ಮಡಿಕೇರಿ ಜ.30 NEWS DESK : ಸುಂಟಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ರಜತ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಡ್ಯಾನ್ಸ್ ಮೇಳದಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ ಸೇರಿದಂತೆ ಮೂರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಸುಂಟಿಕೊಪ್ಪದ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ, ಕಾಲೇಜು ವಿಭಾಗದಲ್ಲಿ ಪ್ರಥಮ, ಹಾಗೂ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದೆ. ಇದರೊಂದಿಗೆ ಮುಳಿಯ ಜುವೆಲ್ಸ್ ಆನ್‌ಲೈನ್ ಮೂಲಕ ನಡೆಸಿದ ಮುಳಿಯ ರಾಷ್ಟ್ರ ಸಿಂಚನ ನೃತ್ಯ ಸ್ಪರ್ಧೆಯ ಗುಂಪು ಸ್ಪರ್ಧೆ ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಗಳಿಸಿದೆ. ಕಿಂಗ್ಸ್ ಆಫ್ ಕೂರ್ಗ್ ನ ನೃತ್ಯ ಸಂಯೋಜಕ ಮಹೇಶ್ ಹಾಗೂ ಕಿರಣ್ ಅವರುಗಳ ಮಾರ್ಗದರ್ಶನದಲ್ಲಿ ಸಂಸ್ಥೆಯ ಕಲಾವಿದರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಲೇಖಕ: admin
ಮಡಿಕೇರಿ ಜ.30 NEWS DESK : ಪೊನ್ನಂಪೇಟೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಣ್ಣೀರ ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಆಲೀರ ರಶೀದ್ ಆಯ್ಕೆಯಾಗಿದ್ದಾರೆ. ಒಟ್ಟು 20 ಸದಸ್ಯ ಬಲದ ಗ್ರಾ.ಪಂ ಯಲ್ಲಿ 11 ಬಿಜೆಪಿ ಬೆಂಬಲಿತ, 8 ಕಾಂಗ್ರೆಸ್ ಬೆಂಬಲಿತ ಮತ್ತು ಒಬ್ಬರು ಸ್ವತಂತ್ರ ಸದಸ್ಯರಿದ್ದಾರೆ. ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಾಗ ಬಿಜೆಪಿ ಬೆಂಬಲಿತ 3 ರಿಂದ 4 ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತರಿಗೆ ಜಯವಾಗಿದೆ. ಅಣ್ಣೀರ ಹರೀಶ್ 12 ಮತಗಳನ್ನು ಗಳಿಸಿದರೆ, ಒಂದು ಮತ ತಿರಸ್ಕೃತವಾದ ಕಾರಣ ಆಲೀರ ರಶೀದ್ 11 ಮತಗಳನ್ನು ಪಡೆದರು. ಈ ರಾಜಕೀಯ ಬೆಳವಣಿಗೆ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಡಿಕೇರಿ ಜ.30 NEWS DESK : ವಿರಾಜಪೇಟೆ ಬಳಿಯ ಬೋಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಗೆರೆ-ಕೆದಮುಳ್ಳೂರು ಸಂಪರ್ಕ ರಸ್ತೆ ಪ.ಜಾತಿ-ಪಂಗಡದ 2.5 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡಿದ್ದು, ನೂತನ ಕಾಂಕ್ರಿಟ್ ರಸ್ತೆಯನ್ನು ಗ್ರಾ.ಪಂ ಅದ್ಯಕ್ಷ ಎ.ಎಂ.ಬೋಪಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಬೋಪಣ್ಣ ಅವರು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಆಗಬೇಕು. ಮುಂದಿನ ಅನುದಾನದಲ್ಲಿ ಇನ್ನು ಉಳಿದಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸುವುದಾಗಿ ತಿಳಿಸಿದರಲ್ಲದೆ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯಯನ್ನು ನೀಡಲಾಗುವುದು ಎಂದರು. ಕಾಂಕ್ರಿಟ್ ರಸ್ತೆ ಉದ್ಘಾಟನೆ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಪಂಚಾಯಿತಿ ಸದಸ್ಯರಾದ ಎಂ.ಎಂ.ರಜಾಕ್, ವಸಂತಕಟ್ಟಿ, ಲತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಡಿಕೇರಿ ಜ.30 NEWS DESK : ಸಂಪಾಜೆ ಸಹಿತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ದಾಳಿಮಾಡಿ ಕೃಷಿ ನಾಶ ಪಡಿಸುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಪಾಜೆ ಕಾಂಗ್ರೆಸ್ ನಿಯೋಗ ಅರಣ್ಯ ಸಚಿವರನ್ನು ಭೇಟಿ ನೀಡಿ ಮನವಿ ಮಾಡಿದೆ. ಕೆಪಿಸಿಸಿ ವಕ್ತಾರ ಟಿ.ಎಂ.ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ ಸಂಪಾಜೆಯ ಕಾಂಗ್ರೆಸ್ ನಾಯಕರು, ಆನೆ ಹಾವಳಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಶಾಲಾ ಮಕ್ಕಳು, ವಾಹನಸವಾರರು ಭಯದಲ್ಲಿ ತೇರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಭಾಗದಲ್ಲಿ ಹೆಚ್ಚಾಗಿ ರಬ್ಬರ್, ಅಡಿಕೆ ಕೃಷಿ ಇದ್ದು, ನಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಪರಿಹಾರ ಧನ ಒದಗಿಸುವುದು, ದಕ್ಷಿಣ ಕನ್ನಡ ಜಿಲ್ಲೆಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನೇಮಕ ಮಾಡುವುದು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸುವುದು, ಸಂಪಾಜೆ ಗ್ರಾಮದ ಸ್ಮಶಾನ ಜಾಗದ…
ಚೆಯ್ಯಂಡಾಣೆ ಜ.30 NEWS DESK : ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ಧ್ವಜಾರೋಹಣ ನೆರೆವೇರಿಸುವ ಮೂಲಕ ಉರೂಸ್ ಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮ :: ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಮಾತನಾಡಿ, ಎಡಪಾಲ ಅಂಡತ್ ಮಾನಿ ದರ್ಗಾ ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದ ಹಾಗೂ ಕೇರಳದ ಹಲವಾರು ಜನರ ಮಾರಕ ರೋಗಗಳನ್ನು ಗುಣಪಡಿಸಿದ ಹಲವಾರು ಉದಾರಣೆಗಳನ್ನು ವಿವರಿಸಿ ಎಡಪಾಲ ಅಂಡತ್ ಮಾನಿ ದರ್ಗಾದ ಪುಣ್ಯ ಕಾರ್ಯವನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಎಡಪಾಲ ಜಮಾಅತ್ ಮಾಜಿ ಅಧ್ಯಕ್ಷ ಬಷೀರ್, ಉರೂಸ್ ಸಮಾರಂಭದಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಎಲ್ಲರು ಒಟ್ಟಾಗಿ ಭಾಗವಹಿಸುವ ಮೂಲಕ ಸೌಹಾರ್ದತೆಗೆ ಉರೂಸ್ ಸಾಕ್ಷಿಯಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಯು.ಶಾಫಿ,…
ಕಡಂಗ ಜ.30 NEWS DESK : ಕಡಂಗ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅತಿಥಿ ಗಣ್ಯರು ಉದ್ಘಾಟಿಸಿ, ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಲ್ಲ್ಯಾ0ಡ ಪಿ.ಬಿದ್ದಪ್ಪ, ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಂದಿನ ವರ್ಷ ಶಾಲೆ ಮುಚ್ಚುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗಿ ಹಾಜರಾಗಬೇಕು ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಕರೆ ನೀಡಿದರು. ನರಿಯ0ದಡ ಗ್ರಾ.ಪಂ ಅಧ್ಯಕ್ಷರಾದ ಕೌಶಿ ಕಾವೇರಮ್ಮ ಮಾತನಾಡಿ, ಕನ್ನಡ ಶಾಲೆಗಳಿಂದ ಕಲಿತಿರುವ ಪ್ರತಿಭಾವಂತ ವಿದ್ಯಾವಂತರು ಇಂದಿನ ಸಮಾಜದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಿಂದ ಕಲಿಯಲು ಎಲ್ಲರೂ ಪ್ರೇರಿತರಾಗಿ ಎಂದುರು. ನರಿಯ0ದಡ ಗ್ರಾ.ಪಂ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ ಸಂಸ್ಥೆಗೆ ಉನ್ನತ ಹೆಸರು ತರಬೇಕು ಹಾಗೂ ಜೀವನ ಪ್ರಮುಖ ಹಂತಗಳಲ್ಲಿ ವಿಜಯಶಾಲಿಗಳಾಗಬೇಕು ಎಂದು ನುಡಿದರು. ನರಿಯಂದಡ ಗ್ರಾ.ಪಂ…
ಮಡಿಕೇರಿ ಜ.30 NEWS DESK : ಸಂಸದ ಪ್ರತಾಪ್ ಸಿಂಹ ಅವರು ಧೈರ್ಯವಿದ್ದರೆ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ, ತಾವು ಸಂಸದರಾಗಿ ಆಯ್ಕೆಯಾದ ಆರಂಭದ 7 ತಿಂಗಳಿನಲ್ಲಿ ಕನಿಷ್ಠ 70 ಪೈಸೆಯನ್ನು ಕೇಂದ್ರ ಸರ್ಕಾರದಿಂದ ಕೊಡಗು ಜಿಲ್ಲೆಗೆ ತಂದಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯ ಕಡೆ ತಲೆಹಾಕದ ಸಂಸದ ಪ್ರತಾಪ್ ಸಿಂಹ ಅವರು ಇದೀಗ ಚುನಾವಣೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಳ್ಳು ಆರೋಪಗಳನ್ನ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ಅವಧಿಯ ಆರಂಭದ ಏಳು ತಿಂಗಳಿನಲ್ಲಿ ಕನಿಷ್ಠ 70 ಪೈಸೆಯನ್ನು ಕೇಂದ್ರದಿಂದ ಕೊಡಗಿಗೆ ತಂದಿದ್ದರೆ ಸಂಸದರು ಶ್ವೇತಪತ್ರ ಹೊರಡಿಸಲಿ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಒತ್ತಾಯಿಸಿದರು. ಜನರ ಹಾದಿ ತಪ್ಪಿಸುವ ಪ್ರಯತ್ನ…
ಮಡಿಕೇರಿ ಜ.30 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದ ಮುಖ್ಯ ಪ್ರವೇಶ ದ್ವಾರದ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ.
ನಾಪೋಕ್ಲು ಜ.30 NEWS DESK : ಸಂವಿಧಾನ ಜಾಗೃತಿ ಜಾಥಾವು ಎಮ್ಮೆಮಾಡು, ಬಲ್ಲಮಾವಟಿ, ಅಯ್ಯಂಗೆರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಕೆಪಿಎಸ್ ಶಾಲೆಯ ಶಿಕ್ಷಕಿ ಉ ಷಾರಾಣಿ ಸಂವಿಧಾನದ ರಚನೆ ಆಶಯಗಳ ಕುರಿತು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ರೈ ಮಾತನಾಡ, ಜಾಥದ ದ್ಯೇಯೋದ್ಧೇಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಪ್ರಮಾಣ ವಚನ ಸ್ವೀಕರಿಸಲಾಯಿತು. ಕಾರ್ಯಕ್ರಮ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ , ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ , ಮಾಚೇಟಿರ ಕುಸು ಕುಶಾಲಪ್ಪ, ಟಿ.ಎ.ಮಹಮ್ಮದ್ , ಯಶೋಧ ಕಟ್ಟಿ, ಗಂಗಮ್ಮ ,ಲಲಿತ, ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ರೈ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ.ಎಸ್. ಶಿವಣ್ಣ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆ ಯರು, ವಿವಿಧ ಶಾಲೆಗಳ ಶಿಕ್ಷಕ ವೃಂದ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಾಪೋಕ್ಲು ಬಸು ನಿಲ್ದಾಣದಲ್ಲಿ…
ಮಡಿಕೇರಿ ಜ.30 NEWS DESK : ಖಾಸಗಿ ಬಸ್ ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದ ಲಾಡ್ಜ್ ವೊಂದರಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ನಿವಾಸಿ ಮೊಣ್ಣಪ್ಪ ಎಂಬುವವರೇ ಮೃತ ವ್ಯಕ್ತಿ. ಮಡಿಕೇರಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






