ಲೇಖಕ: admin

ಮಡಿಕೇರಿ ನ.29 : ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೊಟ್ಟಿಲು ಮತ್ತು ಹಾಸಿಗೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಸಹ ರಾಜ್ಯಪಾಲ ದೇವಣಿರ ತಿಲಕ್, ಕಾರ್ಯದರ್ಶಿ ರತ್ನಾಕರ ರೈ, ಇನ್ನರ್‍ವೀಲ್ ಮಾಜಿ ಅಧ್ಯಕ್ಷರುಗಳಾದ ರಫಾಲಿ ರೈ, ಡಾ.ರೇಣುಕ ಮತ್ತಿತರರು ತೊಟ್ಟಿಲು ಮತ್ತು ಹಾಸಿಗೆಯನ್ನು ಮಕ್ಕಳ ರಕ್ಷಣಾ ಘಟಕದ ಸಂಚಾಲಕಿ ಶಾರದಾ ಹಾಗೂ ಸಿಬ್ಬಂದಿ ದರ್ಶನ್ ಗೆ ಹಸ್ತಾಂತರಿಸಿದರು. ಮಿಸ್ಟಿಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮಾನವ ಜನ್ಮ ಪಡೆಯಲು 86 ಲಕ್ಷ ಜನ್ಮಗಳ ಬಳಿಕವಷ್ಟೇ ಸಾಧ್ಯ ಎಂಬ ಮಾತನ್ನು ಉಲ್ಲೇಖಿಸಿದರು. ಶ್ರೇಷ್ಠ ಮಾನವ ಜನ್ಮ ದೊರೆತರೂ ಬೀದಿ ಪಾಲಾಗುವ ಮಕ್ಕಳ ಆರೈಕೆ ಮಾಡುವ ಸಿಬ್ಬಂದಿಗಳು ಮತ್ತು ಯೋಜನೆ ರೂಪಿಸುವ ಸರಕಾರದ ಹೆಜ್ಜೆ ಶ್ಲಾಘನೀಯ ಎಂದರು. ಉಪರಾಜ್ಯಪಾಲ ದೇವಣಿರ ತಿಲಕ್ ಮಾತನಾಡಿ, ಈ ರೀತಿಯ ಕೇಂದ್ರಗಳ ಅವಶ್ಯಕತೆಗೆ ರೋಟರಿ ಸದಾ ಸ್ಪಂದಿಸುತ್ತದೆ, ಸೇವಾ ಸಂಸ್ಥೆಗಳು ಅವಶ್ಯಕತೆ ಇರುವಲ್ಲಿ ಸಹಾಯ ಹಸ್ತ ಚಾಚಬೇಕು ಎಂದು ಕರೆ…

Read More

ಬೆಂಗಳೂರು ನ.29 : ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದ “ಕಾಂತಾರ” ಚಿತ್ರಕ್ಕೆ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (54ನೇ ಇಂಟರ್ ನ್ಯಾಷನಲ್ ಫಿಲ್ಮ ಫೆಸ್ಟಿವಲ್ ಆಫ್ ಇಂಡಿಯಾ) ತೀರ್ಪುಗಾರರ ವಿಶೇಷ ಪ್ರಶಸ್ತಿ “ಸಿಲ್ವರ್ ಪೀಕಾಕ್” (ಸ್ಪೆಷಲ್ ಜ್ಯೂರಿ ಅವಾರ್ಡ್) ಲಭಿಸಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಪಾತ್ರವಾಗಿದೆ. ಅದ್ಭುತ ನಟನೆ ಮತ್ತು ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಹರ್ಷ ಹಂಚಿಕೊಂಡಿರುವ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸ್ಪೆಷಲ್ ಜ್ಯೂರಿ ಅವಾರ್ಡ್ ನ್ನು ರಂಗಭೂಮಿ ಮತ್ತು ಚಿತ್ರರಂಗದ ಸ್ಫೂರ್ತಿಯ ಚಿಲುಮೆ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

Read More

ಬೆಂಗಳೂರು ನ.29 :   ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರಂತರ ಪ್ರಯತ್ನದಿಂದ ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು,  ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು. ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಮರುಹುಟ್ಟು ಸಿಕ್ಕಂತಾಗಿದೆ. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ಮಿಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ ಎಂದು ತಿಳಿಸಿದ್ದಾರೆ.

Read More

ನಾಪೋಕ್ಲು ನ.29 : ಹಳೇ ತಾಲೂಕಿನಲ್ಲಿ ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿಯನ್ನು ಕೊಡವರು ಹಾಗೂ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು. ವರ್ಷ ಪ್ರತಿ ಇಲ್ಲಿನ ಹಿರಿಯ ಬೊಪ್ಪೇರ ಕಾವೇರಪ್ಪ(98) ಮತ್ತು ಅವರ ಮಗ ಜಯ ಉತ್ತಪ್ಪ ತಮ್ಮ ಮನೆಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿನ ಮುಸ್ಲಿಂ ಜನಾಂಗದವರು ಸುಮಾರು 50 ವರ್ಷಗಳಿಂದ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸೌರ್ಹಾದತೆ, ಸಾಮರಸ್ಯಕ್ಕೆ ಸಾಕ್ಷಿಯಾದರು. ನಂತರ ನೆರೆ ಕಟ್ಟಿ, ಕದಿರು ತೆಗೆದು, ಪ್ರಸಾದವನ್ನು ಸ್ವೀಕರಿಸಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ಮಹಮ್ಮದ್ ಅಲಿ, ಅಬೂಬಕ್ಕರ್, ಕಮರುದ್ದೀನ್, ಅಬ್ದುಲ್ ರೆಹಮಾನ್ ಸೇರಿದಂತೆ ಸುಮಾರು 45 ಜನರು ಭಾಗವಹಿಸಿದ್ದರು. ನಾವು ಪ್ರತಿ ವರ್ಷವು ಪುತ್ತರಿ ಹಬ್ಬವನ್ನು ಆಚರಿಸುತಾ ಬರುತ್ತಿದ್ದು, ನಮ್ಮ ನೆರೆಯವರಾದ ಮುಸ್ಲಿಂ ಬಾಂಧವರು ಪ್ರತಿ ವರ್ಷವು ನಮ್ಮ ಮನೆಗೆ ಬಂದು ಹಬ್ಬದಲ್ಲಿ ಪಾಲ್ಗುಳ್ಳುತ್ತಾರೆ. ನಾವೇಲ್ಲರು ಸಹೋದರರಂತೆ ಅವರನ್ನು ಬರಮಾಡಿಕೊಂಡು ಹಬ್ಬವನ್ನು ಆಚರಿಸುತ್ತೇವೆ.ಇದು ಸೌರ್ಹಾದತೆ, ಸಾಮರಸ್ಯ ಕ್ಕೆ ಕಾರಣವಾಗಿದೆ ಎಂದರು. :: ಹಿರಿಯ…

Read More

ನಾಪೋಕ್ಲು ನ.29 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗತಪ್ಪ ದೇವಾಲಯದಲ್ಲಿ ಕೊಡಗಿನ ಸುಗ್ಗಿ ಹಬ್ಬವಾದ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸುವ ಪುತ್ತರಿ (ಹುತ್ತರಿ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಲ್ಲಿ ಮೊಟ್ಟ ಮೊದಲು ಪಾಡಿ ಸನ್ನಿಧಿಯಲ್ಲಿ ಹಬ್ಬಆಚರಿಸುವ ಸಂಪ್ರದಾಯ ಹಿಂದಿನಿoದಲೇ ನಡೆದು ಬಂದಿದೆ. ಸoಪ್ರದಾಯದoತೆ ಸನ್ನಿಧಿಯ ಸುತ್ತಮುತ್ತಲಿನ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಊರಿನವರು, ಪರವೂರಿನ ಭಕ್ತರು ಪಾಲ್ಗೊಂಡಿದ್ದರು. ಪ್ರಮುಖ ಐದು ಮನೆತನದ ಕುಟುಂಬದ ಹೆಣ್ಣು ಮಕ್ಕಳು ತಳಿಯತಕ್ಕಿ ಬೊಳಕ್ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆಗೈದರು. ಈ ವೇಳೆ ಕಣಿಯರ ನಾಣಯ್ಯ, ಕುಡಿಯರ ಮುತ್ತಪ್ಪ, ಪೆಮ್ಮಯ್ಯ, ಪೊಂಗೇರ ಪೂಣಚ್ಚ ಇನ್ನಿತರರು ಪುತ್ತರಿ ಪದ್ಧತಿ ಪರಂಪರೆಯನ್ನು ಪರಿಚಯಿಸುವುದರ ಮೂಲಕ ದುಡಿ ಕೊಟ್ಟ ಪಾಟ್ ನೆರವೇರಿಸಿ ಕೊಟ್ಟರು. ಈ ಸಂದರ್ಭ ಪುತ್ತರಿ ಹಬ್ಬದ ಅಂಗವಾಗಿ, ಪೊಂಗೇರ ಉಲ್ಲಾಸ್ ಅವರು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ…

Read More

ನಾಪೋಕ್ಲು ನ.29 : ನಾಲ್ಕುನಾಡು ವ್ಯಾಪ್ತಿಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಪಟಾಕಿ ಸದ್ದಿನೊಂದಿಗೆ ವಿವಿಧ ದೇವಾಲಯಗಳಲ್ಲಿ, ಐನ್ ಮನೆಗಳಲ್ಲಿ, ಕೊಡವ ಸಮಾಜಗಳಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮೀಪದ ಕಕ್ಕುಂದ ಕಾಡು ಶ್ರೀ ಕರಿಚಾಮುಂಡಿ ದೇವಸ್ಥಾನದಲ್ಲಿ ಭಕ್ತಾದಿಗಳು ಸೇರಿ ಪ್ರಾರ್ಥಿಸಿ ನಂತರ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಮಾಹಾ ಪೂಜೆಯೊಂದಿಗೆ ಕದಿರನ್ನು ಭಕ್ತಾದಿಗಳಿಗೆ ನೀಡಲಾಯಿತು. ಅರ್ಚಕ ಸುದೀರ್ ಕೇಕುಣ್ಣಾಯ ಹಾಗೂ ತಕ್ಕ ಮುಖ್ಯಸ್ಥ ಸೂರ್ಯಕುಮರ್ , ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಭಕ್ತಾಧಿಗಳು ಹಾಜರಿದ್ದರು. ಪಾಲೂರು ಮಹಾಲಿಂಗೇಶ್ವರ ದೇವಾಲಯ, ಮಕ್ಕಿಶಾಸ್ತಾವು ದೇವಾಲಯ, ನಾಪೋಕ್ಲು ಕೊಡವ ಸಮಾಜಗಳಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹುತ್ತರಿಯ ಅಂಗವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ನ.28 : ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಕೋಟೆ ಆವರಣದಲ್ಲಿ ಮಡಿಕೇರಿ ಕೊಡವ ಸಮಾಜ, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಮತ್ತು ಪಾಂಡೀರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಪುತ್ತರಿ ಕೋಲಾಟ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು, ಕೊಡವ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು, ಯಾವುದೇ ಸಂಸ್ಕೃತಿ ನಶಿಸಿ ಹೋಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು. ರಾಜ್ಯದಲ್ಲಿ ಸುಗ್ಗಿ ಹಬ್ಬದ ಮಾದರಿಯಲ್ಲೇ ಕೊಡಗು ಜಿಲ್ಲೆಯಲ್ಲಿ ಪುತ್ತರಿ ಕೋಲಾಟ ಅನಾದಿ ಕಾಲದಿಂದಲೇ ನಡೆದುಕೊಂಡು ಬರುತ್ತಿದೆ. ರಾಜವಂಶಸ್ಥರು ಅರಮನೆ ಮೈದಾನದಲ್ಲಿ ಪುತ್ತರಿ ಕೋಲಾಟ ನಡೆಸಿಕೊಂಡು ಬಂದಿದ್ದರು. ಕಾಲಾನಂತರ ಕೋಲಾಟವನ್ನು ಗದ್ದುಗೆ ಆವರಣಕ್ಕೆ ಸ್ಥಳಾಂತರವಾಗಿತ್ತು. ಆ ಬಳಿಕ ಕೊಡವ ಸಮಾಜ, ಕೊಡವ ಸಾಹಿತ್ಯ ಅಕಾಡೆಮಿಯ ಸಲಹೆಯಂತೆ ತಮ್ಮ ಅವಧಿಯಲ್ಲಿ ಮತ್ತೆ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇದೀಗ ಹಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಕೋಲಾಟ ಯಶಸ್ವಿಯಾಗಿ ನಡೆಯುತ್ತಿದೆ. ಇಂತಹ ಪದ್ಧತಿ, ಪರಂಪರೆಗಳು, ಆಚಾರ ವಿಚಾರಗಳನ್ನು ನಶಿಸಲು…

Read More

ಮಡಿಕೇರಿ ನ.28 : ಕೊಡವ ಸ್ಪೋರ್ಟ್ಸ್  ಅಸೋಷಿಯೇಷನ್ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಅಯೋಜಿಸಲಾಗಿದ್ದ ಕೊಡವ ಪ್ರೀಮಿಯರ್ ಲೀಗ್‍ನ 2ನೇ ಆವೃತ್ತಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಮೈಸೂರು ಮಕ್ಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೀಮ್ ಕೈಮಡ ತಂಡ ರನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಐ.ಪಿ.ಎಲ್ ಲೀಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಮೈಸೂರು ಮಕ್ಕ, ಕೊಡವ ಟ್ರೈಬ್ಸ್, ಕೊಡವ ರಾಯಲ್ಸ್, ಬೆಂಗಳೂರು ಬಬ್ಬಂಗಾ, ಟೀಮ್ ಕೈಮಡ 2025, ಕೊಡವ ಬೀರಂಗಾ, ಅಂಜಿನಕೇರಿ ನಾಡ್ ಕೂಟ, ನಾಪೋಕ್ಲು ನರಿಯಾ, ಬೆಂಗಳೂರು ಟಸ್ಕರ್ಸ್ಸ್, ಎಂ.ಟಿ.ಬಿ. ರಾಯಲ್ಸ್, ಕೊಡವ ಕಡಾಸ್, ಮತ್ತು ಕರವಲೇ ಭಗವತಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಮೂರು ದಿನಗಳು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೊನೆಯ ಹಂತಕ್ಕೆ 4 ತಂಡಗಳು ಪದಾರ್ಪಣೆ ಮಾಡಿದ್ದವು. ಕೊಡವ ಟ್ರೈಬ್ಸ್ ತಂಡ ಮತ್ತು ಮೈಸೂರು ಮಕ್ಕ ತಂಡದ ನಡುವೆ ನಡೆದ ಎಲಿಮಿನೆಟ್ ಪಂದ್ಯಾಟದಲ್ಲಿ ಮೈಸೂರು ಮಕ್ಕ ತಂಡ 2 ವಿಕೆಟ್…

Read More

ಮಡಿಕೇರಿ ನ.28 : ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮೂಲಕ 28 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಡಿಕೇರಿಯ ಮೇಕೇರಿ ಸಮೀಪದ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಅವರು ಕೊಡಗು ಜಿಲ್ಲಾ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆ ತಯಾರಿ, ನೂತನ ಜಿಲ್ಲಾಧ್ಯಕ್ಷರ ನೇಮಕ, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಪಡೆದ ಮತಗಳು, ಹಾಲಿ ಶಾಸಕರ ಕಾರ್ಯವೈಖರಿ ಸಹಿತ ವಿವಿಧ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಜಿಲ್ಲೆಗೆ ಬಂದಿದ್ದೇನೆ. ಪಕ್ಷ ಸಂಘಟನೆಯಲ್ಲಿ ಸ್ವಲ್ಪ ಕೊರತೆ ಇದೆ. ನಮ್ಮ ಶಕ್ತಿ ಕಡಿಮೆಯಾದ ಕಾರಣ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಾಗಬೇಕಿದೆ ಎಂದು ಹೇಳಿದರು. ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ…

Read More

ವಿರಾಜಪೇಟೆ ನ.28 : ವಿರಾಜಪೇಟೆಯ ಚಿಕ್ಕಪೇಟೆ ಬಳಿಯಿರುವ ದೇವರಕಾಡು ರಸ್ತೆಯ ಮಹಾವಿಷ್ಣು ದೇವಾಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ತಿಕ ವಿಷ್ಣು ದೀಪೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಸತ್ಯನಾರಾಯಣ ದೇವರ ಸಮ್ಮುಖದಲ್ಲಿ ಸಾಮೂಹಿಕವಾಗಿ ಸಂಕಲ್ಪವನ್ನು ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರು ಸತ್ಯನಾರಾಯಣ ದೇವರ ವೃತದ ಕಥೆಯ ವಿವರ ಹಾಗೂ ಮಹತ್ವವನ್ನು ಭಕ್ತರಿಗೆ ತಿಳಿಸಿದರು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಕಾರ್ತಿಕ ವಿಷ್ಣು ದೀಪೋತ್ಸವ ನೆರವೇರಿತು.

Read More