ಗೋಣಿಕೊಪ್ಪ ಫೆ.29 NEWS DESK : ಬಹುಕಾಲದ ಬೇಡಿಕೆಯ ಗೋಣಿಕೊಪ್ಪ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಯಾವುದೇ ಕಾಮಗಾರಿಗೆ ಭೂಮಿ ಪೂಜೆ ನಡೆಸುವಾಗ ಕಾಮಗಾರಿಗೆ ಸಂಭಂದಿಸಿದಂತೆ ಅನುದಾನ ,ಅಂದಾಜು ಪಟ್ಟಿ, ಇಲಾಖಾ ಅನುಮೋದನೆ, ಕಾರ್ಯಾದೇಶ ಎಲ್ಲವನ್ನೂ ಇತ್ಯರ್ಥ ಪಡಿಸಿದ ನಂತರವೇ ಭೂಮಿ ಪೂಜೆ ಮಾಡುತ್ತಿರುವುದಾಗಿ ಸ್ಪಷ್ಟ ಪಡಿಸಿದ ಶಾಸಕರು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ ನಡೆಯದಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಗ್ರಾ.ಪಂ ಅಧ್ಯಕ್ಷ ಪ್ರಮೋದ್ ಗಣಪತಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಶಾಸಕ ಚೆಪ್ಪುಡಿರ ಅರುಣ್ ಮಾಚಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು,ವಕ್ತಾರ…
ಲೇಖಕ: admin
ಮಡಿಕೇರಿ ಫೆ.29 NEWS DESK : ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು ಮೇ 2 ರಿಂದ ಆರಂಭವಾಗಲಿದೆ. ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ ಕಾವಲ್, ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಈ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏ.1 ರ ಸಂಜೆ 5 ಗಂಟೆ ಯೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿ ಬೆಳಗ್ಗೆ 10 ರಿಂದ ಸಂಜೆ 5.30 ರೊಳಗೆ ಸಂಪರ್ಕಿಸಬಹುದಾಗಿದೆ ಅಥವಾ ಅಂತರ್ಜಾಲ https://horticulturedir.karnataka.gov.in ಇಲ್ಲಿ ಅರ್ಜಿ ಪಡೆಯಬಹುದಾಗಿದೆ. ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಛಾಪಾಕಾಗದ, ತಂದೆ/ತಾಯಿ/ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‍ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿಗೆ ಖುದ್ದು ಸಲ್ಲಿಸತಕ್ಕದ್ದು ಎಂದು…
ಮಡಿಕೇರಿ ಫೆ.29 NEWS DESK: ಕರ್ನಾಟಕ ಲೋಕಸೇವಾ ಆಯೋಗವು 384 ಗ್ರೂಪ್-ಎ ಹಾಗೂ ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು https://www.kpsc.kar.nic.in/ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾ.4 ರಿಂದ ಏ.3 ರೊಳಗೆ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮಾರ್ಚ್, 07 ರಂದು ಬೆಳಗ್ಗೆ 10 ಗಂಟೆಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ನಲ್ಲಿ ಕೆಎಎಸ್, ಪಿಡಿಒ, ಬ್ಯಾಂಕ್, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪೀಸಿ, ಗ್ರಾಮ ಅಡಳಿತ ಅಧಿಕಾರಿ ಹಾಗೂ ಇತರೆ ನೇಮಕಾತಿ ಪರೀಕ್ಷೆಗಳ ಬಗ್ಗೆ ನುರಿತ ವಿಷಯ ತಜ್ಞರಿಂದ ಉಚಿತ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಆಸಕ್ತರು http://tinyurl.com/FREE-AWARENESS-WORKSHOP ಲಿಂಕ್ ಕ್ಲಿಕ್ ಮಾಡಿ ಅಥವಾ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಿ ಈ ಉಚಿತ ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‍ನ ಕಾರ್ಯದರ್ಶಿ ಹೆಮ್ಮಿಗೆ ಮೋಹನ್ ತಿಳಿಸಿದ್ದಾರೆ.
ವಿರಾಜಪೇಟೆ ಫೆ.29 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಉಪನ್ಯಾಸಕ ಟಿ.ಎಲ್.ತ್ಯಾಗರಾಜು, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 43 ನದಿನಗಳ ರಾಜ್ಯವ್ಯಾಪಿ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಕಾರಾತ್ಮಕವಾದ ಸ್ಪಂದನೆ ನೀಡಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಮ್ಮ ಬೇಡಿಕೆಗೆ ಮಾಹಿತಿ ನೀಡಿದಕ್ಕೆ ಅಭಿನಂದನೆ ಸಲ್ಲಿಸಿದರು. 2009 ಜುಲೈ 11 ರ ಒಳಗೆ ಎಂ.ಫೀಲ್ ಮುಗಿಸಿದವರು ಯುಜಿಸಿ ಮಾನದಂಡಕ್ಕೆ ಅರ್ಹತರಾಗಿದ್ದು, ಅವರನ್ನು ನೆಟ್ ಮತ್ತು ಸ್ಲೆಟ್ ಸಮಾನರು ಎಂದು ಆದೇಶ ಮಾಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕರ ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಿಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಯಾವ ತೊಂದರೆ ಅಗದಂತೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಕಾಲೇಜಿನ ಅತಿಥಿ ಉಪನ್ಯಾಸಕರುಗಳಾದ ಡಾ.ಪ್ರಭು, ಎಂ.ಎನ್.ಮೋಹನ್ ಕುಮಾರ್, ಕೆ.ಎಸ್ ಕಾರ್ಯಪ್ಪ, ಸುಮಯ್ಯ…
ಸಿದ್ದಾಪುರ ಫೆ.29 NEWS DESK : ಅಮ್ಮತಿ ಸಮೀಪದ ಪುಲಿಯೇರಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕ ಮಹೋತ್ಸವವು ಮಾ.7 ರಿಂದ 11ರ ವರಗೆ ನಡೆಯಲಿದೆ. ಮಾ.7 ರಂದು ಸಂಜೆ 5ಘಂಟೆಯಿಂದ ಅಚಾರ್ಯವರಣಂ, ದೀಪಾರಾಧನೆ, ಅನ್ನ ಸಂತರ್ಪಣೆ ಪೂಜೆ ನಡೆಯಲಿದೆ. ಮಾ.8 ರಂದು ಬೆಳಿಗ್ಗೆಯಿಂದ ಗಣಪತಿ ಹೋಮ, ಉಷಾ ಪೂಜೆ, ಕಳಸ ಪೂಜೆ, ಮಹಾಪೂಜೆ ಸಂಜೆ ದೀಪಾರಾಧನೆ, ಸರ್ವ ಐಶ್ವರ್ಯ ಪೂಜೆ, ಅತ್ತಾಯ ಪೂಜೆ ರಾತ್ರಿ ಹತ್ತು ಗಂಟೆಯಿಂದ ಶಿವರಾತ್ರಿ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ ಮಾ.9 ಮತ್ತು 10ರಂದು ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. 11 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ, ಮಹಾ ಪೊಂಗಲ, ಮಹಾಪೂಜೆ, ಮಹಾ ಕುರದಿ, ಸಂಜೆ ಮೂರು ಗಂಟೆಗೆ ಚೆಂಡೆ ವಾದ್ಯಗಳೊಂದಿಗೆ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ, ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದಿಂದ ಗುಹ್ಯ ಅಗಸ್ತೇಶ್ವರ ದೇವಾಲಯದ ಸಮೀಪದ…
ಸುಂಟಿಕೊಪ್ಪ ಫೆ.29 NEWS DESK : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹೊರಡಿಸಿರುವ ಹರಾಜು ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಅದರಂತೆ ಮುಂದುವರಿಯುತ್ತೇವೆ ಎಂದು ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹೇಳಿದ್ದಾರೆ. ಸುಂಟಿಕೊಪ್ಪ ಗ್ರಾ.ಪಂ ಸರ್ವ ಸದಸ್ಯರ ಸಭೆಯು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಹಾಗೂ ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಪಿ.ಆರ್.ಸುನಿಲ್ ಕುಮಾರ್ ಪಂಚಾಯಿತಿಯಲ್ಲಿನ ಕೆಲವು ಸದಸ್ಯರ ಗೊಂದಲ ಮತ್ತು ಅನಾವಶ್ಯಕವಾದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕುವ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ಹಳೆಬರು ಮತ್ತು ಹೊಸಬರು ಎಂಬುದು ಹರಾಜು ಪ್ರಕ್ರಿಯೆಯಲ್ಲಿ ಇಲ್ಲ ಬದಲಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಸಮಾನ ಅವಕಾಶ ಮತ್ತು ಹಕ್ಕುಗಳು ಇರುತ್ತವೆ ಎಂದು ಸುನಿಲ್ ಕುಮಾರ್ ಸ್ಪಷ್ಟವಾಗಿ ನುಡಿದರು. ಪಂಚಾಯಿತಿ ಸದಸ್ಯ ರಫೀಕ್ ಖಾನ್ ಮಾತನಾಡಿ, ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ…
ಸುಂಟಿಕೊಪ್ಪ ಫೆ.28 NEWS DESK : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೈಕ್ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಪಡಿಲು ಸಮೀಪದ ಬಜಲು ಎಂಬಲ್ಲಿನ ನಿವಾಸಿ ಹಿಜಾಜ್ ಆಹ್ಮದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಸುಳಿವಿನ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಕಳ್ಳತನವಾಗಿದ್ದ ಬೈಕ್ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಮುಖ್ಯ ಸಿಬ್ಬಂದಿ ಸತೀಶ್, ಜಗದೀಶ್, ಉದಯ್, ಲೀಲಾವತಿ, ಪ್ರವೀಣ್, ಸತೀಶ್ ಬಿಳಿಕೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸೋಮವಾರಪೇಟೆ ಫೆ.28 NEWS DESK : ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಸ್ಟ್ಯಾಂಡ್ ಅನ್ನು ಬುಧವಾರ ಅಳವಡಿಸಲಾಯಿತು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಲ್ಲಲ್ಲಿ ಕಸವನ್ನು ಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಕೆಲ ಸ್ಥಳಗಳಲ್ಲಿ ಪರಿಸರಕ್ಕೂ ಹಾನಿಯಾಗುತ್ತಿದೆ. ಇದನ್ನು ಮನಗೊಂಡ ನಮ್ಮ ಸಂಸ್ಥೆ ಕೆಲವು ಕಡೆ ತ್ಯಾಜ್ಯ ಸಂಗ್ರಹ ಸ್ಟ್ಯಾಂಡ್ ಅಳವಡಿಸಲಾಗುತ್ತಿದೆ ಎಂದು ಕ್ಲಬ್‌ನ ಅಧ್ಯಕ್ಷೆ ಸಂದ್ಯಾರಾಣಿ ಹೇಳಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಕ್ಲಬ್‌ನ ಕಾರ್ಯದರ್ಶಿ ತನ್ಮಯಿ ಪ್ರವೀಣ್, ಎಡಿಟರ್ ಸುವಿನ ಕೃಪಾಲ್, ಮಾಜಿ ಅಧ್ಯಕ್ಷೆ ಆಶಾ ಯೋಗೇಂದ್ರ, ಸದಸ್ಯರಾದ ಲತಾ ನಾಗೇಶ್, ಕಾವೇರಿ ಸುರೇಶ್, ಲತಾ ಮಂಜು, ವನಿತಾ ಜಯರಾಂ ಇದ್ದರು.
ಮಡಿಕೇರಿ ಫೆ.28 NEWS DESK : ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ರೋಟರಿ ಮಿಸ್ಟಿಹಿಲ್ಸ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಜಿಲ್ಲಾ ವಿಕಲಚೇತನರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವೀಲ್‍ಚೇರ್ ವಿತರಣಾ ಕಾರ್ಯಕ್ರಮವು ಫೆಬ್ರವರಿ, 29 ರಂದು ಬೆಳಗ್ಗೆ 11 ಗಂಟೆಗೆ ನಗರದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸುಂಟಿಕೊಪ್ಪ, ಫೆ.29 NEWS DESK : ಲೆಪ್ಟಿನೆಂಟ್ ಜನರಲ್ ಡಾ.ಬಿಎನ್‍ಬಿಎಂ ಪ್ರಸಾದ್ ಎಸ್‍ಎಂ, ವಿಎಸ್‍ಎಂ ಅವರಿಗೆ ಡಾ.ಕೊಯಿಲೋ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಖಿಲ ಭಾರತೀಯ ತಜ್ಞವೈಧ್ಯರ ಸಂಘವು ನವದೆಹಲಿಯ ಭಾರತ ಮಂಡಪಂ ಸಭಾಂಗಣದಲ್ಲಿ ನಡೆಸಿದ ತನ್ನ 79ನೇ ರಾಷ್ಟ್ರೀಯ ಅಧಿವೇಶನದಲ್ಲಿ ಡಾ.ಪ್ರಸಾದ್ ಅವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಿದೆ. ಇದೇ ಸಂದರ್ಭದಲ್ಲಿ ಡಾ. ಪ್ರಸಾದ್ ಅವರು ಸಮಾವೇಶದಲ್ಲಿ ಶ್ವಾಸಕೋಶದ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಕುರಿತು ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅವರು, ಅಖಿಲ ಭಾರತೀಯ ತಜ್ಞವೈಧ್ಯರ ಸಂಘದ ಮಾಜಿ ಅಧ್ಯಕ್ಷ ಮತ್ತು ರಾಯಲ್ ಕಾಲೇಜ್ ಆಫ್ ಪಿಜಿಶಿಯನ್ಸ್ ಗ್ಲಾಸ್ಗೋದ ಅಂತರಾಷ್ಟ್ರೀಯ ನಿರ್ದೇಶಕ ಡಾ.ಮುರುಗನಾಥನ್ ಅವರ ಕೃತಿ ‘ಹೈಪರ್ ಟೆನ್ಷನ್ ಮ್ಯಾನುವೆಲ್” ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಕೃತಿಕಾರ ಡಾ.ಮುರುಗನಾಥನ್, ರಾಯಲ್ ಕಾಲೇಜ್ ಆಫ್ ಪಿಜಿಶಿಯನ್ಸ್ ಗ್ಲಾಸ್ಗೋದ ಉಪಾಧ್ಯಕ್ಷ ಪ್ರೋಫೆಸರ್ ಹ್ಯಾನಿ ಎಟಿಬಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಲೆಪ್ಟಿನೆಂಟ್ ಜನರಲ್…






