ಲೇಖಕ: admin

ಮಡಿಕೇರಿ NEWS DESK ಫೆ.22 : ಅತ್ಯುನ್ನತ ಶೈಕ್ಷಣಿಕ ಸಾಧನೆಗಾಗಿ ಅಂತರರಾಷ್ಟ್ರೀಯ ಖ್ಯಾತಿಯ ವೈದ್ಯೆ ಹಾಗೂ ವಿಜ್ಞಾನಿ ಕೊಡಗು ಜಿಲ್ಲೆಯ ಡಾ.ನವಿತಾ ಸೋಮಯ್ಯ ಅವರಿಗೆ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ಕ್ವೀನ್ ಎಲಿಜಬೆತ್ ಪ್ರಶಸ್ತಿ ದೊರೆತ್ತಿದೆ. ಕ್ವೀನ್ ಎಲಿಜಬೆತ್ ಪ್ರಶಸ್ತಿಯು ಜಾಗತಿಕ ಕ್ಯಾನ್ಸರ್ ಆರೈಕೆಯಲ್ಲಿ ಐಸಿಆರ್‌ನ ಪರಿವರ್ತಕ ಪಾತ್ರವನ್ನು ಗುರುತಿಸುತ್ತದೆ. ಬದುಕುಳಿಯುವಿಕೆಯನ್ನು ಸುಧಾರಿಸುವುದು, ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅಂತರರಾಷ್ಟ್ರೀಯ ಚಿಕಿತ್ಸಾ ಮಾನದಂಡಗಳನ್ನು ರೂಪಿಸುವ ಅಂಶವನ್ನು ಒಳಗೊಂಡಿದೆ. ಸ್ತನ ಕ್ಯಾನ್ಸರ್ ಸಂಶೋಧನೆಯನ್ನು ಪ್ರತಿನಿಧಿಸುವ ಭಾಗವಾಗಿ ಡಾ.ನವಿತಾ ಸೋಮಯ್ಯ ಈ ಗೌರವವನ್ನು ಸ್ವೀಕರಿಸುತ್ತಿದ್ದಾರೆ. ಕಿಂಗ್ ಚಾರ್ಲ್ಸ್ III ಹಾಗೂ ಕ್ವಿನ್ ಕ್ಯಾಮಿಲ್ಲಾ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ಡಾ.ನವಿತಾ ಸೋಮಯ್ಯ ಅವರನ್ನು ಐಸಿಆರ್ ತಂಡದ ಭಾಗವಾಗಿ ಆಹ್ವಾನಿಸಿದ್ದಾರೆ. ಪ್ರಶಸ್ತಿಗಾಗಿ ಆಯ್ಕೆಯಾದ ಐಸಿಆರ್‌ನ ಎಂಟು ವಿಜ್ಞಾನಿಗಳಲ್ಲಿ ಇವರೂ ಒಬ್ಬರು. ಇದೇ ಫೆ.24 ರಂದು ಬೆಳಿಗ್ಗೆ 11.30 ಗಂಟೆಗೆ ಸೈಂಟ್ ಜೇಮ್ಸ್ ಪ್ಯಾಲೇಸ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.…

Read More

ವಿರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ 5ಎ ಸೈಡ್ ರಿಂಗ್ ಹಾಕಿ ಪಂದ್ಯಾಟ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಹಿಂದಿನ ಕಾಲದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಡಗು ಜಿಲ್ಲೆಗೆ ವಿಶೇಷವಾದ ಸ್ಥಾನವಿದೆ. ಅದರಲ್ಲಿಯು ಸೇನೆ ಹಾಗೂ ಹಾಕಿ ಪಂದ್ಯಾಟಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ನಮ್ಮ ಪೂರ್ವಜರು ಎಲ್ಲಾ ಕ್ಷೇತ್ರಗಳನ್ನು ಬೆಳೆಸಿಕೊಂಡು ಬಂದ ಆಚಾರ , ವಿಚಾರ, ಸಂಸ್ಕೃತಿ , ಸಂಪ್ರದಾಯ ನಾವೆಲ್ಲರೂ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಾಕಿ ಕ್ರೀಡೆಯು ಜಿಲ್ಲೆಯ ಅಸ್ಮಿತೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವಂತಾಗಲಿ ಎಂದರು. ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಹಾಕಿ ಆಟಗಾರರಿದ್ದು ತಾಲೂಕಿಗೆ ಒಂದು ಟರ್ಪ್ ಮೈದಾನ ಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ ಆದಷ್ಟು ಬೇಗ ಈ ವಿಚಾರದ…

Read More

ಸಿದ್ದಾಪುರ, NEWS DESK  ಫೆ.22: ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ. ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲ್ಲೂಕು, ಹೊಸೂರು ಮಂಡಲ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಂಗಮ ಅಂಗವಾಗಿ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆ ಹೇಳಿಕೊಟ್ಟಿದ್ದು, ನಮ್ಮ ದೇಶ ಉಳಿಯಬೇಕೆಂದರೇ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು ಎಂದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಭದ್ರಕಾಳಿ ದೇವಾಲಯದಿಂದ ಶ್ರೀ ಮಹಾದೇವರ ದೇವಸ್ಥಾನದವರೆಗೂ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀ ಭದ್ರಕಾಳಿ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆಗೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಸಮಾಜದ ಮುಖಂಡರು ಚಾಲನೆ ನೀಡಿದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ…

Read More

ನವದೆಹಲಿ: ದೇಶದ ಸಮುದ್ರ ಗಡಿ ಕಾಯುವ ಹೆಮ್ಮೆಯ ಭಾರತೀಯ ನೌಕಾಪಡೆಯಲ್ಲಿ (Indian Navy) ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಜನತೆಗೆ ಇಲ್ಲಿದೆ ಭರ್ಜರಿ ಸುದ್ದಿ. ಶಾರ್ಟ್ ಸರ್ವಿಸ್ ಕಮಿಷನ್ (SSC) ಅಡಿಯಲ್ಲಿ ಒಟ್ಟು 260 ಸಬ್ ಲೆಫ್ಟಿನೆಂಟ್ ಹುದ್ದೆಗಳ ನೇಮಕಾತಿಗಾಗಿ ನೌಕಾಪಡೆಯು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ವಿಶೇಷತೆಯೆಂದರೆ, ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇಮಕಾತಿಯ ಪ್ರಮುಖ ವಿವರಗಳು ಭಾರತೀಯ ನೌಕಾಪಡೆಯು ಕಾರ್ಯನಿರ್ವಾಹಕ (Executive), ತಾಂತ್ರಿಕ (Technical) ಮತ್ತು ಶಿಕ್ಷಣ ಶಾಖೆಗಳಲ್ಲಿ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದವರು ಕೇರಳದ ಎಜಿಮಲದಲ್ಲಿರುವ ನೌಕಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ವಿಭಾಗವಾರು ಹುದ್ದೆಗಳ ಹಂಚಿಕೆ: ಕಾರ್ಯನಿರ್ವಾಹಕ ಶಾಖೆ (Executive): ಸಾಮಾನ್ಯ ಸೇವೆ (76), ಪೈಲಟ್ (25), ಏರ್ ಟ್ರಾಫಿಕ್ ಕಂಟ್ರೋಲರ್ (18) ಸೇರಿದಂತೆ ವಿವಿಧ ವಿಭಾಗಗಳು. ತಾಂತ್ರಿಕ ಶಾಖೆ (Technical): ಎಂಜಿನಿಯರಿಂಗ್ (42), ಎಲೆಕ್ಟ್ರಿಕಲ್ (38) ಮತ್ತು ಜಲಾಂತರ್ಗಾಮಿ (Submarine) ವಿಭಾಗಗಳು. ಶಿಕ್ಷಣ ಮತ್ತು ಲಾಜಿಸ್ಟಿಕ್ಸ್: ಎಂ.ಎಸ್ಸಿ,…

Read More

ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಫೋನ್ ಬಳಕೆಗೆ ಕಡಿವಾಣ ಹಾಕಲು ಗಂಭೀರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 22) ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಮುಖ ಸುಳಿವು ನೀಡಿದ್ದಾರೆ. 16 ವರ್ಷದೊಳಗಿನವರಿಗೆ ಮೊಬೈಲ್ ನಿಷೇಧ? ಸೋಷಿಯಲ್ ಮೀಡಿಯಾ ಹಾವಳಿಯಿಂದ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂಬ ಆತಂಕದ ನಡುವೆ, 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸುವ ಪ್ರಸ್ತಾಪ ಸಭೆಯಲ್ಲಿ ಚರ್ಚೆಯಾಗಿದೆ. ಜಾಗತಿಕ ಮಾದರಿ: ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಗಳಲ್ಲಿ ಈಗಾಗಲೇ ಇಂತಹ ನಿಯಮಗಳಿದ್ದು, ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರುವ ಬಗ್ಗೆ ಕುಲಪತಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ವಿಸಿಗಳ ಒಪ್ಪಿಗೆ: ಈ ಪ್ರಸ್ತಾಪಕ್ಕೆ ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು (VCs) ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಡ್ರಗ್ಸ್ ಮುಕ್ತ ಕ್ಯಾಂಪಸ್‌ಗೆ ಕರೆಯೋಲೆ ಮಾದಕ ವಸ್ತುಗಳ ಜಾಲವು ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ…

Read More

ಮಡಿಕೇರಿ NEWS DESK ಫೆ. 22 : ಅಂತರರಾಷ್ಟ್ರೀಯ ಸೇವಾ  ಸಂಸ್ಥೆಯಾಗಿರುವ ರೋಟರಿ ಸಂಸ್ಥೆ ಸ್ಥಾಪನೆಯಾಗಿ 121 ವಷ೯ಗಳಾದ ಸಂಭ್ರಮವನ್ನು ರೋಟರಿ ಸಮ್ಮಿಲನ ಹೆಸರಿನಲ್ಲಿ ರೋಟರಿ ದಿನಾಚರಣೆಯಾಗಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ಮಿಡ್ ಟೌನ್ ರೋಟರಿ ಸಂಸ್ಥೆಗಳಿಂದ ಫೆ.23 ರಂದು ಸೋಮವಾರ ಆಚರಿಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಸುವಣ೯ ಇಕೋ ವಿಲೇಜ್ ರೆಸಾಟ್೯ನಲ್ಲಿ ಫೆ.23 ರಂದು ಸೋಮವಾರ ಸಂಜೆ 6.00 ಗಂಟೆಗೆ ಆಯೋಜಿತ ರೋಟರಿ ದಿನಾಚರಣೆಯನ್ನು ರೋಟರಿ ಜಿಲ್ಲೆ 3181 ನ ಗವನ೯ರ್ ಪಿ.ಕೆ. ರಾಮಕೖಷ್ಣ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲೆ 3092ನ ಮಾಜಿ ಗವನ೯ರ್ ನಾಗೇಂದ್ರ ಪ್ರಸಾದ್ ಮುಖ್ಯ ಉಪನ್ಯಾಸ ಮಾಡಲಿರುವ ಕಾಯ೯ಕ್ರಮದಲ್ಲಿ ರೋಟರಿ ಜಿಲ್ಲೆಯ ಮುಂದಿನ ಸಾಲಿನ ಗವನ೯ರ್ ಸತೀಶ್ ಬೊಳಾರ್, ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್, ಮಾಜಿ ಗವನ೯ರ್ ಗಳು, ರೋಟರಿ ವಲಯ 6 ರ ಸಹಾಯಕ ಗವನ೯ರ್ ಗಳಾದ ರಾಜುಗೌಡ, ಧಿಲನ್ ಚಂಗಪ್ಪ, ಉಲ್ಲಾಸ್ ಕೖಷ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ,…

Read More

ಮಡಿಕೇರಿ NEWS DESK ಫೆ.22 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಸಹಿತ 1 ಕೆಜಿ 60 ಗ್ರಾಂ ಗಾಂಜಾವನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆಯ ಸುಣ್ಣದ ಬೀದಿಯ ಅಸೈನಾರ್ ರಜಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ ಅಶೋಕ (42) ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಉಪವಿಭಾಗದ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್‌ಐಗಳಾದ ಲತಾ ಎನ್.ಜೆ. ವಾಣಿಶ್ರೀ ಬಿ.ಎಸ್, ಪ್ರಮೋದ್, ಎ.ಎಸ್.ಐ ಸೋಮಣ್ಣ ಕೆ.ಬಿ, ಹೆಚ್.ಸಿಗಳಾದ ನವೀನ್ ಕುಮಾರ್ ಎಸ್.ಎಲ್, ಬಸವರಾಜು ಎಂ, ಅಬ್ದುಲ್ ಮಜೀದ್, ಹನೀಫ್ ಕೆ.ಎ, ಬೋಪಣ್ಣ ಎಂ.ಎಸ್, ರಾಧಾ, ಪಿ.ಸಿಗಳಾದ ಮಹೇಶ್ ಎಸ್, ಶಿವಪ್ರಸಾದ್, ರಾಜೇಶ್ ಎಸ್ ಹಾಗೂ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ…

Read More

*ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಶುರುವಾಗುತ್ತದೆ. ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಮೂಡುವುದು ಸಹಜ. ಅದರಲ್ಲೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಇದು ಜೀವನದ ಪ್ರಮುಖ ಘಟ್ಟವೆಂಬ ಹೆಚ್ಚಾದ ಒತ್ತಡವಿರುತ್ತದೆ. ಈ ಒತ್ತಡದ ನಡುವೆ ಅನೇಕ ವಿದ್ಯಾರ್ಥಿಗಳು ನಂಬಿರುವ ಒಂದು ದೊಡ್ಡ ತಪ್ಪು ಕಲ್ಪನೆಯೆಂದರೆ – ‘ರಾತ್ರಿ ಜಾಗರಣೆ’. ರಾತ್ರಿಯಿಡೀ ಎಚ್ಚರವಿದ್ದು ಓದಿದರೆ ಹೆಚ್ಚು ಅಂಕ ಗಳಿಸಬಹುದು ಎಂಬ ಭ್ರಮೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಫಲಿತಾಂಶ ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.    ನಮ್ಮ ದೇಹವು ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಇದು ‘ಸಿರ್ಕಾಡಿಯನ್ ರಿದಮ್’ (Circadian Rhythm) ಅಥವಾ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿ ಹತ್ತು ಗಂಟೆಯ ನಂತರ ನಮ್ಮ ಮೆದುಳಿನ ಪೀನಲ್ ಗ್ರಂಥಿಯಿಂದ ಮೆಲಟೋನಿನ್ ಎಂಬ ನಿದ್ರೆ ಮಾಡಲು ಪ್ರೇರೇಪಿಸುವ ರಾಸಾಯನಿಕ ಬಿಡುಗಡೆಯಾಗುತ್ತದೆ. ವಿಜ್ಞಾನದ ಪ್ರಕಾರ, ಈ ಸಮಯದಲ್ಲಿ ಬಲವಂತವಾಗಿ…

Read More

ಮಡಿಕೇರಿ ಫೆ.21 NEWS DESK : ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಫೆ.22 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಫೆ.22 ರಂದು ಮಧ್ಯಾಹ್ನ 1 ಗಂಟೆಗೆ ಕೊಡಗು ಜಿಲ್ಲೆಯ ದಲಿತರ ಸ್ವಾಭಿಮಾನಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಶಿವಣ್ಣ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಫೆ.21 NEWS DESK  : 33/11 ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್2 ನಾಪೋಕ್ಲು ಹಾಗೂ ಎಫ್5 ಹೊದ್ದೂರು ಫೀಡರ್‍ನಲ್ಲಿ ಫೆಬ್ರವರಿ, 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕಬಡಗೇರಿ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯ ಪರಂಬು, ಹಳೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.  :: ಶನಿವಾರಸಂತೆ  :: 66/11 ಕೆ.ವಿ ಶನಿವಾರಸಂತೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನಾಲ್ಕನೆ ತ್ರೈಮಾಸಿಕ ಅವಧೀಯ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈ ಉಪ ಕೇಂದ್ರದಿಂದ ಹೊರಹೊಮ್ಮುವ ಪೂರಕಗಳಲ್ಲ್ಲಿ ಫೆಬ್ರವರಿ, 22 ರಂದು ಬೆಳಗ್ಗೆ 10 ರಿಂದ ಸಂಜೆ…

Read More