ಮಡಿಕೇರಿ ಫೆ.27 NEWS DESK : ಕಳೆದ ಒಂದು ತಿಂಗಳ ಕಾಲ ನಡೆದ ಸಂವಿಧಾನ ಜಾಗೃತಿ ಜಾಥಾ ಯಶಸ್ವಿ ಅನುಷ್ಠಾನಕ್ಕಾಗಿ ಕೊಡಗು ಜಿಲ್ಲೆಗೆ ಪ್ರಶಸ್ತಿ ಲಭಿಸಿರುವುದು ಶ್ಲಾಘನಾರ್ಹ. ಜಾಥಾ ಯಶಸ್ಸಿಗಾಗಿ ಶ್ರಮಿಸಿದ ಅಧಿಕಾರಿಗಳು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೂ ಕಾಳಜಿ ತೋರಲಿ ಎಂದು ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರು ಹಾಗೂ ಸಂವಿಧಾನ ಜಾಗೃತಿ ಜಾಥಾದ ಸದಸ್ಯರೂ ಆದ ಜೆ.ಎಲ್.ಜನಾರ್ಧನ್ ಮನವಿ ಮಾಡಿದ್ದಾರೆ. ಪ್ರಶಸ್ತಿ ಲಭಿಸಿದ ಬಗ್ಗೆ ಹರ್ಷ ಹಂಚಿಕೊAಡ ಅವರು, ಜನರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಜಾಥಾ ಆಯೋಜಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಕ್ರಮ ಸ್ವಾಗತಾರ್ಹ ಮತ್ತು ಕೃತಜ್ಞತೆಗೆ ಪಾತ್ರವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು, ಎರಡು ಕ್ಷೇತ್ರಗಳ ಶಾಸಕದ್ವಯರು, ಜಿಲ್ಲಾಡಳಿತ, ಜಿ.ಪಂ, ಎಲ್ಲಾ ಸ್ಥಳೀಯ ಸಂಸ್ಥೆಗಳು, ದಲಿತ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘನೆಗಳು, ಅಧಿಕಾರಿಗಳು ಹಾಗೂ ಜನರ ಸಹಕಾರದಿಂದ ಜಾಥಾ…
ಲೇಖಕ: admin
ಬೆಂಗಳೂರು ಫೆ.27 NEWS DESK : ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ವಿರಾಜಪೇಟೆ ಫೆ.27 NEWS DESK : ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡು ನಮ್ಮೊಳಗೆ ಬೆಳಕು ತರುವಂತದ್ದೇ ಧರ್ಮ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಅಭಿಪ್ರಾಯಪಟ್ಟರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಜ್ಞಾನ ಗಂಗಾ ಭವನದ ವತಿಯಿಂದ 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವದ ಪ್ರಯುಕ್ತ ವಿರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಅಂತರಂಗದಲ್ಲಿರುವ ಅಜ್ಞಾನ ತೊಲಗಿಸಿ ಜ್ಞಾನದ ಚಕ್ಷು ಬೀರಬೇಕು. ಜ್ಞಾನದ ಚಕ್ಷು ಇಲ್ಲದೆ ಸಿರಿಸಂಪತ್ತು, ಸಾಮ್ರಾಜ್ಯ, ತಂದಿಟ್ಟರೂ ಅದನ್ನು ಅನುಭವಿಸಲು ಹೊರಟಾಗ ನಮಗೆ ಶೂನ್ಯವೇ ಲಭಿಸುತ್ತದೆ. ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳಲ್ಲಿ ತೊಡಗಿಸಿಕೊಂಡು ಜೀವನ ಎನೂ ಎಂಬುವುದನ್ನು ಮರೆತಿದ್ದಾರೆ. ತಾನು ಬದುಕುವುದರ ಜೊತೆಗೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ದ್ವೇಷ ತೊಡೆದು ಹಾಕಬೇಕು. ಜಗತ್ತು ನನ್ನದು ಅಂತ ಪರಿಭಾವಿಸುವವನು ಜಗದ್ಗುರು…
ನಾಪೋಕ್ಲು ಫೆ.27 NEWS DESK : ಹೊದ್ದೂರು ಗ್ರಾಮ ಪಂಚಾಯತಿ ಕಚೇರಿ ಹಾಗೂ ಗ್ರಂಥಾಲಯಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರುದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಉಪಾಧ್ಯಕ್ಷರಾದ ಅನುರಾಧ, ಸದಸ್ಯರಾದ ಮೊಣ್ಣಪ್ಪ, ಹಮೀದ್, ಕುಸುಮಾವತಿ, ಕೆ.ಆರ್ ಅನಿತಾ, ವಾಂಚಿರ ಅಜಯ್ ಕುಮಾರ್, ಚೌರೀರ ಅನಿತಾ , ಲಕ್ಷ್ಮಿ, ಮೊಯ್ದು, ಪಿಡಿಒ ಅಬ್ದುಲ್ಲ, ತೆನ್ನಿರ ಮೈನಾ , ಕತ್ತನಿರ ಮೈಸಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಫೆ.27 NEWS DESK : ಹೋದವಾಡ ಗ್ರಾಮದ ಕೊಟ್ಟಮುಡಿ ಮರ್ಕಜುಲ್ ಹಿದಾಯ ಎಜುಕೇಶನ್ (ಸೆಂಟರ್)ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಹೆಣ್ಣು ಮಕ್ಕಳ ವಸತಿ ನಿಲಯದ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಂಡು ಸಂಸ್ಥೆಯ ಮೂಲಕ ಉನ್ನತ ವಿದ್ಯಾಭ್ಯಾಸವನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಉಪಾಧ್ಯಕ್ಷ ಸಿ.ಕೆ.ಅಹಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎ.ಮಹಮ್ಮದ್ ಹಾಜಿ , ಸಂಸ್ಥೆಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ , ಉದ್ಯಮಿ ಇಮ್ರಾನ್, ಜಿ.ಪಂ ಮಾಜಿ ಸದಸ್ಯ ಅಬ್ದುಲ್ ಲತೀಫ್, ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್. ಎ.ಹಂಸ , ಹೊದ್ದೂರು ಗ್ರಾ.ಪಂ ಸದಸ್ಯ ಮೊಯಿದು ಕೊಟ್ಟಮುಡಿ, ಹಮೀದ್ ಕಬಡಕೇರಿ ಹಾಗೂ ಸಂಸ್ಥೆಯ ನಿರ್ದೇಶಕರು, ಬೋಧಕರು, ಬೋಧಕೆತರ ಸಿಬ್ಬಂದಿಗಳು ,ಪೋಷಕರು, ವಿದ್ಯಾರ್ಥಿಗಳು , ಸಾರ್ವಜನಿಕರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.
ವಿರಾಜಪೇಟೆ ಫೆ.27 NEWS DESK : ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ “ತಂಬಾಕು ಉತ್ಪನ್ನಗಳ ಸೇವೆಯಿಂದ ಆಗುವ ದುಷ್ಪರಿಣಾಮ”ಗಳ ಕುರಿತು ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ಪ್ರಾಥಮಿಕ ವಿಭಾಗದ 6ನೇ ತರಗತಿ ವಿದ್ಯಾರ್ಥಿ ವಿ.ಆರ್ನವ್ ಪ್ರಥಮ, 5ನೇ ತರಗತಿ ವಿದ್ಯಾರ್ಥಿಗಳಾದ ಎಂ.ಡಿ.ದೈವಿಕ್ ದ್ವಿತೀಯ, ಯಶ್ವಿನ್ ತೃತೀಯ ಸ್ಥಾನ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಜಿ.ಬಿ. ಸ್ಪೂರ್ತಿ ಪೊವಮ್ಮ ಪ್ರಥಮ, ಪಿ. ಬ್ರೀಷ್ ಗಣಪತಿ ದ್ವಿತೀಯ, ಎಸ್. ಎಂ. ಸೋಮಣ್ಣ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎಸ್,ಸುದೇಶ್, ಕಾರ್ಯದರ್ಶಿ ಪಿ.ಎನ್,ವಿನೋದ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಸಂಯೋಜಕಿ ಎನ್. ಬಿ. ಚೈತ್ರ…
ಮಡಿಕೇರಿ ಫೆ.27 NEWS DESK : ಕೊಡಗಿನ ಪ್ರತಿಷ್ಠಿತ ಸಿಐಟಿ ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಟಿಯು ಅಂತರ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಸಿಐಟಿ ಪೊನ್ನಂಪೇಟೆ ಪುರುಷರ ಹಾಕಿ ತಂಡಕ್ಕೆ ವಿಟಿಯು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಪಂದ್ಯಾವಳಿಯಲ್ಲಿ ವಿಟಿಯು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ರಾಜ್ಯದ ವಿವಿಧ ಜಿಲ್ಲೆಗಳ 11 ಕಾಲೇಜುಗಳ ಹಾಕಿ ತಂಡಗಳು ಭಾಗವಹಿಸಿದ್ದವು. ಹಾಜಿ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಸಿಐಟಿ ಪೊನ್ನಂಪೇಟೆ ತಂಡ ಮುಂಚೂಣಿ ಆಟಗಾರ ಸಾತ್ವಿಕ್ ಗಳಿಸಿದ ಏಕೈಕ ಗೋಲಿನಿಂದ ಆರ್‍ವಿಸಿಇ ಬೆಂಗಳೂರು ತಂಡವನ್ನು 1-0 ಗೋಲಿನಿಂದ ಮಣಿಸುವುದರ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಪೈನ್ ಪಂದ್ಯಾವಳಿಗೆ ಮುಖ್ಯಅತಿಥಿಗಳಾಗಿ ಕೊಡವ ಎಜುಕೇಶನ್ ಸೊಸೈಟಿಯ ನಿರ್ದೇಶಕ ಪಟ್ಟಡ ಪೂವಣ್ಣ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ.ಎಂ. ಬಸವರಾಜು, ಕಾಲೇಜು ಆಡಳಿತಧಿಕಾರಿ ಜೀವನ್ ಚಿಣ್ಣಪ್ಪ ಹಾಗೂ ದೈಹಿಕ ಶಿಕ್ಷಕರಾದ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸುಂಟಿಕೊಪ್ಪ, ಫೆ.27 NEWS DESK : ಕ್ರೀಡಾಕೂಟ ಕೇವಲ ಆಟೋಟಗಳಿಗೆ ಸೀಮಿತವಾಗದೆ ಮನೋರಂಜನೆಯೊಂದಿಗೆ ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ನಾಕೂರು-ಶಿರಂಗಾಲ ಗ್ರಾ.ಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಹೇಳಿದರು. ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 24ನೇ ವರ್ಷದ ಕ್ರೀಡೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 24 ವರ್ಷಗಳಿಂದ ಪ್ರೇಂಡ್ಸ್ ಯೂತ್ ಕ್ಲಬ್‍ನ ಕಠಿಣಪರಿಶ್ರಮದೊಂದಿಗೆ ದಾನಿಗಳಿಂದ ಹಿತಾಶೈಗಳಿಂದ ಮತ್ತು ಪ್ರಯೋಜಕರಿಂದ ಕ್ರೀಡಾಕೂಟವನ್ನು ಗ್ರಾಮದ ಹಬ್ಬದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ಬೆಳ್ಳಿಮಹೋತ್ಸವ ಆಚರಣೆಯಲ್ಲಿರುವ ಈ ಸಂಘವು ಮುಂದೆ 50 ಮತ್ತು ಶತಮನೋತ್ಸವ ಪೂರೈಸುವಂತಾಗಲಿ ಎಂದು ಜಗನ್ನಾಥ್ ಹಾರೈಸಿದರು. ಕ್ರೀಡಾಕೂಟ ಕೇವಲ ಸೋಲು ಗೆಲುವಿಗೆ ಸೀಮಿತವಾಗದೆ. ಅದರಲ್ಲಿ ಜೀವನದ ಪಾಠಗಳನ್ನು ಕಲಿಯಬಹುದಾಗಿದೆ. ನಾವು ಮತ್ತು ನಮ್ಮ ಮಕ್ಕಳು ಮೋಬೈಲ್ ದಾಸರಾಗಿದ್ದು, ದಿನದ 24 ಗಂಟೆಯು ಮಕ್ಕಳನ್ನು ಓದು ಓದು ಎಂದು ಹೇಳುತ್ತೇವೆಯೇ ಹೊರತು. ಶರೀರ ಮತ್ತು…
ನಾಪೋಕ್ಲು ಫೆ.27 NEWS DESK : ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡುದುವು ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು. ಕೊಳಕೇರಿ ಗ್ರಾಮದಿಂದ ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 30ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ವಿರಾಜಪೇಟೆ ಕ್ಷೇತ್ರದಾದ್ಯಂತ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಭಿವೃದ್ಧಿ ಕಾರ್ಯವನ್ನು ಗ್ಯಾರೆಂಟಿಗೆ ಹೋಲಿಕೆ ಮಾಡುವುದು ಬೇಡ. ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರೂ ಅಡ್ಡಿಪಡಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು. ಗುಣಮಟ್ಟ ಕಾಪಾಡಿಕೊಂಡು ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆ ದಾರರಿಗೆ ಸೂಚಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಿ ಕಾಮಗಾರಿ ಕಳಪೆ ಆಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ…
ಮಡಿಕೇರಿ ಫೆ.27 NEWS DESK : ತಲಕಾವೇರಿಯ ಶ್ರೀ ತಲಕಾವೇರಿ ದೇವಾಲಯಲ್ಲಿ ಫೆ.28 ರಂದು ಮಧ್ಯಾಹ್ನ 2 ಗಂಟೆಯ ನಂತರ ಸ್ವಚ್ಛತಾ ಕಾರ್ಯದ ಪ್ರಯುಕ್ತ ಶ್ರೀ ತಲಕಾವೇರಿ ದೇವಾಲಯದ ಪ್ರವೇಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ಕೋರಿದ್ದಾರೆ.






