ಲೇಖಕ: admin

ಮಡಿಕೇರಿ ನ.13: ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ, ಗ್ರೇಡ್-3 ವೃಂದದ 1 ಹಿಂಬಾಕಿ (ಬ್ಯಾಕ್‍ಲಾಗ್) ಹುದ್ದೆ ಸೇರಿದಂತೆ ಒಟ್ಟು 2 ಹುದ್ದೆಗಳು, ಬೆರಳಚ್ಚುಗಾರರ ವೃಂದದ 17 ಹುದ್ದೆಗಳು, ನಕಲು-ಬೆರಳಚ್ಚುಗಾರರ ವೃಂದದ 7 ಹುದ್ದೆಗಳು, ಆದೇಶಿಕ ಜಾರಿಕಾರ ವೃಂದದ 8 ಹುದ್ದೆಗಳು ಹಾಗೂ ಜವಾನ/ ಸೇವಕ ವೃಂದದ 30 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ https://kodagu.dcourts.gov.in/notice-category/recruitments/ ರಲ್ಲಿ ನೀಡಲಾದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ಡಿ.10 ರ ರಾತ್ರಿ 11.59 ಗಂಟೆಯೊಳಗೆ ಸಲ್ಲಿಸಬೇಕು. ಮತ್ತು ಪೂರ್ಣ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸಲು ಡಿ.11 ಕೊನೆಯ ದಿನವಾಗಿದೆ. ಆನ್‍ಲೈನ್ ಹೊರತುಪಡಿಸಿ, ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಮಡಿಕೇರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

Read More

ಮಡಿಕೇರಿ ನ.13 : ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥರಾಗಿರುವ ಕೋಡಿ ಮೋಟಯ್ಯ ಅವರ ರಾಜೀನಾಮೆ ಕೇಳುವುದು ಅರ್ಥಹೀನ ಪ್ರಸ್ತಾಪವೆಂದು ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ಸೂದನ ಎಸ್.ಈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಹಾಗೂ ಶ್ರೀ ರಂಗಪಟ್ಟಣದ ಮಠಾಧೀಶರು ಭಕ್ತಿ ಮತ್ತು ಅಭಿಮಾನದಿಂದ ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕನ್ನಡ ರಾಜ್ಯೋತ್ಸವವಾದ ಕಾರಣ “ಕನ್ನಡ” ಧ್ವಜ ಪ್ರದರ್ಶಿಸಿದ್ದಾರೆಯೇ ಹೊರತು ಆರೋಹಣ ಮಾಡಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಧ್ವಜ ಪ್ರದರ್ಶಿಸಿದರೆ ತಪ್ಪೇನು ಇಲ್ಲ, ಈ ವಿಚಾರದಲ್ಲಿ ವಿನಾಕಾರಣ ಕೋಡಿ ಮೋಟಯ್ಯ ಅವರನ್ನು ಎಳೆದು ತಂದಿರುವುದು ಖಂಡನೀಯವೆಂದು ತಿಳಿಸಿದ್ದಾರೆ. ಪರಂಪರೆಯಂತೆ ತಲಕಾವೇರಿ ಕ್ಷೇತ್ರದಲ್ಲಿ ಕೋಡಿ ಮನೆಯವರು ತಕ್ಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಭಕ್ತಿಯಿಂದ ಕಾವೇರಿ ಮಾತೆಯ ಸೇವೆ ಮಾಡುತ್ತಿದ್ದಾರೆ. ಯಾವುದೋ ಒಂದು ವಿಚಾರವನ್ನು ನೆಪವಾಗಿಟ್ಟುಕೊಂಡು ತಕ್ಕ ಮುಖ್ಯಸ್ಥರತ್ತ ಬೆರಳು ತೋರುವ ಕ್ರಮವನ್ನು ವೈಯುಕ್ತಿಕ ದ್ವೇಷ ಎಂದು ಭಾವಿಸಬೇಕಾಗುತ್ತದೆ. ಯಾರೆಲ್ಲ “ಕಾವೇರಿ” ನದಿಯ ನೀರು ಸೇವಿಸಿ ಪುನೀತರಾಗುತ್ತಾರೋ ಅವರೆಲ್ಲರಿಗೂ ಮಾತೆಯನ್ನು…

Read More

ಮಡಿಕೇರಿ ನ.13 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಡಿಕೇರಿ ರೋಟರಿ  ಸಹಯೋಗದೊಂದಿಗೆ ಚೇರಂಬಾಣೆ ವೃತ್ತದ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನಾಚರಣೆ ನಡೆಯಿತು. ಮಡಿಕೇರಿಯ ರೆಡ್ ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸುಮಾರು ನೂರು ಮಕ್ಕಳು ಛದ್ಮವೇಶ ನೃತ್ಯ ಮತ್ತು ಅಭಿನಯ ಗೀತೆಗಳಲ್ಲಿ ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ರೋಟರಿ ಸಂಸ್ಥೆ ಅಧ್ಯಕ್ಷರಾದ ಗೀತಾ ಗಿರೀಶ್  ಪ್ರಮಾಣ ಪತ್ರ, ಡ್ರಾಯಿಂಗ್ ಪುಸ್ತಕ, ಕ್ರಯನ್ಸ್ ಗಳನ್ನು  ವಿತರಿಸಿದರು. ಅಂಗನವಾಡಿ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಪೋಷಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.  ಛದ್ಮವೇಶ ನೃತ್ಯ ಮತ್ತು ಹಾಡುಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರೆಡ್ ಕಾರ್ಡ್ ಸಂಸ್ಥೆಯ ಸಭಾಪತಿಗಳಾದ ರವೀಂದ್ರ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಗೀತ ಗಿರೀಶ್ ಕಾರ್ಯಕ್ರಮಕ್ಕೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶುಭ…

Read More

ಮಡಿಕೇರಿ ನ.13 :  ದೀಪಾವಳಿ ಹಬ್ಬದ ಪ್ರಯುಕ್ತ ಮಡಿಕೇರಿಯ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ 10ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ  ಕಾರ್ಯಕ್ರಮವನ್ನು ಜಿ.ಪಂ ಮಾಜಿ ಅಧ್ಯಕ್ಷ ಬಿ.ಎ.ಹರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕೆಂದು ಕರೆ ನೀಡಿದರು. ನಿವೃತ್ತ ಶಿಕ್ಷಕಿ ಕಲಾವತಿ, ಪ್ರಮುಖರಾದ  ಆರ್‌.ಪಿ.ಚಂದ್ರಶೇಖರ್,  ಚೆರಿಯಮನೆ ತಿಮ್ಮಯ್ಯ, ಕನ್ನಿಕಾ, ದಮಯಂತಿ, ದಿಲೀಪ್, ಮಹೇಶ್ ಮತ್ತಿತರರು ಹಾಜರಿದ್ದು, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಹಗ್ಗಜಗ್ಗಾಟ ಮತ್ತು ಕ್ರಿಕೆಟ್‍ನಲ್ಲಿ ಶ್ರೀರಾಮ ಯುವಕ ಸಂಘ ಪ್ರಥಮ, ಹಗ್ಗಜಗ್ಗಾಟದಲ್ಲಿ ಶ್ರೀ ವಿಷ್ಣು ಯುವಕ ಮಿತ್ರ ಮಂಡಳಿ ದ್ವಿತೀಯ, ಕ್ರಿಕೆಟ್ ಪಂದ್ಯಾವಳಿಯಲ್ಲಿ ದೃಷ್ಟಿ ಗಣಪತಿ ಯುವಕ ಮಿತ್ರ ಮಂಡಳಿ ದ್ವಿತೀಯ ಸ್ಥಾನವನ್ನು ಗಳಿಸಿತು.

Read More

ಸೋಮವಾರಪೇಟೆ  ನ.13 :  ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು. ಪಟ್ಟಣದ ಸೋಮೇಶ್ವರ ದೇವಾಲಯದ ಬಳಿಯ ಮೂಕಾಂಬಿಕಾ ಕಂಪ್ಯೂಟರ್ ಆವರಣದಲ್ಲಿ ಕರ್ನಾಟಕ ಒನ್, ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅರ್ಜಿ ಸಲ್ಲಿಸಲು ಹಾಗೂ ಸವಲತ್ತು ಪಡೆಯಲು ಉಂಟಾಗುವ ಜನಸಂದಣಿ ತಪ್ಪಿಸುವುದರೊಂದಿಗೆ ಜನಸಾಮಾನ್ಯರ ಬಳಿಗೆ ಇಲಾಖೆ ತಲುಪಿಸಲು ಪಂಚಾಯ್ತಿಯ ಮಟ್ಟದಲ್ಲಿ ಗ್ರಾಮ ಒನ್ ಹಾಗೂ ತಾಲೂಕು ಮಟ್ಟದಲ್ಲಿ ಕರ್ನಾಟಕ ಒನ್ ಎಂಬ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಆರಂಭಿಸಿದೆ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ತಾಲೂಕು ದಂಡಾಧಿಕಾರಿ,ತಹಶೀಲ್ದಾರ್ ನರಗುಂದ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಈ ಕರ್ನಾಟಕ ಒನ್ ಇಲ್ಲಿ ಸರ್ಕಾರಿ ಕಚೇರಿಗಳಲ್ಲಿ ನೀಡಬಹುದಾದ ಅರ್ಜಿಗಳನ್ನು ಸಲ್ಲಿಸಬಹುದು, ಹಲವು ದಾಖಲೆಗಳನ್ನು ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಪ.ಪಂ  ಸದಸ್ಯರುಗಳಾದ ಬಿ.ಸಿ.ವೆಂಕಟೇಶ್, ಶೀಲಾಡಿಸೋಜ, ಮೋಹಿನಿ, ಬಿಟ್ಟು ಬಿ.ಆರ್.ಮಹೇಶ್, ಪ.ಪಂ…

Read More

ಮಡಿಕೇರಿ ನ.13 : ಕೊಡಗಿನ ಪುತ್ತರಿ  ಹಬ್ಬ ನ.27 ರಂದು  ನಡೆಯಲಿದೆ. ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತಪ್ಪ ದೇವಾಲಯದಲ್ಲಿ  ಇಂದು ಹಬ್ಬದ ದಿನ ನಿಗದಿ  ಮಾಡಲಾಯಿತು. ರಾತ್ರಿ 7.20ಕ್ಕೆ ನೆರೆ ಕಟ್ಟುವುದು, 8.20ಕ್ಕೆ ಕದಿರು ತೆಗೆಯುವುದು, ರಾತ್ರಿ 9.20ಕ್ಕೆ  ಪ್ರಸಾದ ಸ್ವೀಕಾರ. ಅದರಂತೆ ನಾಡಿನಾದ್ಯಂತ ರಾತ್ರಿ 7.45ಕ್ಕೆ ನೆರೆ ಕಟ್ಟುವುದು,  8.45ಕ್ಕೆ ಕದಿರು ತೆಗೆಯುವುದು,  ರಾತ್ರಿ 9.45ಕ್ಕೆ  ಬೋಜನಕ್ಕೆ ಒಳ್ಳೆಯ ಸಮಯ ಎಂದು ಹಿರಿಯರು ತಿಳಿಸಿದರು.

Read More

ನಾಪೋಕ್ಲು ನ.13 : ಕೊಡವ ಜನಾಂಗ ಅನಾಧಿಕಾಲದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು, ಕೊಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಹೇಳಿದರು. ನಾಪೋಕ್ಲು ನಾಲ್ ನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಚೆರಿಯ ಪರಂಬುವಿನ ಕೆ.ಎಸ್. ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋವಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ದೇಶ ನಾನಾ ಜನಾಂಗ ಧರ್ಮ ಸಂಸ್ಕೃತಿಯ ಬೀಡು.ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. ಜನಾಂಗದ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದರಷ್ಟೇ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದ ಅವರು ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು. ಪ್ರಕೃತಿಯಲ್ಲಿ ಹೇಗೆ ವೈವಿಧ್ಯತೆ ಇದೆಯೋ ಅದೇ ರೀತಿ ಜನಾಂಗದಲ್ಲೂ ವೈವಿಧ್ಯತೆ ಇದೆ. ಇಲ್ಲಿನ ಭೂಮಿ, ನೆಲ, ಜಲ,ಕೋವಿಗಳನ್ನು ಪೂಜಿಸುವುದರ ಮೂಲಕ ಕೊಡವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದು, ಒಂದು ಕಿರಿಯ ಜನಾಂಗದ ಸಂಸ್ಕೃತಿಗೆ…

Read More

ನಾಪೋಕ್ಲು ನ.13 : ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದೃಢ ನಿರ್ಧಾರದಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಸಂಪಾದಕ ಡಾ.ಕಲ್ಯಾಟಂಡ ಬಿ.ಗಣಪತಿ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಕಕ್ಕಬ್ಬೆ ಕುಂಜಿಲ ಗ್ರಾಮದ ಕಲ್ಯಾಟಂಡ ಐನ್ ಮನೆಯಲ್ಲಿ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬಗಳ ನಡುವೆ ಒಗ್ಗಟ್ಟು, ಸಾಮರಸ್ಯ ಅಗತ್ಯ. ಕಲ್ಯಾಟಂಡ ಕುಟುಂಬದಲ್ಲಿ ವಾರ್ಷಿಕವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಕುಟುಂಬದ ಎಲ್ಲಾ ಸದಸ್ಯರು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉನ್ನತ ವಿದ್ಯಾಭ್ಯಾಸದ ಬಗ್ಗೆ ಉತ್ತೇಜಿಸುವ ಕೆಲಸ ಮಾಡಬೇಕು ಎಂದರು. ಕಲ್ಯಾಟಂಡ ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಕಲ್ಯಾಟಂಡ ಅಯ್ಯಪ್ಪ, ಕಲ್ಯಾಟಂಡ ಮುತ್ತಪ್ಪ,…

Read More

ಮಡಿಕೇರಿ ನ.13 :  ಅಕಾಲಿಕ ಮಳೆಯಿಂದಾಗಿ ಈ ವರ್ಷ ಭಾರತದ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 2023-24 ರ ಸಾಲಿಗೆ ಕಾಫಿ ಮಂಡಳಿಯ ದೇಶದ ಒಟ್ಟು ಕಾಫಿ ಉತ್ಪಾದನೆಯನ್ನು 3,74,200 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಿದ್ದರೂ ಈ ವರ್ಷ ಉತ್ಪಾದನೆಯು ಶೇ.20, 30  ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಕಾಫಿ ಉದ್ಯಮದ ಸಂಸ್ಥೆಗಳು ತಿಳಿಸಿವೆ. ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ ಆಫ್ ಸದರ್ನ್ ಇಂಡಿಯಾ (ಯುಪಿಎಎಸ್‌ಐ) ಕಾಫಿ ಸಮಿತಿಯ ಅಧ್ಯಕ್ಷ ಅಜೋಯ್ ತಿಪಯ್ಯ ಅವರ ಪ್ರಕಾರ “ನಿವ್ವಳ ಇಳುವರಿಯು ಈ ಸಾಲಿನಲ್ಲಿ ಶೇ.20, 30  ರಷ್ಟು ಕಡಿಮೆಯಾಗಲಿದೆ” “ಮೊದಲನೆಯದಾಗಿ, ವಲಸೆ ಕಾರ್ಮಿಕರು ದೂರವಿರುವಾಗ ಕಾಫಿ ಈಗಾಗಲೇ ಕೊಯ್ಲಿಗೆ ಸಿದ್ಧವಾಗಿದೆ. ಮತ್ತು ಎರಡನೆಯದಾಗಿ, ಅಕಾಲಿಕ ಮಳೆಯಿಂದ ಅನೇಕ ಎಸ್ಟೇಟ್‌ಗಳಲ್ಲಿ ಸಾಕಷ್ಟು ಕಾಫಿ ಹಣ್ಣಾಗಿದ್ದು, ಉದುರುವಿಕೆಯು ಆರಂಭಗೊಂಡಿದೆ.. ಸಾಮಾನ್ಯವಾಗಿ ಕಾಫಿ ಕೊಯ್ಲು ಡಿಸೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ಎರಡು ತಿಂಗಳು ಕೊಯ್ಲು ಇರುತ್ತದೆ. ರೊಬಸ್ಟಾ ಕೊಯ್ಲು ಇನ್ನೂ ತಡವಾಗುತ್ತದೆ. ಆದಾಗ್ಯೂ, ಈ…

Read More

ಮಡಿಕೇರಿ ನ.12 : ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಆನಂದಪುರ ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಿಧಿ ಪತ್ತೆಯಾಗಿದೆ. ಕಾಫಿ ಎಸ್ಟೇಟ್ ಒಳಗೆ ಈಶ್ವರ ದೇವಸ್ಥಾನವಿದ್ದು, ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಅಗೆಯುತ್ತಿದ್ದಾಗ ನಿಧಿ ಗೋಚರಿಸಿದೆ. ಬಂಗಾರವನ್ನು ಹೋಲುವ 1 ಕೆಜಿ 150 ಗ್ರಾಂ ತೂಕದ ಆಭರಣ ದೊರೆತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಿಧಿಯನ್ನು ತಹಶೀಲ್ದಾರರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯದ ಅನುಮತಿ ನಂತರ ಪುರಾತತ್ವ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

Read More