ಲೇಖಕ: admin

ಮಡಿಕೇರಿ ನ.28 :  ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು  ನಿಟ್ಟೂರು ಕಾರ್ಮಾಡು ಕಾಲಭೈರವ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯದ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಧಾನ್ಯಲಕ್ಷ್ಮಿಯನ್ನು ಮನೆಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಕಾಲಭೈರವ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ  ಮೇಚಂಡ ಸೋಮಯ್ಯ, ಉಪಾಧ್ಯಕ್ಷ ಚೀರಂಡ ಸುಬ್ರಮಣಿ, ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಅರ್ಚಕರಾದ ಸುರೇಶ್ ಭಟ್, ನಿರ್ದೇಶಕರಾದ ತಾಣಚ್ಚೀರ ಲೋಕೇಶ್, ಪಡಿಞರಂಡ ಪ್ರಭು ಕುಮಾರ್, ಪೊನ್ನಿಮಾಡ ಸಂತೋಷ್, ಹೊಟ್ಟೆಂಗಡ ಅಜಿತ್, ಲೋಹಿತ್, ಕಾಡೇಮಾಡ ಪ್ರವೀಣ್, ಪೊನ್ನಿಮಾಡ ತಿಮ್ಮಯ್ಯ, ಕಳ್ಳೇಂಗಡ ಉತ್ತಯ್ಯ, ಕಾಶಿ ವಿವೇಕಾನಂದ, ಪೊನ್ನಿಮಾಡ ಕುಶಾಲಪ್ಪ, ಮಲ್ಲೇಂಗಡ ಶಶಿಮಣಿ, ಕೊಲತಂಡ ಮುತ್ತಪ್ಪ, ಮತ್ತಿತರು ಹಾಜರಿದ್ದರು.

Read More

ಮಡಿಕೇರಿ ನ.28 : ಕಳೆದ ಬಾರಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗು ಪ್ರವಾಹದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಪ್ರಾಕೃತಿಕ ವಿಕೋಪ ನಿಧಿಯ ಕಾಮಗಾರಿಯನ್ನು ಪ್ರಸ್ತುತ ತಡೆ ಹಿಡಿಯುವ ಮೂಲಕ ಚೆಟ್ಟಳ್ಳಿ ಗ್ರಾಮದ ಅಬಿವೃದ್ಧಿಗೆ ತಡೆಯೊಡ್ಡಿರುವ ಕ್ರಮ ಸರಿಯಲ್ಲವೆಂದು ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ ತಿಳಿಸಿದ್ದಾರೆ. ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರಕಾರದ ಶಾಸಕರಾದ ಅಪ್ಪಚ್ಚುರಂಜನ್‍ರವರು ಖುದ್ದಾಗಿ ಸ್ಥಳ ಪರಿಶೀಲಿಸಿ, ಪ್ರಾಕೃತಿಕ ವೀಕೋಪ ನಿಧಿಯಿಂದ 69 ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಮಾರು 7 ಕೋಟಿ ಹಣ ಬಿಡುಗಡೆಗೊಂಡಿತ್ತು ಎಂದು ತಿಳಿಸಿದರು. ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರಿನಿಂದ ಕೂಡ್ಲೂರು ಚೆಟ್ಟಳ್ಳಿ ಶಾಲೆಯ ಮೂಲಕ ಹಾದು ಹೋಗುವ ರಸ್ತೆ ಕಾಮಗಾರಿಗೆ 10 ಲಕ್ಷ, ಚೆಟ್ಟಳ್ಳಿ, ಪುತ್ತರಿರ ಕುಟುಂಬದ ಸ್ಮಶಾನ ರಸ್ತೆಗೆ 10 ಲಕ್ಷ, ಕಂಡಕರೆ ಅಯ್ಯಪ್ಪ…

Read More

ಸುಂಟಿಕೊಪ್ಪ, ನ.28: ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಪೋಷಕರ ಗುರಿ ಮತ್ತು ಉದ್ದೇಶವಾಗಿರಲೆಂದು ಎಂಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಶೈನಿ ಡಿಸೋಜ ಕಿವಿಮಾತು ಹೇಳಿದ್ದಾರೆ. ಯೂತ್ ಫೇಡರೇಷನ್ ಕ್ಲಬ್ ಹಾಗೂ ಗ್ರಾಮಸ್ಥರ ವತಿಯಿಂದ 7ನೇ ಮೈಲಿನಲ್ಲಿ ನಡೆದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾವು ತನ್ನ ಬಾಲ್ಯದ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಂಟಿಕೊಪ್ಪದಲ್ಲಿ ಪಡೆದಿದ್ದು, ದಿನ ನಿತ್ಯದ ಓಡಾಟದ ನಡುವೆಯು ತಂದೆತಾಯಿಗಳ ಪ್ರೋತ್ಸಾಹ ಗುರು ಹಿರಿಯರ ಒತ್ತಾಸೆಯಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನಿಮ್ಮೆಲ್ಲಾರ ಪ್ರೀತಿ ವಿಶ್ವಾಸ ಮತ್ತು ಅಭಿಮಾನಕ್ಕೆ ತಾನು ಚಿರಋಣಿ ಎಂದು ಭಾವುಕರಾಗಿ ಶೈನಿ ಡಿಸೋಜ ನುಡಿದರು. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಡೆಗೆ ಪೋಷಕರು ಗಮನ ಹರಿಸವಂತಾಗಬೇಕು ಎಂದು ಕರೆ ನೀಡಿದರು. ಯೂತ್ ಫೇಡರೇಷನ್ ಕ್ಲಬ್ ಮತ್ತು ಗ್ರಾಮಸ್ಥರು ಹಾಗೂ ಪೋಷಕರಾದ ಗ್ಯಾಬ್ರಿಯಲ್ ಡಿಸೋಜ, ಸಿಸಿಲಿಯ ಡಿಸೋಜ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ಈ…

Read More

ಕುಶಾಲನಗರ ನ.28 : ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯ ನಿವಾಸಿಗಳು ಜತೆಗೂಡಿ ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಬೃಂದಾವನ ಬಡಾವಣೆಯಲ್ಲಿ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಹುತ್ತರಿ ಹಬ್ಬ ಆಚರಣೆಯು ಭಾವೈಕ್ಯತೆಯನ್ನು ಪ್ರತಿಬಿಂಬಿಸಿತು. ಕಳೆದ 10 ವರ್ಷಗಳಿಂದ ಬಡಾವಣೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ರೀತಿಯ ಹಬ್ಬ ಹರಿದಿನಗಳು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಬಡಾವಣೆಯ ನಿವಾಸಿ ಮೇಲ ಮನೆ ಎಂ.ಎನ್.ಕಾಳಪ್ಪ ಅವರ ಮನೆಯಲ್ಲಿ ನೆರೆಕಟ್ಟಿದ ನಂತರ ಮೆರವಣಿಗೆಯಲ್ಲಿ ಎಂ.ಎನ್.ಕಾಳಪ್ಪ ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಅರಳಿ, ಮಾವು, ಹಲಸು, ಕುಂಬಳಿ, ಗೋಡಂಬಿ ಗಿಡಗಳ ಎಲೆಗಳನ್ನು ಬಳಸಿ `ನೆರೆ ಕಟ್ಟುವ’ ವಿಧಿ ವಿಧಾನದ ಮೂಲಕ ಹುತ್ತರಿ ಆಚರಣೆಗೆ ಸದಸ್ಯರು ಪೂಜೆ ಸಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳ ನಂತರ, ಸದಸ್ಯರು ‘ದುಡಿಕೋಟ್ಪಟ’ದೊಂದಿಗೆ ಗದ್ದೆಗೆ ಮೆರವಣಿಗೆ…

Read More

ಕಡಂಗ ನ.28 : ಕಡಂಗ ಮೂರೂರುವಿನಲ್ಲಿರುವ ಕೋದಂಡ ಐನ್ ಮನೆಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ  ಆಚರಿಸಲಾಯಿತು. ಕುಟುಂಬದ ಭತ್ತದ ಗದ್ದೆಯಲ್ಲಿ  ಹಿರಿಯರ ಮಹಿಳೆಯರ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ  ಸಾಂಪ್ರದಾಯಿಕ ಪೂಜೆ ಸಲ್ಲಿಸಿ  ಧಾನ್ಯಲಕ್ಷ್ಮಿ ಯನ್ನು  ಬರಮಾಡಿಕೊಳ್ಳಲಾಯಿತು. ಈ ಸಂದರ್ಭ  ಕುಟುಂಬ ದ ಸದಸ್ಯರಾದ ಡಾಲ ಅಪ್ಪಯ್ಯ, ಪ್ರಭಾ, ರಾಜಮಣಿ ಸುಬ್ಬಯ್ಯ, ಸುರ ಅಯ್ಯಪ್ಪ, ಜಗ ಕುಶಾಲಪ್ಪ, ಮಂಜುಳಾ, ಜಾನ್ಸಿ, ವೀಣಾ, ನೀಲಿಮಾ, ಏಷಿ, ಸುಮಾ, ಚೈತ್ರ, ರೋಹನ್  ಸೇರಿದಂತೆ ಕುಟುಂಬದ ಸದಸ್ಯರು  ಪಾಲ್ಗೊಂಡಿದ್ದರು. ವರದಿ : ನೌಫಲ್ ಕಡಂಗ 

Read More

ಕುಶಾಲನಗರ  ನ.28 :  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ನಮ್ಮ ಕ್ಲಿನಿಕ್’ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಪಡಿಸಿಕೊಳ್ಳುವಂತೆ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು. ನಗರದ ಬಿ.ಎಂ. ರಸ್ತೆಯಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕ್ಲಿನಿಕ್ ಆರಂಭಿಸಿರುವ ಕಾರಣ ಸಮುದಾಯ ಆರೋಗ್ಯ ಕೇಂದ್ರದ ಒತ್ತಡ ನಿವಾರಣೆಯಾಗಲಿದೆ. ಕ್ಲಿನಿಕ್‍ನಲ್ಲಿ ನುರಿತ ವೈದ್ಯ, ತಾಂತ್ರಿಕ ಸಿಬ್ಬಂದಿಗಳು ಲಭ್ಯವಿದ್ದು, ಡೇ ಕ್ಲಿನಿಕ್ ಮಾದರಿಯ ಸೌಲಭ್ಯವನ್ನು ಸಾರ್ವಜನಿಕರು ಬೆಳಗ್ಗೆ 9.30 ರಿಂದ ಸಂಜೆ 4.30 ರ ತನಕ ಪಡೆದುಕೊಳ್ಳುವ ಅವಕಾಶವಿದೆ ಎಂದರು. ಗರ್ಭಿಣಿಯರು, ನವಜಾತಶಿಶುಗಳ ಆರೈಕೆ ಸೇರಿದಂತೆ ಹೊರರೋಗಿಗಳ ರಕ್ತ ಪರೀಕ್ಷೆ, ಚುಚ್ಚುಮದ್ದು, ವಾಕ್ಸಿನೇಷನ್ ಪಡೆದುಕೊಳ್ಳಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ ಎಂದರು. ವಿವಿಧ ಮಾದರಿಯ ಪರೀಕ್ಷೆಗಳನ್ನು ಖಾಸಗಿ ಲ್ಯಾಬ್‍ಗಳಿಗೆ ಸೂಚಿಸುವ ಬದಲಾಗಿ, ಆದಷ್ಟು ಎಲ್ಲಾ ಪರೀಕ್ಷೆಗಳನ್ನು ಇಲ್ಲಿಯೇ ಮಾಡಲು ಆರೋಗ್ಯಾಧಿಕಾರಿಗಳಿಗೆ ತಿಳಿಸಿ, ಮಡಿಕೇರಿಯಲ್ಲಿ ಕೂಡ ನಮ್ಮ ಕ್ಲಿನಿಕ್ ಸ್ಥಾಪನೆಗೆ ಕ್ರಮವಹಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಆರೋಗ್ಯ ಮತ್ತು…

Read More

ಸೋಮವಾರಪೇಟೆ ನ.28 :  ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಮಕ್ಕಳ ಗುಡಿ ಬೆಟ್ಟಕ್ಕೆ ಶಾಸಕ ಡಾ.ಮಂತರ್ ಗೌಡ  ಭೇಟಿ ನೀಡಿದರು. ನೈಸರ್ಗಿಕ ಪ್ರಕೃತಿ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡ ಶಾಸಕರು, ಸ್ಥಳೀಯರಿಂದ ಅಲ್ಲಿನ ಮಾಹಿತಿ ಪಡೆದುಕೊಂಡರು. ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ಅಭಿವೃದ್ಧಿ ವಂಚಿತವಾಗಿರುವ ಈ ಪ್ರದೇಶಕ್ಕೆ ತುರ್ತಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಉತ್ತಮ ಅವಕಾಶ ಇಲ್ಲಿ ಇದ್ದು, ವಿಶೇಷ ಗಮನ ಹರಿಸಿ ಮಕ್ಕಳ ಗುಡಿ ಬೆಟ್ಟದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವುದಾಗಿ  ಹೇಳಿದರು. ಈ ಸಂದರ್ಭ  ಗ್ರಾಮದ ಹಿರಿಯರಾದ ಎಸ್.ಎಂ.ಚಂಗಪ್ಪ  ಹಾಗೂ  ಗ್ರಾಮಸ್ಥರು  ಹಾಜರಿದ್ದರು.

Read More

ವಿರಾಜಪೇಟೆ ನ.28 : ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮೊದಲಿಗೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನೆರೆ ಕಟ್ಟಿ ದೇವಸ್ಥಾನದ ಜಾಗದಲ್ಲಿಯೆ ನೆಡಲಾಗಿದ್ದ ಭತ್ತದ ಕದಿರುವಿಗೆ ಪೂಜಿಸಿ ಹಾಲಿನ ಅಭಿಷೇಕ ಮಾಡಿ ಕದಿರನ್ನು ತೆಗೆಯಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಹೊಸ ಭತ್ತಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ನಮಿಸಿ ಮಹಾ ಮಂಗಳಾರತಿಯನ್ನು ಬೆಳಗಲಾಯಿತು. ಕದಿರನ್ನು ವಿಶೇಷ ಎಲೆಗಳು ಹಾಗೂ ಬಳ್ಳಿಯಿಂದ ಕಟ್ಟಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಪುತ್ತರಿ ಹಬ್ಬದ ವಿಶೇಷ ಖಾದ್ಯ ತಂಬಿಟ್ಟು ವಿತರಣೆ ಮಾಡಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ನ.28 : ದೇಶರಕ್ಷಣೆಯಲ್ಲಿ ಸೈನಿಕರ ಪಾತ್ರ ಎಷ್ಟು ಮುಖ್ಯವೋ, ರೋಗಿಗಳ ರಕ್ಷಣೆಯಲ್ಲಿ ಶುಶ್ರೂಷಕರ ಪಾತ್ರ ಹೆಚ್ಚಿದೆ. ಮಾನಸಿಕ ಶಕ್ತಿ, ಯೋಗ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು  ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಸಲಹೆ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ನರ್ಸಿಂಗ್  ಕಾಲೇಜಿನಲ್ಲಿ “ಐಕ್ಯಂ” 2023-24 ಎಂಬ ಶಿರ್ಷಿಕೆಯಲ್ಲಿ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜು ಇರುವುದು ಹೆಮ್ಮೆಯ ವಿಷಯ.  ವೈದ್ಯಕೀಯ ಕಾಲೇಜಿನಲ್ಲಿ ಪ್ರಾರಂಭಿಸಿ ಪ್ರಸ್ತುತ 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು,  ಮಡಿಕೇರಿಯಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇದ್ದು, ಆದಾಗ್ಯೂ ಜನಪ್ರತಿನಿಧಿಗಳ ಮೂಲಕ ನರ್ಸಿಂಗ್ ಕಾಲೇಜಿಗೆ ಅವಶ್ಯವಿರುವ ಜಾಗವನ್ನು ಮಂಜೂರು ಮಾಡಲು ಪ್ರಯ್ನತಿಸುವುದಾಗಿ ಭರವಸೆ ನೀಡಿದರು. ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಲು ಲಕ್ಷಾಂತರ ರೂಪಾಯಿ ಇದ್ದು, ಸರ್ಕಾರಿ ಕಾಲೇಜಿನಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಿರಿ, ಕೊರೋನ ಸಮಯದಲ್ಲಿ ಶುಶ್ರೂಷಕರು ಮನೆ, ಮಕ್ಕಳನ್ನು…

Read More

ಕುಶಾಲನಗರ ನ.28 :  ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ಕೊಡವ ಸಮಾಜದ ಅಧ್ಯಕ್ಷ  ಮಂಡೆಪಂಡ ಬೋಸ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಬಲ್ಲಾರಂಡ ಜಾಲಿ ತಮ್ಮಯ್ಯ ಅವರು ಗುತ್ತಿ ಪೂಜೆ ನೆರವೇರಿಸಿ ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು. ನಂತರ ಸಮಾಜಕ್ಕೆ ಬಂದು ಕದಿರು ವಿತರಣೆ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ  ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುಂಡ, ಖಜಾಂಚಿ ಬಲ್ಯಾಟಂಡ ಚಿಂಗಪ್ಪ, ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಸಾರ್ವಜನಿಕರು ಇದ್ದರು.

Read More