ಲೇಖಕ: admin

ಮಡಿಕೇರಿ ಏ.29 NEWS DESK : ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ನಂತರ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ತಕ್ಕಾರ ಮನೆಯಿಂದ ಭಂಡಾರ ತಂದು ದೇವಲಯಕ್ಕೆ ಒಪ್ಪಿಸಲಾಯಿತು. ಮಧ್ನಾಹ್ನ ಹಬ್ಬಾಚರಣೆ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ವಿವಿಧ ಗ್ರಾಮದಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಏ.29 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್ 2 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಎಲೈಟ್ ಕ್ರಿಕೆಟ್ ಕ್ಲಬ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಗೌಡ ಮಹಿಳೆಯರ ಕ್ರಿಕೆಟ್‍ನಲ್ಲಿ ಪ್ಯಾಂಥರ್ಸ್ ಕ್ಲಬ್ ಕೊಡಗು ಮೊದಲ ಸ್ಥಾನ ಪಡೆದರೆ, ಬ್ಲ್ಯಾಕ್ ಪ್ಯಾಂಥರ್ಸ್ ತಂಡ ದ್ವಿತೀಯ ಸ್ಥಾನಗಳಿಸಿತು. ಪರುಷರ ವಿಭಾಗದ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಎಲೈಟ್ ಕ್ರೆಕೆಟ್ ಕ್ಲಬ್ ತಂಡ ಕೂರ್ಗ್ ವಾರಿಯರ್ಸ್ ತಂಡದ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಿಗದಿತ 10 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ತಂಡದ ಅನಿಲ್ ಕುಡೆಕಲ್ 2 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಒಳಗೊಂಡು 66 ರನ್‍ಗಳಿಸಿದರು. ಎಲೈಟ್ ಪರವಾಗಿ ಕಾರ್ತಿಕ್,…

Read More

ಮಡಿಕೇರಿ ಏ.29 NEWS DESK :  ಕಂಡಕರೆ ಗಾಂಧಿ ಯುವಕ ಸಂಘದ ವತಿಯಿಂದ ವರ್ಷಂಪ್ರತೀ ನೀಡಲಾಗುತ್ತಿರುವ 2023-24ನೇ ಸಾಲಿನ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿಗೆ ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಸಿ‌.ಇ.ತೀರ್ಥಕುಮಾರ್(ಮೂಡಳ್ಳಿ ರವಿ), ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ ಹಂಸ ಕೊಟ್ಟಮುಡಿ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಎ.ಅಬ್ದುಲ್ ರಜಾಕ್ ಬಜೆಗುಂಡಿ, ಕೂಡಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಸುದ್ದೀನ್ ಕುಶಾಲನಗರ, ಮತ್ತು ಸಮಾಜ ಸೇವಕಿ ಶಹರಬಾನು ಚೆಟ್ಟಳ್ಳಿ ಭಾಜನರಾಗಿದ್ದಾರೆ. ಜೂ.9 ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದೆಂದು ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ತಿಳಿಸಿದ್ದಾರೆ. 2020-21ನೇ ಸಾಲಿನ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಬಲ್ಲಾರಂಡ ಮಣಿ ಉತ್ತಪ್ಪ, 2022-23ನೇ ಸಾಲಿನ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿಯನ್ನು ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್  ಗಾಂಧಿ ಯುವಕ ಸಂಘದ ಅತ್ಯುತ್ತಮ…

Read More

ಮಡಿಕೇರಿ ಏ.29 NEWS DESK :  ಗಾಂಧಿ ಯುವಕ ಸಂಘ ಕಂಡಕರೆ ಮತ್ತು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಜೂ.9 ರಂದು ಕಂಡಕರೆಯಲ್ಲಿ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ಕಾರ್ಯಕ್ರಮದ ನಡೆಯಲಿದೆ ಎಂದು ಗಾಂಧಿ ಯುವಕ ಸಂಘದ ಮತ್ತು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ  ತಿಳಿಸಿದ್ದಾರೆ. ಪತ್ರಿಕಾ ಬಿಡುಗಡೆ ಮಾಡಿರುವ ಇಸ್ಮಾಯಿಲ್ ಕಂಡಕರೆ, 2023 ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಜೂ.9 ರಂದು ಕಂಡಕರೆಯಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು,ಎಲ್ಲರೂ ಕೈ ಜೋಡಿಸಬೇಕಾಗಿ ಇಸ್ಮಾಯಿಲ್ ಕಂಡಕರೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Read More

ನಾಪೋಕ್ಲು ಏ.28 NEWS DESK : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ ಕೊಂಡಂಗೇರಿಯಲ್ಲಿ ಉರೂಸ್ ಸಮ್ಮೇಳನ ಶ್ರದ್ಧಾಭಕ್ತಿಯಿಂದ ನಡೆಯಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸೌಹಾರ್ಧತೆಗೆ ಸಾಕ್ಷಿಯಾದರು. ಕೊಂಡಂಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಪೈಗಂಬರ್ ಸ.ಅ ರವರ ಸಂತತಿ ಪುತ್ರರಾದ ಬಹು ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ ಅಲ್ ಹಳ್ರಮಿ (ನ.ಮ) ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭದ ಅಂಗವಾಗಿ ಸಾರ್ವಜನಿಕ ಸೌಹಾರ್ಧ ಸಮ್ಮೇಳನ ನಡೆಯಿತು. ಧಾರ್ಮಿಕ ಪಂಡಿತ  ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು  ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ. ಸೇವಾ ಮನೋಭಾವದೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ ತೋರಬೇಕೆಂದು ಹೇಳಿದ ಅವರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಹೆಸರಾಂತ ಧಾರ್ಮಿಕ…

Read More

ಮಡಿಕೇರಿ ಏ.28 NEWS DESK : ನಾಪೋಕ್ಲುವಿನಲ್ಲಿ ಆಯೋಜಿತ ಕೊಡವ ಕೌಟುಂಬಿಕ ಕುಂಡ್ಯೋಳಂಡ ಹಾಕಿ ಪಂದ್ಯಾವಳಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆಯುವ ಮೂಲಕ ಚರಿತ್ರೆ ನಿರ್ಮಿಸಿದೆ. 24ನೇ ವರ್ಷದ ಕುಂಡ್ಯೋಳಂಡ ಹಾಕಿ ಉತ್ಸವದಲ್ಲಿ ದಾಖಲೆಯ 360 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಇದು ವಿಶ್ವದಲ್ಲೆ ಅತೀ ದೊಡ್ಡ ಕೌಟುಂಬಿಕ ಹಾಕಿ ಪಂದ್ಯಾವಳಿ ಎಂದು ಮಾನ್ಯ ಮಾಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲು ಮಾಡಲಾಗಿದೆ. ಅಂತಿಮ ಪಂದ್ಯಾವಳಿಯಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಸಮಿತಿ ಸದಸ್ಯ ಸ್ವಪ್ನಿಲ್ ಅವರು, ಕೌಟುಂಬಿಕ ಹಾಕಿ ಪಂದ್ಯಾವಳಿ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿರುವುದನ್ನು ಘೋಷಿಸಿ, ಪ್ರಮಾಣ ಪತ್ರವನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಶಾಸಕ ಎ.ಎಸ್.ಪೊನ್ನಣ್ಣ, ಕುಂಡ್ಯೋಳಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ರಮೇಶ್ ಮುದ್ದಯ್ಯ, ಸಂಚಾಲಕ ದಿನೇಶ್ ಕಾರ್ಯಪ್ಪ ಸೇರಿದಂತೆ ಹಲ ಗಣ್ಯರು…

Read More

ಮಡಿಕೇರಿ ಏ.28 NEWS DESK : ಪ್ರತಿಷ್ಠಿತ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಹಬ್ಬದಲ್ಲಿ ‘ಚೇಂದಂಡ’ ತಂಡ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಹಾಕಿ ಉತ್ಸವದ ರೋಚಕ ಅಂತಿಮ ಪಂದ್ಯದಲ್ಲಿ ಚೇಂದಂಡ ತಂಡ, ಬಲಿಷ್ಠ ನೆಲ್ಲಮಕ್ಕಡ ತಂಡವನ್ನು ಟೈಬ್ರೇಕರ್ ಮೂಲಕ 8-7 ಗೋಲುಗಳ ಅಂತರದಿಂದ ಮಣಿಸಿ ವಿಜಯ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು. ಸಹಸ್ರಾರು ಕ್ರೀಡಾಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಭಾನುವಾರ ಮಧ್ಯಾಹ್ನ ಆರಂಭಗೊಂಡ ಅಂತಿಮ ಪಂದ್ಯ ಸಮಬಲದ ಆಟದ ಪ್ರದರ್ಶನವನ್ನು ಕಾಣುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಗೋಲುಗಳು ದಾಖಲಾಗಲಿಲ್ಲವಾದರೆ, ದ್ವಿತೀಯ ಕ್ವಾರ್ಟರ್‌ನ ಕೊನೆಯ 30ನೇ ನಿಮಿಷ ಚೇಂದಂಡ ನಿಕಿನ್ ತಿಮ್ಮಯ್ಯ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು, ತೃತೀಯ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚೇಂದಂಡ ತಂಡ ಮಗದೊಮ್ಮೆ ನಿಕಿನ್ ತಿಮ್ಮಯ್ಯ ಅವರು 38 ನೇ ನಿಮಿಷ ಗಳಿಸಿದ…

Read More

ಕುಶಾಲನಗರ, ಏ.28 NEWS DESK : ಕನ್ನಡವನ್ನು ಶ್ರೀಮಂತ ಭಾಷೆ ಮಾಡಲು‌ ಕೊಡಗಿನ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಕೊಡಗಿನ ಜನರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಎಂ.ಎನ್.ವೆಂಕಟನಾಯಕ್ ಹೇಳಿದರು. ಇಂದಿನ ವಿದ್ಯಾರ್ಥಿಗಳು ಓದಿ, ಬರೆಯುವ ಮೂಲಕ ಆ ಪರಂಪರೆ ಯನ್ನು ಮುಂದುವರಿಸ ಬೇಕು’ ಎಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಕೂಡುಮಂಗಳೂರು( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯ ಕುವೆಂಪು ಕನ್ನಡ ಭಾಷಾ ಸಂಘದ ಆಶ್ರಯದಲ್ಲಿ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಕೆ.ಟಿ.ಸುಬ್ಬರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ” ಕುರಿತು ವಿಶೇಷ ಉಪನ್ಯಾಸ’ ನೀಡಿದ ಅವರು , ಜಿಲ್ಲೆಯ ಇಂದಿನ ಉದಯೋನ್ಮುಖ ಕವಿಗಳು  ಮತ್ತು ಲೇಖಕರು ಕೂಡ ಉತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿರುವುದರಿಂದ ಕೊಡಗಿನ ಸಾಹಿತ್ಯಕ್ಕೆ ವಿಶೇಷ ಮನ್ನಣೆ ಲಭಿಸಿದೆ ಎಂದರು. ನಾಡಿನ ಹಿರಿಯ ಕಥೆಗಾರ್ತಿ…

Read More

ಮಡಿಕೇರಿ ಏ.28 NEWS DESK : ಮಾನವ ಧರ್ಮದಲ್ಲಿ ದೇವರ ಬಗ್ಗೆ ಆಸಕ್ತಿ ಮೂಡಲು, ಗುರು ಲಭ್ಯವಾಗಲು ಪುಣ್ಯ ಮಾಡಿರಬೇಕು.ಆಧ್ಯಾತ್ಮಿಕ ಜ್ಞಾನ ಭಂಡಾರ ಹೊತ್ತ ಗುರುಗಳ ಸಾನಿಧ್ಯ ಜನಸಾಮಾನ್ಯರ ಪುಣ್ಯ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಹಾಗೂ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ  ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರಪೇಟೆ ಸಮೀಪದ ಅಂಕನಹಳ್ಳಿ ಶ್ರೀತಪೋವನ ಕ್ಷೇತ್ರ ಮನೆಹಳ್ಳಿಮಠದ ಆವರಣದಲ್ಲಿ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ “ಜನ ಜಾಗೃತಿ-ಸಾಧನೆ-ಸಮ್ಮಾನ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಜನ್ಮ, ಭಗವಂತನಲ್ಲಿಆಸಕ್ತಿ ಹಾಗೂ ಮಾರ್ಗದರ್ಶಕ ಗುರುವಿನ ದರ್ಶನ –ಈ ಮೂರು ಅತ್ಯಂತ ಅವಶ್ಯಕತೆಗಳು ದೊರೆತಾಗ ದೈವ ಸಾಕ್ಷಾತ್ಕಾರ ಆಗಲು ಸಾಧ್ಯ ಹಾಗೂ ಜನ್ಮ ಸಾರ್ಥಕವಾಗುತ್ತದೆ.ಪರಿಶ್ರಮದಿಂದ ಸಿಕ್ಕ ಭಾಗ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು.ಮನಸ್ಸಿನ ಮೂಲ ಹಾಗೂ ಆತ್ಮದ ಮೂಲ ಪರಮಾತ್ಮ.ನಿತ್ಯ ಭಗವಂತನ ಸ್ಮರಣೆ ಮಾಡುವುದರಿಂದ ಮರುಜನ್ಮ ಉಂಟಾಗುತ್ತದೆ.ಸಿಹಿ ನೀರು ಉಪ್ಪಿನ ಮೂಲ ಸಮುದ್ರ ಸೇರುವಂತೆ ನಿತ್ಯ ಭಗವಂತನ ಸ್ಮರಣೆ ಮಾಡಿದರೆ ಜನ್ಮ ಸಾರ್ಥ್ಯಕ್ಯ ಪಡೆಯುತ್ತದೆ…

Read More

ಮಡಿಕೇರಿ ಏ.28 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಏ.29 ರಂದು ಸಾರ್ವಜನಿಕ ಸಮ್ಮೇಳನ ಜರುಗಲಿದೆ. ಕಾರ್ಯಕ್ರಮವನ್ನು ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಸಯ್ಯಿದ್ ಆಟಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಮೌಲಾನಾ ಪೇರೋಡ್ ಅಬ್ದರ‍್ರಹ್ಮಾನ್ ಸಖಾಫಿ ಉದ್ಬೋಧನೆ, ಕರ್ನಾಟಕ ವಕ್ಫ್ ಮಂಡಳಿ ಮಾಜಿ ಚೆರ್ಮಾನ್ ಮೌಲಾನಾ ಶಾಫಿ ಸಅದಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಕ್ಫ್ ಮಂಡಳಿ ಸಚಿವ ಝಮೀರ್ ಅಹ್ಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕರ್ನಾಟಕ ವಕ್ಫ್ ಮಂಡಳಿ ಚೆರ್ಮಾನ್ ಅನ್ವರ್ ಪಾಶ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ರಾತ್ರಿ 8 ಗಂಟೆಗೆ ಮತಪ್ರವನ ಕಾರ್ಯಕ್ರಮ ನಡೆಯಲಿದ್ದು, ಶಮೀರ್ ದಾರಿಮಿ ಕೊಲ್ಲಂ “ವೃದ್ಧ ಸದನಂ ವಳರುನ್ನುಂಡೋ” ಎಂಬ ವಿಷಯದ ಕುರಿತು…

Read More