ಲೇಖಕ: admin

ಮಡಿಕೇರಿ ನ.29 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕೊಡಗು, ಮಡಿಕೇರಿ ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಫ್‍ಎಂಕೆಎಂಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಓಡಿಪಿ-ಸ್ನೇಹಾಶ್ರಯ, ಆಶೋದಯ ಸಂಸ್ಥೆ ಹಾಗೂ ವಿಹಾನ್ ಆರೈಕೆ ಮತ್ತು ಬೆಂಬಲ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಡಿ.1 ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮುದಾಯ ಮುನ್ನಡೆಸಲಿ ಎಂಬ ಘೋಷವಾಕ್ಯದೊಂದಿಗೆ ‘ವಿಶ್ವ ಏಡ್ಸ್ ದಿನದ’ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಥಾ ಕಾರ್ಯಕ್ರಮ ನಡೆಯಲಿದೆ. ಜಾಥಾಗೆ…

Read More

ಮಡಿಕೇರಿ ನ.29 :  ವಿ ಬಾಡಗದಲ್ಲಿ ನಡೆಯುತ್ತಿರುವ ಹೈ ಫ್ಲೈಯರ್ಸ್ ಹಾಕಿ ಕಪ್ ಪಂದ್ಯಾವಳಿಯಲ್ಲಿ  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

Read More

ಮಡಿಕೇರಿ ನ.29 : ಕ್ರೀಡೆಯಲ್ಲಿರುವ ಅಂಶಗಳನ್ನು ವೃತ್ತಿಯಲ್ಲಿಯೂ ಸೇರಿಸಿಕೊಂಡರೆ ಉತ್ತಮ ಕೆಲಸಗಳನ್ನು ನಮ್ಮಿಂದ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಮತ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ಪೊಲೀಸರಿಗೆ ಕ್ರೀಡೆ ಎಂಬುದು ಅವಿಭಾಜ್ಯ ಅಂಗದಂತೆ. ಕ್ರೀಡೆಯಿಂದ ಶಿಸ್ತು, ಸಂಯಮ ಜೊತೆಗೆ ಬದ್ಧತೆ, ಸಮಸ್ವಯತೆಯೂ ಇರುತ್ತದೆ. ಪೊಲೀಸರು ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳುವುದರಿಂದ ಕೆಲಸಗಳು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಹೇಳಿದರು. ಕ್ರೀಡಾಕೂಟಗಳ ಆಯೋಜನೆಯಿಂದ ನಮ್ಮ ನಡುವೆ ಒಗ್ಗಟ್ಟು ಮೂಡಿ ಸಮನ್ವಯತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ವೃತ್ತಿ ತಂಡವಾಗಿ ಮಾಡುವ ಕೆಲಸವಾಗಿದ್ದು, ಇದನ್ನು ಅರಿತು ಸಿಬ್ಬಂದಿಗಳು ಪರಸ್ಪರ ಕೈಜೋಡಿಸಿ ಕಾರ್ಯೋನ್ಮುಖಗೊಳ್ಳಬೇಕು. ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ನಿತ್ಯ ಕ್ರೀಡಾಚಟುವಟಿಕೆಯಲ್ಲಿರುತ್ತದೆ. ಪೊಲೀಸರು ಕೂಡ ದಿನದ ಕೆಲಸಮಯ ಕ್ರೀಡೆಗೆಂದು ಮೀಸಲಿಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪ್ರತಿವರ್ಷ ಪೊಲೀಸ್ ಕ್ರೀಡಾಕೂಟದ ಮೂಲಕ…

Read More

ಕಾಗಿನೆಲೆ ನ.29 :   ಶ್ರೀ‌ ಕಾಗಿನೆಲೆ ಮಹಾಸಂಸ್ಥಾನ ಕನಕ‌ಗುರುಪೀಠದಲ್ಲಿ 536ನೇ ಶ್ರೀ ಕನಕ ಜಯಂತ್ಯೋತ್ಸವವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಿದರು. ಹುಬ್ಬಳ್ಳಿ, ಮೂರುಸಾವಿರ ಮಠದ ಶ್ರೀಮನ್ ಮಹಾರಾಜ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಹಜರತ್ ಬೀಜಾಪುರದ ಹಾಶಿಮ್ ಪೀರ್ ದರ್ಗಾದ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, ಕರ್ನಾಟಕ ಧರ್ಮಪ್ರಾಂತ್ಯದ ಧರ್ಮಗುರು ಡಾ.ಫಾ.ಅಲ್ಫೋನ್ಸ್ ಫರ್ನಾಂಡೀಸ್ ಯೇಸ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್, ಪ್ರಾಥಮಿಕ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆಯ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ರಾಣೆಬೆನ್ನೂರು ಶಾಸಕರಾದ ಪ್ರಕಾಶ್ ಕೋಳಿವಾಡ, ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Read More

ಮಡಿಕೇರಿ ನ.29 : ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ಇಂಡಿಯನ್ ಶೂಟಿಂಗ್ ಟೀಮ್ ಟ್ರಯಲ್ಸ್ ಗೆ ಆಯ್ಕೆಯಾಗಿದ್ದಾಳೆ. ಶೂಟಿಂಗ್ ಚಾಂಪಿಯನ್ ಶಿಪ್‍ನ 10 ಮೀ. ಏರ್ ಪಿಸ್ತೂಲ್ ಐಎಸ್‍ಎಸ್‍ಎಫ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಕಾನಡ್ಕ ಧನ್ವಿ ಯೂತ್ (19 ವರ್ಷದೊಳಗಿನವರು) ಹಾಗೂ ಜೂನಿಯರ್ (21 ವರ್ಷದೊಳಗಿನವರ) ವಿಭಾಗದಲ್ಲಿ ಇಂಡಿಯನ್ ಶೂಟಿಂಗ್ ಟೀಮ್ ಟ್ರಯಲ್ಸ್ ಗೆ ಆಯ್ಕೆಯಾಗಿದ್ದಾಳೆ. ಈಕೆ ಮರಗೋಡಿನ ಕೃಷಿಕ ಕಾನಡ್ಕ ಹನೀಶ್ ಅಪ್ಪಾಜಿ ಹಾಗೂ ಆಶಾ ದಂಪತಿಯ ಪುತ್ರಿ.            

Read More

ಮಡಿಕೇರಿ ನ.29: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಪುರಾತನ ಪದ್ಧತಿಯನ್ನು ಕೊಡವ ಮುಸ್ಲಿಂ ಸಮುದಾಯದವರು ಐಮಂಗಲದಲ್ಲಿ (ಕೊಮ್ಮೆತೊಡು) ನೂರಾರು ಸದಸ್ಯರ ಸಹಭಾಗಿತ್ವದೊಂದಿಗೆ  ಸಂಭ್ರಮದಿಂದ ಆಚರಿಸಿದರು. ಐಮಂಗಲ ಗ್ರಾಮದ ಕೋಳುಮಂಡ ಕುಟುಂಬಸ್ಥರ ಜಮ್ಮ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಕೆಎಂಎ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಐಮಂಗಲ ಗ್ರಾಮದ ಹಿರಿಯರು ಮತ್ತು ಕೆ.ಎಂ.ಎ. ಸದಸ್ಯರಾದ ಕೂತಂಬಟ್ಟೀರ ಹುಸೇನ್  ಪರಿಶುದ್ಧ ಸ್ವಲಾತ್ ನೊಂದಿಗೆ ಭತ್ತದ ತೆನೆಯನ್ನು ಕುಯ್ದು ನೆರೆದಿದ್ದವರಿಗೆಲ್ಲ ಹಂಚಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಎ. ಉಪಾಧ್ಯಕ್ಷ  ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಜಂಟಿ ಕಾರ್ಯದರ್ಶಿ ಕರತೋರೆರ ಕೆ ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಹಿರಿಯ ನಿರ್ದೇಶಕರಾದ ಚಿಮ್ಮಿಚಿರ ಕೆ. ಇಬ್ರಾಹಿಂ(ಉಮ್ಮಣಿ), ಕೊಂಡಂಗೇರಿ ಜಮಾಅತ್ ಅಧ್ಯಕ್ಷರು ಮತ್ತು ಕೆ.ಎಂ.ಎ. ನಿರ್ದೇಶಕರಾದ ಕುಪ್ಪಂದಿರ…

Read More

ಮಡಿಕೇರಿ ನ.29 : ಮಂಗಳೂರಿನ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸೋಮವಾರಪೇಟೆಯ ಕ್ರಿಯೇಟಿವ್ ಅಕಾಡೆಮಿ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿ ಬಿ.ಆರ್.ಹರ್ಷಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ. ಈತ ಸೋಮವಾರಪೇಟೆಯ ಬಿ.ಎಸ್.ರೋಹಿತ್ ಹಾಗೂ ಶಿಲ್ಪ ದಂಪತಿಯ ಪುತ್ರ. ಕೊಡಗಿನ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಸೋಸಿಯೇಷನ್‍ನ ತರಬೇತುದಾರ ಎನ್.ಸಿ.ಸುದರ್ಶನ್ ಅವರ ಬಳಿ ಹರ್ಷಲ್ ತರಬೇತಿ ಪಡೆದಿದ್ದಾನೆ.

Read More

ಮಡಿಕೇರಿ ನ.29 : ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೊಟ್ಟಿಲು ಮತ್ತು ಹಾಸಿಗೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಸಹ ರಾಜ್ಯಪಾಲ ದೇವಣಿರ ತಿಲಕ್, ಕಾರ್ಯದರ್ಶಿ ರತ್ನಾಕರ ರೈ, ಇನ್ನರ್‍ವೀಲ್ ಮಾಜಿ ಅಧ್ಯಕ್ಷರುಗಳಾದ ರಫಾಲಿ ರೈ, ಡಾ.ರೇಣುಕ ಮತ್ತಿತರರು ತೊಟ್ಟಿಲು ಮತ್ತು ಹಾಸಿಗೆಯನ್ನು ಮಕ್ಕಳ ರಕ್ಷಣಾ ಘಟಕದ ಸಂಚಾಲಕಿ ಶಾರದಾ ಹಾಗೂ ಸಿಬ್ಬಂದಿ ದರ್ಶನ್ ಗೆ ಹಸ್ತಾಂತರಿಸಿದರು. ಮಿಸ್ಟಿಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮಾನವ ಜನ್ಮ ಪಡೆಯಲು 86 ಲಕ್ಷ ಜನ್ಮಗಳ ಬಳಿಕವಷ್ಟೇ ಸಾಧ್ಯ ಎಂಬ ಮಾತನ್ನು ಉಲ್ಲೇಖಿಸಿದರು. ಶ್ರೇಷ್ಠ ಮಾನವ ಜನ್ಮ ದೊರೆತರೂ ಬೀದಿ ಪಾಲಾಗುವ ಮಕ್ಕಳ ಆರೈಕೆ ಮಾಡುವ ಸಿಬ್ಬಂದಿಗಳು ಮತ್ತು ಯೋಜನೆ ರೂಪಿಸುವ ಸರಕಾರದ ಹೆಜ್ಜೆ ಶ್ಲಾಘನೀಯ ಎಂದರು. ಉಪರಾಜ್ಯಪಾಲ ದೇವಣಿರ ತಿಲಕ್ ಮಾತನಾಡಿ, ಈ ರೀತಿಯ ಕೇಂದ್ರಗಳ ಅವಶ್ಯಕತೆಗೆ ರೋಟರಿ ಸದಾ ಸ್ಪಂದಿಸುತ್ತದೆ, ಸೇವಾ ಸಂಸ್ಥೆಗಳು ಅವಶ್ಯಕತೆ ಇರುವಲ್ಲಿ ಸಹಾಯ ಹಸ್ತ ಚಾಚಬೇಕು ಎಂದು ಕರೆ…

Read More

ಬೆಂಗಳೂರು ನ.29 : ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದ “ಕಾಂತಾರ” ಚಿತ್ರಕ್ಕೆ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (54ನೇ ಇಂಟರ್ ನ್ಯಾಷನಲ್ ಫಿಲ್ಮ ಫೆಸ್ಟಿವಲ್ ಆಫ್ ಇಂಡಿಯಾ) ತೀರ್ಪುಗಾರರ ವಿಶೇಷ ಪ್ರಶಸ್ತಿ “ಸಿಲ್ವರ್ ಪೀಕಾಕ್” (ಸ್ಪೆಷಲ್ ಜ್ಯೂರಿ ಅವಾರ್ಡ್) ಲಭಿಸಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಪಾತ್ರವಾಗಿದೆ. ಅದ್ಭುತ ನಟನೆ ಮತ್ತು ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಹರ್ಷ ಹಂಚಿಕೊಂಡಿರುವ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸ್ಪೆಷಲ್ ಜ್ಯೂರಿ ಅವಾರ್ಡ್ ನ್ನು ರಂಗಭೂಮಿ ಮತ್ತು ಚಿತ್ರರಂಗದ ಸ್ಫೂರ್ತಿಯ ಚಿಲುಮೆ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

Read More

ಬೆಂಗಳೂರು ನ.29 :   ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರಂತರ ಪ್ರಯತ್ನದಿಂದ ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು,  ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು. ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಮರುಹುಟ್ಟು ಸಿಕ್ಕಂತಾಗಿದೆ. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ಮಿಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ ಎಂದು ತಿಳಿಸಿದ್ದಾರೆ.

Read More