ಲೇಖಕ: admin

ಮಡಿಕೇರಿ ಏ.27 NEWS DESK : ಕೊಂಬ ಮೀಸೆರ ಬೊಂಬ್ಬ ಸ್ಪರ್ಧಾ ವಿಜೇತರು > ಪ್ರಥಮ ಬಹುಮಾನ ಚೆಪ್ಪುಡಿರ ಸುಜು ಕರುಂಬಯ್ಯ, ದ್ವಿತೀಯ ಬಹುಮಾನ ಕಾಳಚಂಡ ರವಿ ತಮ್ಮಯ್ಯ ಹಾಗೂ ತೃತೀಯ ಬಹುಮಾನ ಬೊಟ್ಟೋಳಂಡ ನಂದಾ ಕಾರ್ಯಪ್ಪ

Read More

ಮಡಿಕೇರಿ ಏ.27 NEWS DESK : ಉದ್ದ ಜಡೆ ಬೋಜಕ್ಕ ಬಾಲಕಿಯರ ಸ್ಪರ್ಧೆ > ಪ್ರಥಮ ಬಹುಮಾನ: ಬಿದ್ದಾಟಂಡ ಲೀಕ್ಷಾ ಪೂಣಚ್ಚ, ದ್ವಿತೀಯ ಬಹುಮಾನ: ಸಿಂಚನ್ ಮುತ್ತಪ್ಪ, ತೃತೀಯ ಬಹುಮಾನ: ಬಟ್ಟೀರ ನಿಮಿಷಾ ನೀಲಮ್ಮ ಉದ್ದ ಜಡೆ ಬೊಜಕ್ಕ ಮಹಿಳಾ ಸ್ಪರ್ಧೆ > ಪ್ರಥಮ ಚಾಮೇರ ಮಾನಸ, ದ್ವಿತೀಯ ಬಾಚಿನಾಡಂಡ ಶೀತಲ್ ಪೊನ್ನಪ್ಪ, ತೃತೀಯ ಕಾಳೆಯಂಡ ಅನಿತಾ

Read More

ಸುಂಟಿಕೊಪ್ಪ ಏ.27 NEWS DESK : ಸುಂಟಿಕೊಪ್ಪ – ಚೆಟ್ಟಳ್ಳಿ ರಸ್ತೆಯ ಮತ್ತಿಕಾಡು ಬಳಿ ಶನಿವಾರ ಮಧ್ಯಾಹ್ನ ಎರಡು ಕಾಡಾನೆಗಳು ಕಾಣಿಸಿಕೊಂಡು ಆತಂಕ ಮೂಡಿಸಿದವು. ಹಾಡಹಗಲಿನಲ್ಲೇ ರಸ್ತೆ ದಾಟಿದ ಜೋಡಿ ಗಜ ತೋಟದಲ್ಲಿ ಬೀಡು ಬಿಟ್ಟಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ಸಮೀಪದ ಮೀನುಕೊಲ್ಲಿ ಅರಣ್ಯಕ್ಕೆ ಸೇರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Read More

ಮಡಿಕೇರಿ ಏ.27 NEWS DESK : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಬಲ್ಲ ದೇಶದ ಪ್ರಜಾತಂತ್ರದ ಹಬ್ಬಕ್ಕೆ ಮತದಾರರು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದರಿಂದ ಮತದಾನದ ಪ್ರಮಾಣ ಕುಸಿಯುತ್ತಿದೆ. ಇದು ಅತ್ಯಂತ ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಅವರು, ಈ ದೇಶದ ಪ್ರಜೆಗಳು ಯಾರೇ ಆಗಿರಲಿ ಮತ ಚಲಾಯಿಸದೆ ಇರುವವರಿಗೆ ಯಾವುದೇ ಸರಕಾರಿ ಸೌಲಭ್ಯವನ್ನು ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಉಜ್ವಲ ಭವಿಷ್ಯಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಈ ಬಾರಿಯ ಮಹಾ ಚುನಾವಣೆಯಲ್ಲಿ ಮತದಾರ ತನ್ನ ಜವಾಬ್ದಾರಿಯನ್ನು ಮರೆತಿರುವುದು ಸ್ಪಷ್ಟವಾಗಿದೆ. ಶೇಕಡಾವಾರು ಮತದಾನ ಅಧಿಕವಾಗಲಿ ಎಂದು ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದರೂ ಮತದಾರರು ರಜೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿರೀಕ್ಷೆಯಷ್ಟು ಮತ ಚಲಾವಣೆಯಾಗದೆ ಇರುವುದೇ ಇದಕ್ಕೆ ಮುಖ್ಯ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಸ್ಥಿರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತದಾನ ಎಂಬುವುದು ಪ್ರಜೆಗಳಿಗಿರುವ ಬಹುದೊಡ್ಡ ಅಧಿಕಾರವಾಗಿದೆ. ಮತದಾನವು…

Read More

ಮಡಿಕೇರಿ ಏ.27 NEWS DESK : ನೂರಾರು ಏಕರೆ ಕೃಷಿ ಭೂಮಿಗೆ ವರದಾನವಾಗಿದ್ದ ಕೂಡಿಗೆ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ಕೆರೆ ಅಭಿವೃದ್ಧಿಯಿಲ್ಲದೆ ಈಗ ಬರಡು ಭೂಮಿಯಾಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಪುನಶ್ಚೇತನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ನೀರಿನಿಂದ ಕಂಗೊಳಿಸುತ್ತಿದ್ದ ಶ್ರೀ ದಂಡಿನಮ್ಮ ಕೆರೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ಕೆರೆಯು ಬರಡುಭೂಮಿಯಂತಾಗಿದೆ. ವಿಶಾಲವಾದ ಈ ಕೆರೆಯ ದಂಡದ ಮೇಲೆ ಮುಳ್ಳಿನ ಪೊದೆ, ಗಿಡಗಂಟಿ ಬೆಳೆದುಕೊಂಡಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಇದನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ತಕ್ಷಣವೇ ಒತ್ತುವರಿ ಆಗಿರುವ ಈ ಕೆರೆಯನ್ನು ಸರ್ವೆ ಮಾಡಿಸಿ ಬಿಡಿಸಿಕೊಡಬೇಕು ಹಾಗೂ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಬೇಕೆಂದು ದಂಡಿನಮ್ಮ ಹಾಗೂ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಹಾಗೂ ಪ್ರಮುಖರಾದ ಸೋಮಶೇಖರ್ ಆಗ್ರಹಿಸಿದ್ದಾರೆ. (ವರದಿ : ಗಣೇಶ್ ಕೂಡಿಗೆ)

Read More

ಮಡಿಕೇರಿ ಏ.27 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಇಂದು ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನೂರ್ ತಂಙಳ್) ನೇತೃತ್ವದಲ್ಲಿ ದ್ಸಿಕ್ರ್ ಹಲ್ಖಾ ಮತ್ತು ಮತ ಪ್ರವಚನ ನಡೆಯಿತು. ಮುಳ್ಳೂರ್ಕೆರೆ ಮುಹಮ್ಮದ್ ಅಲಿ ಸಖಾಫಿ “ಆಧುನಿಗ ಯುಗತ್ತಿಲ್ ಇಸ್ಲಾಮಿಂಡೆ ಪ್ರಶಸ್ವಿ: ಎಂಬ ವಿಷಯದ ಕುರಿತು ಮಾತನಾಡಿದರು. ಏ.28ರ ಕಾರ್ಯಕ್ರಮದ ವಿವರ :: ಏ.28 ರಂದು ಮಗ್ರಿಬ್ ನಮಾಝಿನ ಬಳಿಕ ಖತಂ ದುಆ ಮಜ್ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಎಮ್ಮೆಮಾಡಿ (ಕಿಲ್ಲೂರ್ ತಂಙಳ್) ವಹಿಸಲಿದ್ದಾರೆ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ “ಕುಟುಂಬ ಜೀವಿದಂ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯರಾದ ಸಯ್ಯಿದ್ ಶರಫುದ್ದೀನ್ ಹಿಮಮಿ ಅಲ್ ಹೈದರೂಪಿ ಎಮ್ಮೆಮಾಡು, ಅಬ್ದುಲ್ ಲತೀಫ್ ಕೂರುಳಿ, ಸಯ್ಯಿದ್ ಝೈನುದ್ದೀನ್ ಸಖಾಫಿ ಅಲ್ ಹೈದರೂಪಿ, ಎಮ್ಮೆಮಾಡು ಶಹೀದಿಯ ಅನಾಥಾಲಯದ ಉಪಾಧ್ಯಕ್ಷ ಉಮರ್ ಹಾಜಿ ಕನ್ನಡಿಯಂಡ ಉಪಸ್ಥಿತರಿರಲಿದ್ದಾರೆ.

Read More

ಮಡಿಕೇರಿ ಏ.27 NEWS DESK  : ನಾಪೋಕ್ಲುವಿನಲ್ಲಿ ಆಯೋಜಿತ ಕೊಡವ ಕುಟುಂಬಗಳ ನಡುವಣ ‘ಕುಂಡ್ಯೋಳಂಡ ಕಪ್ ಹಾಕಿ ಉತ್ಸವ’ದ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು, ಇಂದು ನಡೆದ ರೋಚಕ ಸೆಮಿ ಫೈನಲ್ ಪಂದ್ಯಗಳಲ್ಲಿ ಅರ್ಹ ಗೆಲುವು ಸಾಧಿಸಿದ ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳು ಏ.28ರಂದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ 3-1 ಗೋಲುಗಳ ಅಂತರದಿಂದ ಎದುರಾಳಿ ಕುಲ್ಲೇಟಿರ ತಂಡವನ್ನು ಮಣಿಸಿತು. ದ್ವಿತೀಯ ಸೆಮಿಫೈನಲ್‍ನಲ್ಲಿ ನೆಲ್ಲಮಕ್ಕಡ ತಂಡ 4-2 ಗೋಲುಗಳ ಅಂತರದಿಂದ ಕುಪ್ಪಂಡ(ಕೈಕೇರಿ) ತಂಡವನ್ನು ಪರಾಭವಗೊಳಿಸಿತು. ಪರಾಜಿತ ಕುಲ್ಲೇಟಿರ ಮತ್ತು ಕುಪ್ಪಂಡ ಕೈಕೇರಿ ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಲಿವೆ. ಚೇಂದಂಡ–ಕುಲ್ಲೇಟಿರ- ದಿನದ ಮೊದಲ ಕುತೂಹಲಕಾರಿ ಸೆಮಿಫೈನಲ್‍ನಲ್ಲಿ ಚೇಂದಂಡ ತಂಡದ ಮೋಕ್ಷಿತ್ ಉತ್ತಪ್ಪ ಪಂದ್ಯದ ಆರಂಭಿಕ 4ನೇ ನಿಮಿಷವೆ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆಯನ್ನು ದೊರಕಿಸಿಕೊಟ್ಟರು. ¥ಂದ್ಯದ ದ್ವಿತೀಯ ಕ್ವಾರ್ಟರ್‍ನಲ್ಲಿ ಗೋಲುಗಳು ದಾಖಲಾಗಲಿಲ್ಲವಾದರು, ತೃತೀಯ ಕ್ವಾರ್ಟರ್‍ನ 34 ನೇ ನಿಮಿಷ ಚೇಂದಂಡ ನಿಖಿನ್…

Read More

ಸೋಮವಾರಪೇಟೆ ಏ.27 NEWS DESK : ಅಂಕನಹಳ್ಳಿಯ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿಮಠದಲ್ಲಿ ಮೂರು ದಿವಸಗಳ ಕಾಲ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಏ.23 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ, ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಯವರಿಗೆ ಕಂಕಣ ಧಾರಣೆಯಾಗಿ, ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿಗೆ ಮಹಾಮಂಗಳಾರತಿಯಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಏ.24 ರಂದು ಬೆಳಿಗ್ಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ ನಡೆಯಿತು. ಸಂಜೆ ಶ್ರೀಸ್ವಾಮಿಯವರ “ಸೂರ್ಯ ಮಂಡಲೋತ್ಸವ” ನೆರವೇರಿತು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ದಾಸೋಹ ನಡೆಯಿತು. ಏ.25 ರಂದು ಬೆಳಿಗ್ಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯ ಪ್ರೀತ್ಯರ್ಥ “ದುಗ್ಗಳ’ ಹಾಗೂ “ಅಗ್ನಿಕೊಂಡೋತ್ಸವ’ ಸೇವೆ ನೆರವೇರಿತು. ನಂತರ ಶ್ರೀ ಸ್ವಾಮಿಯವರ “ಅಡ್ಡಪಲ್ಲಕ್ಕಿ ಉತ್ಸವ” ನಡೆಯಿತು. ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ “ಮುತ್ತೈದೆ ಸೇವೆ” ಯಾಗಿ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಮಡಿಲು ತುಂಬಿಸಿಕೊಂಡರು. ನಂತರ ದಾಸೋಹ ಸೇವೆ…

Read More

ಮಡಿಕೇರಿ ಏ.27 NEWS DESK :  ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಣ ‘ಕುಂಡ್ಯೋಳಂಡ ಕಪ್ ಹಾಕಿ ಉತ್ಸವ’ದ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು, ಇಂದು ನಡೆದ ರೋಚಕ ಸೆಮಿ ಫೈನಲ್ ಪಂದ್ಯಗಳಲ್ಲಿ ಅರ್ಹ ಗೆಲುವು ಸಾಧಿಸಿದ ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳು ಏ.28ರಂದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ 3-1 ಗೋಲುಗಳ ಅಂತರದಿಂದ ಎದುರಾಳಿ ಕುಲ್ಲೇಟಿರ ತಂಡವನ್ನು ಮಣಿಸಿತು. ದ್ವಿತೀಯ ಸೆಮಿಫೈನಲ್‍ನಲ್ಲಿ ನೆಲ್ಲಮಕ್ಕಡ ತಂಡ 4-2 ಗೋಲುಗಳ ಅಂತರದಿಂದ ಕುಪ್ಪಂಡ(ಕೈಕೇರಿ) ತಂಡವನ್ನು ಪರಾಭವಗೊಳಿಸಿತು. ಪರಾಜಿತ ಕುಲ್ಲೇಟಿರ ಮತ್ತು ಕುಪ್ಪಂಡ ಕೈಕೇರಿ ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಲಿವೆ.

Read More

ಮಡಿಕೇರಿ, ಏ.27 NEWS DESK : ಕೊಡ್ಲಿಪೇಟೆಯ ಮೂದರವಳ್ಳಿ ಈಶ್ವರ ಹಾಗೂ ಕಟ್ಟೆ ಬಸವಣ್ಣ ಸೇವಾ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಿಸಿರುವ ಈಶ್ವರ ಹಾಗೂ ಕಟ್ಟೆ ಬಸವಣ್ಣ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವವು ಏ.28 ಮತ್ತು 29 ರಂದು ನಡೆಯಲಿವೆ. ಏ.28 ರಂದು  ಬೆಳಿಗ್ಗೆ 8 ಗಂಟೆಗೆ ಗಂಗಾಪೂಜೆ, ಯಾಗ ಮಂಟಪ ಪ್ರವೇಶ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಗಣಪತಿ ಪೂಜೆ, ಕಳಶ ಪ್ರತಿಷ್ಠಾಪನೆ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಏ.29 ರಂದು ಸೋಮವಾರ ಬೆಳಿಗ್ಗೆ 4 ಗಂಟೆಯಿಂದ ಬಸವಣ್ಣ ಮೂರ್ತಿಗೆ ವಿಶೇಷ ಅಲಂಕಾರ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳ ಮೂಲಕ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಲಾಗುವುದು. ಬೆಳಿಗ್ಗೆ 10.00 ಗಂಟೆಗೆ ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ, ಶಾಖಾಮಠದ ಶಂಭುನಾಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ, ಮಾಜಿ…

Read More