ನಾಪೋಕ್ಲು ನ.13 : ಕೊಡವ ಜನಾಂಗ ಅನಾಧಿಕಾಲದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು, ಕೊಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಹೇಳಿದರು. ನಾಪೋಕ್ಲು ನಾಲ್ ನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಚೆರಿಯ ಪರಂಬುವಿನ ಕೆ.ಎಸ್. ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋವಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ದೇಶ ನಾನಾ ಜನಾಂಗ ಧರ್ಮ ಸಂಸ್ಕೃತಿಯ ಬೀಡು.ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. ಜನಾಂಗದ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದರಷ್ಟೇ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದ ಅವರು ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು. ಪ್ರಕೃತಿಯಲ್ಲಿ ಹೇಗೆ ವೈವಿಧ್ಯತೆ ಇದೆಯೋ ಅದೇ ರೀತಿ ಜನಾಂಗದಲ್ಲೂ ವೈವಿಧ್ಯತೆ ಇದೆ. ಇಲ್ಲಿನ ಭೂಮಿ, ನೆಲ, ಜಲ,ಕೋವಿಗಳನ್ನು ಪೂಜಿಸುವುದರ ಮೂಲಕ ಕೊಡವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದು, ಒಂದು ಕಿರಿಯ ಜನಾಂಗದ ಸಂಸ್ಕೃತಿಗೆ…
ಲೇಖಕ: admin
ನಾಪೋಕ್ಲು ನ.13 : ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದೃಢ ನಿರ್ಧಾರದಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಸಂಪಾದಕ ಡಾ.ಕಲ್ಯಾಟಂಡ ಬಿ.ಗಣಪತಿ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಕಕ್ಕಬ್ಬೆ ಕುಂಜಿಲ ಗ್ರಾಮದ ಕಲ್ಯಾಟಂಡ ಐನ್ ಮನೆಯಲ್ಲಿ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬಗಳ ನಡುವೆ ಒಗ್ಗಟ್ಟು, ಸಾಮರಸ್ಯ ಅಗತ್ಯ. ಕಲ್ಯಾಟಂಡ ಕುಟುಂಬದಲ್ಲಿ ವಾರ್ಷಿಕವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಕುಟುಂಬದ ಎಲ್ಲಾ ಸದಸ್ಯರು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉನ್ನತ ವಿದ್ಯಾಭ್ಯಾಸದ ಬಗ್ಗೆ ಉತ್ತೇಜಿಸುವ ಕೆಲಸ ಮಾಡಬೇಕು ಎಂದರು. ಕಲ್ಯಾಟಂಡ ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಕಲ್ಯಾಟಂಡ ಅಯ್ಯಪ್ಪ, ಕಲ್ಯಾಟಂಡ ಮುತ್ತಪ್ಪ,…
ಮಡಿಕೇರಿ ನ.13 : ಅಕಾಲಿಕ ಮಳೆಯಿಂದಾಗಿ ಈ ವರ್ಷ ಭಾರತದ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 2023-24 ರ ಸಾಲಿಗೆ ಕಾಫಿ ಮಂಡಳಿಯ ದೇಶದ ಒಟ್ಟು ಕಾಫಿ ಉತ್ಪಾದನೆಯನ್ನು 3,74,200 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಿದ್ದರೂ ಈ ವರ್ಷ ಉತ್ಪಾದನೆಯು ಶೇ.20, 30 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಕಾಫಿ ಉದ್ಯಮದ ಸಂಸ್ಥೆಗಳು ತಿಳಿಸಿವೆ. ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ ಆಫ್ ಸದರ್ನ್ ಇಂಡಿಯಾ (ಯುಪಿಎಎಸ್‌ಐ) ಕಾಫಿ ಸಮಿತಿಯ ಅಧ್ಯಕ್ಷ ಅಜೋಯ್ ತಿಪಯ್ಯ ಅವರ ಪ್ರಕಾರ “ನಿವ್ವಳ ಇಳುವರಿಯು ಈ ಸಾಲಿನಲ್ಲಿ ಶೇ.20, 30 ರಷ್ಟು ಕಡಿಮೆಯಾಗಲಿದೆ” “ಮೊದಲನೆಯದಾಗಿ, ವಲಸೆ ಕಾರ್ಮಿಕರು ದೂರವಿರುವಾಗ ಕಾಫಿ ಈಗಾಗಲೇ ಕೊಯ್ಲಿಗೆ ಸಿದ್ಧವಾಗಿದೆ. ಮತ್ತು ಎರಡನೆಯದಾಗಿ, ಅಕಾಲಿಕ ಮಳೆಯಿಂದ ಅನೇಕ ಎಸ್ಟೇಟ್‌ಗಳಲ್ಲಿ ಸಾಕಷ್ಟು ಕಾಫಿ ಹಣ್ಣಾಗಿದ್ದು, ಉದುರುವಿಕೆಯು ಆರಂಭಗೊಂಡಿದೆ.. ಸಾಮಾನ್ಯವಾಗಿ ಕಾಫಿ ಕೊಯ್ಲು ಡಿಸೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ಎರಡು ತಿಂಗಳು ಕೊಯ್ಲು ಇರುತ್ತದೆ. ರೊಬಸ್ಟಾ ಕೊಯ್ಲು ಇನ್ನೂ ತಡವಾಗುತ್ತದೆ. ಆದಾಗ್ಯೂ, ಈ…
ಮಡಿಕೇರಿ ನ.12 : ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಆನಂದಪುರ ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಿಧಿ ಪತ್ತೆಯಾಗಿದೆ. ಕಾಫಿ ಎಸ್ಟೇಟ್ ಒಳಗೆ ಈಶ್ವರ ದೇವಸ್ಥಾನವಿದ್ದು, ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಅಗೆಯುತ್ತಿದ್ದಾಗ ನಿಧಿ ಗೋಚರಿಸಿದೆ. ಬಂಗಾರವನ್ನು ಹೋಲುವ 1 ಕೆಜಿ 150 ಗ್ರಾಂ ತೂಕದ ಆಭರಣ ದೊರೆತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಿಧಿಯನ್ನು ತಹಶೀಲ್ದಾರರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯದ ಅನುಮತಿ ನಂತರ ಪುರಾತತ್ವ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಮಡಿಕೇರಿ ನ.12 : ಚಿತ್ರಕಲೆ ಮಕ್ಕಳ ಭಾವನೆ ಮತ್ತು ಕಲ್ಪನೆಯನ್ನು ಅನಾವರಣಗೊಳಿಸಬಲ್ಲ ಉತ್ತಮ ಕಲಾಪ್ರಕಾರವಾಗಿದೆ. ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದ್ದಾರೆ. ಮಡಿಕೇರಿಯ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಕ್ರೆಸೆಂಟ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಸ್ತುತ ದಿನಮಾನದ ವಿಷಯಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಕೃತಿಯೂ ಒಂದಾಗಿದೆ, ಪ್ರಕೃತಿಯನ್ನು ಉಳಿಸಿ ಬೆಳೆಸಲು ಪೋಷಕರು ಮಕ್ಕಳಿಗೆ ಪ್ರೇರಣೆಯನ್ನು ನೀಡಬೇಕು ಎಂದು ಕರೆ ನೀಡಿದರು. ಚಿತ್ರಕಲೆಗೆ ದೊಡ್ಡ ಇತಿಹಾಸವಿದೆ, ಈ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಮಕ್ಕಳಲ್ಲಿರುವ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿದೆ. ಮಕ್ಕಳ ದಿನಾಚರಣೆಯ ಹಿನ್ನೆಲೆ ಎಸ್‌ಎಸ್ ಆಸ್ಪತ್ರೆ ಅತಿ ಕಾಳಜಿಯಿಂದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ…
ಮಡಿಕೇರಿ ನ.12 : ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಮತ್ತು ಉತ್ತಮ ಸಂಸ್ಕಾರಗಳನ್ನು ಕಲಿಸಬೇಕೆಂದು ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಕರೆ ನೀಡಿದ್ದಾರೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಯಾಳಿ ಸಮಾಜದ ವತಿಯಿಂದ ಕಾನ್ ಬೈಲ್ ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ಓಣಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಗುರು ಹಿರಿಯರಿಗೆ ಗೌರವ ನೀಡುವ, ಸತ್ಕರಿಸುವಂತಹ ಸತ್ಪ್ರಜೆಗಳನ್ನಾಗಿ ರೂಪಿಸಬೇಕಿದೆ. ಎಲ್ಲಿ ನೋಡಿದರೂ ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿರುತ್ತಾರೆ, ತಮ್ಮ ಎದುರು ಯಾರೇ ಹಿರಿಯರು ಬಂದರೂ ಗೌರವ ನೀಡದಂತಹ ಮನೋಸ್ಥಿತಿ ಬಂದಿದೆ. ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಸಾಲದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಸಮಾಜದ ರೋಗಗ್ರಸ್ಥ ಹಾಗೂ ಧರ್ಮದ್ರೋಹಿಗಳು…
ಕುಶಾಲನಗರ ನ.12 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಶಾಲೆಯ ಇಕೋ ಕ್ಲಬ್ ವತಿಯಿಂದ “ಸ್ವಚ್ಛ ದೀಪಾವಳಿ-ಶುಭ ದೀಪಾವಳಿ” ಆಚರಣೆ ನಡೆಯಿತು. ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರು ಮಾತನಾಡಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಪ್ರಾಣಿ-ಪಕ್ಷಿಗಳ ಜೀವಕ್ಕೂ ಅಪಾಯವಿದೆ. ಹಾಗಾಗಿ, ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯ ರಹಿತವಾಗಿ ಆಚರಿಸಬೇಕಿದೆ ಎಂದರು. ‘ಸ್ವಚ್ಛ ದೀಪಾವಳಿ-ಶುಭ ದೀಪಾವಳಿ’ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಎಲ್ಲರೂ ಸಹಕರಿಸಿದರೆ ದೀಪಾವಳಿ ಸಂದರ್ಭದಲ್ಲಿ…
ಮಡಿಕೇರಿ ನ.12 : ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದ ಭದ್ರತೆಯ ಅಗತ್ಯವಿದೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದು ಮತ್ತು ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಸಿಎನ್‌ಸಿ ವತಿಯಿಂದ ನೆಲಜಿ ನಾಡ್ ಮಂದ್ ನಲ್ಲಿ ನಡೆದ ಪಾದಯಾತ್ರೆ ಮತ್ತು ಕೊಡವ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು ಎಂದು ಒತ್ತಾಯಿಸಿದರು. ಕೊಡವ ಕಸ್ಟಮರಿ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ…
ಮಡಿಕೇರಿ ನ.11 : ಕುಶಾಲನಗರದ ಸೋಮೇಶ್ವರ ಬಡಾವಣೆಯ ಮನೆಯೊಂದರಲ್ಲಿ., ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಅಲ್ಲಿನ ನಿವಾಸಿ, ಪಿ.ಎಸ್. ಜಾನ್ ಅವರ ಮನೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿ ಕುರಿತಾಗಿ ಏರ್ಪಡಿಸಲಾಗಿದ್ದ `ಮನೆಯಂಗಣದಲ್ಲಿ ಕನ್ನಡ ರಿಂಗಣ’ ಹರಟೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಮನಸುಗಳು ಒಂದಾಗಿ ಬೆರೆತು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು ತಮಗಿಷ್ಟವಾದ ಕನ್ನಡ ಹಾಡುಗಳನ್ನು ಹಾಡಿದರೆ, ಕೆಲವರು ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಇನ್ನೂ ಕೆಲವರು ಮನದಾಳದ ಮಾತುಗಳನ್ನು ಹೇಳಿಕೊಂಡರೆ, ಇನ್ನೂ ಕೆಲವರು ಕವನ, ಚುಟುಕಗಳನ್ನು ಹೇಳಿದರು. ಪರಸ್ಪರ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಕನ್ನಡ ಆಸ್ತಿಯಾಗಬೇಕು :: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಇದೊಂದು ಅಪರೂಪದ ಕ್ಷಣವಾಗಿದೆ. ಪ್ರೀತಿಯ ಕರೆಗೆ ಅಭಿಮಾನವಿಟ್ಟು ಕನ್ನಡದ ಮೂಲಕ ಸಂಬಂಧ ಕಲ್ಪಿಸಿ ಪರಸ್ಪರ ಒಂದುಗೂಡುವಿಕೆಗೆ ಕಾರಣವಾಗಿದೆ. ಹರಟೆಯ ಮೂಲಕ ಅಭಿಪ್ರಾಯಗಳನ್ನು ಸಮಾಜಕ್ಕೆ ಹೇಳಿದಾಗ ಮುಂದಿನ ಪೀಳಿಗೆಗೆ ತಲಪುವದಲ್ಲದೆ, ಕನ್ನಡದ…
ಮಡಿಕೇರಿ ನ.11 : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ವಿವಿಧ ಭಾಗ್ಯಗಳನ್ನು ಪೂರೈಸುವುದರಲ್ಲೇ ಮಗ್ನವಾಗಿರುವ ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಕಡೆಗಣಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಕೊಡಗಿನ ರಸ್ತೆಗಳು ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ಆರು ತಿಂಗಳು ಮಳೆಯಲ್ಲೇ ಕಳೆದು ಹೋಗುವ ಕೊಡಗು ಜಿಲ್ಲೆ ಮಳೆಯ ಕಾರಣದಿಂದಲೇ ರಸ್ತೆಗಳನ್ನು ಕಳೆದುಕೊಳ್ಳುತ್ತಿರುವುದು ಸಾಮಾನ್ಯ. ಆದರೆ ಗುಣಮಟ್ಟದ ರಸ್ತೆಗಳು 5 ರಿಂದ 10 ವರ್ಷ ಹಾಳಾಗದೆ ಉಳಿದ ಉದಾಹರಣೆಗಳಿವೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯೇ ಹೆಚ್ಚಾಗಿದ್ದು, ಇಲ್ಲಿನ ರಸ್ತೆಗಳ ದುಸ್ಥಿತಿ ಆಡಳಿತ ನಡೆಸುತ್ತಿರುವವರಿಗೇ ಪ್ರೀತಿ ಎಂಬಂತ್ತಾಗಿದೆ. ಕುಶಾಲನಗರ- ವಾಲ್ನೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಮತ್ತು ಪಾದಾಚಾರಿಗಳ ಸಂಚಾರ ಅಸಾಧ್ಯವಾಗಿದೆ. ನೆಲ್ಯಹುದಿಕೇರಿವರೆಗೆ ಸಂಪೂರ್ಣವಾಗಿ ರಸ್ತೆ ಹೊಂಡ ಗುಂಡಿಗಳಾಗಿದ್ದು, ಗ್ರಾಮಸ್ಥರೇ ಮಣ್ಣು ಹಾಕಿ ಗುಂಡಿ ಮುಚ್ಚಬೇಕಾದ ಪರಿಸ್ಥಿತಿ ಉದ್ಭವಿಸಿದೆ. ನಿತ್ಯ ಪ್ರವಾಸಿಗರ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲದೆ…






