ಲೇಖಕ: admin

ಸುರತ್ಕಲ್ ಫೆ.28 NEWS DESK : ಹತ್ತನೇ ತರಗತಿ ಇಂಗ್ಲೀಷ್ ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಮನೆಗೆ ಮರಳದೆ ನಾಪತ್ತೆಯಾಗಿದ್ದ ಸುರತ್ಕಲ್ ನ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಹಳೆಯಂಗಡಿಯ ಕೊಪ್ಪಳ ಆಣೆಕಟ್ಟೆ ರೈಲ್ವೆ ಸೇತುವೆಯ ಕೆಳಭಾಗದ ನದಿಯಲ್ಲಿ ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ಸುರತ್ಕಲ್ ಅಗರಮೇಲ್ ನ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ನಿರೂಪ (15) ಹಾಗೂ ಚಿತ್ರಾಪುರದ ಅನ್ವಿತ್ (15) ಮೃತ ದುರ್ದೈವಿಗಳು. ಇವರು ಮಂಗಳವಾರ ಶಾಲೆಯಿಂದ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನದಿಗೆ ಈಜಲು ತೆರಳಿದ ಸಂದರ್ಭ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Read More

ಮಡಿಕೇರಿ ಫೆ.28 NEWS DESK : ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ನ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ, ನಗರ ಬಿಜೆಪಿ, ವಿವಿಧ ಮಂಡಲಗಳು, ಎಸ್ ಸಿ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಹಾಗೂ ನಗರಸಭೆಯ ಬಿಜೆಪಿ ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಫೆ.28 NEWS DESK : ಬಹು ವರ್ಷದ ಬೇಡಿಕೆಯಾಗಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ ಕಾಮಗಾರಿಗೆ ಫೆ.29 ರಂದು  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಭೂಮಿ ಪೂಜೆ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಗೋಣಿಕೊಪ್ಪ ಬಸ್ ನಿಲ್ದಾಣ  ನಡೆಯಲಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯರು, ಡಿಸಿಸಿ ಸದಸ್ಯರು, ಎಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಲಯ ಹಾಗೂ ಬೂತ್ ಅಧ್ಯಕ್ಷರುಗಳು, ಪಕ್ಷದ ಜವಾಬ್ದಾರಿ ವಹಿಸಿರುವ ನಾಯಕರುಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸುವಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್  ಮನವಿ ಮಾಡಿದ್ದಾರೆ.

Read More

ಬೆಂಗಳೂರು ಫೆ.28 NEWS DESK : ಎಫ್.ಎಸ್.ಎಲ್ ವರದಿ ಬಂದ ನಂತರ ಘೋಷಣೆ ಕೂಗಿದ್ದು, ನಿಜವೇ ಆಗಿದ್ದರೆ ಈ ಬಗ್ಗೆ ಗಂಭೀರ ಕ್ರಮ ವಹಿಸಲಾಗುವುದು. ಪಾಕಿಸ್ತಾನದ ಪರವಾಗಿ ಘೋಷಣೆ ನಿಜವೇ ಆಗಿದ್ದರೆ ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಮಾತನಾಡಿದರು. ರಾಷ್ಟ್ರದ ವಿರುದ್ಧ ಘೋಷಣೆ ಕೂಗಿರುವುದು ಸಾಭೀತಾದರೆ ಯಾರೇ ಆಗಲಿ ಕಠಿಣ ಕ್ರಮ ವಹಿಸಲಾಗುವುದು ಎಂದರು. ವಿಧಾನಸೌಧದಲ್ಲಿ ಈ ಘಟನೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಕೂಗುವವರಿಗೆ ಇಲ್ಲಿಯಾದರೇನು, ಎಲ್ಲಾದರೇನು ? ನಿಜ ಆಗಿದ್ದರೆ ಕಠಿಣ ಕ್ರಮ ಆಗುತ್ತದೆ ಎಂದರು.

Read More

ನಾಪೋಕ್ಲು ಫೆ.28 NEWS DESK : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೊಂಬಂಡ ಸೀತಾರಾಮ (ಸಾಬು) ಅವರಿಗೆ ಸಂಘದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಸಂಘದ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಶಾಲು ಹೊದಿಸಿ ಫಲ ತಾಂಬೂಲ ಕಿರು ಕಾಣಿಕೆ ನೀಡಿ ಸನ್ಮಾನಿಸಿ, ಬೀಳ್ಕೊಟ್ಟರು. ಈ ಸಂದರ್ಭ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಸಂಘದಲ್ಲಿ 30 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಕೊಂಬಂಡ ಸೀತಾರಾಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿದರು. ಅಲ್ಲದೆ ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೆಟೋಳಿರ ಎಸ್ .ಪೂವಯ್ಯ, ಉಪಾಧ್ಯಕ್ಷೆ ಕುಂಡ್ಯೋಳಂಡ ಎಂ.ಕವಿತಾ , ನಿರ್ದೇಶಕರಾದ ಕೆಲೇಟಿರ ಬಿ.ಮುತ್ತಮ್ಮ , ಚಿಯಕಪೂವಂಡ ಎನ್. ಸತೀಶ್ ದೇವಯ್ಯ, ಚೋಕಿರ ಬಿ.ಪ್ರಭು ಪೂವಪ್ಪ, ಹೆಚ್.ಎ.ಬೊಳ್ಳು , ಶಿವಚಾಳಿಯಂಡ ಎಂ.ಅಂಬಿ…

Read More

ಮಡಿಕೇರಿ ಫೆ.28 NEWS DESK :  ಮಡಿಕೇರಿಯ ಅಮೃತ ಇ.ಎನ್.ಟಿ ಮತ್ತು ವರ್ಟಿಗೋ ಕ್ಲಿನಿಕ್, ಕಾವೇರಿ ಹಿಯರಿಂಗ್ ಕ್ಲಿನಿಕ್, ಜಿ.ಎನ್.ರಿಸೌಂಡ್ ಹಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಂಯುಕ್ತಾಶ್ರಯದಲ್ಲಿ ಮಾ.3 ರಂದು ಉಚಿತ ಇಎನ್‍ಟಿ ಮತ್ತು ಶ್ರವಣ ತಪಾಸಣಾ ಶಿಬಿರ ನಡೆಯಲಿದೆ ಎಂದು ಶ್ರವಣ ತಜ್ಞ ಡಾ. ಮೋಹನ್ ಅಪ್ಪಾಜಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಕಾಫಿ ಕೃಪಾ ಬಿಲ್ಡಿಂಗ್ ನಲ್ಲಿರುವ ಅಮೃತ ಇಎನ್‍ಟಿ, ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ನಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಶಿಬಿರದಲ್ಲಿ ಉಚಿತ ಇ.ಎನ್.ಟಿ, ಶ್ರವಣ ತಪಾಸಣೆಯೊಂದಿಗೆ 40 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ನಡೆಯಲಿದ್ದು, ತಜ್ಞ ವೈದ್ಯರಿಂದ ಮಧುಮೇಹ, ಆಹಾರ ಸಮಾಲೋಚನೆ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಕೂಡ ಮಾಡಲಾಗುವುದೆಂದರು. ಅಲ್ಲದೆ ಹಳೆಯ ಶ್ರವಣ ಸಾಧನಗಳನ್ನು ಬದಲಾಯಿಸಲು ಅವಕಾಶ ಇರುವುದಾಗಿ ತಿಳಿಸಿದರು. ಆಸಕ್ತರು ಮಾ.2ರ…

Read More

ಮಡಿಕೇರಿ ಫೆ.28  NEWS DESK : ಅಮ್ಮತಿಯಲ್ಲಿ ನಡೆದ ಅಮೃತ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಸೀಸನ್-2 ರಲ್ಲಿ ಟೀಮ್ ಕಾರ್ಣಿಕ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಮರ್ಸಿಲೆಸ್ ಪಡೆದು ಕೊಂಡರೆ, ಉತ್ತಮ ತಂಡವಾಗಿ ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಪಡೆದುಕೊಂಡಿತು. ಅಮ್ಮತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಅಮೃತ ಯುವ ಮೊಗೇರ ಸೇವಾ ಸಮಾಜ ಸಿದ್ದಾಪುರ ಹಾಗೂ ಅಮ್ಮತಿ ಹೋಬಳಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ಟೀಮ್ ಕಾರ್ಣಿಕ ಕೊಡಗು ತಂಡದ ವಿರುದ್ಧ 9 ವಿಕೆಟ್ ಗಳ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯವು ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಹಾಗೂ ಮರ್ಸಿಲೆಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ…

Read More

ಸುಂಟಿಕೊಪ್ಪ,ಫೆ.28 NEWS DESK :  ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಿವೈಸಿ ಮಳ್ಳೂರು ತಂಡವು ಪ್ರಶಸ್ತಿಯನ್ನು ಮುಂಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಬಿಲಾಲ್ ಫ್ರೆಂಡ್ಸ್ ನಾಕೂರು, ತೃತೀಯ ಸ್ಥಾನವನ್ನು ಸಂತೋಷ್ ಫ್ರೆಂಡ್ಸ್ ತಂಡವು ಪಡೆದುಕೊಂಡಿತು. ಸ್ಥಳೀಯ ಪರುಷರಿಗೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಎಫ್.ವೈ.ಸಿ.ಎ ಪ್ರಥಮ, ಎಫ್.ವೈ.ಸಿ. ಬಿ. ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಕ್ಕಳ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಸವೆಂತ್ ಸ್ಟಾರ್, ದ್ವಿತೀಯ ಸ್ಥಾನವನ್ನು ರಾಯಲ್ ಅಫಶೀಯಲ್ಸ್ ಪಡೆದುಕೊಂಡಿತು. ಸ್ಥಳೀಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಸಮುದಾಯ ಸಂಘ ಮಂಜಿಕೆರೆ ತಂಡ ಪ್ರಥಮ, ಎಫ್.ವೈ.ಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಂಬ್ ಇನ್‍ದ ಸಿಟಿ ಪ್ರಥಮ ನೀತು, ದ್ವಿತೀಯ ಬೀನಾ ಬಾರಿಕೆ ಪಡೆದುಕೊಂಡರು, ಪಾಸಿಂಗ್‍ದ ಬಾಲ್ ವಾಣಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ರಮ್ಯ ಪಡೆದರು. ಸ್ಥಳೀಯ…

Read More

ಮಡಿಕೇರಿ ಫೆ.28 : ನಗರಸಭೆಯ 2024-25 ನೇ ಸಾಲಿನ ಆಯವ್ಯಯ ತಯಾರಿಸುವ ಸಲುವಾಗಿ ಆದಾಯ ಮತ್ತು ಖರ್ಚುಗಳ ಬಗ್ಗೆ ಸೂಕ್ತ ಸಲಹೆ ಸೂಚನೆ ಪಡೆಯಲು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಗೆ ಹಿರಿಯ ನಾಗರಿಕರು, ನೋಂದಾಯಿತ ಸಂಘ ಸಂಸ್ಥೆಗಳು, ಎನ್‍ಜಿಒಗಳು ಮತ್ತು ಮಾಜಿ ಚುನಾಯಿತ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ ಆಸಕ್ತಿಯುಳ್ಳ ಸಾರ್ವಜನಿಕರು ಹಾಜರಾಗಿ ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ನಗರಸಭೆ ಪೌರಾಯುಕ್ತರಾದ ವಿಜಯ್ ಕೋರಿದ್ದಾರೆ.

Read More

ಮಡಿಕೇರಿ ಫೆ.27 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ತಿಳಿಸಿದ್ದಾರೆ. ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳಾಗಿ ಡಿ.ಕೆ.ತಿಮ್ಮಪ್ಪ ಕುಶಾಲನಗರ, ಬಿ.ಎಸ್.ಚಂದ್ರಶೇಖರ್ ಹಳ್ಳಿಗಟ್ಟು, ಕೋಲೆಯಂಡ ಗಿರೀಶ್ ಕಡಂಗ, ಟಿ.ಜಿ.ಮನು ಪೊನ್ನಂಪೇಟೆ, ಪಿ.ಎನ್.ಗಂಗಾಧರ್ ಮಾಲಂಬಿ, ಕಾರ್ಯದರ್ಶಿಗಳಾಗಿ ಕೆ.ರಾಜೇಶ್ ಗೋಣಿಕೊಪ್ಪ, ಸತೀಶ್ ಕುಂದಾರ್ ಕುಶಾಲನಗರ, ಬಿ.ಎಂ.ರಾಜೇಶ್ ಮಡಿಕೇರಿ, ಕೆ.ಎಸ್.ಸರಸ್ವತಿ ಎಂ.ಬಾಡಗ, ಬಿ.ಡಿ.ಪದ್ಮನಾಭ ಸುಂಟಿಕೊಪ್ಪ ನೇಮಕಗೊಂಡಿದ್ದಾರೆ. ಖಜಾಂಚಿಯಾಗಿ ಬಿ.ವಿ.ರೋಶನ್ ಮಡಿಕೇರಿ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಿನಿತ್ ಕುಲಾಲ್ ನಲ್ವತ್ತೆಕ್ರೆ ಹಾಗೂ ಕಾರ್ಯಾಲಯ ಕಾರ್ಯದರ್ಶಿಯಾಗಿ ಜಿ.ಜಿ.ಬಾಲಕೃಷ್ಣ ಮಡಿಕೇರಿ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಎಂ.ಎಂ.ಲಿಜೇಶ್ ಅಮ್ಮತ್ತಿ, ಬಿ.ಟಿ.ಕೃಷ್ಣಪ್ಪ ಪೂಜಾರಿ ರ‍್ವತ್ತೋಕ್ಲು, ಕೆ.ಎಂ.ಮಣಿಕಂಠ ಪಾರಾಣೆ, ಬಿ.ಎಸ್.ಅರುಣ ಕೆದಮುಳ್ಳೂರು, ಬಿ.ಕೆ.ಪ್ರದೀಪ್ ಮರಗೋಡು, ಟಿ.ಎಸ್.ಅಕ್ಷಯ್ ಗೋಣಿಕೊಪ್ಪ, ಬೈಲುಗುಂದರ ಮನು ಮೇದಪ್ಪ ಪಾರಾಣೆ, ಬಿ.ಬಿ.ನಳಿನಿ ಮಡಿಕೇರಿ, ಉಮಾಪ್ರಭ ನಾಪೋಕ್ಲು, ಸಿ.ಕೆ.ಬಾಲಕೃಷ್ಣ ಮಡಿಕೇರಿ, ಸುದೀಶ್ ಪುಲಿಯೇರಿ…

Read More