ಲೇಖಕ: admin

ಮಡಿಕೇರಿ NEWS DESK ಮೇ 14 : ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 53 ಗಂಟೆಗಳ ಸತ್ಯಾಗ್ರಹವನ್ನು ಪೂರ್ಣಗೊಳಿಸಿತು. ನಗರದ ಕೊಡವ ಮಂದ್ ನಲ್ಲಿ ಸತ್ಯಾಗ್ರಹ ನಡೆಸಿದ ಸಿಎನ್‌ಸಿ ತನ್ನ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಿತು. ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಶಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು. ಹೈಕೋರ್ಟ್ ವಕೀಲ ಕಿರಣ್ ನಾರಾಯಣ್ ಅವರು ಕೂಡ ಸತ್ಯಾಗ್ರಹ ನಿರತರನ್ನು ಭೇಟಿಯಾಗಿ ಚರ್ಚಿಸಿದರು. ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ   ಡಾ.ಸುಬ್ರಮಣಿಯನ್ ಸ್ವಾಮಿ ಅವರು ಎನ್.ಯು.ನಾಚಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬೇಡಿಕೆಯ ಬಗ್ಗೆ ಮನವರಿಕೆ ಮಾಡಿಕೊಂಡರು. ಕಳೆದ 36 ವರ್ಷಗಳಿಂದ ಭೌಗೋಳಿಕ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಮೂಲನಿವಾಸಿ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಸಿಎನ್‌ಸಿ ನಿರಂತರ ಶಾಂತಿಯುತ ಹೋರಾಟವನ್ನು…

Read More

ಸೋಮವಾರಪೇಟೆ ಮೇ 14 NEWS DESK : ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ 2026ರಲ್ಲಿ ಪ್ರಕಟಿಸಿರುವ ಎಂ.ಡಿ ಸ್ನಾತಕೋತ್ತರ ಆಯುರ್ವೇದ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಡಾ. ಎಂ.ಪಿ.ಸೋನಿಯಾ ಅಗದ ತಂತ್ರ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಡಾ. ಎಂ.ಪಿ.ಸೋನಿಯಾ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಸುಬ್ರಾಯಿಗೌಡರ ಮೊಮ್ಮಗಳಾಗಿದ್ದು, ಮೂದರವಳ್ಳಿ ಗ್ರಾಮದ ಎಂ.ಎಸ್ ಪುಟ್ಟೇಗೌಡ ಹಾಗೂ ಶಿಕ್ಷಕಿ ಎ.ಎಸ್.ಸೌಭಾಗ್ಯ ದಂಪತಿಯ ಪುತ್ರಿ.

Read More

ಮಡಿಕೇರಿ ಮೇ 14 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದೊಂದಿಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ವತಿಯಿಂದ ಇಲಾಖಾ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಎಸ್.ಆರ್ ಅವರು ಕಾರ್ಯ ಉದ್ಘಾಟಸಿ ಮಾತನಾಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕವು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಅವರಿಗೆ ರಕ್ಷಣೆ, ಭದ್ರತೆ ಒದಗಿಸಲು ಇರುವ ಯೋಜನಾ ಘಟಕವಾಗಿದ್ದು, ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಂತಹ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‍ಗೆ ಭೇಟಿ ನೀಡಿ ದೂರನ್ನು ಸಲ್ಲಿಸಬಹುದು. ಇಲ್ಲ 24*7 ಕರ್ತವ್ಯ ನಿರ್ವಹಿಸುತ್ತಿದ್ದು, ತುರ್ತು ರಕ್ಷಣೆ ಮತ್ತು ಆಶ್ರಯ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ,…

Read More

ಮಡಿಕೇರಿ ಮೇ 14 NEWS DESK : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಯು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ “ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ(ಕೆಎಸ್‍ಎಪಿಸಿಸಿ)ಯನ್ನು ಸಿದ್ಧಪಡಿಸಿ 2024ರಲ್ಲಿ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮೋದನೆ ಪಡೆದಿದೆ. ಈ ಯೋಜನೆಯಡಿಯಲ್ಲಿ ಹವಾಮಾನ ಬದಲಾವಣೆಯ ಕುರಿತ ಕಾರ್ಯ ಅಂಶಗಳನ್ನು ಆಧರಿಸಿ, ವಿವಿಧ ಇಲಾಖೆಗಳು 2025-2030ರ ಅವಧಿಗೆ ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು ಗುರಿಗಳೊಂದಿಗೆ ನಿಗದಿಪಡಿಸಿವೆ. ಈ ಸೂಚಕಗಳ ಪರಿಣಾಮಕಾರಿ  ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರೆ ಪಾಲುದಾರ ಸಂಸ್ಥೆಗಳ ಸಾಮಥ್ರ್ಯ ವೃದ್ಧಿ ಅತ್ಯವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ, ಎಂಪ್ರಿ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ 2025-26ನೇ ಸಾಲಿನಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದರ ಮುಂದುವರಿದ ಭಾಗವಾಗಿ, 2026-27ನೇ…

Read More

ಮಡಿಕೇರಿ NEWS DESK ಮೇ 14 : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮೇ 15 ರಂದು ನಗರದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಾರ್ಡ್ ಸಂಖ್ಯೆ 22 ಬ್ಲಾಕ್ ಸಂಖ್ಯೆ 16ರಲ್ಲಿ ರೋಶ್ನಿ ಕಾವೇರಪ್ಪ ಅವರ ಮನೆಯ ಮುಂಭಾಗ ತಡಗೋಡೆ ಕಾಮಗಾರಿ, ವಾರ್ಡ್ ಸಂಖ್ಯೆ 15 ಬ್ಲಾಕ್ ಸಂಖ್ಯೆ 13 ರಲ್ಲಿ ರೆಡ್ ಫರ್ನ್ ಬಳಿ ತಡಗೋಡೆ ನಿರ್ಮಾಣ, ಕ್ರಿಸ್ಟಲ್ ಹಾಲ್ ಮುಂಭಾಗ ಹಾದು ಹೋಗುವ ರಸ್ತೆ ಅಭಿವೃದ್ಧಿ, ಕೊಡವ ರುದ್ರಭೂಮಿಗೆ ಹೋಗುವ ರಸ್ತೆ, ಗೌಡ ಸಮಾಜದಿಂದ ಚೈನ್‌ಗೇಟ್ ರಸ್ತೆ, ಜ್ಯೂನಿಯರ್ ಕಾಲೇಜ್ ನಿಂದ ಮೇಲಿನ ಗೌಡಸಮಾಜ ರಸ್ತೆ, ಸಂಪಿಗೆಕಟ್ಟೆಯಿAದ ಮಹದೇವಪೇಟೆ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂತ ಜೋಸೆಫರ ಶಾಲೆಗೆ ಹೋಗುವ ರಸ್ತೆ, ಗ್ರಾಮಾಂತರ ಪೋಲಿಸ್ ಠಾಣೆ ಮುಂಭಾಗ ಮೋರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ…

Read More

ಮಡಿಕೇರಿ NEWS DESK ಮೇ 14 : ವಿರಾಜಪೇಟೆ ಬ್ಲಾಕ್ ಮತ್ತು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ವಲಯಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನ ಚೆನ್ನಯ್ಯನ ಕೋಟೆ ವಲಯಾಧ್ಯಕ್ಷರಾಗಿ ಹೆಚ್.ಸಿ.ಮನು, ಅಮ್ಮತ್ತಿ ಕೆ.ಎನ್.ರಾಜನ್, ಕಾರ್ಮಾಡು ಪಳಿಯತಂಡ ಡಿ.ಹರಿ, ಕಣ್ಣಂಗಾಲ ಮಚ್ಚಾರಂಡ ಎಂ.ಕಿರಣ್, ಕಾಕೋಟುಪರಂಬು ಬಟ್ಟಕಾಳಂಡ ರಾಜ ದಿನೇಶ್, ಬಿಳಗುಂದ ನೌಫಲ್ ಹೆಚ್.ಎಂ ಹಾಗೂ ವಿರಾಜಪೇಟೆ ವಲಯಾಧ್ಯಕ್ಷರಾಗಿ ಮಾಳೇಟಿರ ಬೋಪಣ್ಣ ನೇಮಕಗೊಂಡಿದ್ದಾರೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ಸಂಪಾಜೆ ವಲಯಾಧ್ಯಕ್ಷರಾಗಿ ವಿಜಯ್ ಕುಮಾರ್, ಕುಂದಚೇರಿ ಕೀರ್ತಿ ಉತ್ತಪ್ಪ, ಅಯ್ಯಂಗೇರಿ ಅಬ್ದುಲ್ ರೆಹಮಾನ್, ಹಾಕತ್ತೂರು ಬಿ.ಕೆ.ನಾರಾಯಣ, ಎಮ್ಮೆಮಾಡು ಕೆ.ಎಂ.ಮೂಸ, ಬಲ್ಲಮಾವಟಿ ಮಣವಟ್ಟಿರ ದಯಾ ಕುಟ್ಟಪ್ಪ, ಮದೆ ದೀಪಕ್ ಎಂ.ಎ, ಮೇಕೇರಿ ಪೊನ್ನಪ್ಪ ಹಾಗೂ ಕರಿಕೆ ವಲಯಾಧ್ಯಕ್ಷರಾಗಿ ಬೇಕಲ್ ಹರಿ ಪ್ರಸಾದ್ ನೇಮಕಗೊಂಡಿದ್ದಾರೆ. ಇತರ ವಲಯ ಅಧ್ಯಕ್ಷರುಗಳು ಯಥಾ ರೀತಿಯಲ್ಲಿ ಮುಂದುವರಿಯಲಿದ್ದಾರೆ…

Read More

ಮಡಿಕೇರಿ ಮೇ 13 NEWS DESK : ಕುಶಾಲನಗರ 220/66/11 ಕೆ.ವಿ ಹಾಗೂ 66/11 ಕೆ.ವಿ ಸುಂಟಿಕೊಪ್ಪ ಮತ್ತು ಮಾದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಕೈಗೆತ್ತಿಕೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಮೇ, 15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಮಾರ್ಗದಿಂದ ಸರಬರಾಜಾಗುವ ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಶಿರಂಗಾಲ, ಕಾನ್‍ಬೈಲು, ಅಂದಗೋವೆ, ನಾಕೂರು, ಹಾದ್ರೆಹೆರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ಯ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಅಭ್ಯತ್‍ಮಂಗಲ, ನಾಕೂರು ಶಿರಂಗಾಲ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಆಲೂರು ಸಿದ್ದಾಪುರ 66/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರ, 66/11 ಕೆವಿ ಹಾನಗಲ್ಲು ಶೆಟ್ಟಳ್ಳಿ ಹಾಗೂ 33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ…

Read More

ಗೋಣಿಕೊಪ್ಪಲು ಮೇ 13 NEWS DESK : ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಪಂಚಾಯಿತಿಯ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕೆ.ಆರ್‌.ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ.  ಈ ಹಿಂದೆ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿ.ಅಪ್ಪಣ್ಣ ಅವರು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿಗೆ ವರ್ಗಾವಣೆಗೊಂಡ ಹಿನ್ನೆಲೆ, ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್‍ರಾಜೇಶ್ ಅವರನ್ನು ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ. ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ, ಅರುವತ್ತೊಕ್ಲು, ಕಿರುಗೂರು ಪಂಚಾಯ್ತಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ರಾಜೇಶ್, ಈ ಹಿಂದೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Read More

ಮಡಿಕೇರಿ ಮೇ 13 NEWS DESK : ಸೌತ್ ಏಷ್ಯಾ ಬೋಡಿ ಬಿಲ್ಡಿಂಗ್ ಅಸೋಸಿಯೇಷನ್ ಹಾಗೂ ಶ್ರೀ ರಾಮ ವ್ಯಾಯಾಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಆಯೋಜಿಸಲಾದ ಸೌತ್ ಇಂಡಿಯಾ ಗರಡಿ ಕ್ಲಾಸಿಕ್ಸ್ -2026 ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಮೊಹಮ್ಮದ್ ನಬ್ ಹಾನ್ ಭಾಗವಹಿಸಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮೊಹಮ್ಮದ್ ನಬ್ ಹಾನ್ ಕುಶಾಲನಗರದ  ನೆಲ್ಲಿಹುದಿಕೇರಿ ಗ್ರಾಮದ ನೌಫಲ್ -ನಸೀಮ ದಂಪತಿಗಳ ಪುತ್ರ. ಇವರ ಸಾಧನೆಗೆ ಸ್ಥಳೀಯ ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಜನ ಸಂಘ ಅಭಿನಂದಿಸಿದೆ.

Read More

ಮಡಿಕೇರಿ ಮೇ 13 NEWS DESK : ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕøತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ…

Read More