ಪುತ್ತೂರು ಡಿ.26 : ಜಾವೆಲಿನ್ ಥ್ರೋ ವಿಭಾಗದಲ್ಲಿ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕ್ರೀಡಾಕೂಟಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಕೀರ್ತಿರಾಜ್.ಕೆ.ಎಸ್ ಆಯ್ಕೆಯಾಗಿದ್ದಾರೆ. ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ವಿಶ್ವವಿದ್ಯಾನಿಲಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ 29 ರಿಂದ ಜನವರಿ 1ರವರೆಗೆ ತಮಿಳ್ನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯ ಚೆನ್ನೈ ಇದರ ಆಶ್ರಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಡಿ.26 : ರೋಟರಿ ಸಂಸ್ಥೆಯ ಶಿಕ್ಷಕರಾದ ಕೃಷ್ಣ ಪ್ರಸಾದ್ ಅವರು ಪ್ರತಿಲಿಪಿ ಅಂತರ್ಜಾಲ ಸಾಹಿತ್ಯ ವೇದಿಕೆಯ ಬರಹಗಾರರು ಗಳಿಸಬಹುದಾದ ಪ್ರತಿಷ್ಠಿತ ಗೌರವ ಗೋಲ್ಡನ್ ಬ್ಯಾಡ್ಜ್ ಪ್ರಮಾಣ ಪತ್ರಕ್ಕೆ ಪಾತ್ರರಾಗಿದ್ದಾರೆ.ಅಂತರ್ಜಾಲದ ಈ ಆ್ಯಪ್ ನಲ್ಲಿ ಇವರು ನಾಲ್ಕು ಸಾವಿರಕ್ಕೂ ಅಧಿಕ ಓದುಗರನ್ನು ಸಂಪಾದಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಲೇಖನ, ಧಾರವಾಹಿ, ಅನುಭವ ಬರಹ, ಹಾಸ್ಯ ಒಟ್ಟಾರೆಯಾಗಿ 126 ಬರಹಗಳನ್ನು ಬರೆದಿದ್ದಾರೆ. ಹಾಲುಗುಂದ ಗ್ರಾಮದವರಾಗಿದ್ದು, ಶಿಕ್ಷಕ ವೃತ್ತಿಯಲ್ಲಿ ಯಶಸ್ವಿಯಾಗಿ 14 ವರ್ಷದ ಅನುಭವವೂ ಇವರಿಗಿದೆ.
ಮಡಿಕೇರಿ, ಡಿ.26 : ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಕಾಶ್ಮೀರಿ ಯುವ ವಿನಿಮಯ’ ಕಾರ್ಯಕ್ರಮದ ಅಂಗವಾಗಿ ಜಮ್ಮು-ಕಾಶ್ಮೀರದ ಪುಲ್ವಾಮ, ಬದಗಾಂ, ಬಾರಮುಲ್ಲ, ಕುಪ್ಪಾರ, ಅನಂತ್‍ನಾಗ್, ಶ್ರೀನಗರ ಜಿಲ್ಲೆಗಳ ಯುವಕ, ಯುವತಿಯರು ಕೊಡಗಿಗೆ ಆಗಮಿಸಿದ್ದಾರೆ. ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಜಿಲ್ಲಾ ಯುವ ಒಕ್ಕೂಟ, ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪ್ರೀ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ಇಂದು ಸಂಜೆ (ಡಿ.26) ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಕಾಶ್ಮೀರಿ ಯುವ ವಿನಿಮಯ ‘ಕಾರ್ಯಕ್ರಮ ನಡೆಯಲಿದೆ. ಇಲ್ಲಿಯ ಆಚಾರ-ವಿಚಾರ, ಕಲೆ, ಸಂಸ್ಕೃತಿ, ಉಡುಗೆ- ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ, ಸರಕಾರದ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಡುವ ಉದ್ದೇಶ ಇದೆ ಎಂದು ನೆಹರು ಯುವ ಕೇಂದ್ರ ದಕ್ಷಿಣ ಭಾರತ ವಲಯ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದ್ದಾರೆ. ಇಂದಿನಿಂದ ಡಿ.31ರ ವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಇಂದು ಸಂಜೆ 5 ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ…
ಮಡಿಕೇರಿ ಡಿ.26 : ಕ್ರೀಡೆಯ ತವರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಕ್ರೀಡಾಕೂಟಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ವಿರಾಜಪೇಟೆಯ ದುದ್ದಿಯಂಡ ಹೆಚ್. ಸೂಫಿ ಹಾಜಿ, ಇದರಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದಲ್ಲದೆ ಜಿಲ್ಲೆಯಿಂದ ಹೆಚ್ಚಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬಹುದೆಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ಆಶಯದಲ್ಲಿ ಸ್ಥಳೀಯ ಮೊಹಿದೀನ್ ಜುಮ್ಮಾ ಮಸೀದಿಯ ಆಟದ ಮೈದಾನದಲ್ಲಿ ಕಳೆದ 2 ದಿನಗಳಿಂದ ನಡೆದ ಮೊದಲನೇ ವರ್ಷದ ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಅವಧಿಯಲ್ಲೂ ಬೇರೆ ಬೇರೆ ರೀತಿಯ ಕ್ರೀಡಾಕೂಟಗಳು ನಿರಂತರವಾಗಿ ಜರುಗುತ್ತಿರುತ್ತವೆ. ಇದರಿಂದಾಗಿ ಕ್ರೀಡಾಕೂಟಗಳನ್ನು ಆಯೋಜಿಸುವ ತಂಡಗಳಿಗೆ ಸಹಜವಾಗಿಯೇ ಆರ್ಥಿಕ…
ಸೋಮವಾರಪೇಟೆ ಡಿ.25 : ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಭಾನುವಾರ ರಾತ್ರಿ 8ಕ್ಕೆ ಚರ್ಚ್ ಆವರಣದಲ್ಲಿ ಬಾಲ ಎಸುವನ್ನು ಗೋದಾಲಿಯಲ್ಲಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಚರ್ಚ್ನಲ್ಲಿ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಫಾದರ್ ಜಾನ್ ಡಿಕೂನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ. ಡಿಸಿಲ್ವ ಸೇರಿದಂತೆ ಹಲವರು ಇದ್ದರು.
ಮಡಿಕೇರಿ ಡಿ.25 : ಕ್ರಿಸ್‌ಮಸ್ ಮುನ್ನ ದಿನ ಭಾನುವಾರ ರಾತ್ರಿ ಸೋಮವಾರಪೇಟೆ ಜಯವೀರಮಾತೆ ಚರ್ಚ್ ನಲ್ಲಿ ಬಾಲಯೇಸುವಿನ ಮೂರ್ತಿಯನ್ನು ಗೋದಾಲಿಯಲ್ಲಿ ಮಲಗಿಸಿ ನಮನ ಸಲ್ಲಿಸಲಾಯಿತು. ನಂತರ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಧರ್ಮಗುರುಗಳಾದ ಎಂ.ರಾಯಪ್ಪ, ಜಾನ್ ಫರ್ನಾಂಡೋ, ಹಾಗೂ ಚರ್ಚ್ನ ಪಾಲನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸೋಮವಾರಪೇಟೆ ಡಿ.25 : ಸೋಮವಾರಪೇಟೆ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಸದರ ನಿಧಿಯಿಂದ ರೂ. 10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹೇಳಿದರು. ಹಲವು ದಶಕಗಳ ಹಿಂದೆ ನಿರ್ಮಾಣವಾಗಿರುವ ಬಸವೇಶ್ವರ ದೇವಾಲಯ ಮತ್ತು ಹಿಂಭಾಗದಲ್ಲಿರುವ ಅನ್ನದಾಸೋಹ ಕೊಠಡಿಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಮಿತಿಯ ಪ್ರಮುಖರು ಮಾಡಿದ ಮನವಿಗೆ ಸಂಸದರು ಸ್ಪಂದಿಸಿದರು. ಈ ಸಂದರ್ಭ ದೇವಾಲಯ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜು, ಪ್ರಮುಖರಾದ ಕೆ.ಜಿ. ಸುರೇಶ್, ಶಿವರಾಜ್, ಗಿರೀಶ್ ಇದ್ದರು.
ಸುಂಟಿಕೊಪ್ಪ ಡಿ.25 : ಮಂಜಿಕೆರೆ ಗ್ರಾಮದಲ್ಲಿರುವ ಶ್ರೀ ಆಧಿಶಕ್ತಿ, ಚಾಮುಂಡೇಶ್ವರಿ, ಶ್ರೀ ಪಾಷಣ ಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ 4ನೇ ವರ್ಷದ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ ಭಂಡಾರ ಪೂಜೆ, ಕಲ್ಲುರ್ಟಿ ಕಲ್ಕುಡ ದೈವಗಳ ನೇಮ, ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೈವಗಳ ನೇಮ, ಶ್ರೀ ಭಧ್ರಕಾಳೇಶ್ವರಿ ದೈವದ ನೇಮ ನಡೆಯಿತು. ಮರುದಿನ ಬೆಳಿಗ್ಗೆ ಕೊರಗ ಮತ್ತು ತನಿಯಾ ದೈವಗಳ ಕೋಲ ನೇಮೋತ್ಸವ ಜರುಗಿತು. ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಾಲಯದ ವತಿಯಿಂದ ಅನ್ನದಾನ ನಡೆಯಿತು.
ವಿರಾಜಪೇಟೆ ಡಿ.25 : ವೇದಿಕೆಯ ಆರಂಭ ಉತ್ತಮವಾಗಿದೆ ಆದರೆ ಅದನ್ನು ಮುಂದೆ ರಾಜಕೀಯ ಬೆರೆಯದಂತೆ ನೋಡಿಕೊಂಡು ಕಲಾವಿದೆಯರ ಬೆಳವಣಿಗೆಯ ವೇದಿಕೆಯಾಗಿ ಬೆಳೆಸಬೇಕು ಎಂದು ವಿರಾಜಪೇಟೆ ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಹೇಳಿದರು. ವಿರಾಜಪೇಟೆ ಪುರಭವನದಲ್ಲಿ ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಬದುಕಿನಲ್ಲಿ ಹೆಣ್ಣುಮಕ್ಕಳಿಗೆ ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಹಾಗೂ ಕೆಲಸದ ಒತ್ತಡವಿರುತ್ತದೆ. ಆಕೆ ಸಂಸಾರಸ್ಥೆಯಾದರೆ ಸಂಸಾರದ ಹೊಣೆಗಾರಿಕೆ ನಿಭಾಯಿಸಬೇಕು. ಜೊತೆಗೆ ವೃತ್ತಿಪರತೆಯಾದರೆ ಅದನ್ನು ನಿಭಾಯಿಸಬೇಕು. ಆದರೆ ಈ ನಡುವೆ ತನಗೆ ಸಿಗುವ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಮಾಜಮುಖಿಯಾಗಿಯೂ ಕೆಲಸ ಮಾಡಬೇಕಿದೆ. ಎಂದರು. ಉತ್ತಮ ಸಾಮಾಜಿಕ ಚಟುವಟಿಕೆ ಸಾಹಿತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಒಳ್ಳೆಯ ಹೆಸರುಗಳಿಸುವುದರೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ವೇದಿಕೆಯ ಸ್ಥಾಪಕ ಅಧ್ಯಕ್ಷೆ ಪುಷ್ಪಲತ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ನಮ್ಮ ಬಹುದಿನಗಳ ಕನಸಾಗಿದ್ದು, ಗ್ರಾಮೀಣ ಪ್ರತಿಭೆಗಳನ್ನು ಹೊರತಂದು ಲೇಖಕಿಯರನ್ನು ಸಂಘಟಿಸಲು ಈ ವೇದಿಕೆಯನ್ನು ರಚಿಸಲಾಗಿದೆ ಎಂದರು. ಗ್ರಾಮೀಣ ಮಹಿಳೆಯರು…
ಸುಂಟಿಕೊಪ್ಪ ಡಿ.25 : ಏಸುಕ್ರಿಸ್ತನ ಜನ್ಮದಿನ ಕ್ರಿಸ್‍ಮಸ್ ಹಬ್ಬವನ್ನು ಸುಂಟಿಕೊಪ್ಪದ ವಿವಿಧೆಡೆ ಸಂಭ್ರಮದಿಂದ ಆಚರಿಸಿದರು. ಸಂತ ಅಂತೋಣಿ ದೇವಾಲಯದಲ್ಲಿ ಪ್ರಭು ಕ್ರಿಸ್ತರ ಜನನದ ಸ್ಥಳವಾದ ಗೋದಾಲಿಯನ್ನು ನಿರ್ಮಿಸಿ ಅದರಲ್ಲಿ ಏಸುಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಕ್ರೈಸ್ತ ಭಾಂದವರು ಅಡಂಬರ ದಿವ್ಯ ಬಲಿಪೂಜೆ ಆರಾಧನೆಯಲ್ಲಿ ಪಾಲ್ಗೊಂಡು ಮುಂಬತ್ತಿಯನ್ನು ಹಚ್ಚಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರಿನ ಯೇಸು ರಕ್ಷಕರ ದೇವಾಲಯದ ಧರ್ಮಗುರು ರಾಬಿನ್, ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾ. ಅರುಳ್‍ಸೇಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ನವೀನ್ ಗಾಯನ ಬಲಿಪೂಜೆ ಹಾಗೂ ಪ್ರಭೋದನೆಯನ್ನು ನೇರವೇರಿಸಿದರು. ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ಮಕ್ಕಳು, ಯುವಕ, ಯವತಿರು, ಪುರುಷ ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೈಸ್ತ ಭಾಂದವರು ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 7ನೇ ಹೋಸಕೋಟೆ :: ಸುಂಟಿಕೊಪ್ಪ ವ್ಯಾಪ್ತಿಯ 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ರೇ.ಫಾ.ಸುನಿಲ್ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಸುಂಟಿಕೊಪ್ಪ ಸಿಎಸ್‍ಐ ಇಮಾನ್ಯುವೇಲ್ ಚರ್ಚ್ ಸಭಾಪಾಲಕರಾದ ಜೋಯೆಲ್ ಸುಹಾಸ್…






