ಮಡಿಕೇರಿ ನ.27 : ಎನ್‍ಸಿಸಿ ದಿನಾರಣೆಯ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿಯ ವಿದ್ಯಾರ್ಥಿ ಕೆಡೆಟ್‍ಗಳು ಮಡಿಕೇರಿಯ ಐತಿಹಾಸಿಕ ಸ್ಮಾರಕ ತಾಣವಾದ ರಾಜರ ಗದ್ದುಗೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. 100ಕ್ಕೂ ಅಧಿಕ ವಿದ್ಯಾರ್ಥಿ ಕೆಡಟ್‍ಗಳು ಶುಚಿತ್ವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕೆಡೆಟ್‍ಗಳು ಗದ್ದುಗೆಯ ಆಸುಪಾಸಿನಲ್ಲಿದ್ದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸಂಗ್ರಹಿಸಿದರು. ಗದ್ದುಗೆಯ ಗೋಡೆಗಳನ್ನು ಸ್ವಚ್ಛಗೊಳಿಸಿದರು. ಈ ಚಟುವಟಿಕೆಯಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಅಧಿಕಾರಿಗಳಾದ ಮೇಜರ್ ಪ್ರೊ. ರಾಘವ ಬಿ ಮತ್ತು ಹವಾಲ್ದಾರ್ ಮೇಜರ್ ರಾಮ್ ಬಹದ್ದೂರ್ ಥಾಪಾ ಮತ್ತು ಉಪನ್ಯಾಸಕಾದ ಪವನ್ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಿತು. ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಮಾತನಾಡಿ ರಾಜರ ಗದ್ದುಗೆಯ ವಿವರ, ವಾಸ್ತುಶಿಲ್ಪ ಮತ್ತು ಸೌಂದರ್ಯ ಮೀಮಾಂಸೆಯ ಕುರಿತು, ಸಮಾಜ ಸೇವೆಯಲ್ಲಿ ಎನ್ ಸಿ ಸಿ ಕೆಡೆಟ್ ಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಲೇಖಕ: admin
*ಪುತ್ತರಿ ಹಬ್ಬದ ಶುಭಾಶಯಗಳು : ನಾಡು ಸಮೃದ್ಧಿಯಾಗಲಿ* (ಬಲ್ಲಾರಂಡ ಮಣಿ ಉತ್ತಪ್ಪ, ಅಧ್ಯಕ್ಷರು, ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ)
*ಕೊಡಗಿನ ಮಹಾ ಜನತೆಗೆ ಪುತ್ತರಿ ಹಬ್ಬದ ಶುಭಾಶಯಗಳು* (ಕುಲ್ಲೇಟಿರ ಅಜಿತ್ ನಾಣಯ್ಯ, ಬೆಳೆಗಾರರು, ನಾಪೋಕ್ಲು)
*ಪುತ್ತರಿ ಹಬ್ಬ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ* (ಕುಕ್ಕೇರ ಜಯ ಚಿಣ್ಣಪ್ಪ, ಮಾಲೀಕರು, ವೃಂದಾವನ್ ಕೂರ್ಗ್)
*ನಾಡಿನ ಜನತೆಗೆ ಪುತ್ತರಿ ಹಬ್ಬದ ಶುಭಾಶಯಗಳು* (ನೆರವಂಡ ಅನಿತಾ ಪೂವಯ್ಯ, ಅಧ್ಯಕ್ಷರು, ಮಡಿಕೇರಿ ನಗರಸಭೆ)
*ಪುತ್ತರಿ ಹಬ್ಬ ಸಮೃದ್ಧಿಯನ್ನು ತರಲಿ* (ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕರ್ನಾಟಕ ಸರ್ಕಾರ, ಶಾಸಕರು, ವಿರಾಜಪೇಟೆ ಕ್ಷೇತ್ರ)
*ಪುತ್ತರಿ ಹಬ್ಬ ಸಮೃದ್ಧಿಯನ್ನು ತರಲಿ* (ಡಾ.ಮಂತರ್ ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ)
*ಪುತ್ತರಿ ಹಬ್ಬ ಸರ್ವರಿಗೂ ಶುಭ ತರಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ)
ಮಡಿಕೇರಿ ನ.26 : ಭಾರತೀಯ ಸಂವಿಧಾನ ದೇಶದ ಜನರ ಆಶೋತ್ತರಗಳಿಗೆ ಪೂರಕವಾಗಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಜಿ.ಉಮಾ ತಿಳಿಸಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಕೀಲರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿ ಅವರು ಮಾತನಾಡಿದರು. ಭಾರತದ ಸಂವಿಧಾನ ಸದಾ ನಮ್ಮೊಂದಿಗೆ ಇರುವ ಜೀವಂತಿಕೆಯಾಗಿದೆ. ಭಾರತದ ಪ್ರತಿಯೋರ್ವ ನಾಗರೀಕನ ಆಶೋತ್ತರಗಳಿಗೂ ಸ್ಪಂದಿಸುವ ಶಕ್ತಿ ಸಂವಿಧಾನಕ್ಕೆ ಇದೆ ಎಂದು ಹೇಳಿದರು. ಕೊಡಗಿನ ಕ್ರೀಡಾಪಟುಗಳು ತಮ್ಮ ಕ್ರೀಡಾ ಸಾಧನೆಯ ಮೂಲಕ ಖ್ಯಾತಿ ಪಡೆದು ಜಿಲ್ಲೆಯ ಕ್ರೀಡಾಹಿರಿಮೆಯನ್ನು ಹೆಚ್ಚಿಸಿದ್ದಾರೆ. ಇದೀಗ ವಕೀಲರು ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾಪ್ರತಿಭೆಯನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಉಮಾ ಹೇಳಿದರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, 1949 ರ ನವಂಬರ್ 26 ರಂದು ಅಂಗೀಕರಿಸಲ್ಪಟ್ಟು, 1950 ನೇ…