ಲೇಖಕ: admin

ಕುಶಾಲನಗರ ನ.28 :   ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಪುತ್ತರಿ (ಹುತ್ತರಿ) ಹಬ್ಬ ಆಚರಣೆ ಸಾಂಪ್ರದಾಯಿಕವಾಗಿ ನಡೆಯಿತು. ಕುಶಾಲನಗರ ಗೌಡ ಸಮಾಜ ಮತ್ತು ಸಹ ಸಂಘಟನೆಗಳಾದ ಗೌಡ ಯುವಕ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗೌಡ ಸಮಾಜದಲ್ಲಿ ಸೇರಿ ಸಾಂಪ್ರದಾಯಿಕ ಕಾರ್ಯಗಳ ನಂತರ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಮೀಪದ ಹಾರಂಗಿ ರಸ್ತೆಯ ಗೌಡ ಯುವಕ ಸಂಘದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು. ಸಮಾಜದ ಉಪಾಧ್ಯಕ್ಷರಾದ ಕುಲಚೆಟ್ಟಿ ಕಾಶಿ ಪೂವಯ್ಯ ಅವರು ಗದ್ದೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಸಮಾಜ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಯಿತು. ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಉಪಾಧ್ಯಕ್ಷರಾದ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಕುಲಚನ ಹೇಮಂತ್, ಬಲ್ಲಡ್ಕ ವಿಜಯ್ ಕುಮಾರ್,, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ,…

Read More

ಮಡಿಕೇರಿ ನ.28 :  ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ “ತೆಪ್ಪೋತ್ಸವ, ಪಲ್ಲಕಿ ಉತ್ಸವ ಹಾಗೂ ದಟ್ಟೋತ್ಸವ” ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಪುಷ್ಪಾಲಂಕೃತ ತೆಪ್ಪದ ಮೇಲೆ ಬೆಳ್ಳಿ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ಮಾಡಲಾಯಿತು. ಇದಕ್ಕೂ ಮೊದಲು ದೇವಾಲಯದಲ್ಲಿ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಲ್ಲೇ ಪಲ್ಲಕ್ಕಿ ಉತ್ಸವ ಮಾಡಲಾಯಿತು. ನಂತರ ಅದೇ ಪಲ್ಲಕ್ಕಿಯಲ್ಲಿ ಈಶ್ವರನ್ನು ಕರೆತಂದು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯಲ್ಲಿ ಉತ್ಸವ ಮಾಡಲಾಯಿತು. ಬೃಹತ್ ಕಲ್ಯಾಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವ ಮಾಡಲಾಯಿತು. ವರ್ಷಕ್ಕೊಮ್ಮೆ ನಡೆಯುವ ಈ ತೆಪ್ಪೋತ್ಸವಕ್ಕೆ ನೂರಾರು ಭಕ್ತರು ಆಗಮಿಸಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.

Read More

ಮಡಿಕೇರಿ ನ.28 :  ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಪುತ್ತರಿ ಹಬ್ಬವನ್ನು ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ನಿಗದಿತ ಸಮಯದಲ್ಲಿ ನೆರೆಕಟ್ಟಿ, ಕದಿರು ತೆಗೆದು ಪುತ್ತರಿ ಹಬ್ಬವನ್ನು ಸಂಭ್ರಮಿಸಿದರು. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕದಿರು (ಪೈರು) ಕೊಯ್ಯುವ ಮೂಲಕ  ಪುತ್ತರಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ನೆರೆ ಕಟ್ಟುವ ಸಂಪ್ರದಾಯವನ್ನು ಅರ್ಚಕರು ಹಾಗೂ ತಕ್ಕ ಮುಖ್ಯಸ್ಥರು ನೆರವೇರಿಸಿದರು.  ದೇವಾಲಯ ಆವರಣದ ಗದ್ದೆಯಲ್ಲಿ ಕದಿರು ಕೊಯ್ದು ಹಬ್ಬದ ವಿಧಿ ವಿಧಾನ ನಡೆಸಲಾಯಿತು. ನಗರದ ಐತಿಹಾಸಿಕ  ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಕೊಡವ ಸಮಾಜದ ವತಿಯಿಂದ ದೇವಾಲಯದ  ಗದ್ದೆಯಲ್ಲಿ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದವರಿಗೆ ಕದಿರು (ಪೈರು) ವಿತರಿಸಲಾಯಿತು.

Read More

ಮಡಿಕೇರಿ ನ.28 :  ಧಾನ್ಯಲಕ್ಷ್ಮಿಯನ್ನು ಮನೆ ತುಂಬುವ ಕೊಡಗಿನ ವಿಶೇಷ ಹಬ್ಬವಾದ ಪುತ್ತರಿ ಹಬ್ಬವನ್ನು ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ  ಆಚರಿಸಲಾಯಿತು.  ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಗದ್ದೆಯಿಂದ ತಂದ ಕದಿರಿಗೆ  ಹಾಗೂದೇವರಿಗೆ ಪೂಜೆ ಸಲ್ಲಿಸಿ, ನೆರದಿದ್ದವರಿಗೆ ಪ್ರಸಾದ ವಿತರಿಸಲಾಯಿತು. ನಂತರ  ಸ್ಥಳೀಯರು ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀ ಗೌರಿಶಂಕರ ಸನ್ನಿಧಿಯಲ್ಲಿ ನಡೆದ ಪುತ್ತರಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹಬ್ಬದ ಆಚರಣೆಯ ನಂತರ ದೇವಾಲಯದ ಆವರಣದ ಸ್ವಚ್ಛತಾ ಕಾರ್ಯ ನಡೆಯಿತು.  

Read More

ಮಡಿಕೇರಿ ನ.27 : ದಕ್ಷಿಣ ಕೊಡಗಿನ ಹಳ್ಳಿಗಟ್ಟು ಶ್ರೀಭದ್ರಕಾಳಿ ದೇವಾಲಯದಲ್ಲಿ ಪುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರನ್ನು ದೇವಾಲಯಕ್ಕೆ ತರಲಾಯಿತು. ಪೂಜೆಯ ನಂತರ ಭಕ್ತರಿಗೆ ವಿತರಿಸಲಾಯಿತು. ದೇವಾಲಯದಲ್ಲಿ ಪೂಜೆಯಾದ ನಂತರ ಗ್ರಾಮದ ವಿವಿಧ ಭಾಗದಲ್ಲಿ ಕದಿರು ಕೊಯ್ದು ಪುತ್ತರಿ ಆಚರಿಸಲಾಯಿತು.

Read More

ಮಡಿಕೇರಿ ನ.27 : ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದೆ. ಕಿರುಗೂರು ಮತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಆತಂಕ ಮನೆ ಮಾಡಿದೆ. ಮೇಯಲು ಬಿಟ್ಟಿದ್ದ ಕೊಳ್ಳಿಮಾಡ ಕುಟ್ಟಪ್ಪ ಅವರ ಹಸುವನ್ನು ಹುಲಿ ಕೊಂದು ಹಾಕಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ರೈತ ಸಂಘದ ಕೊಡಗು ಜಿಲ್ಲಾ ಘಟಕ ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Read More

ಬೆಂಗಳೂರು ನ.27 : ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, 3812 ಅರ್ಜಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಸ್ವೀಕರಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಜನಸ್ಪಂದನ ಕಾರ್ಯಕ್ರಮವು ಜನರ ಸಮಸ್ಯೆಯ ಪರಿಹಾರಕ್ಕೆ ಉತ್ತಮ ವೇದಿಕೆಯಾಯಿತು. ಮಧ್ಯಾಹ್ನದ ಊಟದ ಬಿಡುವಿನಲ್ಲಿ ಊಟಕ್ಕೆಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಅಹವಾಲು ಬಂದಿರುವವರ ಸಂಖ್ಯೆ ಇನ್ನೂ ಬಹಳಷ್ಟಿದೆ ಎಂದು ಮಾಹಿತಿ ಲಭ್ಯವಾದ ಕೂಡಲೇ ಅಹವಾಲು ಸ್ವೀಕರಿಸುವ ಟೇಬಲ್ಲಿಗೇ ಊಟ ತರಿಸಿಕೊಂಡು ಅಲ್ಲೇ ಕುಳಿತು ಊಟ ಸೇವಿಸಿದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟಾರೆ 3812 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಗಳನ್ನು ಉದ್ದೇಶಿಸಿ ಮಾತನಾಡಿದ…

Read More

ಮಡಿಕೇರಿ ನ.27 : ದೇಶಕ್ಕಾಗಿ ಹುತಾತ್ಮರಾಗಿ ತ್ರಿವರ್ಣ ಧ್ವಜವನ್ನು ಹೊದ್ದು ಬಂದ ಕ್ಯಾಪ್ಟನ್ ಪ್ರಾಂಜಲ್ ಅವರಂತಹ ಸಾವಿರಾರು ವೀರರ ಬಲಿದಾನದಿಂದಾಗಿ ಭಾರತೀಯರಾದ ನಾವು ಇಂದು ಭಯವಿಲ್ಲದೆ ಬದುಕುತ್ತಿದ್ದೇವೆ, ಭಯವಿಲ್ಲದೆ ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದೇವೆ ಎಂದು ಸುವರ್ಣ ನ್ಯೂಸ್ ಚಾನಲ್ ನ ಸಂಪಾದಕ ಹಾಗೂ ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಹಿಂದು ಪರಿಷದ್ ವತಿಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕೊಡಗು ವೀರರ ನೆಲ, ಇಲ್ಲಿ ಪಾದಸ್ಪರ್ಷ ಮಾಡಿದಾಕ್ಷಣ ಮೈ ರೋಮಾಂಚನವಾಗುತ್ತದೆ. ದೇವಟ್ ಪರಂಬುವಿನಲ್ಲಿ ಆಕ್ರಂದನ ಕೇಳಿದಂತ್ತಾಗುತ್ತದೆ ಎಂದರು. ಅಂದಿನಿಂದ ಇಂದಿನವರೆಗೆ ಕೊಡಗಿನಲ್ಲೂ ಬಲಿದಾನಗಳಾಗಿವೆ, ಈ ಬಲಿದಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅಂದು ನಡೆದ ಬಲಿದಾನದಿಂದಾಗಿಯೇ ಇಂದು ಭಾಗಮಂಡಲದಲ್ಲಿ ಧೈರ್ಯವಾಗಿ ಕಾವೇರಿ ಆರತಿ ಮಾಡಲು ನಮ್ಮಿಂದ ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯ ಆಚರಣೆಯನ್ನು ನಾವು ಭಯವಿಲ್ಲದೆ ಮಾಡುತ್ತಿದ್ದೇವೆ. ಇತರ ದೇಶಗಳಲ್ಲಿ ನಮ್ಮ  ಸಂಸ್ಕೃತಿಯನ್ನು ಭಯದಿಂದ ಕದ್ದುಮುಚ್ಚಿ ಆಚರಿಸಬೇಕಾಗಿದೆ. ಕಾಶ್ಮೀರದ ಶ್ರೀನಗರದ ಲಾಲ್…

Read More

ಸೋಮವಾರಪೇಟೆ ನ.27 : ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಚಿಂತನೆ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ವತಿಯಿಂದ ಪಟ್ಟಣದ ಶಂಕಪ್ಪ ಹಾಲ್ ಸಭಾಂಗಣದಲ್ಲಿ ನಡೆದ ಶ್ರೀ ನಾರಾಯಣ ಗುರುಗಳ ಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಉನ್ನತ ಶಿಕ್ಷಣವೆಂಬ ಸಂಪತ್ತನ್ನು ಮಕ್ಕಳಿಗೆ ಕಲ್ಪಿಸುವ ಮೂಲಕ ಗುರುಗಳ ಚಿಂತನೆಯನ್ನು ಮುಂದಿನ ಪಿಳಿಗೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು. ಸೋಮವಾರಪೇಟೆಯಲ್ಲಿ ಶ್ರೀನಾರಾಯಣ ಗುರುಗಳ ಭವನ ನಿರ್ಮಿಸಲು ಹಿಂದಿನ ನಮ್ಮ ಬಿಜೆಪಿ ಸರ್ಕಾರ 25 ಲಕ್ಷ ರೂ.ಗಳ ಅನುದಾನ ಕಲ್ಪಿಸಲಾಗಿತ್ತು. ಆದರೆ ಇಂದಿನ ಸರ್ಕಾರ ಬಿಡುಗಡೆಗೊಳಿಸಿಲ್ಲ. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಕೂಡಲೆ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಎನ್‍ಐಇ ಸಹಾಯಕ ಪ್ರಾಧ್ಯಾಪಕ ಡಾ.ಸಂಜಿತ್ ಎಸ್. ಅಂಜನ್…

Read More

ಮಡಿಕೇರಿ ನ.27 :  ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ “ಮಲೆನಾಡ ಮಹಿಳೆಯರ ಮಹಾ ಸಂಗಮ 2023 ” ಕ್ರೀಡಾಕೂಟವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ  ಉದ್ಘಾಟಿಸಿ, ಶುಭ ಹಾರೈಸಿದರು.

Read More