ಮಡಿಕೇರಿ ಫೆ.24 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಿಕಾಭವನದಿಂದ ಅರ್ಜಿಗಳನ್ನು ಪಡೆದುಕೊಂಡು ಮಾರ್ಚ್ 3 ರೊಳಗೆ ತಮ್ಮ ಇತ್ತೀಚೆಗಿನ ಒಂದು ಭಾವಚಿತ್ರದೊಂದಿಗೆ ಸಲ್ಲಿಸಬೇಕಾಗಿದೆ.ನವೀಕರಣಕ್ಕೆ ರೂ.600 ಹಾಗೂ ನೂತನ ಸದಸ್ಯರಿಗೆ ರೂ.1600 ಎಂದು ನಿಗದಿಪಡಿಸಲಾಗಿರುತ್ತದೆ. ಮಾ.3 ರ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. :: ಸದಸ್ಯತ್ವಕ್ಕೆ ಮಾನದಂಡಗಳು :: 1. ರಾಜಕೀಯದಲ್ಲಿರುವವರಿಗೆ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿರುವವರಿಗೆ ಪತ್ರಕರ್ತರ ಸಂಘದ ಸದಸ್ಯತ್ವ ನೀಡಲಾಗುವುದಿಲ್ಲ. 2. ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಜಿಲ್ಲಾ ವರದಿಗಾರರು/ಸಂಪಾದಕರು ಗಳಿಂದ ದೃಢೀಕರಿಸಿದ ಪತ್ರ ಲಗತ್ತಿಸಬೇಕು. 3.ಮಾಧ್ಯಮ ಕ್ಷೇತ್ರದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ. ನೂತನವಾಗಿ ಸದಸ್ಯತ್ವ ಪಡೆಯುವವರು ಮಾಧ್ಯಮ ಕ್ಷೇತ್ರದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು ಹಾಗೂ 21 ವರ್ಷ ಮೇಲ್ಪಟ್ಟಿರಬೇಕು.ಜೊತೆಗೆ ಕ್ಯಾಮೆರಾಮೆನ್‍ಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣವಾದ ಅಂಕಪಟ್ಟಿ ಹಾಗೂ ವರದಿಗಾರರು ಪದವಿ ಅಂಕಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ದಾಖಲೆಗಳು ಅಪೂರ್ಣವಾಗಿದ್ದರೆ ಮಾನ್ಯಮಾಡಲಾಗುವುದಿಲ್ಲ. 4.ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ.ಸೂಚಕರು…
ಲೇಖಕ: admin
ಗೋಣಿಕೊಪ್ಪ ಫೆ.24 NEWS DESK : ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ದತ್ತಿನಿಧಿ ಸ್ಥಾಪಿಸಿದ ಉದ್ದೇಶವನ್ನು ಈಡೇರಿಸಲಾಯಿತು. ಮಕ್ಕಳು ಕಪ್ಪೆ ಓಟ, ಬಾಲ್ ಹಾಕುವುದು, ವಿಷದಚೆಂಡು, ರಿಂಗ್‍ಎಸೆತ, ಟಿನ್ ಒಡೆಯುವುದು ಸೇರಿದಂತೆ ಹಲವಾರು ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ನೇತೃತ್ವದಲ್ಲಿ ಕ್ರೀಡೆಗಳು ನಡೆದವು. ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬಿಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಎನ್.ಎನ್.ದಿನೇಶ್, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ.ಕುಮಾರ್, ಸಹ ಶಿಕ್ಷಕರುಗಳಾದ ಕಲಾ ಶಿಕ್ಷಕ ಸತೀಶ್ ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್.ಕೆ, ಇಂದಿರಾ ಎಂ.ಸಿ, ಅನಿತಕುಮಾರಿ ಹೆಚ್.ಇ.ದಮಯಂತಿ ಎ.ಎಮ್, ಅರ್ಶಿಯಾ.ಬಿ, ಕ್ಲ್ಯೆಮಿಂಟನ್, ಸಹನ್ ಎಂ.ಬಿ, ಶಾರದ ಕೆ.ಎಸ್, ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು, ಎನ್, ಮಂಜುಳ ವಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಸುಂಟಿಕೊಪ್ಪ ಫೆ.24 NEWS DESK : ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ 2026-27ನೇ ಸಾಲಿನ 3ನೇ ಬಾರಿಗೆ ಅಧ್ಯಕ್ಷರಾಗಿ ಪಟ್ಟೆಮನೆ ಉದಯಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಸಿ.ಮೋಹನ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಯಂಕನ ಶ್ರೀರಾಮ್, ಬಿ.ಡಿ.ರಾಜು ರೈ, ಖಜಾಂಚಿಯಾಗಿ ರಮೇಶ್‍ಪಿಳ್ಳೆ, ಸಂಘಟನಾ ಕಾರ್ಯದರ್ಶಿಯಾಗಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಪಿ.ವಿನೋದ್, ಟಿ.ಕೆ.ಹರೀಶ್, ತಮಿಳ್ ಸಂಘದ ಅಧ್ಯಕ್ಷ ಅಯ್ಯಪ್ಪ, ಮಣಿಮುಖೇಶ್, ಚಂದು ಸುರೇಶ್, ಪವಿತ್ರಶೆಟ್ಟಿ, ನಳಿನಿ ಲೋಕೇಶ್, ಜಾನ್ ಭಾಸ್ಕರ, ವೀಣಾ ರೈ ಸೇರಿದಂತೆ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಕೆ.ಪಿ.ಜಗನ್ನಾಥ್, ಎಸ್.ಜಿ.ಶ್ರೀನಿವಾಸ್, ಶಶಿಕಾಂತ್‍ರೈ, ಜೆ.ಎನ್.ಚಂದ್ರಶೇಖರ್, ಕೆ.ಪಿ.ಜಗದೀಶ್ ರೈ ಅವರು ನೇಮಕಗೊಂಡರು. ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇದೇ ವಾರ್ಷಿಕ ಮಹಾಸಭೆಯು ಪಟ್ಟೆಮನೆ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಕುಶಾಲನಗರ ಸಮೀಪ ದುಬಾರೆ ಸಾಕಾನೆ ಶಿಬಿರದ ಬಳಿ ಅರಣ್ಯದಲ್ಲಿ ಅಮ್ಮಾಳೆ ಹಬ್ಬ ಭಕ್ತಿ ಭಾವದಿಂದ ನಡೆಯಿತು. ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರಣ್ಯ ಅಧಿಕಾರಿಗಳು, ಅರಣ್ಯ ಸಮಿತಿ ಪದಾಧಿಕಾರಿಗಳು, ಆನೆ ಶಿಬಿರದ ಮಾವುತರು ಕಾವಾಡಿಗಳು ಮತ್ತು ಹಾಡಿ ನಿವಾಸಿಗಳು ಸುತ್ತಮುತ್ತಲ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಅರಣ್ಯದಲ್ಲಿ ಪ್ರಾಣಿ ಸಂಕುಲಕ್ಕೆ ಯಾವುದೇ ರೀತಿಯ ತೊಂದರೆಗಳು, ವಿಘ್ನಗಳು ಉಂಟಾಗದಂತೆ ಮತ್ತು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ದುಬಾರೆ ಶಿಬಿರದ ಅಧಿಕಾರಿಗಳಾದ ರಂಜನ್, ವೆಂಕಟೇಶ್ ಮತ್ತಿತರರು ಇದ್ದರು.
ಬೆಂಗಳೂರು, ಫೆಬ್ರವರಿ 24, 2026: ದೇಶದ ಗಡಿ ಕಾಯ್ದು ನಿವೃತ್ತರಾದ ಮಾಜಿ ಸೈನಿಕರನ್ನು ನಾಗರಿಕ ಕಾರ್ಯಪಡೆಯಲ್ಲಿ ಮರುಸೇರ್ಪಡೆಗೊಳಿಸುವ ಮಹತ್ವದ ಉದ್ದೇಶದಿಂದ, ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ‘ಡೈರೆಕ್ಟರೇಟ್ ಜನರಲ್ ರಿಸೆಟಲ್‌ಮೆಂಟ್’ (DGR) ವತಿಯಿಂದ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದ ಉದ್ದೇಶ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಿವೃತ್ತ ಯೋಧರನ್ನು ಕಾರ್ಪೊರೇಟ್ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಮುಖ ಕಂಪನಿಗಳೊಂದಿಗೆ ಸಂಪರ್ಕಿಸಲು ಈ ಮೇಳವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸೈನಿಕರಲ್ಲಿರುವ ಶಿಸ್ತು, ನಾಯಕತ್ವದ ಗುಣ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಗುರುತಿಸಿ ಅವರಿಗೆ ಸೂಕ್ತವಾದ ಉದ್ಯೋಗಾವಕಾಶ ಕಲ್ಪಿಸುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ. ಯಾವೆಲ್ಲಾ ಕ್ಷೇತ್ರಗಳಲ್ಲಿ ಅವಕಾಶ? ಈ ಉದ್ಯೋಗ ಮೇಳದಲ್ಲಿ ಐಟಿ (IT), ಭದ್ರತೆ (Security), ಆಡಳಿತ (Administration), ಲಾಜಿಸ್ಟಿಕ್ಸ್, ಆರೋಗ್ಯ ಸೇವೆ (Healthcare) ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಖಾಸಗಿ ಕಂಪನಿಗಳು ಪಾಲ್ಗೊಳ್ಳಲಿವೆ. ಮೇಳದ ಪ್ರಮುಖ ವಿವರಗಳು ದಿನಾಂಕ ಮತ್ತು ಸಮಯ: ಫೆಬ್ರವರಿ 27,…
ಮಡಿಕೇರಿ, NEWS DESK ಫೆ.24:-ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಫೆಬ್ರವರಿ, 25 ರಂದು ಮಧ್ಯಾಹ್ನ 12.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ-275 ರ ಸರಪಳಿ 78 ಕಿ.ಮೀ. ರಿಂದ 125 ಕಿ.ಮೀ ವರೆಗಿನ ಆಯ್ದ 21 ಭಾಗಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಕ್ಷಣಾ ತಡೆಗೋಡೆಗಳ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಡಿಕೇರಿ ಫೆ.24 : ಗುತ್ತಿಗೆದಾರರಿಗೆ ಪೂರ್ಣಗೊಳಿಸಿದ ಕಾಮಗಾರಿಗಳಿಗೆ ನೀಡಲು ಬಾಕಿ ಇರುವ ಹಣವನ್ನು ಸರಕಾರ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾ.6ರಂದು ರಾಜ್ಯವ್ಯಾಪಿ ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕಿಮ್ಮುಡಿರ ರವಿ ಚಂಗಪ್ಪ ಅವರು ರಾಜ್ಯ ಸರಕಾರ ಗುತ್ತಿಗೆದಾರರಿಗೆ ಸುಮಾರು 37 ಸಾವಿರ ಕೋಟಿ ರೂ.ಗಳನ್ನು ನೀಡಲು ಬಾಕಿ ಇದೆ. ಕೊಡಗು ಜಿಲ್ಲೆಯ ಗುತ್ತಿಗೆದಾರರಿಗೆ 195.26 ಕೋಟಿ ರೂ. ನೀಡಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಹಣ ನೀಡದೆ ಬಾಕಿ ಉಳಿಸಿಕೊಂಡಿದ್ದು, ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿಭಟನೆಯ ನಿರ್ಧಾರ ಕೈಗೊಂಡಿದ್ದು, ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರು ಬೆಳಿಗ್ಗೆ 10ಗಂಟೆಗೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಕೊಡಗಿನಲ್ಲಿ ಕೈಗೊಂಡ ಮಳೆಹಾನಿ ಕಾಮಗಾರಿ 18 ಕೋಟಿ ರೂ., ಟಾಸ್ಕ್ ಫೋರ್ಸ್ 2.39 ಕೋಟಿ, ವಿಶೇಷ ಅನುದಾನದ ಕಾಮಗಾರಿ…
ಮಡಿಕೇರಿ, NEWS DESK ಫೆ.24:-ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿ ಯನ್ನು ಮಾಡಿಸಿ ಫ್ರೂಟ್ಸ್ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿರುತ್ತಾರೆ, ಆದರೆ ಈ ರೈತ ಬಾಂಧವರಿಗೆ ಕೇಂದ್ರ ಸರ್ಕಾರವು ಏಕೀಕೃತ ಫ್ರೂಟ್ಸ್ ಐಡಿ ಗಳನ್ನು ಸೃಜನೆ ಮಾಡುತ್ತಿದ್ದು ಸದರಿ ಫ್ರೂಟ್ಸ್ ಐಡಿ ಗಳನ್ನು ಕೇಂದ್ರ ಸರ್ಕಾರದ ಆ್ಯಪ್‍ನೊಂದಿಗೆ ಹೊಂದಾಣಿಕೆ ಮಾಡಲಾಗುವುದು. ಆದ್ದರಿಂದ ರೈತರು ತಮ್ಮ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್‍ವಾರು ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸುವುದು. ಫ್ರೂಟ್ಸ್ ಐಡಿ ಸೃಜಿಸುವ ಸಂಬಂದ ರೈತರು ಡಿಜಿಟಲ್ ಕನ್‍ಸೆಂಟ್ ನೀಡಬೇಕಾಗಿದ್ದು ತಮ್ಮ ಮೊಬೈಲ್‍ಗೆ ಬರುವ ಒಟಿಪಿ ಯನ್ನು ರೈತ ಸಂಪರ್ಕ ಕೇಂದ್ರ, ತೋಟಕಾರಿಕೆ, ಪಶು ಸಂಗೋಪನ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಇಲ್ಲದ ರೈತರು ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಪಹಣೀಯೋಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಸಂಖ್ಯೆ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ನೊಂದಿಗೆ…
ಮಡಿಕೇರಿ, NEWS DESK ಫೆ.24 : ಮಡಿಕೇರಿ ನಗರದ ಜ್ಯೋತಿ ನಗರ ಬಡಾವಣೆಯ ಶ್ರೀ ವನಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫೆ.26 ಮತ್ತು 27ರಂದು ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್ ಜ್ಯೋತಿನಗರದಲ್ಲಿ ಸುಮಾರು 426 ವರ್ಷಗಳಿಂದ ಶ್ರೀ ವನಚಾಮುಂಡೇಶ್ವರಿಯ ಆರಾಧನೆ ನಡೆಯುತ್ತಿದೆ. ತಂತ್ರಿ ಬ್ರಹ್ಮಶ್ರಿ ಶ್ರೀಕಾಂತ್ ಭಟ್ಟತಿರಿ ಚಾಲೋಡ್ ಅವರ ನೇತೃತ್ವದಲ್ಲಿ ಬ್ರಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ಫೆ.26ರಂದು ಸಂಜೆ 4ಗಂಟೆಗೆ ನಗರದ ಗಾಂಧಿ ಮೈದಾನದಿಂದ ದೇವಾಲಯದವರೆಗೆ ದೀಪಾಲಂಕೃತ ಮಂಟಪದಲ್ಲಿ ಭವ್ಯ ಕಳಸ ಮೆರವಣಿಗೆ ಸಾಗಲಿದೆ. ಚಿಂಗಾರಿಮೇಳ ಮತ್ತು ಮಂಗಳೂರಿನ ಭಜನಾ ಕುಣಿತ ತಂಡಗಳು ಮೆರಗು ನೀಡಲಿವೆ. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, 7.15 ರಿಂದ ಆಚಾರ್ಯಾವರಣ, ಗಣಪತಿ ಪೂಜೆ, ಪ್ರಸಾದ ಶುದ್ಧಿ, ವಾಸ್ತುಬಲಿ, ಭಗವತಿ…
ಮಡಿಕೇರಿ, NEWS DESK ಫೆ.24 : ಮಡಿಕೇರಿ ಪ್ರವಾಸಿ ವಾಹನಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ಪ್ರವಾಸಿಗರಿಂದ ಅಧಿಕ ದರ ಪಡೆಯುತ್ತಿಲ್ಲವೆಂದು ಮಡಿಕೇರಿ ಪ್ರವಾಸಿ ವಾಹನ ಮಾಲೀಕ ಚಾಲಕರ ಸಂಘ ಸ್ಪಷ್ಟಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಂತು ಕಾರ್ಯಪ್ಪ ವಿನಾಕಾರಣ ಕೆಲವರು ಪ್ರವಾಸಿ ವಾಹನಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ರವಾನಿಸುತ್ತಿದ್ದು, ಇದು ಖಂಡನೀಯ ಎಂದರು. ಜೀಪ್ ಚಾಲಕರ ಸಂಘ ಮತ್ತು ಆಟೋ ಚಾಲಕರ ಸಂಘದ ಪ್ರಮುಖರೆನಿಸಿಕೊಂಡವರು ಪ್ರವಾಸಿ ವಾಹನಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಪ್ರವಾಸಿ ವಾಹನಗಳು ನಿಗಧಿತ ದರವನ್ನು ಮಾತ್ರ ಪ್ರವಾಸಿಗರಿಂದ ಪಡೆಯುತ್ತಿದ್ದು, ಅಧಿಕ ದರ ವಸೂಲಿ ಮಾಡುತ್ತಿಲ್ಲ. ಕೆಲವು ಜೀಪು ಚಾಲಕರು ಹಾಗೂ ಆಟೋ ಚಾಲಕರು ನಿಯಮ ಉಲ್ಲಂಘಿಸಿದಾಗ ಆಯಾ ಸಂಘಗಳ ಅಧ್ಯಕ್ಷರುಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರವಾಸಿ ವಾಹನಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು. *ಬೇಡಿಕೆ* ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ…






