ಲೇಖಕ: admin

ಸುಂಟಿಕೊಪ್ಪ NEWS DESK ಜ.4 : ಅನಾರೋಗ್ಯ ಪೀಡಿತ ಪುತ್ರನೊಂದಿಗೆ ಆಶ್ರಯವಿಲ್ಲದೆ ಅತಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ವಯೋವೃದ್ಧೆಯೊಬ್ಬರಿಗೆ ಜಿ.ಪಂ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಪಿ.ಎಂ.ಲತೀಫ್ ಅವರು ಮನೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಳೆಗಾಲದ ಮಹಾಮಳೆಗೆ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯ ನಿವಾಸಿ ಬೈರಿ ಅಜ್ಜಿ ತಮ್ಮ ಪುಟ್ಟ ಮನೆಯನ್ನು ಕಳೆದುಕೊಂಡಿದ್ದರು. ಮಳೆಯ ತೀವ್ರತೆಗೆ ಮನೆ ನೆಲಸಮಗೊಂಡ ನಂತರ ಅತಂತ್ರ ಸ್ಥಿತಿಗೆ ಸಿಲುಕಿಕೊಂಡ ಬೈರಿ ಅಜ್ಜಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಿನಲ್ಲಿ ಜೀವನ ಸಾಗಿಸಲು ಆರಂಭಿಸಿದರು. ಇಳಿ ವಯಸ್ಸಿನ ಬೈರಿ ಹಾಗೂ ಅನಾರೋಗ್ಯ ಪೀಡಿತ ಪುತ್ರ ವಿಶ್ವನಾಥ್ ಸಂಕಷ್ಟದ ಬದುಕು ಸಾಗಿಸುತ್ತಿರುವ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಇದನ್ನು ಗಮನಿಸಿದ ಜಿ.ಪಂ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಪಿ.ಎಂ.ಲತೀಫ್ ಅವರು ಮಲ್ಲಿಕಾರ್ಜುನ ಕಾಲೋನಿಗೆ ಭೇಟಿ ನೀಡಿದರು. ಬೈರಿ ಅಜ್ಜಿಯ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕಣ್ಣೀರು ಹಾಕಿದ ಅಜ್ಜಿಗೆ ಧೈರ್ಯ ತುಂಬಿದ…

Read More

ಮಡಿಕೇರಿ ಜ.3 NEWS DESK : ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ರಾಜ್ಯ ಚಿತ್ರಕಲಾ ಪರಿಷತ್, ಅರಣ್ಯ ಇಲಾಖೆಯ ಸಹಯೋಗದಲ್ಲಿ ಕನ್ನಡಪ್ರಭ ಪತ್ರಿಕೆ ವತಿಯಿಂದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ “ಪರಿಸರ ಜಾಗೃತಿ, ವನ್ಯಜೀವಿ” ವಿಷಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಿತು. ಮಡಿಕೇರಿಯ ಗಾಂಧಿ ಭವನದಲ್ಲಿ ನಡೆದ ಪ್ರೌಢ ವಿಭಾಗದ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಹನಿಯ ಎ ಪ್ರಥಮ ಹಾಗೂ ಆರ್ನವ್ ವಿ ತೃತೀಯ ಸ್ಥಾನವನ್ನುಗಳಿಸುವುದರ ಮೂಲಕ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡರು. ಕಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ಚೋಳಂಡ ಜಿಯಾ ಅಕ್ಕಮ್ಮ ಸಮಾಧಾನಕರ ಪ್ರಶಸ್ತಿ ಪತ್ರ ಪಡೆದುಕೊಂಡರು. ಈ ಸಂದರ್ಭ ಸಹ ಶಿಕ್ಷಕಿ ಲೀನಾ ಸಿ.ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್, ಕಾರ್ಯದರ್ಶಿ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು, ಸಂಯೋಜಿಕಿ ಅಮೃತ ಅರ್ಜುನ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು…

Read More

ಮಡಿಕೇರಿ ಜ.3 NEWS DESK  : ಆರ್‌ಬಿಎಸ್‌ಕೆ ತಂಡದಿಂದ ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆ ನಡೆಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅನಿಮಿಯ ತಪಾಸಣೆ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಜನವರಿ 2026 ರಿಂದ ವರ್ಷದಲ್ಲಿ ಎರಡು ಬಾರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ಆರು ತಿಂಗಳಿಂದ 5 ವರ್ಷದವರೆಗಿನ ಮಕ್ಕಳಿಗೆ ಅನಿಮಿಯ ತಪಾಸಣೆಯನ್ನು ಮಾಡಿ ರಕ್ತಹೀನತೆ ತಡೆಗಟ್ಟುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಐವತ್ತೊಂಭತ್ತು ತಿಂಗಳ ವಯಸ್ಸಿನ ಮಕ್ಕಳಲ್ಲಿ ಹಿಮೋಗ್ಲೋಬಿನ್ ಸಾಂದ್ರತೆ ಕಡಿಮೆ ಇದ್ದರೆ ರಕ್ತಹೀನತೆ ಎಂದು ಪರಿಗಣಿ ಈ ಬಗ್ಗೆ ಪೋಷಕರಿಗೆ ಸಭೆಯ ಮೂಲಕ ತಿಳುವಳಿಕೆ ಮೂಡಿಸಿ, ನಂತರ ಮಗುವಿನ ಆಹಾರ ಪದ್ಧತಿ ಮಾಹಿತಿ ಪಡೆದು ಸ್ಕ್ರೀನಿಂಗ್ ಮಾಡಲಾಗುವುದು ಎಂದು ಹೇಳಿದರು. ರಕ್ತಹೀನತೆಗೆ ಒಳಗಾಗಿದ್ದ ಮಕ್ಕಳ ಚಿಕಿತ್ಸೆ, 6-12 ತಿಂಗಳ ಮಕ್ಕಳಿಗೆ ಪ್ರತಿದಿನ 1…

Read More

ಮಡಿಕೇರಿ ಜ.3 NEWS DESK : ಪೋಷಕರು ತಮ್ಮ ಮಕ್ಕಳನ್ನು ಇಂತಹದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಧೋರಣೆಯನ್ನು ಬಿಡಬೇಕು. ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಸ್ವಾತಂತ್ರ ನೀಡಬೇಕು ಎಂದು ದೆಹಲಿಯ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಅತೀಖು ರೆಹಮಾನ್ ಸಲಹೆ ನೀಡಿದರು. ಉಮ್ಮತ್ ಒನ್ ಕೊಡಗು ಹಾಗೂ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆ ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದೆ. ಅದರ ಬಗ್ಗೆ ಅರಿವಿಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್ ಮತ್ತು ಇಂಜಿನಿಯರ್ ಹುದ್ದೆಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಅವರಲ್ಲಿರುವ ಅಭಿರುಚಿಗಳಿಗೆ ವಿರುದ್ಧವಾಗಿದೆ. ಅಲ್ಲದೆ ಅವರ ಭವಿಷ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅತೀಖು ರೆಹಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ತಮ್ಮ ಸಹಪಾಟಿಗಳು…

Read More

ಮಡಿಕೇರಿ ಜ.3 NEWS DESK : ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿರುವ  ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿತ  “ಮೆಟೀರಿಯಲ್ಸ್ ಅಂಡ್ ಟೆಕ್ನಾಲಜಿಗಳಲ್ಲಿನ ಪ್ರಗತಿಗಳು: ಥರ್ಮಲ್, ಮೆಕ್ಯಾನಿಕಲ್ ಮತ್ತು ಕ್ರಯೋಜೆನಿಕ್ ದೃಷ್ಟಿಕೋನಗಳು” ಕುರಿತ 6 ದಿನಗಳು ಆಯೋಜಿಸಲ್ಪಟ್ಟಿದ್ದ  ಎಐಸಿಟಿಇ ಪ್ರಾಯೋಜಿತ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ  ಸಮಾರೋಪಗೊಂಡಿದೆ. ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವಿಸಿಇ ಮೈಸೂರಿನ ಪ್ರಾಂಶುಪಾಲ  ಡಾ. ಬಿ.ಸದಾಶಿವೇಗೌಡ ಅವರು ಸಂಶೋಧನೆ ಮತ್ತು ಗುಣಮಟ್ಟದ ಪ್ರಕಟಣೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೆಇಎಸ್ ನ  ಉಪಾಧ್ಯಕ್ಷ   ಎಂ.ಎಂ.ತಿಮ್ಮಯ್ಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಅಧ್ಯಾಪಕರ ಪಾತ್ರದ ಕುರಿತು ಮಾತನಾಡಿದರು. ಸಿಐಟಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಎಐಸಿಟಿಇ ಪ್ರಾಯೋಜಿತ ಕಾರ್ಯಾಗಾರಗಳ ಮಹತ್ವವನ್ನು ತಿಳಿಸಿದರು. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ 42 ಪ್ರತಿನಿಧಿಗಳು ಈ ಮಹತ್ವದ ಕಾಯಾ೯ಗಾರದಲ್ಲಿ   ಭಾಗವಹಿಸಿದ್ದರು. ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಎನ್ಐಟಿ ಜಲಂಧರ್, ಎಚ್‌ಎಎಲ್ ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ಸಂಸ್ಥೆಗಳ ಸಂಪನ್ಮೂಲ…

Read More

ಮಡಿಕೇರಿ ಜ.3 NEWS DESK : ಚೇನಂಡ ಕುಟುಂಬಸ್ಥರಿಂದ ಪ್ರಸಕ್ತ ಸಾಲಿನ ಏಪ್ರಿಲ್‍ನಲ್ಲಿ ಆರಂಭಗೊಳ್ಳಲಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಭಾಗವಾಗಿ ಮೂರ್ನಾಡಿನಲ್ಲಿ ನಡೆಯುತ್ತಿರುವ ಕೊಡಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯಲ್ಲಿ ಪ್ರತಿಭಾವಂತ 30 ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಚೇನಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೂರ್ನಾಡಿನಲ್ಲಿ ಜ.1ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿ ಆರಂಭಗೊಂಡಿದ್ದು, ಜ.4 ರಂದು ಅಂತಿಮ ಪಂದ್ಯಾಟ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯಲ್ಲಿ ಜಾತಿ ಮತಗಳ ಭೇದವಿಲ್ಲದೆ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ 34 ತಂಡಗಳು ಪಾಲ್ಗೊಂಡಿವೆ. ಅಂತಿಮ ಪಂದ್ಯಾಟಕ್ಕೂ ಮೊದಲು ಕೂಡಿಗೆ ಕ್ರೀಡಾ ಶಾಲಾ ತಂಡ ಮತ್ತು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ. ಕಳೆದ ಎರಡು ದಿನಗಳ ಕಾಲ ನಡೆದ…

Read More

ಮಡಿಕೇರಿ ಜ.3 NEWS DESK : ಕೊಡಗು ಜಿಲ್ಲಾ ಬಂಟರ ಸಂಘದಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ರೂ.10 ರಿಂದ 15 ಕೋಟಿ ವೆಚ್ಚದಲ್ಲಿ ‘ಬಂಟರ ಭವನ’ ನಿರ್ಮಾಣಗೊಳ್ಳಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜ.11 ರಂದು ನಗರದ ಹೋಟೆಲ್ ಸಮುದ್ರದಲ್ಲಿ ಬೆ.10.30 ಗಂಟೆಗೆ ನಡೆಯಲಿರುವ ಮಹಾಸಭೆಯಲ್ಲಿ ಬಹು ನಿರೀಕ್ಷೆಯ ಬಂಟರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ನಗರದ ಅಬ್ಬಿಫಾಲ್ಸ್ ರಸ್ತೆಯ ಬಳಿಯಲ್ಲಿ ಡಾ.ಪ್ರೇಮನಾಥ್ ಪೂಂಜಾ ಅವರು ಉದಾರವಾಗಿ ನೀಡಿರುವ 52 ಸೆಂಟ್ಸ್ ಜಾಗದಲ್ಲಿ ಬಂಟರ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಸಮುದಾಯ ಬಾಂಧವರು, ದಾನಿಗಳ ನೆರವನ್ನು ಪಡೆದುಕೊಳ್ಳುವುದಾಗಿ ತಿಳಿಸಿದರು. *ಆಡಳಿತ ಮಂಡಳಿ ರಚನೆ* ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆಗೆ ಈಗಾಗಲೆ ಸಂಘದ 486 ಸದಸ್ಯರುಗಳಿಗೆ ಆಹ್ವಾನ ಪತ್ರವನ್ನು ಕಳುಹಿಸಿಕೊಡಲಾಗಿದೆಯೆಂದು ಮಾಹಿತಿ ನೀಡಿದ ಅವರು, ಈ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯೂ ನಡೆಯಲಿದೆ.…

Read More

ಮಡಿಕೇರಿ ಜ.3 NEWS DESK : ಹಾಕತ್ತೂರು ತೊಂಭತ್ತುಮನೆ ಶ್ರೀ ವಿನಾಯಕ ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಪಿ.ಈ.ದಿವಾಕರ್ ಹಾಗೂ ಕಾರ್ಯದರ್ಶಿಯಾಗಿ ಕೆ.ಕೆ.ಮಂಜುನಾಥ್ ಆಯ್ಕೆಯಾಗಿದ್ದಾರೆ. ತೊಂಭತ್ತುಮನೆ ಭಜನಾ ಮಂದಿರದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಸಿ.ವಿ.ಸುನಿಲ್, ಸಹ ಕಾರ್ಯದರ್ಶಿಯಾಗಿ ಮುರುಳಿ ಟಿ.ವೈ, ಖಜಾಂಚಿಯಾಗಿ ಮಾಧವ ಟಿ.ಕೆ., ಗೌರವ ಸಲಹೆಗಾರರಾಗಿ ಎ.ಕೆ.ಕಾರ್ಯಪ್ಪ, ಕಾರ್ಯಾಧ್ಯಕ್ಷರಾಗಿ ಪಿ.ಪಿ.ಸುಕುಮಾರ್ ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸದಸ್ಯರುಗಳಾಗಿ ಕೆ.ಎ.ತಿಮ್ಮಯ್ಯ, ಬಿ.ಎಸ್.ಕಿಶೋರ್, ಎಂ.ಬಿ.ಹರೀಶ್, ಬಿ.ಎಸ್.ಜನಾರ್ಧನ, ಕೆ.ಕೆ.ಹರೀಶ್, ಬಿ.ವಿಶ್ವನಾಥ್, ಟಿ.ಆರ್.ಸಾಜು, ಮನು ಬೆಳ್ಳಿಯಪ್ಪ, ಎಂ.ಬಿ.ರಮೇಶ್, ವಿ.ಟಿ.ಚೇತನ್, ಧನು ಶೇಖರ, ಟಿ.ಜಿ.ರೋಹನ್, ಮಣಿಕಂಠ ಮೋಹನ್ ದಾಸ್ ಅವರನ್ನು ಆಯ್ಕೆ ಮಾಡಲಾಯಿತು.

Read More

ಮಡಿಕೇರಿ ಜ.3 NEWS DESK : ಹಿರಿಯ ರಾಜಕರಣಿ ದಿ.ಎ.ಕೆ.ಸುಬ್ಬಯ್ಯ ಅವರ ಪತ್ನಿ ದಿ.ಪೊನ್ನಮ್ಮ ಸುಬ್ಬಯ್ಯ ಅವರ  10ನೇ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು, ತಮ್ಮ ತಾಯಿಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಾಯಿ ಹಾಗೂ ತಂದೆಯವರ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸಿ, ಗೌರವಾರ್ಪಣೆ ಸಲ್ಲಿಸಿ ಪ್ರಾರ್ಥಿಸಿದರು. ಶಾಸಕರ ಸಹೋದರ ದಂಪತಿಗಳಾದ ನರೇನ್ ಕಾರ್ಯಪ್ಪ ಹಾಗೂ ಚಂದಲೇ ಕಾರ್ಯಪ್ಪ, ರವಿ ಸೋಮಯ್ಯ , ಶಾಸಕರ ಚಿಕ್ಕಮ್ಮ ಗಂಗಮ್ಮ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಅಣ್ಣಳಮಾಡ ಹರೀಶ್, ಭವೀನ್, ಇಸ್ಮಾಯಿಲ್, ಆಂಟೋನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK  ಜ.3 : ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ `ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 23ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಜ.8 ರಂದು ಭಾಗಮಂಡಲದಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಿಗ್ಗೆ 10.30 ಗಂಟೆಗೆ ಭಾಗಮಂಡದಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು ಮತ್ತು ಕೊಡವರ ಪರವಾದ ಸಿಎನ್‌ಸಿಯ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು, ಕೊಡವ…

Read More