ಲೇಖಕ: admin

ಮಡಿಕೇರಿ ಫೆ.26 NEWS DESK : ಹಿರಿಯ ಪರಿಸರ ಪ್ರೇಮಿ, ವನ್ಯಜೀವಿ ತಜ್ಞ, ನಿವೃತ್ತ ಅರಣ್ಯಾಧಿಕಾರಿ ಕೊಟ್ರಂಗಡ ಎಂ.ಚಿಣ್ಣಪ್ಪ(84) ಅವರು ಸೋಮವಾರ ನಿಧನರಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ನಿವಾಸಿಯಾಗಿದ್ದ ಚಿಣ್ಣಪ್ಪ, 30 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ರಾಜ್ಯದ ಹಲವು ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೆ.ಎಂ.ಚಿಣ್ಣಪ್ಪ ಅವರು ವನ್ಯ ಸಂಪತ್ತು ಲೂಟಿ, ವನ್ಯ ಜೀವಿಗಳ ಕಳ್ಳ ಬೇಟೆ, ಮರ ಕಳ್ಳತನ ಮತ್ತಿತ್ತರ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಿದ್ದರು. ಕೆ.ಎಂ.ಚಿಣ್ಣಪ್ಪ ಅವರ ಅಮೋಘ ಸೇವೆಯನ್ನು ಪರಿಗಣಿಸಿ ಸರಕಾರ 1985ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು. 1990ರ ದಶಕದಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ತಮ್ಮ ಜೀವದ ಹಂಗನ್ನೇ ತೊರೆದು ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದರು. ಚಿಣ್ಣಪ್ಪ ಅವರು ಅರಣ್ಯ ಅಧಿಕಾರಿಯಾಗಿ ಸಲ್ಲಿಸಿದ ಸೇವೆಯ ಕುರಿತು ಲೇಖಕ ಗೋಪಾಲ್ ಎಂಬುವವರು ‘ಕಾಡಿನೊಳಗೊಂದು ಜೀವ’ ಎಂಬ ಪುಸ್ತಕವನ್ನು…

Read More

ಮಡಿಕೇರಿ ಫೆ.26 NEWS DESK : ಕೊಡಗಿನಲ್ಲಿ ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕಿನ ಉದ್ದಕ್ಕೂ ನಿರಂತರವಾಗಿ ಶ್ರಮಿಸಿದ ಪರಿಸರವಾದಿ ಕೆ.ಎಂ.ಚಿಣ್ಣಪ್ಪನವರು ಅರಣ್ಯ ದಂಧೆ ಮಾಡುವವರಿಗೆ ದುಃಸ್ವಪ್ನವಾಗಿದ್ದರು.  ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಬಹಳ ಅಡೆತಡೆಗಳು ಮತ್ತು ಸಂಕಷ್ಟಗಳ ನಡುವೆ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ಶ್ರಮಿಸಿದದ್ದಾರೆ. ತಮ್ಮ ಸೇವಾ ಕಾರ್ಯ ತತ್ಪರತೆ ಹಾಗೂ ನೇರ ನಡೆ ನುಡಿಗೆ ಹೆಸರಾಗಿದ್ದ ಚಿಣ್ಣಪ್ಪನವರು ನಿವೃತ್ತಿ ನಂತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ನಾಡಿನಾದ್ಯಂತ ಸಂಚರಿಸಿ ಶಾಲಾ – ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಉಪನ್ಯಾಸ, ಸಂವಾದ ಹಾಗೂ ಸ್ಲೈಡ್ ಪ್ರದರ್ಶನಗಳ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ  ಜನಮಾನಸದಲ್ಲಿ ಅವರ ಹೆಸರು ಅಜರಾಮವಾಗಿ ಉಳಿದಿದೆ. ಹುಲಿ ಸಂರಕ್ಷಣೆ, ಪಶ್ಚಿಮ ಘಟ್ಟಗಳು ಹಾಗೂ ನಾಗರಹೊಳೆ ಮತ್ತು  ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಯು ತಮ್ಮನ್ನು ಪರಿಸರಕ್ಕಾಗಿ ಸಂಕಲ್ಪ ತೊಡಬೇಕೆಂಬ…

Read More

ಮಡಿಕೇರಿ ಫೆ.26 NEWS DESK :  ಮಂಜಿನ ನಗರಿ ಮಡಿಕೇರಿಯಲ್ಲಿ ಬಿಸಿಲಿನ ಕಾವು ಏರುತ್ತಲೇ ಇದೆ. ಇದರ ಪರಿಣಾಮ ನಗರದ ಕೆಲವು ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳತೊಡಗಿದೆ. ಇಂದು ಮಡಿಕೇರಿ ನಗರದ ಈದ್ಗಾ ಮೈದಾನದಲ್ಲಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಎರಡು ಬಾರಿ ಬೆಂಕಿ ಕಾಣಿಸಿಕೊಂಡಿತು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಗ್ನಿಯನ್ನು ನಿಯಂತ್ರಿಸಿದರು. ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಅರಣ್ಯ ಮತ್ತು ಕಾಫಿ ತೋಟಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಆತಂಕ ಮೂಡಿದೆ. ಸಾರ್ವಜನಿಕರು ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳದೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Read More

ಮಡಿಕೇರಿ ಫೆ.26 NEWS DESK: ಸತತ 4 ಸಾಮಾನ್ಯ ಸಭೆಗೆ ಗೈರು ಹಾಜರಾದ ಪೊನ್ನಂಪೇಟೆ ಗ್ರಾ.ಪಂ ಸದಸ್ಯೆ ಪಿ.ಆರ್.ಮಂಜುಳ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಪೊನ್ನಂಪೇಟೆ ಗ್ರಾ.ಪಂ ಯ 5ನೇ ವಾರ್ಡ್ ಕಾಟ್ರಕೊಲ್ಲಿಯ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು. ಪ್ರಕರಣ ಸಂಖ್ಯೆ 43ರ ಅಡಿಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಮಂಜುಳಾ ಅವರನ್ನು ಅನರ್ಹಗೊಳಿಸಿ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದ ಪಿ.ಆರ್.ಮಂಜುಳ ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿತರಿಗೆ ಅಡ್ಡ ಮತದಾನ ಮಾಡಿದ್ದರು ಎನ್ನುವ ಆರೋಪವೂ ಇದೆ. ಪೊನ್ನಂಪೇಟೆ ಗ್ರಾ.ಪಂ ಒಟ್ಟು 20 ಸದಸ್ಯ ಬಲವನ್ನು ಹೊಂದಿದ್ದು, ಮಂಜುಳ ಸೇರಿ ಬಿಜೆಪಿ ಬಲ 11 ಮತ್ತು ಕಾಂಗ್ರೆಸ್ ಬಲ 9 ಇದೆ.

Read More

ಮಡಿಕೇರಿ ಫೆ.26 NEWS DESK :  ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಕೊಪ್ಪದಲ್ಲಿ ನಡೆದಿದೆ. ಸೂರ್ಲಬ್ಬಿ ಗ್ರಾಮದ ಅಡ್ಡಂಡ ಪೊನ್ನಪ್ಪ ಹಾಗೂ ಪವಿತ್ರ ದಂಪತಿಯ ಪುತ್ರ ದೇವಯ್ಯ (9) ಮೃತ ದುರ್ದೈವಿ. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದ್ದು, ತಕ್ಷಣ ಆಸ್ಪತ್ರೆಗೆ ಕರೆ ತರಲಾಯಿತ್ತಾದರೂ ಜೀವ ಉಳಿಯಲಿಲ್ಲ ಎಂದು ತಿಳಿದು ಬಂದಿದೆ. ದೇವಯ್ಯ ಕುಶಾಲನಗರದ ಖಾಸಗಿ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

Read More

ಮಡಿಕೇರಿ ಫೆ.26 NEWS DESK :  ಟಿ.ಎಂ.ವಿಜಯಭಾಸ್ಕರ್ ಅವರು ಸಲ್ಲಿಸಿರುವ ಆಡಳಿತ ಸುಧಾರಣೆ ವರದಿಯನ್ನು ತಕ್ಷಣಕ್ಕೆ ಜಾರಿ ಮಾಡುವುದಿಲ್ಲ ಎಂದು ಅರಣ್ಯ ಸಚಿವರು ದೂರವಾಣಿ ಮೂಲಕ ನನಗೆ ತಿಳಿಸಿದ್ದಾರೆ. ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸೂಕ್ತ ಕ್ರಮವನ್ನು ಜರುಗಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಆದ್ದರಿಂದ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಪ್ರತಿಭಟನಾ ನಿರತರಿಗೆ ಅಭಯ ನೀಡಿದ್ದಾರೆ. ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀದರರ ಅಸೋಸಿಯೇಷನ್ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ಅರಣ್ಯ ಪದವೀದರ ವಿದ್ಯಾರ್ಥಿಗಳ ವೃತ್ತಿ ಜೀವನ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಅರಣ್ಯ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಿ ಪುರಸ್ಕರಿಸಬೇಕೆಂದು ತಾವು ಮುಖ್ಯಮಂತ್ರಿಗಳು, ಅರಣ್ಯ ಮತ್ತು ಕೃಷಿ ಸಚಿವರಿಗೆ ಪತ್ರವನ್ನು ಬರೆದಿದ್ದೇನೆ ಎಂದು ತಿಳಿಸಿದರು. ನಾನು ಕೂಡ ಕಾನೂನಾತ್ಮಕವಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು…

Read More

ಮಡಿಕೇರಿ ಫೆ.26 NEWS DESK :  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.1 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಸ್ ಕಲ್ಪಿಸಲು ಕೆಎಸ್‌ಆರ್‌ಟಿಸಿ  ಮಡಿಕೇರಿ ಘಟಕ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ  ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಸ್‍ಗಳಲ್ಲಿ ಜನದಟ್ಟಣೆ ಹೆಚ್ಚು ಇದೆ ಎಂದು ಬಸ್ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸದೆ ಹೋಗಬಾರದು, ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬರಬೇಕು. ಈಗಾಗಲೇ ಸರ್ಕಾರ ಪರೀಕ್ಷೆಗೆ ತೆರಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ಪ್ರವೇಶ ಪತ್ರ’ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದು, ಮತ್ತಿತರ ಅಗತ್ಯ…

Read More

ಮಡಿಕೇರಿ ಫೆ.26 NEWS DESK : ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲಾದ ಘಟನೆ ಕುಶಾಲನಗರದ ಕಣಿವೆಯಲ್ಲಿ ನಡೆದಿದೆ. ಮೈಸೂರು ಮೂಲದ ವಿದ್ಯಾರ್ಥಿ ಹೃತ್ವಿಕ್  (16) ಮೃತ ದುರ್ದೈವಿ. ಪಿರಿಯಾಪಟ್ಟಣ ತಾಲ್ಲೂಕಿನ ಚೆನ್ನಕೇಶವಪುರದ ತನ್ನ ಸ್ನೇಹಿತನ ಮನೆಗೆ ಭಾನುವಾರ ಬಂದಿದ್ದ ಹೃತ್ವಿಕ್ ಬೆಟ್ಟದಪುರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ. ಬಳಿಕ ಸೋಮವಾರ ಸ್ನೇಹಿತರೊಂದಿಗೆ ಕೂಡಿಗೆ ಬಳಿಯ ಕಣಿವೆ ಗ್ರಾಮಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಸ್ನೇಹಿತರ ಜೊತೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವನ್ನು ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದು,  ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಡಂಗ ಫೆ.26 NEWS DESK :  ಜ್ಞಾನ, ವಿನಯ, ಸೇವೆ ಎಂಬ ವಾಕ್ಯದಡಿ ಕಾರ್ಯಚರಿಸುತ್ತಿರುವ ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ಅಧೀನದಲ್ಲಿರುವ ಸಂಘಟನೆಯಾದ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲೆಯ ನೂತನ ಅಧ್ಯಕ್ಷರಾಗಿ ಯುವ ಭಾಷಣಗಾರರದ ಮುಹಮ್ಮದ್ ಸುಹೈಬ್ ಫೈಝಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಬಾಕವಿ ಕೊಡಗರಹಳ್ಳಿ, ಕೋಶಾಧಿಕಾರಿಯಾಗಿ ಬಾಸಿತ್ ಹಾಜಿ ಕೊಡ್ಲಿಪೇಟೆ, ಕಾರ್ಯಾಕಾರಿ ಮಂಡಳಿಯ ಕಾರ್ಯದರ್ಶಿಯಾಗಿ ಹುಸೈನ್ ಮಾಪಿಳ ತೋಡು  ಅವರನ್ನು ಆಯ್ಕೆ ಮಾಡಲಾಯಿತು. ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ  ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವರದಿ : ನೌಫಲ್ ಕಡಂಗ  

Read More

ಮಡಿಕೇರಿ ಫೆ.26  NEWS DESK : ರಾಮಯಣ ಕಾಲಘಟ್ಟದಲ್ಲಿಯೇ ಆಭರಣಗಳಿಗೆ ಬಹಳ ಮಹತ್ವ ಇತ್ತು. ಇತಿಹಾಸದ ಧಾಮಿ೯ಕ ಘಟನಾವಳಿಗಳನ್ನು ಆಭರಣಗಳಲ್ಲಿ ಮೂಡಿಸುವ ಮೂಲಕ ಜನರ ಭಕ್ತಿಭಾವನೆಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಪತ್ರಕತ೯, ಅಯೋಧ್ಯೆ ಪುಸ್ತಕದ ಲೇಖಕ ಅನಿಲ್ ಹೆಚ್.ಟಿ. ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಕೃಷ್ಣವೇಣಿ ಮುಳಿಯ ವಿನ್ಯಾಸದಲ್ಲಿ ತಯಾರಾದ ಅಯೋಧ್ಯೆ ಶ್ರೀರಾಮಲಲ್ಲನ ಪರಿವಾರ ಚಿತ್ರವಿರುವ ಕಂಠಹಾರವನ್ನು (ಚೋಕರ್ ) ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣ ಆಗಬೇಕೆಂಬ ಭಾವನೆ ಪ್ರತೀಯೋವ೯ ಭಾರತೀಯನ ಅನೇಕ ದಶಕಗಳ ಕನಸಾಗಿತ್ತು. ಎಲ್ಲರ ನಿರೀಕ್ಷೆಗೂ ಮೀರಿ ಬಾಲರಾಮನ ಮೂತಿ೯ಯು ಕನ್ನಡದ ಕಲ್ಲಿನಲ್ಲಿಯೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಅಪೂವ೯ವಾಗಿ ರೂಪು ತಳೆದಿದೆ. ಎಲ್ಲರಿಗೂ ಅವರದ್ದೇ ಆದ ದೇವರು, ದೇವಮಂದಿರಗಳಿದ್ದರೂ ಎಲ್ಲರಿಗೂ ಸೇರಿದ ದೈವಮಂದಿರವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕಂಗೊಳಿಸಿದೆ. ಈ ರಾಮಮಂದಿರ ಎಲ್ಲರ ಪಾಲಿಗೂ ಮನಸ್ಸಿನ ಮಂದಿರವಾಗಬೇಕು. ಪ್ರೀತಿಯ ಮಂದಿರವಾಗಬೇಕು. ಹಾಗೇ ಭಾರತದ ರಾಷ್ಟ್ರೀಯ ಮಂದಿರವಾಗಿ ಗಮನ ಸೆಳೆಯಬೇಕೆಂದು ಹಾರೈಸಿದರು. ರಾಮಾಯಣ…

Read More