ಲೇಖಕ: admin

ಮಡಿಕೇರಿ ನ.27 : ದುಬೈನ ಯುಎಇ ಕೊಡವ ಕಮಿಟಿ ವತಿಯಿಂದ ಪುತ್ತರಿ-2023 ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಪ್ರಜಾಪ್ರಭುತ್ವದಲ್ಲಿ ಸಮುದಾಯದ ಪ್ರಾತಿನಿಧ್ಯದ ಮಹತ್ವವನ್ನು ವಿವರಿಸಿದರು.ಕೊಡಗು ಜಿಲ್ಲೆಯ ವಿಶೇಷ ಆಚರಣೆಗಳು ವಿಶ್ವದಾದ್ಯಂತ ಪಸರಿಸಿದೆ. ಸಮುದಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಮತ್ತು ನಮ್ಮ ಇರುವಿಕೆಯನ್ನು ಸಂವಿಧಾನ ಬದ್ಧವಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದರು. ನಾವು ಏನೇ ಮಾಡಿದರೂ ಮತ್ತು ಎಲ್ಲೇ ಇದ್ದರೂ, ನಮ್ಮ ಚಿಂತನೆಯ ಪ್ರಕ್ರಿಯೆಯು ನಮ್ಮ ಕೊಡವ ಸಮುದಾಯವನ್ನು ಉಳಿಸಿಕೊಳ್ಳುವತ್ತ ಇರಬೇಕು. ನಾವೆಲ್ಲರೂ ಒಗ್ಗೂಡಿ ನಮ್ಮ ಸಮುದಾಯದ ಉಳಿವಿನ ಬಗ್ಗೆ ಯೋಚಿಸಬೇಕು. ಕೊಡವ ಸಮುದಾಯದ ಎಲ್ಲಾ ಕಾರ್ಯಕ್ರಮ ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ತಿಳಿಸಿ, ಜಾಗತಿಕ ಮಟ್ಟದಲ್ಲಿ ಕೊಡವರನ್ನು ಒಗ್ಗೂಡಿಸಲು ಪ್ರಯತ್ನಿಸಿದ ಪಳೆಂಗಂಡ ಅಮಿತ್ ಅವರ ಶ್ರಮವನ್ನು ಪೊನ್ನಣ್ಣ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕೊಡಗಿಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಯುಎಇ ಕೊಡವ ಕಮಿಟಿ…

Read More

ಮಡಿಕೇರಿ ನ.27 : ಜನಾಂಗಗಳ ನಡುವಿನ ಸಂಸ್ಕೃತಿ, ಆಚಾರ-ವಿಚಾರದಲ್ಲಿ, ಬದಲಾವಣೆಗಳಿರಬಹುದು. ಆದರೆ, ದೇಶದ ರಕ್ಷಣೆ ವಿಚಾರ ಎಂದು ಬಂದರೆ ‘ನಾವೆಲ್ಲ ಒಂದು, ನಾವೆಲ್ಲ ಬಂಧು’ ಎಂಬ ಮನಸ್ಥಿತಿ ಹೊಂದಬೇಕು ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದರು. ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಓಣಾಘೋಷಂ-ಓಣಂ ಸದ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿದೆ. ಸಂವಿಧಾನ ಮೂಲಕ ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ದೇಶದ ಏಕತೆ, ಅಖಂಡತೆ, ಸಮಗ್ರತೆ ಕಾಪಾಡುವುದು ನಮ್ಮ ಆದ್ಯತೆಯಾಗಬೇಕು. ದೇಶದ ರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದರು. ಸಂಘಟನಾತ್ಮಕವಾಗಿದ್ದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರಿಕೆ ಸಾಧ್ಯ ಎಂದ ಅವರು, ಆಚಾರ-ವಿಚಾರ ಉಳಿಸಿ, ಬೆಳೆಸಬೇಕು. ಮತಾಂತರ ಆಮಿಷಗಳಿಗೆ ಬಲಿಯಾಗಬಾರದು ಎಂದು ಹೇಳಿದರು. ‘ಮಾಜಿ ಶಾಸಕ ಮಂಡೇಪಂಡ ಅಪ್ಪಚ್ಚು ರಂಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಮೊದಲು…

Read More

ಮಡಿಕೇರಿ ನ.27 : ಕ್ರೀಡೆಯಲ್ಲಿ ಛಲ, ಪರಿಶ್ರಮದೊಂದಿಗೆ ಗುರಿ ಇದ್ದಾಗ ಖಂಡಿತಾ ಗೆಲವು ಸುಲಭ ಸಾಧ್ಯ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ವಿದ್ಯಾಲಯದ ಸಹಯೋಗದಲ್ಲಿ ಆಯೋಜಿತ ಡಾ.ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಅಂತರ ಪ್ರೌಢಶಾಲಾ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ  ಮಾತನಾಡಿದರು. ವಿದ್ಯೆಯೊಂದಿದೆ ಕ್ರೀಡೆ ಕೂಡ ಜೀವನದ ಭಾಗವಾಗಬೇಕು. ಕ್ರಿಕೆಟ್ ಸೇರಿದಂತೆ ಕ್ರೀಡೆಯಲ್ಲಿ ಛಲದ ಜತೆ ನಿದಿ೯ಷ್ಟ ಗೆಲುವಿನತ್ತ ಗುರಿ ಇದ್ದರೆ ವಿಜಯ ಸುಲಭವಾಗುತ್ತದೆ. ಯಾವುದೇ ಸಾಧನೆಯನ್ನು ಉಚಿತವಾಗಿ ಸಾಧಿಸಲಾಗದು. ಅಂತೆಯೇ ಕ್ರೀಡೆಯಲ್ಲಿ ಕಠಿಣ ಪರಿಶ್ರಮವೂ ಸಾಧನೆಗೆ ಅತೀ ಮುಖ್ಯವಾಗುತ್ತದೆ ಎಂದು ಶಾಂತ ರಂಗಸ್ವಾಮಿ ಕಿವಿಮಾತು ಹೇಳಿದರು. ಅಥ್ಲೆಟಿಕ್ಸ್ ಗೆ ಅತೀ ಹೆಚ್ಚಿನ ಸಾಧಕ ಕ್ರೀಡಾಪಟುಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಶಾಂತಾ ರಂಗಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಜಾನಪದ…

Read More

ಮಡಿಕೇರಿ ನ.27 : ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ನ.28 ರಿಂದ 30ರ ವರೆಗೆ ನಡೆಯಲಿದೆ. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಉದ್ಘಾಟಿಸಲಿದ್ದಾರೆ. ನ.30 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು, ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಬೋರಲಿಂಗಯ್ಯ ಪಾಲ್ಗೊಳ್ಳಲಿದ್ದಾರೆ.  

Read More

*ತಾಯಿ ಕಾವೇರಿ ನಾಡಿಗೆ ಒಳಿತು ಮಾಡಲಿ : ಪುತ್ತರಿ ಹಬ್ಬದ ಶುಭಾಶಯಗಳು* (ಆಪಟ್ಟೀರ ಟಾಟು ಮೊಣ್ಣಪ್ಪ, ಆಧ್ಯಕ್ಷರು, ಮಾಯಮುಡಿ ಗ್ರಾಮ ಪಂಚಾಯತ್)

Read More

*ಕೊಡಗಿನ ಸಮಸ್ತ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳು* (ಸೂದನ ಎಸ್.ಈರಪ್ಪ, ಅಧ್ಯಕ್ಷರು, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ)

Read More

ಮಡಿಕೇರಿ ನ.27 :  ಮೈಸೂರಿನಲ್ಲಿ ನಡೆದ ಸೆಂಟ್ ಫಿಲೋಮಿನಾ(ಸ್ವಾಯತ್ತ)ಕಾಲೇಜಿನ 9ನೇ ಘಟಿಕೋತ್ಸವದಲ್ಲಿ ಕಂಡಂಗಾಲ ಗ್ರಾಮದ ಮುಲ್ಲೇಂಗಡ ಸಿಂಚನ ದೇಚಮ್ಮ ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಅತಿ ಹೆಚ್ಚು ಅಂಕ ಗಳಿಸುವುದರೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.  ನ್ಯಾಯಮೂರ್ತಿ ತಂಭುಚೆಟ್ಟಿ ಬಹುಮಾನವನ್ನೂ ಪಡೆದುಕೊಂಡಿದ್ದಾರೆ. ಇವರು ಮುಲ್ಲೇಂಗಡ ಸುರೇಶ್ ಭೀಮಯ್ಯ ಮತ್ತು ಕನಿಕೆ ದಂಪತಿಗಳ ಪುತ್ರಿ.

Read More

ನಾಪೋಕ್ಲು ನ.27 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಮುನ್ನಾ ದಿನವಾದ ಭಾನುವಾರ ವಾರ್ಷಿಕ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ಊರಿನ ಪರವೂರಿನ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಶ್ರದ್ದಾಭಕ್ತಿಯಿಂದ ಜರುಗಿತು. ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದರು. ಮಹಾಪೂಜೆ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು. ದೇವರ ಪ್ರಾರ್ಥನೆಯ ಬಳಿಕ ದೇವರ ನೃತ್ಯಬಲಿ ಜರುಗಿ ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಶ್ರದ್ದಾಭಕ್ತಿಯಿಂದ ತೆರಳಿದರು. ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಗ್ರಾಮದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ದಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊ0ಡು…

Read More

ನಾಪೋಕ್ಲು ನ.27 : ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ಮೂರ್ನಾಡು ಶಾಖೆಯ ಪದಾಧಿಕಾರಿಗಳ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪೆಬ್ಬಾಟಂಡ ಎ.ಪೆಮ್ಮಯ್ಯ, ಉಪಾಧ್ಯಕ್ಷರಾಗಿ ಮುಂಡಂಡ ಕೆ.ಕುಟ್ಟಪ್ಪ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಪುದಿಯೋಕ್ಕಡ ಬೆಲ್ಲು ಸೋಮಯ್ಯ, ಕೆ.ಸುಭಾಷ್ ವಾಂಚಿರ, ಬಡುವಂಡ ಬೆಲ್ಲು ಚಿಣ್ಣಪ್ಪ, ಮೂಡೇರ ಅಶೋಕ ಅಯ್ಯಪ್ಪ, ಕೈಪೆಟ್ಟಿರ ಹರೀಶ್ ಅಯ್ಯಪ್ಪ, ಅವರೆಮಾದಂಡ ಸುಗುಣ ಸುಬ್ಬಯ್ಯ, ನೆರವಂಡ ಅನುಪ್ ಮುತ್ತಯ್ಯ, ನಾಯಕಂಡ ದೀಪು ಚಂಗಪ್ಪ, ಆಂಗೀರ ಸಂತೋಷ್ ಮಾದಪ್ಪ , ತೆಕ್ಕಡೆ ಶೋಭಾ ಮೋಹನ್, ಚಂಗಂಡ ಕನ್ನಿಕಾ ಸೂರಜ್ , ಎಂ.ಟಿ.ದೇವಪ್ಪ, ಹೆಚ್.ಎಸ್.ಗೋಪಾಲ್ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಪಟ್ಟಡ ಮೋಹನ್, ಸಿಬ್ಬಂದಿಯವರು ಭಾಗವಹಿಸಿದ್ದರು. ವರದಿ : ದುಗ್ಗಳ ಸದಾನಂದ  

Read More