ನಾಪೋಕ್ಲು ಫೆ.13 NEWS DESK : ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಇಲಾಖೆಯ ಸಹಕಾರದಿಂದ ಮೂರ್ನಾಡಿನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಗ್ರಾ.ಪಂ ಎದುರಿನ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಸಾರ್ವಜನಿಕರಿಗೆ ಬಿಪಿ, ಶುಗರ್ ಸೇರಿದಂತೆ ವಿವಿಧ ತಪಾಸಣೆ ಮಾಡಿ ಸೂಕ್ತ ಮಾರ್ಗದರ್ಶನವನ್ನು ನೀಡಲಾಯಿತು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷರಾದ ಬಿ.ಎಸ್.ರೇಖಾ, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ, ಪಂಚಾಯತಿ ಸದಸ್ಯರು, ಸಿಬ್ಬಂದಿ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ಮಡಿಕೇರಿ ಫೆ.13 : ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೂಲಭೂತ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ಮಡಿಕೇರಿಯ ನಗರಸಭೆ ಮುಂಭಾಗ ಕೆಲಸ ಸ್ಥಗಿತಗೊಳಿಸಿ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಹೊರಗುತ್ತಿಗೆ ನೌಕರರು ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ಅಶೋಕ್ ಮಾತನಾಡಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳಲ್ಲಿ ನೂರಾರು ಮಂದಿ ಹೊರಗುತ್ತಿಗೆಯಡಿ, ಚಾಲಕರುಗಳಾಗಿ, ನೀರು ಗಂಟಿಗಳಾಗಿ, ಸ್ವಚ್ಛತಾ ಸಿಬ್ಬಂದಿಗಳಾಗಿ, ಲೋಡರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳನ್ನು ಸರ್ಕಾರ ನೇರ ಪಾವತಿಗೆ ಒಳಪಡಿಸುವ ಮೂಲಕ ಅವರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಫೆ.15 ರಂದು ‘ನಮ್ಮ ನಡೆ ಮುಖ್ಯಮಂತ್ರಿಗಳ ಮನೆ ಕಡೆಗೆ’ ಎನ್ನುವ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ನೇರ ಪಾವತಿಯ ಪ್ರಮುಖ ಬೇಡಿಕೆ ಹಿನ್ನೆಲೆಯಲ್ಲಿ ನಡೆಯುವ ಪ್ರತಿಭಟನೆ ಸಂದರ್ಭ ರಾಜ್ಯಾದ್ಯಂತ ಹೊರ ಗುತ್ತಿಗೆ ನೌಕರರು ಸ್ವಚ್ಛತಾ ಕಾರ್ಯ…
ಮಡಿಕೇರಿ ಫೆ.13 NEWS DESK : ಯುಕೊ ಸಂಘಟನೆಯ ವತಿಯಿಂದ 5ನೇ ವರ್ಷದ ಬೇದ ಚಂಗ್ರಾಂದಿಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯನವರ ಗದ್ದೆಯಲ್ಲಿ ಆಚರಿಸಲಾಯಿತು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ. ಸಾಂಪ್ರದಾಯಿಕವಾಗಿ ಕೈ ಎಣ್ಣೆಯನ್ನು ನಿಯಮದಂತೆ ಭೂಮಿಗೆ ಸುರಿದು, ಪಕ್ಕದಲ್ಲಿ ಮರದ ಬಾಚಣಿಕೆಯನ್ನಿಟ್ಟು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಸುಜು ಕರುಂಬಯ್ಯನವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರ ನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿ ತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಖೇತವಾಗಿ ಕೊಡವರು ಬೇದ ಚಂಗ್ರಾಂದಿಯನ್ನು ಆಚರಣೆ ಮಾಡುತ್ತಾರೆ ಎಂದು ಎಂದು ಮಾಹಿತಿ ನೀಡಿದರು. ವಿಜ್ಞಾನಕ್ಕೆ ನಿಲುಕದ ಸಂಗತಿಗಳು ಸಂಸ್ಕೃತಿ, ಸಂಪ್ರದಾಯ ಹಾಗೂ ಆಧ್ಯಾತ್ಮಿಕತೆಯಲ್ಲಿ ಅಡಕವಾಗಿವೆ. ವಿಜ್ಞಾನವು ಕೇವಲ ತರ್ಕಕ್ಕೆ ಮಾತ್ರ ಸೀಮಿತವಾದ ಜ್ಞಾನವಾಗಿದೆ.…
NEWS DESK : ಪ್ರೇಮಿಗಳಿಗೆ ಪವಿತ್ರವಾದ ದಿನ ಫೆ.14 ಈ ದಿನವನ್ನು ಪ್ರಪಂಚದಂದ್ಯಾತ ಪ್ರೇಮಿಗಳು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ಪ್ರೀತಿ ಪ್ರೇಮ ಪ್ರಣಯಗಳಿಂದ ದೂರ ಇರಬೇಕೆಂದು ಮನಸ್ಸು ಹೇಳಿದ್ದರೂ ಫೆಬ್ರವರಿ ತಿಂಗಳು ಬರುತ್ತಿದ್ದಂತೆ, ಎಂದಿನಂತೆ ಹೃದಯದಲ್ಲಿ ಪ್ರಣಯದ ಹೂಗಳು ಅರಳಿಯೇ ಬಿಡುತ್ತದೆ. ಈ ದಿನ ಪ್ರೇಮಿಗಳ ಪಾಲಿನ ವರದಾನದ ದಿನವಾಗಿದ್ದು, ಈ ದಿನದಂದು ಪೇಮಿಗಳು ಅದೆಷ್ಟೋ ದಿನಗಳಿಂದ ತಮ್ಮ ಮನಸ್ಸಿನಲ್ಲಿ ಅದುಮಿಟ್ಟುಕೊಂಡಿರುವ ಭಾವನೆಗಳನ್ನು ತನ್ನ ಪ್ರಿಯಕರನೊಂದಿಗೆ ಅಥವಾ ಪ್ರೇಯಸಿಗೆ ತಿಳಿಸುವ ಅತ್ಯಮೂಲ ದಿನ. ಈ ದಿನ ಪ್ರೀತಿ ಮಾನವ ಲೋಕದ ಅತ್ಯದ್ಭುತ ಶಕ್ತಿ ಪ್ರೀತಿ, ಎಂದರೆ ತಮ್ಮ ಹುಟ್ಟಿನಿಂದ ಸಾವಿನವರೆಗೂ ತಮ್ಮ ಜೊತೆಯಲ್ಲಿ ಇರಬೇಕಾದ ಅಮೂಲ್ಯವಾದ ಭಾವನೆ. ಇದರಲ್ಲಿ ಮಹಾ ಶಕ್ತಿಯೇ ಆಡಗಿದೆ. ಪ್ರೀತಿ, ವಾತ್ಯಲ್ಸ, ಇಷ್ಟ, ಕಾಳಜಿ, ಕರುಣೆ ಎಲ್ಲವೂ ಪ್ರೀತಿಯಲ್ಲಿ ಅಡಗಿದೆ. ಇದು ಒಂದು ಮಹಾಸಾಗರವೆ ಆಗಿರುತ್ತದೆ. ಪ್ರೀತಿಯ ಸಂಕೇತ ಕೆಂಪು ಬಣ್ಣ, ಅದರಲ್ಲೂ ಕೆಂಪು ಗುಲಾಬಿ ವಿಶೇಷ, ಪ್ರೇಮಿಗಳು ತಮ್ಮ ಹೃದಯದಲ್ಲಿರುವ ಪ್ರೀತಿಯನ್ನು ಅಥವಾ…
ಮಡಿಕೇರಿ ಫೆ.13 NEWS DESK : ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ಗ್ರಾಹಕರ, ಸಾರ್ವಜನಿಕರ ಹಿತರಕ್ಷಣಾ ದೃಷ್ಟಿಯಿಂದ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿದ್ಯುತ್ ಅವಘಡಗಳು, ಅಪಘಾತಗಳನ್ನು ತಡೆಗಟ್ಟಲು ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ನಿಗಮವು ಕೈಗೊಂಡಿರುವ ಕಾರ್ಯಕ್ರಮಗಳು, ಸಾರ್ವಜನಿಕರು, ಗ್ರಾಹಕರಿಗೆ ತಿಳುವಳಿಕೆ ಮೂಡಿಸುವುದು ಹಾಗೂ ಚಾ.ವಿ.ಸ.ನಿ.ನಿ ವತಿಯಿಂದ ಕೈಗೊಂಡಿರುವ ಇತರೆ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ “ವಿದ್ಯುತ್ ಸೇವೆಗಳು ಹಾಗೂ ಸುರಕ್ಷತಾ ಅರಿವು” ಕಾರ್ಯಕ್ರಮವನ್ನು ಶಾಖಾ ಮಟ್ಟದಲ್ಲಿ ಆಯೋಜಿಸಲಾಗಿದೆ. ಆದ್ದರಿಂದ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಹಾಜರಾಗುವಂತೆ ಕೋರಿದೆ. ಫೆಬ್ರವರಿ, 14 ರಂದು ಮಡಿಕೇರಿ ಉಪ ವಿಭಾಗ ಕಚೇರಿ ಆವರಣ ಮತ್ತು ವಿರಾಜಪೇಟೆ ಉಪ ವಿಭಾಗ ಕಚೇರಿ ಆವರಣ, ಫೆಬ್ರವರಿ, 15 ರಂದು ಸೋಮವಾರಪೇಟೆ ಉಪವಿಭಾಗ ಕಚೇರಿ ಆವರಣ, ಫೆಬ್ರವರಿ, 16 ರಂದು ಕುಶಾಲನಗರ ಉಪ ವಿಭಾಗ ಕಚೇರಿ ಆವರಣ ಮತ್ತು ಗೋಣಿಕೊಪ್ಪಲು ಉಪ ವಿಭಾಗಕ್ಕೆ ಕುಶಾಲನಗರ ಉಪ…
ಮಡಿಕೇರಿ ಫೆ.13 NEWS DESK : ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಯುವ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕರ್ನಲ್(ನಿವೃತ್ತ) ಸಿ.ಪಿ.ಮುತ್ತಣ್ಣ ಅವರು ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು. ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ನಾಗರಿಕರು ಭಯದಿಂದ ಬದುಕುವಂತಾಗಿದೆ. ಆ ನಿಟ್ಟಿನಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷವನ್ನು ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಪದೇ ಪದೇ ಗ್ರಾಮಗಳಿಗೆ ಬರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸಲಹೆ ನೀಡಿದರು. ಟ್ರಂಚ್‍ಗಳ ನಿರ್ಮಾಣ, ಆನೆ ಓಡಾಡುವ ಮಾರ್ಗ ಸಂಬಂಧಿಸಿದಂತೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡುವುದು. ಎಲಿಪೆಂಟ್ ಟಾಸ್ಕ್‍ಪೋರ್ಸ್ ಮತ್ತು ರ್ಯಾಪಿಡ್ ರೆಸ್ಪಾನ್ಸ್ ತಂಡಗಳು ಎಸ್‍ಒಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಕಾಡಾನೆಯನ್ನು ನಿಯಂತ್ರಿಸಲು ಮುಂದಾಗಬೇಕಿದೆ ಎಂದು ಮನವಿ ಮಾಡಿದರು. ರೈಲ್ವೆ ಬ್ಯಾರಿಕೇಡ್‍ಗಳ ನಿರ್ಮಾಣ ಮಾಡಿದರೂ…
ಮಡಿಕೇರಿ ಫೆ.13 NEWS DESK : ಗೋಣಿಕೊಪ್ಪಲು ಕಾಫಿ ಮಂಡಳಿ ವಿಸ್ತರಣಾ ವಿಭಾಗದ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ, ನಿಟ್ಟೂರು ಕಾರ್ಮಾಡು ಇಗ್ಗುತ್ತಪ್ಪ ಸಂಘದ ಸಹಕಾರದೊಂದಿಗೆ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರ ನಡೆಯಿತು. ನಿಟ್ಟೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಣ್ಣು ಪರೀಕ್ಷಾ ಅಭಿಯಾನದಲ್ಲಿ ಭಾಗವಹಿಸಿದ್ದ ನಲುವತ್ತೆರಡು ಬೆಳೆಗಾರರಿಗೆ ಸ್ಥಳದಲ್ಲೇ ಸುಣ್ಣದ ಪ್ರಮಾಣದ ಶಿಫಾರಸ್ಸಿನ ಫಲಿತಾಂಶ ನೀಡಲಾಯಿತು. ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಫುಲ್ಲಾ ಕುಮಾರಿ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಿರಿಯ ಸಂಪರ್ಕ ಅಧಿಕಾರಿ ಮುಖಾರಿಬ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಕಾಫಿ ಕಾಪತು ಮಾಡುವ ಬಗ್ಗೆ, ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣದ ಬಗ್ಗೆ, ಸುಣ್ಣದ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಇಗ್ಗುತ್ತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಫ್ರಿನ್ಸ್ ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.…
ಮಡಿಕೇರಿ ಫೆ.13 NEWS DESK : ಬೆಂಗಳೂರು ವಕೀಲರ ಸಂಘದ ಹೈಕೋರ್ಟ್ ಘಟಕದಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಕೊಡುಗೆ ಅಪಾರ ಎಂದು ಶ್ಲಾಘೀಸಿದರು.
ಮಡಿಕೇರಿ ಫೆ.13 NEWS DESK : ಜಮ್ಮುವಿನಲ್ಲಿ ನಡೆದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿ ಚೆಯ್ಯಂಡ ಯಶಿಕಾ ಚಿನ್ನದ ಪದಕ ಗಳಿಸಿ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 18 ವರ್ಷ ಮೇಲ್ಪಟ್ಟ ವಿಭಾಗದ ಏಕ ವ್ಯಕ್ತಿ ನತ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವ ಯಶಿಕಾ ಚೆಯ್ಯಂಡಾಣೆಯ ನರಿಯಂದಡ ಗ್ರಾಮದ ಚೆಯ್ಯಂಡ ಲವ ಅಪ್ಪಚ್ಚು ಹಾಗೂ ಸುಮ ದಂಪತಿಯ ಪುತ್ರಿ. ಇವಳು ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನಲ್ಲಿ ಅಂತಿಮ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದು, ನೃತ್ಯ ಸಂಯೋಜಕ ವಿಷ್ಣು ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಭೂತಾನ್ ನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.
ನಾಪೋಕ್ಲು ಫೆ.13 : ಗೇಟಿನ ಬದಿಯಲ್ಲಿ ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್‍ಅನ್ನು ಕದಿಮರು ಕಳ್ಳತನ ಮಾಡಿರುವ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ. ಗ್ರಾಮದ ನಿವಾಸಿ ಕೆಲೇಟಿರ ಬೇಬಾ ಬಿದ್ದಯ್ಯ ಎಂಬವರಿಗೆ ಸೇರಿದ ಎರಡು ಸಿಲಿಂಡರನ್ನು ಕಳ್ಳತನ ಮಾಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






