ಮಡಿಕೇರಿ ಏ.30 NEWS DESK : ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು. ಎಮ್ಮೆಮಾಡು ಉರೂಸ್ ಪ್ರಯುಕ್ತ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ತಿಳುವಳಿಕೆಯ ಕೊರತೆಯಿಂದ ಧರ್ಮ- ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು.ಮುಸಲ್ಮಾನರು ಉದಾತ್ತವಾದ, ಆಧ್ಯಾತ್ಮಿಕ ಚಿಂತನೆಯಿಂದ ಬೆಳೆದು ಬಂದಿದ್ದಾರೆ. ಧರ್ಮದ ಬಗ್ಗೆಗಿನ ಅಜ್ಞಾನದಿಂದ ಸಂಘರ್ಷ ಸೃಷ್ಟಿಯಾಗುತ್ತಿದೆ. ಸಮಾಜಕ್ಕೆ ಆತಂಕ ತಂದೊಡ್ಡುವ ಕೆಲಸವನ್ನು ಯಾವ ಯುವಕರು ಮಾಡಬಾರದು ಎಂದರು. ಇಂದು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದರಿಂದ ನಾಡಿಗೆ, ರಾಜ್ಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ನಿರಂತರ ಜಾಗೃತಿ ಕೆಲಸ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಮನುಷ್ಯತ್ವವನ್ನು ಕಳೆದುಕೊಳ್ಳುವಂತಾಗಬಾರದು. ಪ್ರತಿ ಗ್ರಾಮ, ರಾಜ್ಯವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದರು.…
ಲೇಖಕ: admin
ಮಡಿಕೇರಿ ಏ.30 NEWS DESK : ಕೊಡಗಿನ ಇತಿಹಾಸ ಪ್ರಸಿದ್ಧ ಬೇತು ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬವು ಮೇ 2 ರಿಂದ 4ರ ವರೆಗೆ ನಡೆಯಲಿದೆ. ಮೇ 2 ರಂದು ರಾತ್ರಿ 9 ಗಂಟೆಗೆ ಶ್ರೀ ದೇವರನ್ನು ಕೊಟ್ಟಿ ಹಾಡುವುದು, ಮೇ 3 ರಂದು ಬೆಳಿಗ್ಗೆ 11.30 ಗಂಟೆಗೆ ಎತ್ತು ಪೋರಾಟ, ರಾತ್ರಿ 9.30 ಗಂಟೆಗೆ ಶ್ರೀ ಶಾಸ್ತಾವು ದೇವರ ದೀಪಾರಾಧನೆ [ ಅಂದಿ ಬೊಳಕು] ನಡೆಯಲಿದೆ. ಮೇ 4 ರಂದು ಬೆಳಿಗ್ಗೆ 9.30 ಗಟೆಗೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ನಡೆಯಲಿದ್ದು, ಅಪರಾಹ್ನ 12.30 ಗಂಟೆಗೆ ಅನ್ನದಾನ ನಡೆಯಲಿದೆ. ಮಧ್ಯಾಹ್ನ1 ಗಂಟೆಗೆ ಶ್ರೀ ವಿಷ್ಣ ಮೂರ್ತಿದೇವರ ಕೋಲ ನಡೆಯಲಿದ್ದು, ನಾಡಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ತಕ್ಕ ಮುಖುಸ್ಥರು ಹಾಗೂ ಆಡಳಿತ ಮಂಡಳಿ ಕೋರಿದೆ.
ಮಡಿಕೇರಿ ಏ.30 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಮೇ 1 ರಂದು ಮಡಿಕೇರಿಯಲ್ಲಿ ಲೆದರ್‍ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿ ನಡೆಯಲಿದೆ. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹಿರಿಯ ವಕೀಲ ಮುಕ್ಕಾಟಿರ ಟಿ.ನಾಣಯ್ಯ, ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪಾಲ್ಗೊಳ್ಳಲಿದ್ದಾರೆ. 10 ಫ್ರಾಂಚೈಸಿಗಳನ್ನು ಒಳಗೊಂಡಂತೆ ಇದೇ ಪ್ರಥಮ ಬಾರಿಗೆ ಲೆದರ್ ಬಾಲ್ ಕ್ರೆಕೆಟ್ ಪಂದ್ಯಾವಳಿ ನಡೆಯಲಿದ್ದು, ಮೊದಲ ವರ್ಷದ ಫ್ರಾಂಚೈಸಿಗಳಾಗಿ ದಿ ಕೊಡವ ಬ್ರೈಟ್, ಕೊಡವ ವಾರಿಯರ್ಸ್, ವೈಲ್ಡ್ ಫ್ಲವರ್ ಹಾತೂರು, ಪ್ರಗತಿ ಕ್ರಿಕೆಟರ್ಸ್, ಕೂರ್ಗ್ ಬ್ಲಾಸ್ಟರ್ಸ್, ರಾಯಲ್ ಟೈಗರ್ಸ್, ಅಂಜಿಗೇರಿ ನಾಡ್, ಕೂರ್ಗ್ ಯುನೈಟೆಡ್, ಎಂ.ಟಿ.ಬಿ. ರಾಯಲ್ಸ್, ಟೀಮ್ ಲೀವರೇಜ್ ಭಾಗವಹಿಸಲಿದೆ. ನೂತನವಾಗಿ ನೋಂದಾಯಿತವಾದ ಸಂಸ್ಥೆಯಲ್ಲಿ ಪೊರ್ಕೊಂಡ ಸುನಿಲ್, ಪಾಲಚಂಡ ಜಗನ್ ಉತ್ತಪ್ಪ, ಚಂಡೀರ ರಚನ್…
ಮಡಿಕೇರಿ ಏ 30 NEWS DESK : ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತವಾಗಿರುವ ಸಮಾಗಮ ಬೇಸಿಗೆ ಶಿಬಿರ ನೂರಾರು ಮಕ್ಕಳಿಗೆ ವಿನೂತನ ವಿಚಾರಗಳ ಕಲಿಕೆಗೆ ನೆರವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾಥಿ೯ಗಳನ್ನು ತರಬೇತುಗೊಳಿಸುವ ಉದ್ದೇಶದಿಂದ 20 ದಿನಗಳಿಂದ ನಡೆಯುತ್ತಿರುವ ಸಮಾಗಮ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 250 ಹೆಚ್ಚು ವಿದ್ಯಾಥಿ೯ಗಳು ವೈವಿಧ್ಯಮಯ ವಿಭಾಗಗಳಲ್ಲಿ ತಮ್ಮ ಇಷ್ಟದ ವಿಷಯಗಳನ್ನು ಆಯಾ ವಿಚಾರಗಳನ್ನು ಪರಿಣಿತರಿಂದ ತಿಳಿದುಕೊಳ್ಳುತ್ತಿದ್ದಾರೆ. ಭಾರತೀಯ ಸಂಸ್ಕೖತಿಯ ಜತೆಗೇ ಕ್ರೀಡೆಯಲ್ಲಿಯೂ ಸಮಾಗಮದಲ್ಲಿ ತರಬೇತಿ ನೀಡಲಾಗುತ್ತಿದೆ. ಹಾಕಿ ಕ್ರೀಡೆಯ ಬಗ್ಗೆ ಅರುಣ್ ಹಾಗೂ ಕುಶಾಲಪ್ಪ ಕ್ರಿಕೆಟ್ ಬಗ್ಗೆ ರೆನ್ ಟ್ರೆವರ್ ಡೈಸ್ , ಮಹೇಶ್ ಮತ್ತು ಶಾಹಿಲ್. , ಅಥ್ಲೆಟಿಕ್ಸ್ ಬಗ್ಗೆ ರೇಷ್ಮಾ ದೇವಯ್ಯ, ಬ್ಯಾಸ್ಕೆಟ್‌ಬಾಲ್ ಬಗ್ಗೆ ರಾಯಲ್ ಜೊಜೊ, ಫುಟ್ಬಾಲ್ ಸಂಬಂಧಿತ ಎಂ. ಕ್ರಿಸ್ಟೋಫರ್, ಹ್ಯಾಂಡ್ಬಾಲ್ ಕ್ರೀಡೆಯನ್ನು ಚಿಕ್ಕಣ್ಣ, ಟೇಬಲ್ ಟೆನ್ನಿಸ್ ಕ್ರೀಡಾವಿಭಾಗದಲ್ಲಿ ರಚನ್ ಪೊನ್ನಪ್ಪ ತರಬೇತುದಾರರಾಗಿದ್ದಾರೆ. ಮಡಿಕೇರಿಯ ಹಿರಿಯ ಚೆಸ್ ಆಟಗಾರ ಎನ್.ಟಿ.ಶಂಕರನಾರಾಯಣ ಅವರು ಮಕ್ಕಳಿಗೆ ಚೆಸ್ ಕಲಿಸಿದರೆ, ಕ್ಯಾಲಿಗ್ರಾಫಿ…
ಮಡಿಕೇರಿ ಏ.30 NEWS DESK : ಯು.ಎ.ಇ. ಯ ದುಬೈನಲ್ಲಿ ಜರುಗಿದ ಅಂಡರ್-20 ಜೂನಿಯರ್ ಏಷ್ಯನ್ ಚಾಂಪಿಯನ್‍ಶಿಪ್-2024ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. 13.66 ಸೆಕೆಂಡ್‍ನಲ್ಲಿ ಉನ್ನತಿ ಗುರಿ ಸಾಧಿಸಿ ಸಾಧನೆ ತೋರಿದ್ದು, ಪದಕ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಇಡೀ ಕುಟುಂಬದ ಕ್ರೀಡಾ ಸಾಧನೆ ಗಮನಾರ್ಹವಾಗಿದೆ. ಉನ್ನತಿ ಅವರ ತಂದೆ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಅವರು 1994ರ ಜೂನಿಯರ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ4*400 ಮೀಟರ್ ರಿಲೇಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ತಾಯಿ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ 1996ರಲ್ಲಿ ಹೆಫ್ಟಥ್ಲಾನ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿದ ಸಾಧನೆ ಮಾಡಿದ್ದರು. ಇದೀಗ ಪುತ್ರಿ ಉನ್ನತಿ ಅಯ್ಯಪ್ಪ ಕೂಡ ಇದೇ ಜೂನಿಯರ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ 100 ಮೀಟರ್ ಹರ್ಡಲ್ಸ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಪೋಷಕರೊಂದಿಗೆ ಇದೀಗ ಪುತ್ರಿಯೂ ಭಾರತಕಕೆ ಪದಕ ತಂದ ಕೀರ್ತಿ ಈ ಕುಟುಂಬದ್ದಾಗಿದೆ.
ಮಡಿಕೇರಿ ಏ.30 NEWS DESK : ಗಾಂಧಿ ಯುವಕ ಸಂಘದಿಂದ ನೀಡಲಾಗುವ “ಮಾದರಿ ಯುವ ನಾಯಕ” ಪ್ರಶಸ್ತಿಗೆ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಆಯ್ಕೆಯಾಗಿದ್ದಾರೆ. ಇವರ ರಾಜಕೀಯ ಕ್ಷೇತ್ರದಲ್ಲಿನ ಸೇವೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಮಾದರಿ ಯುವ ನಾಯಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಅವರು ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗಾಂಧಿ ಯುವಕ ಸಂಘದ ಆಶ್ರಯದಲ್ಲಿ ಜೂ.9ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಇಸ್ಮಾಯಿಲ್ ಕಂಡಕರೆ ತಿಳಿಸಿದ್ದಾರೆ.
ಕರಿಕೆ ಏ.29 NEWS DESK : ಅಗ್ನಿ ಆಕಸ್ಮಿಕದಿಂದ ಗೇರುಬೀಜದ ತೋಟ ಹಾನಿಗೀಡಾಗಿರುವ ಘಟನೆ ಕರಿಕೆ ಗ್ರಾಮದ ಎಳ್ಳುಕೊಚ್ಚಿಯಲ್ಲಿ ನಡೆದಿದೆ. ಅಜಯ್ ಕುಮಾರ್ (ಭಾವೆ ನಂಬ್ಯಾರ್) ಎಂಬುವವರ ಗೇರು ತೋಟದಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ. ಸ್ಥಳೀಯ ಗ್ರಾಮಸ್ಥರು ನಿರಂತರ ಶ್ರಮವಹಿಸಿ ಅಗ್ನಿಯ ಜ್ವಾಲೆಯನ್ನು ನಿಯಂತ್ರಿಸಿದರು.
ಮಡಿಕೇರಿ ಏ.29 NEWS DESK : ರಿಯಾಲಿಟಿ ಶೋವೊಂದರದಲ್ಲಿ ಮೆಕ್ಯಾನಿಕ್ ಗಳ ಕುರಿತು ಅವಹೇಳನ ಮಾಡಿರುವ ಆರೋಪದಡಿ ಖಾಸಗಿ ದೃಶ್ಯವಾಹಿನಿ, ಕಾರ್ಯಕ್ರಮದ ಆಯೋಜಕರು, ತೀರ್ಪುಗಾರರು ಹಾಗೂ ನಿರೂಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಡಿಕೇರಿ ಟೂ ವೀಲರ್ಸ್ ಮೆಕ್ಯಾನಿಕ್ ಗಳು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಕ್ಯಾನಿಕ್ ಗಳು ಖಾಸಗಿ ದೃಶ್ಯ ವಾಹಿನಿಯೊಂದರಲ್ಲಿ ಪ್ರಸಾರವಾದ ರಿಯಾಲಿಟಿ ಶೋದಲ್ಲಿ ಮೆಕ್ಯಾನಿಕ್ ಗಳ ಕುರಿತು ಕೀಳು ಮಟ್ಟದ ಸಂಭಾಷಣೆ ಬಳಕೆ ಮಾಡಲಾಗಿದೆ. ಯುವ ಪ್ರತಿಭೆಯೊಬ್ಬಳ ಮೂಲಕ ಮೂಲಕ ಸಂಭಾಷಣೆ ಹೇಳಿಸಲಾಗಿದ್ದು, ಇದು ಇಡೀ ಮೆಕಾನಿಕ್ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. “ಮೆಕಾನಿಕ್ ಗಳನ್ನು ಪ್ರೇಮಿಸಿ ವಿವಾಹವಾದರೆ ಜೀವನದುದ್ದಕ್ಕೂ ಗ್ರೀಸ್ ತಿನ್ನಬೇಕಾಗುತ್ತದೆ” ಎಂದು ಸಂಭಾಷಣೆ ಹೇಳುವ ಮೂಲಕ ಮೆಕಾನಿಕ್ ಗಳನ್ನು ಕೀಳಾಗಿ ಕಾಣಲಾಗಿದೆ. ಅಲ್ಲದೆ ಈ ಅವಹೇಳನಾಕಾರಿ ಸಂಭಾಷಣೆಗೆ ಕಾರ್ಯಕ್ರಮದ ನಿರೂಪಕರು ಹಾಗೂ ತೀರ್ಪುಗಾರರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.…
ಮಡಿಕೇರಿ ಏ.29 NEWS DESK : ಕೊಡವ ಹಾಕಿ ನಮ್ಮೆ ಎಂದೇ ಖ್ಯಾತಿಯಾಗಿ ಕಳೆದ 23 ಹಬ್ಬಗಳನ್ನ ಕಂಡಿದ್ದ ಕೊಡವುನೆಲ 24ನೇ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನ ಉತ್ಸವವಾಗಿ ಹಿಗ್ಗಿಸಿದ ಕೀರ್ತಿ ಕುಂಡ್ಯೋಳಂಡ ಕುಟುಂಬಕ್ಕೆ ಸಂದಿದೆ. ಅವಿರತ ಪ್ರಯತ್ನ ಅಚ್ಚುಕಟ್ಟಿನ ಯೋಜನೆ, ಅಚ್ಚಳಿಯದ ಮೈಲಿಗಲ್ಲನ್ನ ನೆಡುವಲ್ಲಿ ಯಶಸ್ವಿಯಾಗಿದೆ. ಹಾಕಿ ಎಂಬ ಎವರ್ಗ್ರೀನ್ ಕ್ರೀಡೆಯನ್ನ ಬಳಸಿಕೊಂಡು ಜನಾಂಗದ ಶ್ರೇಯೋಭಿವೃದ್ಧಿಗೆ ಮತ್ತು ಜನಾಂಗದ ಬೆಳವಣಿಗೆಗೆ ಪೂರಕವಾಗಿ ಏನೆಲ್ಲಾ ಮಾಡಬಹುದೋ ಆ ಎಲ್ಲಾ ಆಯಾಮಗಳನ್ನು ಇದೇ ಹಾಕಿಯನ್ನ ಕೇಂದ್ರಬಿಂದುವಾಗಿ ಇಟ್ಟುಕೊಂಡೇ ಸಾಧಿಸಿದ ಹಿರಿಮೆಯೂ ಕುಂಡ್ಯೋಳಂಡದ್ದೇ. ಹಾಕಿ ನಮ್ಮೆ ಎಂದರೆ ಕೇವಲ ಅಬ್ಬರ, ಆಡಂಬರ, ಮೋಜು ಮಸ್ತಿ ಎಂಬಲ್ಲಿಂದ ಇದೇ ಹಾಕಿ ನಮ್ಮೆಯಿಂದ ಜನಾಂಗವನ್ನು ನಾನಾ ಆಯಾಮದಲ್ಲಿ ಜೇಡರ ಬಲೆಯಂತೆ ನೇಯ್ದು ಗರಿಗರಿ ರೇಷ್ಮೆಯ ಚಾದವರವನ್ನೇ ರಚಿಸಿದನ್ನು ನೋಡಿದರೆ, ಇದು ಕೇವಲ ಕಾರ್ನಿವಲ್ ಮಾತ್ರ ಅಲ್ಲ, ಇದೊಂದು ಅಳಿಯದೇ ಉಳಿಯುವ ಐತಿಹಾಸಿಕ ಉತ್ಸವವಾಗಿ ಅಚ್ಚೊತ್ತಿದೆ ಕುಂಡ್ಯೋಳಂಡ ಒಕ್ಕ. ಕೊಡವ ಜನಾಂಗದ ಒಗ್ಗಟ್ಟು, ಸಂಬಂಧದ ಬೆಳವಣಿಗೆಯೊಂದಿಗೆ ಜನಾಂಗದ ಶ್ರೇಯಕ್ಕೆ ಸಾಕ್ಷಿಯಾಗಿ…
ಕೂಡಿಗೆ ಏ.29 NEWS DESK : ಮೂದರವಳ್ಳಿ ಶ್ರೀ ಈಶ್ವರ ಮತ್ತು ಕಟ್ಟೆ ಬಸವವಣ್ಣ ಸ್ವಾಮಿಯ ನೂತನ ದೇವಸ್ಥಾನಗಳ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು. ಸನಾತನ ಸಂಸ್ಕೃತಿ, ಧಾರ್ಮಿಕ ಕಾರ್ಯಗಳು, ಆಧ್ಯಾತ್ಮಕಿ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ಅವರು ಕೂಡಿಗೆ ಸಮಿಪದ ಮೂದರವಳ್ಳಿ ಗ್ರಾಮದಲ್ಲಿ ಜೀರ್ಣೋದ್ದಾರಗೊಂಡಿರುವ 600 ವರ್ಷಗಳ ಇತಿಹಾಸ ಹೊಂದಿರುವ ಶ್ರೀಈಶ್ವರ ಮತ್ತು ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನಾ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಮಾನವನಲ್ಲಿ ಜ್ಞಾನದ ಬೆಳಕು ಇದ್ದಲ್ಲಿ ಬದುಕು ಸಾರ್ಥಕಗೊಳ್ಳುತ್ತದೆ ಜ್ನಾನದ ಶುದ್ಧಿ, ಧಾರ್ಮಿಕ ಕಾರ್ಯಗಳಿಂದಲೂ ಬದುಕು ಹಸನಾಗುತ್ತದೆ ಎಂದರು. ಗುರು-ಹಿರಿಯರು ನೀಡುವ ಮಾರ್ಗದರ್ಶನದಿಂದ ಮತ್ತು ಅವರು ನೀಡಿದ ಜ್ಞಾನದ ಶುದ್ದಿಯಿಂದ ನಾವು ಇಂದು ಭಗವಂತನನ್ನು ಕಾಣಬಹುದು. ಕೆಲವರು ಭಯದಿಂದ ಮತ್ತೆ ಕೆಲವರು ಭಕ್ತಿಯಿಂದ ತಾನಾಗಿಯೇ ಭಗವಂತನನ್ನು ಕಾಣುತ್ತಾರೆ. ಪ್ರತಿಯೊಬ್ಬರು ಧಾರ್ಮಿಕ ಕಾರ್ಯವನ್ನು ಮಾಡುವ ಮೂಲಕ…






