Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಹಾಬಲೇಶ್ವರ್ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ : ನಿತ್ಯ ಜೀವನದಲ್ಲಿ ಕನ್ನಡ ಭಾಷೆ ಬಳಕೆ ಅಗತ್ಯ : ಆರ್.ಕೆ.ಬಾಲಚಂದ್ರ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಹಾಬಲೇಶ್ವರ್ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ : ನಿತ್ಯ ಜೀವನದಲ್ಲಿ ಕನ್ನಡ ಭಾಷೆ ಬಳಕೆ ಅಗತ್ಯ : ಆರ್.ಕೆ.ಬಾಲಚಂದ್ರ

ಅಕ್ಟೋಬರ್ 19, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಅ.19 : ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದು ಅರ್ಥಹೀನವಾದದ್ದು, ಇದರ ಬದಲಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ನಮ್ಮ ನಿತ್ಯ ಜೀವನ
ಹಾಗೂ ನಮ್ಮ ವ್ಯವಹಾರಗಳಲ್ಲಿ ಬಳಸುವುದು ಆದ್ಯ ಕರ್ತವ್ಯವಾಗಬೇಕೆಂದು ಜಿಲ್ಲಾ ಲೀಡ್‍ಬ್ಯಾಂಕಿನ (ಅಗ್ರಣಿ ಬ್ಯಾಂಕ್) ಮಾಜಿ ಮುಖ್ಯ ವ್ಯವಸ್ಥಾಪಕ ಹಾಗೂ ವೃತ್ತಿ ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಕರೆ ನೀಡಿದರು.
ಜಿಲ್ಲಾ ಕ.ಸಾ.ಪ.ಸಹಯೋಗದಲ್ಲಿ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ವತಿಯಿಂದ ಕುಶಾಲನಗರದ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಾಹಿತಿ ದಿವಂಗತ ಎನ್.ಮಹಾಬಲ್ಲೇಶ್ವರ ಭಟ್ ಅವರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡದ ಏಳು ಬೀಳುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ, ಭಾಷೆ ಜೀವಂತವಾಗಿರಬೇಕಾದರೆ ಮಾತು ಮತ್ತು ಬರಹ ಎರಡು ಕೂಡ ಪ್ರಮುಖವಾಗಿರಬೇಕು ಎಂದು ಹೇಳಿದ ಅವರು, ಕನ್ನಡದ ಕುರಿತಾದ ಒಲವು ಮತ್ತು ಅರಿವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.
ಒಂದು ಭಾಷೆ ನಾಶವಾದರೆ ಅದನ್ನು ಮಾತನಾಡುವ ಸಮುದಾಯ ಕೂಡ ಕ್ರಮೇಣ ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಅವರು, ಜಗತ್ತಿನಲ್ಲಿ ಪ್ರತಿದಿನವೂ ಕನಿಷ್ಠ 2 ಭಾಷೆಗಳು ನಾಶ ಹೊಂದುತ್ತಿದ್ದು, ಇದಕ್ಕೆ ಕಾರಣ ಆ ಭಾಷೆಯನ್ನು ಬಳಸಲು ಸಾಧ್ಯವಾಗದೇ ಇರುವುದು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿದ ಅವರು, ಕನ್ನಡದ ಮನಸ್ಸುಗಳು ಜಾಗೃತಗೊಂಡು ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ಕೂಡ ಬದಲಾಗುತ್ತ ಕನ್ನಡ ಭಾಷೆ ಮತ್ತು ನಾವು ತಾಯಿ – ಮಗುವಿನ ರೀತಿಯ ಸಂಬಂಧವನ್ನು ಹೊಂದಿ ಭಾಷೆಯಲ್ಲಿ ಹೊಸತನವನ್ನು ಹೊಂದುವ ಸೃಷ್ಠಿ ಶೀಲಾತೆಯನ್ನು ಹೊಂದುವ ಅನಿವಾರ್ಯತೆಯನ್ನು ಇದೆಯೆಂದು ಹೇಳಿದರು.
ಜನಪದ ಸಾಹಿತ್ಯದಲ್ಲಿ ಮತ್ತು ಬರಹ ರೂಪದಲ್ಲಿ ಕನ್ನಡ ಸಾಹಿತ್ಯದ ಅನಂತ ಸಾಧ್ಯತೆಗಳು ಮತ್ತು ವಿರಾಟ್ ಸ್ವರೂಪವನ್ನು ಅದ್ಬುತವಾಗಿ ಸೋದಹರಣವಾಗಿ ವಿವರಿಸಿದ ಅವರು, ತಮ್ಮ ಮಾತುಗಾರಿಕೆಯಿಂದ ಕನ್ನಡದ ನುಡಿ ಸೊಬಗನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕನ್ನಡ ನಿರಂತರತೆಯನ್ನು ಕಾಪಾಡಿಕೊಳ್ಳಲು ಕನ್ನಡ ಬಳಕೆಗೆ ಮನೆಯೇ ಮೊದಲ ಪಾಠ ಶಾಲೆಯಾಗುವುದು ಅಚ್ಚಕನ್ನಡದ ಹೆಸರುಗಳನ್ನು ಮಕ್ಕಳಿಗೆ ಇಡಬೇಕು ಕನ್ನಡದಲ್ಲಿ ಬರೆಯಲು ಮತ್ತು ಓದಲು ಬಾಲ್ಯದಿಂದಲೇ ಕಲಿಸುವುದಲ್ಲದೆ ಪ್ರತಿದಿನವೂ ಕನ್ನಡ ಪತ್ರಿಕೆಗಳು ಹಾಗೂ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ, ಕನ್ನಡ ಚಲಚಿತ್ರ ಹಾಗೂ ಕನ್ನಡ ಟಿ.ವಿ. ಚಾನೆಲ್‍ಗಳನ್ನು ನೋಡುವ ಮೂಲಕ ಕನ್ನಡ ಬಳಕೆ ಕನ್ನಡದ ಬೆಳವಣಿಗೆಯನ್ನು ನಾವು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ನಾವು ನವೆಂಬರ್ ಮಾಸದಲ್ಲಿ ಮಾತ್ರ ಕನ್ನಡಿಗರಾಗದೇ ವರ್ಷವಿಡೀ ಕನ್ನಡದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡದ ಕುರಿತಾದ ಮಿಡಿತಗಳನ್ನು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯವು ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ್ದು, ಅಪ್ಪಟ ಜೀವನ ಪ್ರೀತಿ ಮಾನವೀಯತೆ, ಸಹಬಾಳ್ವೆ ಕನ್ನಡದ ಜೀವವಾಗಿದ್ದು, ಸಕಾಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಕನ್ನಡ ಭಾಷೆ ಸಾಹಿತ್ಯದ ಅಂತರಂಗದ ಧ್ವನಿಯಾಗಿದೆ ಎಂದರು.
ಸಾಹಿತಿ ದಿವಂಗತ ಎನ್.ಮಹಾಬಲೇಶ್ವರ ಭಟ್ ಅವರ ಪುತ್ರ ಬಿಳಿಗೇರಿಯ ಕಾಫಿ ಬೆಳೆಗಾರ ಎನ್.ಎಂ.ಕುಮಾರ್ ಮಾತನಾಡಿ, ತನ್ನ ತಂದೆ 1960 ರಷ್ಟು ಹಿಂದೆಯೇ ಕನ್ನಡ ಪಂಡಿತರಾಗಿ ಶಿಕ್ಷಕರಾಗಿ ಪ್ರಾಂಶುಪಾಲರಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕೃಷಿ ಮಾಡಿದ್ದಾರೆಂದು ಸ್ಮರಿಸಿದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ವಿದ್ಯಾತಪ್ಪಸ್ವಿಗಳಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎನ್.ಎಸ್.ಸತೀಶ್, ಕಳೆದ ವರ್ಷದಿಂದ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವುದು ಕಡ್ಡಾಯವಾಗಿದೆ. ಹಾಗೆಯೇ 15 ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗವನ್ನು ಕಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಅ ನಿವೃತ್ತ ಕನ್ನಡಪರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮ್‍ಕುಮಾರ್ ದತ್ತಿನಿಧಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥ ಡಾ ಎಸ್.ರಂಗನಾಥ್, ಹೇಮಲತಾ, ಸಹನಾ ಇದ್ದರು.
ತಾಲ್ಲೂಕು ಕಸಾಪದ ಗೌರವ ಕಾರ್ಯದರ್ಶಿ ಎಸ್.ನಾಗರಾಜು ಸ್ವಾಗತಿಸಿದರು. ಕಸಾಪ ಪದಾಧಿಕಾರಿ ಲೀಲಾ ತೊಡಿಕಾನ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿ ಬಿ.ಬಿ.ಸಾವಿತ್ರಿ ವಂದಿಸಿದರು.
ಇದೇ ವೇಳೆ ಆರ್.ಕೆ.ಬಾಲಚಂದ್ರ ಅವರನ್ನು ತಾಲ್ಲೂಕು ಕ.ಸಾ.ಪ.ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.
ತಾಲೂಕು ಕಸಾಪ ಪದಾಧಿಕಾರಿಗಳು ಕಾಲೇಜಿನ ವಿದ್ಯಾರ್ಥಿ ಸಮೂಹ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ಬೈಲಾ ತಿದ್ದುಪಡಿಗೆ ಕ್ರಮ : ಶಾಸಕ ಡಾ.ಮಂತರ್ ಗೌಡ ಭರವಸೆ; ದಸರಾ ದಶಮಂಟಪ ಸಮಿತಿ ಸೇರಿದಂತೆ 62 ಸಂಘ ಸಂಸ್ಥೆಗಳಿಂದ ಪೌರ ಸನ್ಮಾನ

ನವೆಂಬರ್ 4, 2026

ಸುಂಟಿಕೊಪ್ಪಕ್ಕೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ : ಪಿ.ಎಫ್. ಸೆಬಾಸ್ಟಿನ್; ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಸತೀಶ್ ಕಾಜೂರು ಅವರಿಗೆ ಸನ್ಮಾನ

ನವೆಂಬರ್ 4, 2026

ಕೊಡಗಿನಲ್ಲಿ ನಿರಂತರ ಹುಲಿ ದಾಳಿ: 50ಕ್ಕೂ ಹೆಚ್ಚು ಜಾನುವಾರುಗಳು ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ; ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ

ನವೆಂಬರ್ 4, 2026

ಸುಂಟಿಕೊಪ್ಪಕ್ಕೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ : ಪಿ.ಎಫ್. ಸೆಬಾಸ್ಟಿನ್; ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಸತೀಶ್ ಕಾಜೂರು ಅವರಿಗೆ ಸನ್ಮಾನ

ನವೆಂಬರ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ, NEWS DESK ನ.4: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷ ಸ್ಥಾನಮಾನವಿದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ…

ಕೊಡಗಿನಲ್ಲಿ ನಿರಂತರ ಹುಲಿ ದಾಳಿ: 50ಕ್ಕೂ ಹೆಚ್ಚು ಜಾನುವಾರುಗಳು ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ; ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ

ನವೆಂಬರ್ 4, 2026

ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್

ನವೆಂಬರ್ 4, 2026

ಸೋಮವಾರಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿನಿಧಿ ಕಾರ್ಯಕ್ರಮ; ವಿವಿಧ ವಿಷಯಗಳ ಕುರಿತು ಉಪನ್ಯಾಸ, ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಸ್ಪರ್ಧೆ

ನವೆಂಬರ್ 4, 2026

ಕಕ್ಕಬ್ಬೆ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆ

ನವೆಂಬರ್ 4, 2026

ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ; ಕದಿರು ಬಿಡುವ ಹಂತದಲ್ಲಿದ್ದ ಭತ್ತದ ಬೆಳೆ ನಾಶ; ರೈತರಿಗೆ ಅಪಾರ ನಷ್ಟ

ನವೆಂಬರ್ 4, 2026

ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಗೆ ಚಾಲನೆ

ನವೆಂಬರ್ 4, 2026

ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ; ವಿರಾಜಪೇಟೆಯಲ್ಲಿ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ನವೆಂಬರ್ 4, 2026

ಮೂರ್ನಾಡು ಭಾರತೀಯ ನೃತ್ಯ ಕಲಾ ಶಾಲೆಗೆ ಶೇ.100ರಷ್ಟು ಫಲಿತಾಂಶ; ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಸಾಧನೆ

ನವೆಂಬರ್ 4, 2026

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದ ಘಟನೆ ಖಂಡನೀಯ: ಬಿಜೆಪಿ ರೈತ ಮೋರ್ಚಾ

ನವೆಂಬರ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.