ಲೇಖಕ: admin

ಬೆಂಗಳೂರು ಫೆ.26 NEWS DESK : ನಗರದ  ಅರಮನೆ ಮೈದಾನದಲ್ಲಿ ನಡೆದ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿರುದ್ಯೋಗಿ ಯುವಕರಿಗೆ ‘ಯುವ ನಿಧಿ’ ಕೊಡುವ ಜತೆಗೆ, ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗ ಮಾಡಲು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು ಎಂದರು. ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆದಿದೆ. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿ ಯುವ ಸಮೂಹದ ಮತ ಗಳಿಸಿದರು. ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ಪ್ರತೀ ವರ್ಷ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ ಶೇ.8.40ಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದಿಂದ ಯುವ ನಿಧಿ ನೀಡಲಾಗುತ್ತಿದ್ದು, ಉದ್ಯೋಗವನ್ನೂ ಸೃಷ್ಟಿಸುತ್ತೇವೆ, ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿ…

Read More

ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಬಿಸಿಲ ಝಳ ಹೆಚ್ಚಿದಂತೆ ಕಾಣಿಸಿಕೊಳ್ಳುವ ಸಮಸ್ಯೆ. ಜ್ವರ, ವಾಂತಿ, ಅಜೀರ್ಣ, ಅತಿಯಾದ ಬಿಸಿಲು, ಹೆಚ್ಚಿನ ದೈಹಿಕ ಶ್ರಮ ಮುಂತಾದವು ದೇಹದಲ್ಲಿನ ನೀರಿನಂಶವನ್ನು ಕಡಿಮೆಗೊಳಿಸುತ್ತವೆ. ಈ ಸಂದರ್ಭದಲ್ಲಿ ವ್ಯಕ್ತಿ ಹೆಚ್ಚಿನ ನೀರನ್ನು ಸೇವಿಸಬೇಕಾಗುತ್ತದೆ. ನಿರ್ಜಲೀಕರಣ ಅತಿಯಾದರೆ ವ್ಯಕ್ತಿ ಪ್ರಾಣಾಪಾಯದಂಚಿಗೂ ಹೋಗಬೇಕಾಗಬಹುದು ಎನ್ನುತ್ತಾರೆ ವೈದ್ಯರು. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ನೀರು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ನಿರ್ಜಲೀಕರಣದ ಲಕ್ಷಣಗಳನ್ನು ಪತ್ತೆ ಹಚ್ಚುವುದು ಸುಲಭ. ಅತಿಯಾಗಿ ಬಾಯಾರಿಕೆಯಾಗುವುದು, ಬಾಯಿ ಒಣಗಿದಂತಾಗುವುದು, ತಲೆಸುತ್ತುವುದು, ನಿರಾಸಕ್ತಿ, ನಿಶ್ಶಕ್ತಿ, ಆಲಸ್ಯ, ಉರಿಮೂತ್ರ ಮುಂತಾದ ಸಮಸ್ಯೆಗಳು ಆರಂಭವಾದರೆ ಅದು ನಿರ್ಜಲೀಕರಣದ ಲಕ್ಷಣವೇ. ನಿರ್ಜಲೀಕರಣ ಹೆಚ್ಚಿದಂತೆ ಜ್ವರ, ಅತಿಯಾದ ವಾಂತಿ ಬೇಧಿ, ನಿಶ್ಶಕ್ತಿ,ದೇಹದ ತೂಕದಲ್ಲಿ ಹಠಾತ್ ಕುಸಿತ ಕಾಣಿಸಿಕೊಳ್ಳುತ್ತದೆ. ಮೂತ್ರವಿಸರ್ಜನೆಯೂ ಆಗದಿರಬಹುದು. ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಾಣುವುದು ಒಳಿತು. ನಿಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯವಿದೆಯೋ ಅಷ್ಟನ್ನು ಸೇವಿಸಲೇಬೇಕು. ಅತಿಯಾಗಿ ದೈಹಿಕ ಶ್ರಮಪಡುವವರು ಹೆಚ್ಚು ಹೆಚ್ಚು ನೀರು ಸೇವಿಸಬೇಕು. ಬಿಸಿಲು ಹೆಚ್ಚಾದಂತೆ ದೇಹದಲ್ಲಿನ ನೀರಿನ ಪ್ರಮಾಣ…

Read More

ಮಡಿಕೇರಿ ಫೆ.26 NEWS DESK : ಪರಿಸರ ಪ್ರೇಮಿ, ನಿವೃತ್ತ ಅರಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ (84) ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು. ನಾಗರಹೊಳೆ ನಿವಾಸಿಯಾಗಿರುವ ಚಿಣ್ಣಪ್ಪ ಅವರು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಅರಣ್ಯದ ರಕ್ಷಣೆಯೇ ತಮ್ಮ ಉಸಿರು ಎಂಬಂತೆ ಜೀವನವನ್ನು ಸಾಗಿಸಿದರು. ಇವರು ವನ್ಯಜೀವಿ ಮತ್ತು ಕಾಡಿನ ರಕ್ಷಣೆಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಜನರಲ್ಲಿ ಪರಿಸರ ಪ್ರೇಮ ಹುಟ್ಟಿಸಿದರು. ಮೃತರ ಅಂತ್ಯಕ್ರಿಯೆ ಮಂಗಳವಾರ (ಫೆ.27) ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಣ್ಣಪ್ಪ ಅವರ ನಿಧನಕ್ಕೆ ಪರಿಸರ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Read More

ಬೇಕಾಗುವ ಪದಾರ್ಥಗಳು : ಪನ್ನೀರ್ ಕ್ಯೂಬ್ಸ್ – 500 ಗ್ರಾಂ, ಕಡ್ಲೆ ಹಿಟ್ಟು – 1 ಬಟ್ಟಲು, ಕಾರ್ನ್ ಫ್ಲೋರ್- 3-4 ಚಮಚ, ಅಚ್ಚಖಾರದ ಪುಡಿ – 1 ಚಮಚ, ಅರಶಿಣದ ಪುಡಿ– 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಜೀರಿಗೆ ಪುಡಿ – ಅರ್ಧ ಚಮಚ,  ಅಡುಗೆ ಸೋಡಾ – 1 ಚಮಚ, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು, ಚಾಟ್ ಮಸಾಲ – ಸ್ವಲ್ಪ. ಮಾಡುವ ವಿಧಾನ ::  ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ಹಾಗೂ ಕಾರ್ನ್ ಫ್ಲೋರ್ ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ. ಇದೀಗ ಪನೀರ್ ಕ್ಯೂಬ್ಸ್ ಅನ್ನು ಹಾಕಿ, ಈ ಮಿಶ್ರಣದಲ್ಲಿ ಚನ್ನಾಗಿ ಅದ್ದಿ ಮಿಶ್ರಣದೊಂದಿಗೆ ಪನ್ನೀರ್ ಚನ್ನಾಗಿ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡಿ. ಬಳಿಕ ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ…

Read More

ನಾಪೋಕ್ಲು ಫೆ.26 NEWS DESK : ಬಲ್ಲಮಾವಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲತ್ ನಾಡು-ಪೇರೂರು ಇಗ್ಗುತಪ್ಪ ದೇವಾಲಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ , ಗ್ರಾ.ಪಂ ಸದಸ್ಯ ಮಚುರ ರವೀಂದ್ರ ಪ್ರಾರ್ಥನೆ ಸಲ್ಲಿಸಿ, ಮಾತನಾಡಿ ಶಾಸಕರ ಅನುದಾನ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಮರಿಕರಣ ಮಾಡಲು ಉದ್ದೇಶಿಸಿದ್ದು ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಉತ್ಸವದಂದು ದೇವಾಲಯದ ವಾರ್ಷಿಕೋತ್ಸವ ನಡೆಯಲಿದೆ. ಅದರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು. ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಡಾಮರಿಕರಣವನ್ನು ಸದ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ತೆನ್ನಿ ರ ಮೈನಾ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಬ್ಲಾಕ್ ಕಾಂಗ್ರೆಸ್ ನಾಪೋಕ್ಲು ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಬಟ್ಟಕಾರಂಡ…

Read More

ನಾಪೋಕ್ಲು ಫೆ.26 NEWS DESK :  ಒಬ್ಬ ವ್ಯಕ್ತಿಯ ಆರೋಗ್ಯ ಹದಗೆಟ್ಟರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಬೀರುತ್ತದೆ. ಉತ್ತಮ ಆರೋಗ್ಯ ಹೊಂದಿ, ಸಮಾಜಕ್ಕೆ ಬೇಕಾದವರಾಗಿ ಬದುಕುವುದೇ ನಿಜವಾದ ಜೀವನ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹಾಗೂ ವಿರಾಜಪೇಟೆ ಶಾಸಕ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು. ನಂದಿನಿ ಆಸ್ಪತ್ರೆಯ ಬೆಳ್ಳಿ ಹಬ್ಬದ ಪ್ರಯುಕ್ತ ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಳಿಯ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ , ಎ.ಕೆ ಸುಬ್ಬಯ್ಯ ಎಜುಕೇಶನ್ ಟ್ರಸ್ಟ್ ,ಕೊಡವ ಸಮಾಜ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಶ್ರೀರಾಮ ಟ್ರಸ್ಟ್ ಜಂಟಿಯಾಗಿ ಆಯೋಜಿಸಿರುವ ಉಚಿತ ಸೂಪರ್ ಸ್ಪೆಷಾಲಿಟಿ ರೋಗಗಳ ತಪಾಸಣೆ ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿಮಾತನಾಡಿದರು. ಇಂದು ವೈದ್ಯಕೀಯ ವಿಜ್ಞಾನ ಸಾಕಷ್ಟು ಪ್ರಗತಿಯಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವುದರೊಂದಿಗೆ, ಸರ್ಕಾರದ ಯೋಜನೆಗಳನ್ನು…

Read More

ಕುಶಾಲನಗರ ಫೆ.25 NEWS DESK : ಜೀವನದಿ ಕಾವೇರಿಯನ್ನು ಕಲುಷಿತಗೊಳ್ಳದಂತೆ ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖರಾದ ಬಿ. ಎಸ್. ಪರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಬೈಚನಹಳ್ಳಿ ಶ್ರೀ ಆದಿಶಕ್ತಿ  ಅಂತರ್ಗಟ್ಟೆ ಅಮ್ಮ ದೇವಾಲಯ ಸೇವಾ ಸಮಿತಿ ಸಹಯೋಗದೊಂದಿಗೆ ಹುಣ್ಣಿಮೆ ಅಂಗವಾಗಿ ನಡೆದ 156 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನದಿ ತಟದಲ್ಲಿ ಅವೈಜ್ಞಾನಿಕ ಬೆಳವಣಿಗೆಯೊಂದಿಗೆ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಸೇರಿದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಈ ಸಂಬಂಧ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಭರತ ಹುಣ್ಣಿಮೆ ಅಂಗವಾಗಿ ನದಿಗೆ ವಿಶೇಷ ಆರತಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಮಾತನಾಡಿ, ನದಿಯನ್ನು ಪೂಜಿಸುವ ಮೂಲಕ ಸಂರಕ್ಷಣೆ ಸಾಧ್ಯ, ನಾವು ನದಿಯನ್ನು ರಕ್ಷಿಸಿದರೆ ಅದು ನಮ್ಮನ್ನು ತಾಯಿಯಂತೆ ರಕ್ಷಿಸುತ್ತದೆ ಎಂದು…

Read More

ಮಡಿಕೇರಿ, ಫೆ.25 NEWS DESK :  ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ – ಇವುಗಳ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ( ಫೆ.25 ರಂದು ) ಸುವರ್ಣ ಕರ್ನಾಟಕ- 50 ರ ಸಂಭ್ರಮದ ಅಂಗವಾಗಿ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.  ಇದೇ ವೇಳೆಯಲ್ಲಿ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ  2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ ಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.    ಸಮಾರಂಭದಲ್ಲಿ ಕಲೆ ಮತ್ತು ಸಾಹಿತ್ಯ ಬೆಳವಣಿಗೆ ಕುರಿತು ಮುಖ್ಯ ಭಾಷಣ ಮಾಡಿದ ಸಾಹಿತಿ ಡಾ ಜೆ.ಸೋಮಣ್ಣ, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಾಹಿತಿ ಭಾರತೀಸುತ ಅವರು…

Read More

ಮಡಿಕೇರಿ ಫೆ.25 NEWS DESK : ಭೂಮಿಪೂಜೆ ಮಾಡಿದ ನಂತರ ವಿಳಂಬವಿಲ್ಲದೆ ಕಾಮಗಾರಿ ಆರಂಭಿಸಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಂಜಿನಿಯರ್ ಗಳು ಗೌರವವನ್ನು ಉಳಿಸಿಕೊಳ್ಳಬೇಕು. ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಭಾಗಮಂಡಲದ ಮೇಲು ಸೇತುವೆಯ ಕೆಳಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಗೌರವ ಸಿಗುತ್ತದೆ, ಇಲ್ಲದಿದ್ದಲ್ಲಿ ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು, ಇರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು. ಈಗಾಗಲೇ ಕಾಟಕೇರಿಯಲ್ಲಿ 1 ಮತ್ತು ಪೆರಾಜೆಯಲ್ಲಿ ಎರಡು ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಎಂಜಿನಿಯರ್ ನ್ನು ಅಮಾನತು ಮಾಡಲು ಮುಂದಾಗಿದ್ದೆ. ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು.…

Read More

ಮಡಿಕೇರಿ ಫೆ.25 NEWS DESK : ಕೊಡಗಿನ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗಾಗಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಮಾಜಿ ಸೈನಿಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಕೇಂದ್ರ ಕಚೇರಿಯ ಆಶ್ರಯದಲ್ಲಿ ಎಂ.ಇ.ಜಿ ಸೆಂಟರ್‌ನಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ 600ಕ್ಕೂ ಹೆಚ್ಚು ಮಾಜಿ ಸೈನಿಕರು ಹಾಗೂ ಅವಲಂಬಿತರು ಭಾಗವಹಿಸಿದ್ದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಮತ್ತು ಶೌರ್ಯದ ಶ್ರೀಮಂತ ಪರಂಪರೆ ಹೊಂದಿರುವ ಕೊಡಗು ಜಿಲ್ಲೆಯ ಯೋಧರಿಗೆ ಇದೇ ಸಂದರ್ಭ ವಿವಿಧ ಸೌಲಭ್ಯಗಳನ್ನು ನೀಡಲಾಯಿತು. ಸ್ಪರ್ಷ್ ಪಿಂಚಣಿ ವಿತರಣಾ ವ್ಯವಸ್ಥೆ ಮತ್ತು ಇಸಿಹೆಚ್‌ಎಸ್ ವ್ಯವಹಾರಗಳಿಗಾಗಿ ಹೊಸದಾಗಿ ನವೀಕರಿಸಲಾದ ಮೊಬೈಲ್ ಅಪ್ಲಿಕೇಶನ್, ಮಾಜಿ ಸೈನಿಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಂಟ್ರೋಲರ್ ಡಿಫೆನ್ಸ್ ಅಕೌಂಟ್(ಸಿಡಿಎ) ಪ್ರತಿನಿಧಿಗಳು, ಭಾರತೀಯ ಸೇನಾ ದಾಖಲೆಗಳ ಕಚೇರಿಗಳು ಮತ್ತು ಬ್ಯಾಂಕ್ ಸಹಾಯ ಕೇಂದ್ರಗಳು ಸ್ಥಾಪಿಸಿದ ಸ್ಟಾಲ್‌ಗಳ ಮೂಲಕ ತಮ್ಮ ಪಿಂಚಣಿ ಮತ್ತು ದಾಖಲಾತಿಗೆ ಮಾಜೀ ಸೈನಿಕರು ಸಿಬ್ಬಂದಿಗಳೊಂದಿಗೆ ನೇರವಾಗಿ ಸಂವಹನ ನಡೆಸಿದರು. ತಕ್ಷಣದ ಪರಿಹಾರಕ್ಕಾಗಿ ಕುಂದುಕೊರತೆಗಳನ್ನು…

Read More