ಲೇಖಕ: admin

ಮಡಿಕೇರಿ ಏ.29 NEWS DESK : ಮತ್ತಿಕಾಡು ಅತ್ತೂರು ನಲ್ಲೂರು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಏ.30 ರಂದು ನಡೆಯಲಿದೆ. ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ ಕಲಶ ಪೂಜೆ, ಗಣಪತಿ ಹೋಮ, ದುರ್ಗಾಹೋಮ, ಮಹಾ ಕಲಶಾಭಿಷೇಕ ಜರುಗಲಿದ್ದು, ಮಧ್ಯಾಹ್ನ ಮಹಾಪೂಜೆ, ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆಯಾಗಲಿದೆ. ಸಂಜೆ ಮಹಾರಂಗ ಪೂಜೆ ಮತ್ತು ಪ್ರಸಾದ ವಿತರಣೆಯಾಗಲಿದೆ.

Read More

ಸೋಮವಾರಪೇಟೆ  ಏ.29  NEWS DESK : ಹೆಣ್ಣು-ಗಂಡು ಎಂಬ ತಾರತಮ್ಯ ತೋರದೆ ಮಕ್ಕಳನ್ನು ಸುಸಂಸ್ಕೃತರಾಗಿ ರೂಪಿಸುವ ಹೊಣೆಗಾರಿಕೆ ತಂದೆ-ತಾಯಿಯರದಾಗಿದ್ದು ಅವರ ಮೇಲೆ ಸಂಪೂರ್ಣ ಕಾಳಜಿ ಮುಖ್ಯ ಎಂದು ಜಾನಪದ ಕಲಾವಿದೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅಭಿಪ್ರಾಯಪಟ್ಟರು. ಅಂಕನಹಳ್ಳಿ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀಗುರುಸಿದ್ಧ ವೀರೇಶ್ವರಸ್ವಾಮಿ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ `ಮಹಿಳಾ ಮಿಲನ” ಕಾರ್ಯಕ್ರಮದ “ಧರ್ಮ-ಸಂಸ್ಕೃತಿ-ಮಹಿಳೆ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಮೊಬೈಲ್-ಕಂಪ್ಯೂಟರ್ ಗೀಳಿನಿಂದ ಹೊರಬರುವ ಹಾಗೇ ಪೋಷಕರು ನೀತಿಕಥೆಗಳನ್ನು ಹೇಳಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ನಾಯಕತ್ವದ ಗುಣ ಬೆಳೆಸಬೇಕು.ಸಮಾಜದಲ್ಲಿ ಧರ್ಮ, ಸಂಸ್ಕೃತಿ ಉಳಿಸಬೇಕು.ಬೆಳೆಸಬೇಕು ಎಂದರು. ಮುಖ್ಯ ಅತಿಥಿ ಸಾಹಿತಿ ಶ.ಗ.ನಯನತಾರಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಧರ್ಮ ಮತ್ತು ಸಂಸ್ಕೃತಿ ನಮ್ಮ ದೇಶದ ಜೀವಾಳವಾಗಿದ್ದುಇವುಗಳಲ್ಲಿ ಮಹಿಳೆ ಮಹತ್ತರ ಪಾತ್ರ ವಹಿಸುತ್ತಾಳೆ.ಮಠಮಾನ್ಯಗಳಿಂದಾಗಿ ಇಂದು ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿ ಉಳಿದಿದೆ.ಧರ್ಮವೆಂದರೆ ಜಾತಿಯಲ್ಲ; ಮೂಲ ಸ್ವಭಾವ.ಸಂಸ್ಕೃತಿ ಎಂದರೆ ನಂಬಿಕೆ, ನಡವಳಿಕೆ, ರೂಢಿಗಳು.ಮಠದಲ್ಲಿ ಆಯೋಜಿಸಿರುವ ಮಹಿಳಾ ಮಿಲನ ಕಾರ್ಯಕ್ರಮ ಮಹಿಳಾ…

Read More

ಮಡಿಕೇರಿ ಏ.29 NEWS DESK : ಕೊಡಗಿನ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಿಂಬರ್ಲಿ ಕೂರ್ಗ್ ಸಂಸ್ಥೆ ವತಿಯಿಂದ ಮೇ 4 ಮತ್ತು 5 ರಂದು ಮಡಿಕೇರಿಯಲ್ಲಿ ಕೂರ್ಗ್ ಕಾರ್ನೀವಲ್ ನಡೆಯಲಿದೆ ಎಂದು ಸಂಸ್ಥೆಯ ಪ್ರಮುಖರಾದ ಕೆ.ಜಿ.ಮದನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ, ರುಚಿಕರವಾದ ಆಹಾರ, ಫ್ಲೀ ಮಾರುಕಟ್ಟೆ, ಮೋಜಿನ ಆಟಗಳು, ಮನರಂಜನೆ, ಕಾರ್ಯಾಗಾರಗಳು ನಡೆಯಲಿದೆ ಎಂದರು. ಮೇ 4 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಪ್ರವೇಶ ಶುಲ್ಕ ರೂ.99 ನಿಗಧಿಪಡಿಸಲಾಗಿದೆ. ದೇಶ ವಿದೇಶಗಳಿಂದ ಕಲಾವಿದರು ಪಾಲ್ಗೊಂಡು ನೋಟ್ ಸಿಕ್, ನಾಯಮಯ, ಲೌಡ್ ಸೈಲೆನ್ಸ, ಬಿ ಸೈಡ್ ಟೇಪ್ಸ್, ಸವಾರಿ, ರಾ ಪ್ಲೋಸ್, ಸಾಥ್ವಿಕ್ ಗುಪ್ತಾ, ಡಿಪ್ಟಿಕ್, ಟ್ರೆಮೆಂಟ್, ಸೌಂಡ್ ಒಫ್ ಹಿಮಾಲಯಾಸ್ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಿಂಬರ್ಲಿ ಸಂಸ್ಥೆಯ ಪ್ರಮುಖರಾದ ಬಿ.ಎಂ.ಗರುಡ, ಲಿಖಿತ…

Read More

ಮಡಿಕೇರಿ ಏ.29 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಏ.30 ರಂದು ರಾತ್ರಿ 8 ಗಂಟೆಗೆ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ವಹ್ಹಾಬ್ ನಈಮಿ ಕೊಲ್ಲಂ “ಯುವತ್ವಮೇ ವಿಜಯಂ ಇದಿಲೆ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಇಸ್ಹಾಖ್ ಲತೀಫಿ ಅಲ್ ಹೈದರೂಸಿ ಎಮ್ಮೆಮಾಡು, ಕೊಟ್ಟಮುಡಿ ಖತೀಬರಾದ ಅಬ್ದುಸ್ಸಲಾಂ ಶಾಮಿಲ್ ಇರ್ಫಾನಿ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಹ ಕಾರ್ಯದರ್ಶಿ ಸಿ.ಎಸ್.ಇಬ್ರಾಹಿಂ, ಚಂಬಾರಂಡ ಮಸೀದಿ ಇಮಾಂ ಹಾರಿಸ್ ಝಹ್ರಿ, ಎಮ್ಮೆಮಾಡು ಯೂಸುಫ್ ಮದನಿ ಬಯಕೊಡಿ ಪಾಲ್ಗೊಳ್ಳಲಿದ್ದಾರೆ.  

Read More

ಪುತ್ತೂರು ಏ.29 NEWS DESK : ಕಲಿತು ಹೊರಬಂದ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯೂ ಆ ವಿದ್ಯಾ ಸಂಸ್ಥೆಯ ರಾಯಭಾರಿಯಾಗುವುದರ ಜತೆಯಲ್ಲಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಂಸ್ಥೆಯ ಬೆಳವಣಿಗೆಗೆ ಸಹಾಯಕರಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತಾಡಿದರು. ಸಂಸ್ಥೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಗಳ ಹಿತಕ್ಕಾಗಿ ಕ್ಯಾಂಪಸ್ ನೇಮಕಾತಿ ಹಾಗೂ ತಂತ್ರಜ್ಞಾನ ವಿನಿಮಯ ಕಾರ್ಯಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಸಹಕಾರಿಗಳಾಗಬೇಕು ಎಂದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನರಸಿಂಹ ಪೈ ಮಾತನಾಡಿ, ಇದುವರೆಗೆ ಕಲಿತು ಹೊರಹೋದ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲಿಯೇ ದೊಡ್ಡ ಮಟ್ಟದ ಸಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಎಂಐಟಿ…

Read More

ಮಡಿಕೇರಿ ಏ.29 NEWS DESK : ಕೆ ಎಂ ಜೆ , ಎಸ್ ವೈ ಎಸ್ , ಎಸ್ ಎಸ್ ಎಫ್ ಸಂಘಟನೆಯ ವತಿಯಿಂದ 45 ಮಕ್ಕಳಿಗೆ ಉಚಿತವಾಗಿ ಸುನ್ನತ್ ಕಾರ್ಯಕ್ರಮ ನಡೆಸಲಾಯಿತು. ಪಾಲಿಬೆಟ್ಟ ಜುಮಾ ಮಸ್ಜಿದ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು  ಪಾಲಿಬೆಟ್ಟ ಎಸ್ ಎಸ್ ಎಫ್ ವಲಯ ಅಧ್ಯಕ್ಷ ಶಿಹಾಬುದ್ದೀನ್ ಅಹ್ಸನಿ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,  ಕಳೆದ 5 ವರ್ಷಗಳಿಂದಲೂ ಸುನ್ನತ್ ಕಾರ್ಯಕ್ರಮ ವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸಮುದಾಯ ಬಾಂಧವರು ಇದರ ಸದುಪಯೋಗ ಪಡಿಸಿಕೊಂಡು ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡ ಮುನ್ನಡೆಯಬೇಕೆಂದರು. ಸುನ್ನತ್ ಕರ್ಮದಲ್ಲಿ ಕೊಡಗಿನ ನಾನ ಭಾಗಗಳಿಂದ ಬಂದಿದ್ದ ಎಲ್ಲ ಮಕ್ಕಳಿಗೆ ಪಾಲಿಬೆಟ್ಟ ಎಸ್ ಎಸ್ ಎಫ್ ಸಂಘಟನೆ ವತಿಯಿಂದ ಔಷದಿ ಹಾಗೂ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಮುಸ್ತಫ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಮೀರ್ ಮುನ್ನ ಎಸ್ ವೈ ಎಸ್ ಅಧ್ಯಕ್ಷ ಬಶೀರ್, ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಹಾಗೂ…

Read More

ವಿರಾಜಪೇಟೆ ಏ.29  NEWS DESK : ಹೊಸ ಜ್ಞಾನವನ್ನು ಪಡೆಯಲು ಸಂಶೋಧನೆ ಅಗತ್ಯವಾಗಿದೆ ಎಂದು ಹುಣಸೂರು ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಕೆ.ಪಿ.ಪ್ರಸನ್ನ ಹೇಳಿದರು. ವಿರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಸಂಶೋಧನೆಯ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ಉದ್ದೇಶ ಮತ್ತು ಸ್ವರೂಪದ ಬಗ್ಗೆ ಉಪನ್ಯಾಸವನ್ನು ನೀಡಿದರು. ಸಂಶೋಧನೆ ಎಂದರೇ ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರೆ ಸಂಶೋಧನೆಯಾಗುತ್ತದೆ. ಮನುಷ್ಯನ ಕ್ರಿಯಾಶೀಲ ಮನಸು ಸಂಶೋಧನೆಗೆ ಪ್ರೇರಣೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳ ಚಿಂತನಾ ಮಟ್ಟ ಹೆಚ್ಚಿಸಿ ಪ್ರತಿಭಾ ಸಾಮಥ್ರ್ಯವನ್ನು ಅಭಿವ್ಯಕ್ತಪಡಿಸಲು ಒಂದು ವಿಷಯದ ಕುರಿತು ರಚಿಸುವ ಸಂಶೋಧನಾ ಕಿರು ಪ್ರಭಂದ ಸಹಕರಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ರಘುರಾಜ್, ಡಾ.ಪ್ರಭು, ಇತರ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Read More

ಮಡಿಕೇರಿ ಏ.29 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮೈಸೂರಿನಲ್ಲಿ ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ  ಪಿ.ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ  ಪಿ.ಶ್ರೀನಿವಾಸ್ ಪ್ರಸಾದ್ ಅವರ ನಿಧನ ಸುದ್ದಿ ತಿಳಿದು ನೋವಾಗಿದೆ. ಅನ್ಯಾಯ, ಅಸಮಾನತೆ ವಿರುದ್ಧ ಧ್ವನಿಯಾಗಿದ್ದ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಈ ಸಮಯದಲ್ಲಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಭಗವಂತ ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ಪೊನ್ನಣ್ಣ ಸಂತಾಪ ಸೂಚಿಸಿದರು.

Read More

ಮರವಂತೆ ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ ಮತ್ತು ಕಡಲತೀರವಾಗಿದೆ .ಮರವಂತೆ ಬೀಚ್ ಕುಂದಾಪುರದಿಂದ 12 ಕಿ.ಮೀ ದೂರದಲ್ಲಿದೆ, ಇದು ಉಡುಪಿಗೆ ಉತ್ತರಕ್ಕೆ 50 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ. ಈ ಬೀಚ್‌ನ್ನು ವರ್ಜಿನ್ ಬೀಚ್‌ ಎಂದೂ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಸಮುದ್ರ ತೀರ :  ಇದು ಕೈಗಾರಿಕಾ ಕೇಂದ್ರವಾದ ಮಂಗಳೂರಿನಿಂದ ಸುಮಾರು 115 ಕಿಮೀ , ಉಡುಪಿಯಿಂದ 55 ಕಿಮೀ ದೂರದಲ್ಲಿದೆ .ಕುಂದಾಪುರದಿಂದ 18 ಕಿಮೀ ದೂರದಲ್ಲಿದೆ . ಮತ್ತು ಬೈಂದೂರಿನಿಂದ 21 ಕಿ.ಮೀ. NH-66 (ಹಿಂದಿನ NH-17) ಕಡಲತೀರದ ಪಕ್ಕದಲ್ಲಿದೆ ಮತ್ತು ರಸ್ತೆಯ ಇನ್ನೊಂದು ಬದಿಯಲ್ಲಿ ಸುಪರ್ಣಿಕಾ ನದಿ ಹರಿಯುತ್ತದೆ. ಔಟ್‌ಲುಕ್ ಟ್ರಾವೆಲರ್‌ಗಳು ಇದನ್ನು ಕರ್ನಾಟಕದ ಅತ್ಯಂತ ಸುಂದರವಾದ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಇಲ್ಲಿ ಅರೇಬಿಯನ್ ಸಮುದ್ರವನ್ನು ಬಹುತೇಕ ಸ್ಪರ್ಶಿಸುವ ಸುಪರ್ಣಿಕಾ ನದಿಯು ಯು-ಟರ್ನ್ ಮಾಡುತ್ತದೆ ಮತ್ತು ಸುಮಾರು 10 ಕಿಮೀ (6.2 ಮೈಲಿ) ಗಿಂತ ಹೆಚ್ಚಿನ ಪ್ರಯಾಣದ ನಂತರ ಸಮುದ್ರವನ್ನು…

Read More

ಮಡಿಕೇರಿ ಏ.29 NEWS DESK : ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಬಾಣೆಯ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿತು. ಮಹೋತ್ಸವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Read More