ಲೇಖಕ: admin

ಮಡಿಕೇರಿ ಏ.21 NEWS DESK : ಕಾರು ಡಿಕ್ಕಿಯಾಗಿ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ವಿವಾಹ ಸಮಾರಂಭಕ್ಕೆಂದು ಬಂದಿದ್ದ ಕಾಸರಗೋಡುವಿನ ರಾಬಿಯ (45) ಎಂಬುವವರೇ ಮೃತ ದುರ್ದೈವಿ. 7ನೇ ಹೊಸಕೋಟೆಯಲ್ಲಿರುವ ಇವರ ಸಂಬಂಧಿಯ ವಿವಾಹ ಗದ್ದೆಹಳ್ಳದಲ್ಲಿ ನಡೆಯುತ್ತಿತ್ತು. ವಿವಾಹದಲ್ಲಿ ಪಾಲ್ಗೊಂಡಿದ್ದ ರಾಬಿಯ ರಸ್ತೆ ಬದಿಯ ವಿದ್ಯುತ್ ಕಂಬದ ಬಳಿ ನಿಂತಿದ್ದರು. ಈ ಸಂದರ್ಭ ಗದ್ದೆಹಳ್ಳದ ನಿವಾಸಿ ಶರತ್ (30) ಎಂಬುವವರು ಚಲಾಯಿಸುತ್ತಿದ್ದ ಕಾರು ಇಬ್ಬರು ಮಹಿಳೆಯರಿಗೆ ಡಿಕ್ಕಿಯಾಗಿ ನಂತರ ನಿಯಂತ್ರಣಕ್ಕೆ ಸಿಗದೆ ರಾಬಿಯ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ರಾಬಿಯ ಅವರು ಸ್ಥಳದಲ್ಲೇ ಮೃತಪಟ್ಟರು. ಮೊದಲು ಕಾರಿಗೆ ಸಿಲುಕಿದ ಕೈರುನ್ನೀಸ ಹಾಗೂ ಸಿದ್ದಿಕ ತೀವ್ರವಾಗಿ ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಾಲಕ ಶರತ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಪರಿಣಾಮ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಘಟನೆಯನ್ನು ಖಂಡಿಸಿ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಚಾಲಕನ ವಿರುದ್ಧ ಕಠಿಣ ಸೆಕ್ಷನ್…

Read More

ಮಡಿಕೇರಿ ಏ.21 NEWS DESK : ಕೇಂದ್ರ ಸರಕಾರವನ್ನು ವಿನಾಕಾರಣ ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಜಾಹೀರಾತು ಅತ್ಯಂತ ಕೀಳುಮಟ್ಟದಿಂದ ಕೂಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ದೇಶದ ಜನರೇ ಚೊಂಬು ನೀಡಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ತಿರುಗೇಟು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಕೀಯ ಯಾವಾಗಲೂ ಆರೋಗ್ಯಕರವಾಗಿರಬೇಕು, ಆದರೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅತ್ಯಂತ ಕ್ಷುಲ್ಲಕ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಲವು ಹಗರಣಗಳ ಮೂಲಕ ಬೊಕ್ಕಸವನ್ನು ಬರಿದು ಮಾಡಿ ದೇಶದ ಜನರಿಗೆ ಖಾಲಿ ಚೊಂಬು ನೀಡಿತ್ತು. ಅದನ್ನು ತುಂಬಲು ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಬರಬೇಕಾಯಿತು. ಈ ದೇಶದ ಜನರಿಗೆ ಕಾಂಗ್ರೆಸ್ ನೀಡಿದ ಖಾಲಿ ಚೊಂಬನ್ನು ಮೋದಿಯವರು ಭರ್ತಿ ಮಾಡಿದರು ಎಂದು ಖುದ್ದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್…

Read More

ಮಡಿಕೇರಿ ಏ.21 NEWS DESK : ಕಳೆದ 10 ವರ್ಷಗಳ ಕಾಲ ಜನವಿರೋಧಿ ನೀತಿಗಳನ್ನು ಅನುಸರಿಸಿ ಬಡ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಸಿಐಟಿಯು ಕಾರ್ಮಿಕ ಸಂಘಟನೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರಿಗೆ ಮತ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮನವಿ ಮಾಡಿದರು. ಸಿದ್ದಾಪುರ ಪಟ್ಟಣದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ವತಿಯಿಂದ ನಡೆದ ಕಾಂಗ್ರೆಸ್ ಪರ ಬಹಿರಂಗ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.  ಬಡವರು, ಕಾರ್ಮಿಕರು, ಕೃಷಿ ಕಾರ್ಮಿಕರು, ರೈತಾಪಿ ವರ್ಗ ಹಾಗೂ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಕಾರ್ಮಿಕರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನವನ್ನು ಏರಿಕೆ ಮಾಡಿ ಎಂದು ನಾವುಗಳು ಹೋರಾಟ ನಡೆಸುತ್ತಿದ್ದರೆ, ಕೇಂದ್ರ ಸರಕಾರ ಈಗ ಇರುವ ಅಲ್ಪ ಮೊತ್ತದ ವೇತನವನ್ನೇ ಕಡಿಮೆ ಮಾಡುವ ಚಿಂತನೆ ನಡೆಸಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ…

Read More

ಮಡಿಕೇರಿ.ಏ.21NEWS DESK : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ನಮ್ಮನಡೆ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾವನ್ನು ರವಿವಾರ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಆವರಣದಿಂದ ಆಯೋಜಿಸಲಾಗಿತ್ತು. ನಮ್ಮನಡೆ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣೀತ್ ನೇಗಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಾಲ್ನಡಿಗೆ ಜಾಥಾವು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಹಿಲ್ ರಸ್ತೆಯಲ್ಲಿರುವ ನಗರಸಭಾ ಪ್ರಾಥಮಿಕ ಶಾಲಾ ಆವರಣ ತಲುಪಿತು. ಅಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ವರ್ಣೀತ್ ಮೇಗಿ ಅವರು ಮತದಾನ ದ್ವಜಾರೋಹಣ ನೇರವೇರಿಸಿ ಮಾತನಾಡಿದರು. ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ನೀಡಿದೆ, ಅದನ್ನು ಅರ್ಹರಿಗೆ ನೀಡಬೇಕು. ನೀವು ಮತದಾನ ಮಾಡಿ ನಿಮ್ಮವರಿಗೂ ಮತದಾನ ಮಾಡುವಂತೆ ಪ್ರೇರೇಪಣೆ ನೀಡಿ ಎಂದು ಕರೆ ನೀಡಿದರು. ಏಪ್ರಿಲ್ 26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ…

Read More

ಮಡಿಕೇರಿ. ಏ.21 NEWS DESK : ಅಹಿಂಸೆಯನ್ನು ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ್ ಮಹಾವೀರ ಜಯಂತಿಯನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ರವಿವಾರ ಆಚರಿಸಲಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಅವರು ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

Read More

ಸೋಮವಾರಪೇಟೆ ಏ.21 NEWS DESK : ಸಿಮೆಂಟ್ ತುಂಬಿದ ಭಾರೀ ಲಾರಿಯೊಂದು ಚಲಿಸಿದ ಪರಿಣಾಮ ಶನಿವಾರಸಂತೆ ರಸ್ತೆಯಲ್ಲಿ ಇಂಟರ್ ಲಾಕ್  ಗಳಿಗೆ ಹಾನಿಯಾಗಿದೆ. ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣದ ಬಳಿ ಸುಸಜ್ಜಿತವಾಗಿ ಇಂಟರ್ ಲಾಕ್  ಅಳವಡಿಸಲಾಗಿತ್ತು. ಇದು ಪ್ರಯಾಣಿಕರಿಗೆ ಅನುಕೂಲಕರ ವ್ಯವಸ್ಥೆಯಾಗಿತ್ತು. ಆದರೆ 40 ಟನ್ ಸಿಮೆಂಟ್ ತುಂಬಿದ ಭಾರೀ ಲಾರಿ ಚಲಿಸಿದ ಪರಿಣಾಮ ಇಂಟರ್ ಲಾಕ್ ಗಳು ಒಡೆದು ಹೋಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು.

Read More

ಮಡಿಕೇರಿ ಏ.21 NEWS DESK : ವಿಶ್ವಕಲಾ ದಿನಾಚರಣೆಯ ಅಂಗವಾಗಿ ಕೊಡಗು ವಿದ್ಯಾಲಯದ ವತಿಯಿಂದ ಮಡಿಕೇರಿಯ  ರಾಜಾಸೀಟಿನಲ್ಲಿ ಸಮಾಗಮ ಬೇಸಿಗೆ ಶಿಬಿರದ ಸುಮಾರು 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಗೂ ಕಲಾ ಶಿಕ್ಷಕರಾದ ಬಿ ಪ್ರಸನ್ನ ಕುಮಾರ್, ಪ್ರದೀಪ್ ಹಾಗೂ ಪವನ್ ಆವರೊಂದಿಗೆ   ಸ್ಥಳದಲ್ಲಿಯೇ ಪ್ರಕೃತಿ ರಮಣೀಯ ಹಸಿರ ಸೊಬಗನ್ನು ತಮ್ಮ ಕುಂಚದಲ್ಲಿ ಅರಳಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಆಚರಿಸಿದರು. ಮುಖ್ಯ ಅತಿಥಿಯಾಗಿದ್ದ  ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ವರ್ಣಿತ್ ನೇಗಿ  ಮಾತನಾಡಿ ಚಿತ್ರಕಲೆ ಹವ್ಯಾಸವನ್ನಾಗಿ ಇದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು. ಈ ಸಂದರ್ಭ ಅವರು ತಮ್ಮ ತಂದೆಯ ಕೊಡುಗೆಯ ಬಗ್ಗೆ ಹೇಳುತ್ತಾ ಅವರಿಂದಾಗಿ ತಾನು ಕ್ರೀಡೆ  ಹಾಗೂ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಳ್ಳಲು ಕಾರಣವಾಯಿತು.  ತನ್ನ ಐ ಎ ಎಸ್ ಸಂದರ್ಶನ ವೇಳೆಯಲ್ಲಿ  ಹವ್ಯಾಸದ ಕುರಿತು ಹೆಚ್ಚಿನ ಪ್ರಶ್ನೆಗಳಿದುದ್ದನ್ನು ಸಹ ಸ್ಮರಿಸಿಕೊಂಡರು . ನಾವು ಹವ್ಯಾಸ ವನ್ನು ಬೆಳೆಸಿಕೊಂಡರೆ ನಮ್ಮ ಜೀವನದಲ್ಲಿ ತಾಳ್ಮೆ ಮತ್ತು ಸಹನೆಯನ್ನು ಬೆಳೆಸಿಕೊಳ್ಳಬಹುದು…

Read More

ಸೋಮವಾರಪೇಟೆ NEWS DESK : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹತ್ಯೆಗಳು ನಡೆಯುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಅಪರಾಧ ಪ್ರಕರಣಗಳು ಮಿತಿ ಮೀರಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಾಲ್ನೂರು ಗ್ರಾಮದಲ್ಲಿ ಚುನಾವಣೆ ಪ್ರಚಾರದ ಸಂದರ್ಭ ಕಾರ್ಯಕರ್ತ ರಾಮಪ್ಪ ಅವರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು  ಆಗ್ರಹಿಸಿದರು. ಹುಬ್ಬಳಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪ್ರಧಾನಿ ಮೋದಿ ಅವರ ಕುರಿತು ಹಾಡು ಮಾಡಿದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಗೌತಮ್, ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ವಿಶ್ವ ಹಿಂದೂ…

Read More

ಮಡಿಕೇರಿ ಏ.20 NEWS DESK : ರಾಜಕೀಯ ಯಜಮಾನರಿಗೆ ಕೊಡವರು ಊಳಿಗಮಾನ್ಯ ನಿಷ್ಠೆಯನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ  ಎನ್.ಯು.ನಾಚಪ್ಪ ಕರೆ ನೀಡಿದ್ದಾರೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಂದಿನೆರವಂಡ ಒಕ್ಕದ ವತಿಯಿಂದ ಸನ್ಮಾನ ಸ್ವೀಕರಿಸಿದ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸಂವಿಧಾನವು ಅದರ ನಾಗರಿಕರನ್ನು ಆಳುವ ಅತ್ಯುನ್ನತ ದಾಖಲೆಯಾಗಿದೆ. ಈ ಘನವೆತ್ತ ಸಂವಿಧಾನದಡಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕೊಡವರ ಹೆಗ್ಗುರುತು ರಕ್ಷಿಸುವ ಸಲುವಾಗಿ ಕೊಡವಲ್ಯಾಂಡ್ ಸಾಧಿಸುವ ಮೂಲಕ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಶ್ರಮಿಸೋಣ ಎಂದರು. ಕೊಡವರ ಪರ ಹೋರಾಟ ಕಠಿಣ ಕಾರ್ಯವಾಗಿದೆ. ಸರ್ಕಾರ ಮತ್ತು ಕೊಡವ ವಿರೋಧಿ ಅಂಶಗಳಿಂದ ಹಗೆತನವನ್ನು ಅನುಭವಿಸುತ್ತಿದ್ದೇವೆ. 34 ವರ್ಷಗಳ ನಿರಂತರ ಹೋರಾಟ ಕಹಿ ಸಿಹಿ ಅನುಭವದ ಸುದೀರ್ಘ ಪ್ರಯಾಣವಾಗಿದೆ. ದುಃಖವಿಲ್ಲದೆ ಗೆಲುವಿಲ್ಲ, ತ್ಯಾಗವಿಲ್ಲದೆ ಸ್ವಾತಂತ್ರ್ಯವಿಲ್ಲ ಎಂದರು. ನಾವು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು, ಆಗ ಮಾತ್ರ ನಾವು ಹೊಸ ಇತಿಹಾಸವನ್ನು ರಚಿಸಬಹುದು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವೇ ಇಲ್ಲ. ನಾವು ಕೊಡವರು ಈ…

Read More

ಮಡಿಕೇರಿ ಏ.20 NEWS DESK : ಭಾರತದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿ, ರಾಜ್ಯಗಳು ಹೊಂದಿರುವ ಅವಕಾಶಗಳನ್ನು ಕಿತ್ತು ಕೊಂಡು, ಅವುಗಳನ್ನು ‘ತಬ್ಬಲಿ’ಯನ್ನಾಗಿಸುವ ಪ್ರಯತ್ನ ಕೇಂದ್ರದ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ರಾಜ್ಯ ಪ್ರಮುಖರಾದ ಇಂದುಧರ್ ಹೊನ್ನಾಪುರ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿಕೊಂಡು ಬಂದ ಕೇಂದ್ರದ ಬಿಜೆಪಿ, ಎಲ್ಲಾ ಪಕ್ಷಗಳಲ್ಲಿದ್ದ ಭ್ರಷ್ಟರನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಮೂಲಕ ಕಡು ಭ್ರಷ್ಟ ಪಕ್ಷವಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಸಮಾಜದಲ್ಲಿ ಜಾತಿ ಧರ್ಮಗಳ ನಡುವೆ ವೈಷಮ್ಯದ ವಿಷ ಬೀಜವನ್ನು ಬಿತ್ತುವ ಮೂಲಕ, ದೇವರು, ಧರ್ಮದ ಹೆಸರಿನಲ್ಲೆ ರಾಜಕೀಯ ಮಾಡುತ್ತಿರುವ ಬಿಜೆಪಿ, ದೇವರು ಮತ್ತು ಧರ್ಮವನ್ನೆ ವಂಚಿಸಿದೆ. ದೇಶದ ಶ್ರೀಮಂತರ ಮೇಲಿನ ತೆರಿಗೆಯನ್ನು ತೆಗೆದು ಹಾಕಿ, ಸಮಾಜದ ರೈತರು, ಬಡವರ್ಗ ಸೇರಿದಂತೆ…

Read More