ಲೇಖಕ: admin

ಮಡಿಕೇರಿ ಜೂ.4 NEWS DESK : ಮಕ್ಕಳ ವಿಶೇಷ ಪೊಲೀಸ್ ಘಟಕ ಮತ್ತು ಅಕ್ಕ ಪಡೆ ಸಿಬ್ಬಂದಿಗಳು ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಮಾದಕ ವಸ್ತುಗಳ ಬಳಕೆ – ದುಷ್ಪರಿಣಾಮಗಳು, ಅಪ್ರಾಪ್ತರ ವಾಹನ ಚಾಲನೆ ಇತ್ಯಾದಿಗಳ ಬಗ್ಗೆ ಕಾನೂನು ಅರಿವು ಮೂಡಿಸಿದರು.

Read More

ಮಡಿಕೇರಿ ಜೂ.4 NEWS DESK : ಪೊನ್ನಂಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್1-ನಲ್ಲೂರು, ಎಫ್2-ಬಾಳೆಲೆ, ಎಫ್16-ದೇವನೂರು, ಎಫ್14-ಕಿರಗೂರು ಫೀಡರ್‍ನಲ್ಲಿ ಜೂ.5 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಪೊನ್ನಂಪೇಟೆ, ಕಿರಗೂರು, ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬೀಳೂರು, ಕೊಟ್ಟಗೇರಿ, ಸುಳುಗೋಡು, ಬಾಳೆಲೆ, ನಿಟ್ಟೂರು, ರಾಜಾಪುರ, ಕಿಸ್ತೂರು, ಮಳಲುಕೋಟೆ, ಕಾರ್ಮಾಡು, ಜಾಗಲೆ, ಮತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ವಿರಾಜಪೇಟೆ ಜೂ.4 NEWS DESK :  ಸಮಾಜದಲ್ಲಿ ಸ್ವಯಂ ಸೇವೆ ಸಲ್ಲಿಸಲು ಎಲ್ಲಿಯೂ ಅಂತ್ಯವೆಂಬುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ತನ್ನಿಂದಾದ ಸೇವೆ ಸಲ್ಲಿಸುವುದು ಉತ್ತಮ ಸ್ವಯಂ ಸೇವಕನ ಲಕ್ಷಣ ಎಂದು ಲಾರ್ಡ್ಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕರಾದ ಬೆನೆಡಿಕ್ಟ್ ಆರ್ ಸಲ್ಡಾನ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ ಕೌಸ್ತುಭ ಸಭಾ ಭವನದಲ್ಲಿ ನಡೆದ ಕಾಲೇಜಿನ ಎನ್ ಎಸ್ ಎಸ್ ಘಟಕದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಎನ್ಎಸ್ಎಸ್ ಎಂಬುವುದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಮರ್ಪಕವಾದ ವೇದಿಕೆಯಾಗಿದ್ದು ಇದರ ಮೂಲಕ ವಿದ್ಯಾರ್ಥಿಗಳು ಸಹಕಾರ, ಪ್ರಕೃತಿ ರಕ್ಷಣೆ, ಸ್ವಚ್ಚತೆ, ನೈರ್ಮಲ್ಯದಂತಹ ವಿಚಾರಗಳನ್ನು ಅರಿತು ತಮ್ಮ ಮೂಲಕ ಸಮಾಜದಲ್ಲಿ ಈ ಗುಣಗಳನ್ನು ಪ್ರಚಾರ ಮಾಡುದರೊಂದಿಗೆ ಸಮಾಜದಲ್ಲಿ ಯಾವುದೇ ಸಂದರ್ಭದಲ್ಲಿಯೂ ಪ್ರತಿಫಲದ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಲು ಸಿದ್ದರಿರಬೇಕು. ಕೇವಲ ನಾನೊಬ್ಬನೆ ಬೆಳೆದರೆ ಸಾಲದು. ನನ್ನೊಂದಿಗೆ ಇರುವ ಇತರರನ್ನು ಬೆಳೆಸಬೇಕೆಂಬ ಸಹಕಾರದ ಭಾವನೆಯನ್ನು ತಮ್ಮ ಜೀವನದಲ್ಲಿ…

Read More

ಮಡಿಕೇರಿ ಜೂ.4 NEWS DESK : ಸಮಾಜ ಸೇವಕರಾದ ನಿವೃತ್ತ ಪೊಲೀಸ್ ಕಾವೇರಪ್ಪನವರು ಎಫ್‌.ಎಂ.ಕೆ.ಎಂ.ಸಿ. ಕಾಲೇಜಿನ ವಿದ್ಯಾರ್ಥಿನಿಯ ಪ್ರಥಮ ವರ್ಷದ ಪ್ರವೇಶ ಶುಲ್ಕವನ್ನು ಭರಿಸಿ ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕಾಗಿ ಶುಭವನ್ನು ಹಾರೈಸಿದರು.

Read More

ಮಡಿಕೇರಿ ಜೂ.4 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಮೈಸೂರಿನ ಮಹಾರಾಜ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮಡಿಕೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ ಸಲ್ಲಿಸಲಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ, ಮರೆಯಲು ಅಸಾಧ್ಯವಾದಂತಹ ದಿವ್ಯ ಚೇತನ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿಗೆ ಮಾಡಿದ ಸೇವೆಯನ್ನು ಎಷ್ಟು ವರ್ಣಿಸಿದರೂ ಸಾಲದು. ಇಂದು ಶತಮಾನೋತ್ಸವ ಆಚರಿಸುತ್ತಿರುವ ಎಲ್ಲ ಸಂಘ-ಸಂಸ್ಥೆಗಳನ್ನು ಪ್ರಾರಂಭಿಸಿದ್ದು, ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಮೊದಲ ಸಭೆಯಲ್ಲಿ ಅವರು ಮಾತನಾಡುತ್ತಾ, “ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡ ಸುಖ ಸಂಪತ್ತನ್ನು ಒದಗಿಸಿ ಕೊಡಬೇಕೆಂಬುದು ನನ್ನ ಜೀವನದ ಪರಮೊದ್ದೇಶ” ಎಂದರು. ಅದಕ್ಕಾಗಿ 1923ರಲ್ಲಿ ಹೊಸ,…

Read More

ಮಡಿಕೇರಿ ಜೂ.4 NEWS DESK : ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಡಿಕೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೌತಿಕ ಸೌಲಭ್ಯಗಳು ಉತ್ತಮವಾಗಿದ್ದರು ಸಹ ದಾಖಲಾತಿ ಕುಂಠಿತಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಸ್.ಡಿ ಎಂ.ಸಿ ಅಧ್ಯಕ್ಷರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಪೋಷಕರುಗಳ ಸಭೆ ಕರೆದು ದಾಖಲಾತಿ ಹೆಚ್ಚಿಸುವುದರ ಬಗ್ಗೆ ಚರ್ಚಿಸಿದರು. ಶಾಲೆಯ ಸಭಾಂಗಣಕ್ಕೆ ಇಂಟರ್ ಲಾಕ್ ಅಳವಡಿಸಲು ಊರಿನ ದಾನಿಗಳ ಸಹಾಯವನ್ನು ಪಡೆದುಕೊಳ್ಳುವಂತೆಯು, ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಜವಾಬ್ದಾರಿ ಊರಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿ ಹೇಳಿದರು.  ಪ್ರಭಾರ ಮುಖ್ಯಶಿಕ್ಷಕರಾದ .ಕೆ.ಎಂ.ಅಶ್ರಫ್, ಸಹಶಿಕ್ಷಕರುಗಳಾದ ಕೆ.ಆರ್.ದನಿತ, ಪಿ.ಎಲ್.ಗಾನವಿ ಹಾಜರಿದ್ದರು.

Read More

ಮಡಿಕೇರಿ ಜೂ.4 NEWS DESK : ವಿಶ್ವ ಪರಿಸರ ದಿನದ ಪ್ರಯುಕ್ತ ಬ್ರಹ್ಮಾಕುಮಾರೀಸ್  ಮಡಿಕೇರಿ ಶಾಖೆ ಸಭಾಂಗಣದಲ್ಲಿ ಜೂ.5 ರಂದು ಶ್ರೀ ಗಂಧದ ಸಸಿಗಳು ಹಾಗೂ ಮಾವಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಬೆಳಿಗ್ಗೆ 11 ಗಂಟೆಗೆ ಸಸಿಗಳನ್ನು ಪಡೆಯಬಹುದು, ಆಸಕ್ತರು ತಮ್ಮ ಹೆಸರು ವಿಳಾಸ ಹಾಗೂ ಮೊಬೈಲ್ ನಂಬರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ  6 3 6 2 3 4 01 4 8  ಸಂಪರ್ಕಿಸಬಹುದಾಗಿದೆ ಎಂದು ಶಾಖೆಯ ಪ್ರಮುಖರು ತಿಳಿಸಿದರು.

Read More

ಮಡಿಕೇರಿ ಜೂ.4 NEWS DESK : ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಮಡಿಕೇರಿ ನಗರಸಭೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ರಾಜಕಾಲುವೆ ಮತ್ತು ಚರಂಡಿಗಳ ಶುಚಿತ್ವಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಿಗೆ ಉತ್ತರ ನೀಡಿದ ಪೌರಾಯುಕ್ತ ಕೆ.ಆರ್.ರಮೇಶ್ ಅವರು ಎಲ್ಲಾ ವಾರ್ಡ್‍ಗಳಿಗೂ ಸಿಬ್ಬಂದಿಯನ್ನು ನೇಮಿಸಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದರು. ರಾಜ ಕಾಲುವೆ ಮತ್ತು ಚರಂಡಿ ಶುಚಿತ್ವಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ. ಇಂದಿರಾನಗರ, ಮಂಗಳದೇವಿ ನಗರ, ಚಾಮುಂಡೇಶ್ವರಿ ನಗರ ಹಾಗೂ ಆಝಾದ್ ನಗರಗಳಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿರುವ ಮನೆಗಳಿಗೆ ನೋಟಿಸ್ ನೀಡಲು ತಯಾರಿ ನಡೆಸಲಾಗಿದೆ. ಒಟ್ಟು 6 ಸಮುದಾಯ ಭವನಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ನಗರಸಭೆಯ…

Read More

ಸುಂಟಿಕೊಪ್ಪ NEWS DESK ಜೂ.4 : ಕಾಡಾನೆಯೊಂದು ಅಸ್ವಾಭಾವಿಕವಾಗಿ ಸಾವಿಗೀಡಾಗಿರುವ ಘಟನೆ ಸುಂಟಿಕೊಪ್ಪ ಸಮೀಪ 7ನೇ ಹೊಸಕೋಟೆಯಲ್ಲಿ ನಡೆದಿದೆ. ಸುಮಾರು 25 ವರ್ಷದ ಕಾಡಾನೆ ಬುಧವಾರ ರಾತ್ರಿ ಕೆಸರಿನಲ್ಲಿ ಸಿಲುಕಿ ಮೇಲೆ ಬಾರಲಾಗದೆ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಗುರುವಾರ ಈ ಘಟನೆ ಬೆಳಕಿಗೆ ಬಂದಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆಯ ವೈದ್ಯ ಡಾ.ಮುಜೀಬ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ಮಾಡಲಾಯಿತು. ಎಸಿಎಫ್ ನವೀನ್‌ಕುಮಾರ್, ಕುಶಾಲನಗರ ವಲಯ ಆರ್‌ಎಫ್‌ಓ ರಕ್ಷಿತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು.

Read More

ಮಡಿಕೇರಿ NEWS DESK ಜೂ.4 : ಲೋಕಸೇವಾ ಆಯೋಗದ ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಅನುಕೂಲವಾಗುವಂತೆ ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ಅಕಾಡೆಮಿ ಮಧ್ಯಮ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ 8ನೇ ಬ್ಯಾಚ್ ನ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ನಗರದ ವಿಜಯನಗರ ಬಡಾವಣೆಯ ಚಂದ್ರಾ ಲೇಔಟ್ ನಲ್ಲಿರುವ ವಾಸವಿ ಅಕಾಡೆಮಿ ಈಗಾಗಲೇ ಹಲವು ತಂಡಗಳಿಗೆ ಉತ್ತಮ ಶಿಕ್ಷಣ ನೀಡಿದೆ. ಇದೀಗ 2027ರಲ್ಲಿ ನಡೆಯುವ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಯಾವುದೇ ಪದವೀಧರರು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. 2027ರಲ್ಲಿ ಪರೀಕ್ಷೆ ಬರೆಯುವ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಸಮುದಾಯದ…

Read More