ಲೇಖಕ: admin

ಮಡಿಕೇರಿ ಏ.22 NEWS DESK : ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‍ಟಿ ಮೋರ್ಚಾ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಪರಿಶಿಷ್ಟರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಮಾಡುವುದನ್ನು ಖಂಡಿಸುವುದಾಗಿ ತಿಳಿಸಿದರು. ಈ ರೀತಿ ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡುವ ಮೂಲಕ ಪರಿಶಿಷ್ಟರಿಗೆ ಸರಕಾರ ವಂಚನೆ ಮಾಡುತ್ತಿದೆ. ದುರ್ಬಲ ವರ್ಗವನ್ನು ಹಸಿವಿನಲ್ಲಿಟ್ಟು ಇತರರ ಹೊಟ್ಟೆ ತುಂಬಿಸುವ ಕಾರ್ಯ ಯಾಕೆ ಮಾಡಬೇಕು, ಪರಿಶಿಷ್ಟರ ಅನುದಾನವನ್ನು ಬಳಸಿಕೊಂಡಂತೆ ಅಲ್ಪಸಂಖ್ಯಾತರ ಅನುದಾನವನ್ನು ಯಾಕೆ ಬಳಸಿಕೊಳ್ಳುತ್ತಿಲ್ಲವೆಂದು ಪ್ರಶ್ನಿಸಿದರು. ಇಂದು ಪರಿಶಿಷ್ಟರ ಅಭಿವೃದ್ಧಿಗೆ ಹಣ ಇಲ್ಲದಾಗಿದೆ, ಅಧಿಕಾರಿಗಳ ಬಳಿ ವಿಚಾರಿಸಿದರೆ ಸರಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಪರಿಶಿಷ್ಟ ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ವಿದ್ಯಾರ್ಥಿ ವೇತನಕ್ಕೆ ಕಷ್ಟವಾಗಿದೆ. ಹಾಸ್ಟೆಲ್ ಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದಾಗಿದೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ…

Read More

ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ 20ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕ್ರಿಕೆಟ್ ಕಪ್ ಹಾಗೂ ಜನಾಂಗದ ಬಾಂಧವರಿಗೆ ಮೊದಲನೇ ವರ್ಷದ ಹಗ್ಗ ಜಗ್ಗಾಟ ಕ್ರೀಡಾಕೂಟವು ಮೇ 10 ರಿಂದ 19 ರವರೆಗೆ ಮೂರ್ನಾಡುವಿನಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಅದಮ್ ತಿಳಿಸಿದ್ದಾರೆ. ಮೂರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಜಿಲ್ಲೆಯ ಎಲ್ಲಾ ಭಾಗದಿಂದಲೂ ಜನಾಂಗಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕರಾದ ಹಾಗೂ ಟ್ರಸ್ಟ್ ನ ಗೌರವಾಧ್ಯಕ್ಷ  ಅಬ್ದುಲ್ ರಶೀದ್, ಟ್ರಸ್ಟಿನ ಸದಸ್ಯರಾದ ಮುಜೀಬ್ ಮೂರ್ನಾಡು, ಸಮೀರ್ ಕಡಂಗ, ಹಾರಿಸ್ ನಂಜರಾಯಪಟ್ಟಣ, ಭಾಷಾ ಕುಶಾಲನಗರ ಹಾಜರಿದ್ದರು. ವರದಿ : ನೌಫಲ್ ಕಡಂಗ 

Read More

ಮಡಿಕೇರಿ ಏ.22 NEWS DESK : ವೃತ್ತಿ ಶಿಕ್ಷಕರ ಸಂಘದ ವತಿಯಿಂದ ಕುಶಾಲನಗರದ  ಸ.ಪ.ಪೂ ಕಾಲೇಜಿನ ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಹಾಗೂ ನೆಲ್ಯಹುದಿಕೇರಿಯ ಕೆ.ಪಿ.ಎಸ್ ವೃತ್ತಿ ಶಿಕ್ಷಕ ಧರ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜಿನಲ್ಲಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ  ಭಾಗ್ಯಮ್ಮ ಹಾಗೂ ಸಂಘದ ಪ್ರಮುಖರು ಶಿಕ್ಷಕರನ್ನು ಸನ್ಮಾನಿಸಿ, ಗೌರಿವಿಸಿದರು. ಉಪಪ್ರಾಂಶುಪಾಲರಾದ ಪರಮೇಶ್ವರಪ್ಪ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು. ವರದಿ : ನೌಫಲ್ 

Read More

ಮಡಿಕೇರಿ ಏ.22 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ 17ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಏ.26 ಮತ್ತು 27 ರಂದು ನಡೆಯಲಿದೆ. ಕೇರಳದ ಪಯ್ಯನೂರ್ ನ ಶ್ರೀ ಈಶ್ವರಿ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಏ.26 ರಂದು ಸಂಜೆ 6 ಗಂಟೆಗೆ ಆಚಾರ್ಯರ ಆಗಮನ, ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಏ.27 ರಂದು ಬೆಳಿಗ್ಗೆ 7 ಗಂಟೆಗೆ ಮಹಾ ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾ ಪೂಜೆ ನೆರವೇರಲಿದೆ. ಮಧ್ಯಾಹ್ನ ಅನ್ನದಾನ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.

Read More

ಚೆಟ್ಟಳ್ಳಿ ಏ.22 NEWS DESK : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ತರಬೇತಿ ನಡೆಯುತ್ತಿದ್ದು, ಸಹಕಾರ ಸಂಘಗಳ ಎಲ್ಲಾ ಸಿಬ್ಬಂದಿಗಳನ್ನು ನಿರಂತರ ತರಬೇತಿಗೆ ಬಳಸಿಕೊಳ್ಳುವುದು ಸರಿಯಲ್ಲವೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಆರೋಪಿಸಿದ್ದಾರೆ. ಸಹಕಾರ ಸಂಘದ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಿದ ಪರಿಣಾಮ ಸಂಘವನ್ನು ಮುಚ್ಚಲಾಗಿತ್ತು. ಇದೀಗ ಮತ್ತೊಮ್ಮೆ ಸಹಕಾರ ಸಂಘದ ಸಿಬ್ಬಂದಿಗಳಿಗೆಲ್ಲ  ತರಬೇತಿ ನೀಡಲು ಆದೇಶಿಸಿದ್ದು, ಸಂಘವನ್ನು ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಲ್ಲದೆ ಸಂಘವನ್ನು ಮುಚ್ಚುವ ಪರಿಸ್ಥಿತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಿಗೆ ನಿರಂತರ ತರಬೇತಿ ನೀಡುತ್ತಿರುವುದರಿಂದ ಸಹಕಾರ ಸಂಘದಲ್ಲಿ  ರೈತರಿಗೆ ಕೆಸಿಸಿಸಾಲ ಹಾಗೂ ಕೃಷಿ ಸಾಲ ಮರುಪಾವತಿ ನೀಡಲು ತೊಂದರೆಯಾಗುತ್ತಿದೆ. ಚೆಟ್ಟಳ್ಳಿ ಸಹಕಾರ ಸಂಘದ ಶೇ.50 ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಕೊಂಡು ಉಳಿದ ಸಿಬ್ಬಂದಿಗಳನ್ನು‌ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಮಣಿಉತ್ತಪ್ಪ ತಿಳಿಸಿದರು. ರೈತ ಕೃಷಿ ಸಾಲ ಮರಪಾತಿಯ ಸಮಯಮೀರಿದರೆ ಸರಕಾರ…

Read More

ಮಡಿಕೇರಿ ಏ.21 NEWS DESK : ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಕೊಡಗಿನ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರದ ವಿವಿಧ ವಾರ್ಡ್ ಗಳಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಯದುವೀರ್ ಒಡೆಯರ್ ರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ದೇಶವ್ಯಾಪಿ ಬಿಜೆಪಿ ಪರ ಅಲೆ ಇದೆ. ರಾಜ್ಯದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಬಹುಮತ ಗಳಿಸಲಿದೆ ಎಂದರು. ಚುನಾವಣೆ ದಿನ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜಂಟಿಯಾಗಿ ಮತಗಟ್ಟೆ ಬಳಿ ಇರಲಿದ್ದಾರೆ. ಜಿಲ್ಲೆಯ ಮತದಾರರು ಯದುವೀರ್ ಅವರ ಪರ ಒಲವು ತೋರುತ್ತಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದರು. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಯದುವೀರ್ ಒಡೆಯರ್ ಅವರು…

Read More

ಮಡಿಕೇರಿ ಏ.21 NEWS DESK : ಹುದಿಕೇರಿ ಮಹಾದೇವರ ವಾರ್ಷಿಕ ಉತ್ಸವ ಇದೇ ಏಪ್ರಿಲ್- 21 ಹಾಗೂ 22ರಂದು ನಡೆಯಲಿದ್ದು  ಏಪ್ರಿಲ್-14ರಂದು ಕೊಡಿಮರ ನಿಲ್ಲಿಸುವ ಮೂಲಕ ಈ ಬಾರಿ 9ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗಿದೆ ಎಂದು ಅಂಜಿಕೇರಿ ನಾಡಿನ ಜೋಡಿ ತಕ್ಕರಾದ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಹಾಗೂ ಚಕ್ಕೇರ ರಾಜೇಶ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಾಡ್ ತಕ್ಕರಾದ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಪ್ರತಿ ವರ್ಷ 11 ದಿವಸ ಹಬ್ಬವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಹುದಿಕೇರಿ ಹಾಗೂ ಕುತ್ತ್’ನಾಡ್ ಮಹಾದೇವರ ಅವಭೃತ ಸ್ನಾನ ಒಂದೇ ಸ್ಥಳದಲ್ಲಿ ಆಗುವುದು ಈ ಹಿಂದಿನಿಂದಲೂ ಬೆಳೆದು ಬಂದಿರುವ ಆಚರಣೆಯಾಗಿದ್ದು, ಕಾರಣಾಂತರಗಳಿಂದ ಕಳೆದ ಏಳು ವರ್ಷ ಜೊತೆಯಲ್ಲಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಹಿಂದಿನ ಆಚರಣೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಹಾಗೂ ಊರು ತಕ್ಕರಾದ ಬೊಳ್ಳಜ್ಜೀರ ಮಣಿ ನಂಜಪ್ಪನವರಿಗೆ ದೇವರು ಕನಸಿನಲ್ಲಿ ಕಾಣಿಸಿಕೊಂಡು ಹಿಂದಿನ ಆಚರಣೆಗಳನ್ನು ಪಾಲಿಸುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಸೀಮಿತವಾಗಿ…

Read More

ಮೈಸೂರು ಏ.21 NEWS DESK : ಯದುವೀರ್ ಅವರ ಪತ್ನಿ ತ್ರಿಶಿಕಾ ಕುಮಾರಿ ಒಡೆಯರ್ ಮೈಸೂರಿನಲ್ಲಿ ಆಯೋಜಿತ ಮಹಿಳಾ ಸಶಕ್ತಿಕರಣ ಮತ್ತು ಸಮಗ್ರ ಬೆಳವಣಿಗೆಯ ಸಮಾವೇಶದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಪ್ರೋತ್ಸಾಹದಾಯಕ ನುಡಿಗಳನ್ನಾಡಿದರು. ಇದೇ ಸಂದಭ೯ ಆದಿವಾಸಿ ಮಹಿಳೆಯರ ನೖತ್ಯದಲ್ಲಿ ತಾವೂ ಹೆಜ್ಜೆ ಹಾಕಿ ಸಂಭ್ರಮಿಸಿದ ತ್ರಿಶಿಕಾ ಒಡೆಯರ್, ಮಹಿಳೆಯರಲ್ಲಿನ ಸಾಂಸ್ಕೖತಿಕ ಪ್ರತಿಭೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕೊಡಗು, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ಮೈಸೂರು ವ್ಯಾಪ್ತಿಯ ಗ್ರಾಮೀಣ ಮತ್ತು ಆದಿವಾಸಿ ಮಹಿಳೆಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಕಾಯ೯ಕ್ರಮದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು.

Read More

ಮೈಸೂರು ಏ.21 NEWS DESK : ಮೈಸೂರಿನಲ್ಲಿ ನಡೆದ ಮಹಿಳಾ ಸಬಲೀಕರಣ ಮತ್ತು ವಾಣಿಜ್ಯೋದ್ಯಮ’ ಜಾಗೃತಿ ಕಾರ್ಯಕ್ರಮದಲ್ಲಿ ಮಹಾರಾಣಿ ತ್ರಿಶಿಖಾ ಕುಮಾರಿ ಒಡೆಯರ್ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು. ಮಹಿಳೆಯರ ಬೆಳವಣಿಗೆ ಮತ್ತು ಸಮೃದ್ಧಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಬಗ್ಗೆ ಒತ್ತಿ ಹೇಳಿದ ಮಹಾರಾಣಿ “ನಾವು ಈ ಸಬಲೀಕರಣದ ಸಾಮೂಹಿಕ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ನಾನು ಕರ್ನಾಟಕದ ಮಹಿಳೆಯರ ಬೆಂಬಲಕ್ಕೆ ದೃಢವಾಗಿ ನಿಂತಿದ್ದೇನೆ. ಅವರಿಗೆ ಅಗತ್ಯವಾದ ಪರಿಕರಗಳು ಮತ್ತು ಜ್ಞಾನವನ್ನು ಒದಗಿಸುವ ಮೂಲಕ, ನಾವು ಆ ಸಮುದಾಯಗಳನ್ನು ಉನ್ನತೀಕರಿಸಿ ಅವರ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು” ಎಂದರು. ‘ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ’ ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಮಹಾರಾಣಿ ತ್ರಿಶಿಖಾ ಕುಮಾರಿ ಒಡೆಯರ್ ಅವರು ಈ ಕಾರ್ಯಕ್ರಮವು ತರುವ ಪರಿವರ್ತಕ ಪರಿಣಾಮದ ಭರವಸೆಯ ಬಗ್ಗೆ ವಿವಿರಿಸಿದರು. “ಈ ಕಾರ್ಯಕ್ರಮವು ಮಹಿಳೆಯರಿಗೆ ಜ್ಞಾನವನ್ನು ನೀಡುವುದಲ್ಲದೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಕ್ಷಮತೆಯನ್ನು ತರುತ್ತದೆ. ಸರ್ಕಾರ- ಸಾರ್ವಜನಿಕ ಸಹಯೋಗದ ಪ್ರಯತ್ನಗಳ ಮೂಲಕ, ನಾವು ಎಲ್ಲರನ್ನೂ ಒಳಗೊಂಡ ಸಮಾಜವನ್ನು ಸೃಷ್ಟಿಸಿ, ಮಹಿಳೆಯರಿಗೆ…

Read More

ಮಡಿಕೇರಿ ಏ.21 NEWS DESK :  ಸಮಾಜದ ಉದ್ಧಾರಕ್ಕೆ ಎಲ್ಲರೂ ಸೇರಿ ದೀಪ ಹಚ್ಚಬೇಕೇ ಹೊರತು ಬೆಂಕಿ ಹಚ್ಚಬಾರದು ಎಂದು ಹೈಕೋರ್ಟ್ ವಕೀಲರೂ ಆಗಿರುವ ಕಾಂಗ್ರೆಸ್ ಧುರೀಣ ಹೆಚ್.ಎಸ್.ಚಂದ್ರಮೌಳಿ  ಹೇಳಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ವಿದ್ಯಾಪೀಠದ ಆವರಣದಲ್ಲಿ  ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ  ವೀರಶೈವ ಸಮಾಜದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ 30 ಸಾವಿರದಷ್ಟು  ವೀರಶೈವ ಲಿಂಗಾಯಿತರು ಇದ್ದರೂ ಕೂಡ ಇದೂವರೆಗೂ ಸಾಮಾಜಿಕವಾಗಿ ಏಕೆ ಒಗ್ಗೂಡಿಲ್ಲ. ಜಿಲ್ಲೆಯಲ್ಲಿ ಅಥವಾ ಯಾವುದಾದರೂ ಒಂದು ತಾಲ್ಲೂಕಿನಲ್ಲಿ ವೀರಶೈವ ಜನಾಂಗದ ಒಂದೇ ಒಂದು ಸಮುದಾಯ ಭವನವಿಲ್ಲ. ಲಿಂಗಾಯಿತರು ಪರಸ್ಪರ ಅಸೂಯೆ, ಹೊಟ್ಟೆಕಿಚ್ಚು, ಕಾಲೆಳೆಯುವುದನ್ನು ಬಿಟ್ಟು ಒಂದಾದರೆ ಮಾತ್ರ ಅಭಿವೃದ್ದಿ ಸಾಧ್ಯ. ಆದ್ದರಿಂದ ಬೆಂಕಿ ಹಚ್ಚುವುದನ್ನು ಬಿಟ್ಟು ದೀಪ ಹಚ್ಚುವ ಮೂಲಕ ಎಲ್ಲರೂ ಹೊಸ ಬೆಳಕು ಕಾಣುವತ್ತ ಇನ್ನಾದರೂ ಚಿಂತನೆ ನಡೆಸಬೇಕು ಎಂದು ಚಂದ್ರಮೌಳಿ ಆಶಿಸಿದರು. ಕೊಡಗು ಜಿಲ್ಲೆಯಲ್ಲಿ   ಜಾತ್ಯಾತೀತ ಮನೋಭಾವದ ಇಬ್ಬರು ಶಾಸಕರು ಇದ್ದಾರೆ. ಆದ್ದರಿಂದ  ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರಗೌಡ ಅವರ ಸಹಕಾರ ಪಡೆದುಕೊಂಡು ಜಿಲ್ಲೆಯಲ್ಲಿ ಸಮುದಾಯ…

Read More