ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ, ಪ್ರಸ್ತುತ ಈ ಯಂತ್ರವು ಕೆಟ್ಟುಹೋಗಿದ್ದು, ನೀರಿನ ಹನಿಗೂ ಜನ ಪರದಾಡುವಂತಾಗಿದೆ. ಈ ಘಟಕವು ನಿಷ್ಟ್ರಯೋಜಕವಾಗಿ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಮಡಿಕೇರಿ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ತುರ್ತಾಗಿ ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ಸುಲಭವಾಗಿ ಕುಡಿಯುವ ನೀರು ಸಿಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ವರದಿ : ಸುಮನ್.ಎಸ್.ಲಾಲಿಪಾಳ್ಯ  

Read More