ಲೇಖಕ: admin

ಮಡಿಕೇರಿ ಸೆ.28 : ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ಕಾಯ೯ಕ್ರಮದಲ್ಲಿ  ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಭಾಗವಹಿಸಿದ್ದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಕೊಡವ ಪಡೆಯಾಳಿಗಳು ಎನ್ನುವ ಪರಿಕಲ್ಪನೆಯಲ್ಲಿ ಕೊಡಗಿನ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಟ್ ಪಾಟ್, ವಾಲಗತಾಟ್,ನ ಜೊತೆಗೆ ಮತ್ತು  ಕೊಡವ ಸಂಸ್ಕೃತಿಯ ಅಂಗವಾದ ಕೋವಿ, ಒಡಿಕತ್ತಿ, ಬಿಲ್ಲು, ಬಾಣ,ಬಜಿ೯ ಹಿಡಿದು ಜಾಥಾ ನಡೆಯಿತು. ಕೊಡವ ಕೂಟಾಳಿಯಡ ಕೂಟದ  ಅಧ್ಯಕ್ಷರಾದ ಚಂಗುಲಂಡ ಸೂರಜ್, ಗೌರವ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ಕಾಯ೯ದಶಿ೯ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿ ಕಬ್ಬಚ್ಚಿರ ರಶ್ಮಿಕಾಯ೯ಪ್ಪ ಸಹ ಕಾರ್ಯದರ್ಶಿ ನೂರೇರ ಸರಿತ ಉತ್ತಯ್ಯ, ನಿರ್ದೇಶಕ ಕಾಳಮಂಡ ರಾಬಿನ್ ಕರ್ತುರ ರನ್ನು ಪೆಮ್ಮಯ್ಯ, ಸದಸ್ಯರಾದ ಕೊಟ್ಟಂಗಡ ಕವಿತಾ ವಾಸುದೇವ್, ಬೊಜ್ಜಂಗಡ ಭವ್ಯ, ನಂಬುಡುಮಾಡ ದಿಲನ್ ಅಚ್ಚಯ್ಯ,ನೆಲ್ಲಚಂಡ ದಿಲನ್ ಅಯ್ಯಪ್ಪ, ನಂಬುಡುಮಾಡ ರೀತು ಅಚ್ಚಯ್ಯ, ಚಂಗುಲಂಡ…

Read More

ಮಡಿಕೇರಿ ಸೆ.28 : ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ರಾಜ್ಯದಲ್ಲಿ ಮಾದರಿಯಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿgಐ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ. ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವು ಕೊಡಗು ಜಿಲ್ಲೆಯಲ್ಲಿ ವಿಶಿಷ್ಟವಾದ ಹಬ್ಬವಾಗಿದೆ. ಆ ನಿಟ್ಟಿನಲ್ಲಿ ಉತ್ಸವವಾಗಿ ನಡೆಸುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಹೇಳಿದರು. ತಲಕಾವೇರಿ ಜಾತ್ರಾ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ…

Read More

ಮಡಿಕೇರಿ ಸೆ.27 : ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನೆನಪಿನಲ್ಲಿ ಕೊಡಗಿನಲ್ಲಿ ಹಲವಾರು ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಅಪ್ಪಚ್ಚಕವಿ ಅಭಿಮಾನಿಗಳ ಬಳಗದ ಅಧ್ಯಕ್ಷ ಉಳ್ಳಿಯಡ.ಎಂ.ಪೂವಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಚ್ಚಕವಿ ಕೊಡವ ಭಾಷೆಯ ಆದಿಕವಿ, ವರಕವಿ, ವರ್ಷಂಪ್ರತಿ ಸೆ.21ರಂದು ಅವರ ಜನ್ಮದಿನವನ್ನು ಆಚರಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ 155ನೇ ಜನ್ಮದಿನವನ್ನು ಆಚರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜಿಲ್ಲೆಯ ಜನತೆಯ ಮನದಲ್ಲಿ ಉಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು. ಅಪ್ಪಚ್ಚ ಕವಿಯ ಜನ್ಮಸ್ಥಳ ಕಿರುಂದಾಡು ಗ್ರಾಮದ ಅಪ್ಪನೆರವಂಡ ಐನ್‍ಮನೆಯನ್ನು ಕವಿ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು, ಮಡಿಕೇರಿ ಚೌಕಿ ವೃತ್ತಕ್ಕೆ ಹರದಾಸ ಅಪ್ಪಚ್ಚಕವಿ ವೃತ್ತ ಎಂದು ಹೆಸರಿಡಬೇಕು, ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಹರದಾಸ ಅಪ್ಪಚ್ಚಕವಿ ಸ್ಮಾರಕ ಕನ್ನಡ ವಿಭಾಗ ಎಂದು ನಾಮಕರಣ ಮಾಡಬೇಕು, ಕೊಡವ ಎಂ.ಎ ಕೋರ್ಸ್‍ಗೆ ಕವಿಗಳ ವಿಷಯವನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲಾರಂಡ ರಂಗ…

Read More

ಮಡಿಕೇರಿ ಸೆ.28 : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಎರಡನೇ ಹಂತದ 2ನೇ ದಿನದ ಪಾದಯಾತ್ರೆ ಪಾಂಡಾನೆ ನಾಡ್ ಮಂದ್, ಕಾಣತ್ತ್ ಮಂದ್ (ಮೂರ್ನಾಡ್-ಐಕೊಳ) ನಲ್ಲಿ ನಡೆಯಿತು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರ ಪರವಾದ ಹಕ್ಕೊತ್ತಾಯಗಳ ಕುರಿತು ಪ್ರತಿಪಾದಿಸಿದರು. ಜಿಲ್ಲೆಯ ಎಲ್ಲಾ ಕಡೆ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತ ಹೋರಾಟದಲ್ಲಿ ತೊಡಗಿಸಿಕೊಂಡರೆ ನ್ಯಾಯಯುತ ಬೇಡಿಕೆಗಳು ಈಡೇರಲಿವೆ. ಎರಡು ಹಂತಗಳ ಪಾದಯಾತ್ರೆ ಪೂರ್ಣಗೊಳ್ಳುತ್ತಿದ್ದು, ಉಳಿದಿರುವ ಮೂರು ಹಂತಗಳ ಪಾದಯಾತ್ರೆಯಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ…

Read More

ಮಡಿಕೇರಿ ಸೆ.28 : ಪ್ರವಾದಿ ಮುಹಮ್ಮದ್ ಅವರ ಮಾನವೀಯ ಶಿಕ್ಷಣಗಳನ್ನು ವ್ಯಾಪಕಗೊಳಿಸಲು, ಅವರ ಜೀವನ ಮತ್ತು ಸಂದೇಶವನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ವತಿಯಿಂದ ಅ.6ರ ವರೆಗೆ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್, ಈಗಾಗಲೇ “ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ)” ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನ ಆರಂಭಗೊಂಡಿದ್ದು, ಅಭಿಯಾನದಲ್ಲಿ ಪ್ರವಾದಿಗಳ ಕುರಿತ ಪುಸ್ತಕಗಳ ಬಿಡುಗಡೆ, ವಿಚಾರ ಗೋಷ್ಠಿ, ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶಚಿತ್ವ ಅಭಿಯಾನ, ಆಸ್ಪತ್ರೆ-ಅನಾಥಾಲಯ-ವೈದ್ಯಾಶ್ರಮಗಳ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಸಮಾಜ ಸೇವಾ ಚಟುವಟಿಕೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು. ಕೊಡಗಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ಇಂದಿನ ನಮ್ಮ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ ಎದ್ದುನಿಲ್ಲಬೇಕಾಗಿದೆ. ಪರಸ್ಪರ ತಪ್ಪು ಕಲ್ಪನೆಗಳು, ಪೂರ್ವಾಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳೆ,…

Read More

ಕುಶಾಲನಗರ ಸೆ.28 : ದಾರುಲ್ ಮದ್ರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ  ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1498ನೇ ಜನ್ಮ ದಿನದ ಪ್ರಯುಕ್ತ “ರಹ್ಮತೇ ರಬೀಅ್ ಈದ್ ಮಿಲಾದ್” ಕಾರ್ಯಕ್ರಮವು ಕುಶಾಲನಗರದ ಶಾದಿ ಮಹಲ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿಲಾಲ್ ಮಸೀದಿಯ ಖತೀಬರಾದ ನಾಸರ್ ಫೈಜ಼ಿ, ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು 1400 ವರ್ಷಗಳ ಹಿಂದೆ ಶಾಂತಿ, ಸಹೋದರತೆ ಸಂದೇಶವನ್ನು ಸಾರಿದವರಾಗಿದ್ದಾರೆ. ವರ್ಣಬೇಧ ನೀತಿ ಹಾಗೂ ಇನ್ನಿತರ ಕೆಟ್ಟ ಪದ್ಧತಿ  ಜಾರಿಯಲ್ಲಿದ್ದ ಕಾಲಗಟ್ಟದಲ್ಲಿ ಶಾಂತಿಯನ್ನು ಪಸರಿಸಿದ, ಪ್ರವಾದಿಯವರ ಜೀವನ ಸಂದೇಶಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಪ್ರತಿಯೊಂದು‌ ಧರ್ಮವೂ ಶಾಂತಿಯನ್ನು ಸಾರುತ್ತದೆ. ಕುಶಾಲನಗರದಲ್ಲಿ ಪ್ರತಿಯೊಂದು ಧರ್ಮದವರು ಪರಸ್ಪರ ಸಹೋದರರಂತೆ ಜೀವಿಸುತ್ತಿದ್ದಾರೆ. ಹೊಸಕೋಟೆಯಲ್ಲಿ ನಡೆದ ಗಣೇಶ ಚತುರ್ಥಿಗೆ ಮುಸ್ಲಿಂ ಸಹೋದರರು ತಂಪು ಪಾನೀಯಗಳನ್ನು ವಿತರಿಸಿದರು. ಕೂಡಿಗೆಯಲ್ಲಿ ನಡೆದ ಈದ್ ಮಿಲಾದ್ ಗೆ ಹಿಂದೂ ಸಹೋದರರು ತಂಪು ಪಾನೀಯಗಳನ್ನು ನೀಡಿ ಸಹೋದರತೆಯ…

Read More

ಮಡಿಕೇರಿ ಸೆ.28 : ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮೂರು ಆಟೋಗಳು ಹಾನಿಗೊಳಗಾಗಿರುವ ಘಟನೆ ಗುರುವಾರ ಬೆಳಗ್ಗೆ ಹುಣುಸೂರು ಪಟ್ಟಣದ ಶಬೀರ್ ನಗರದಲ್ಲಿ ನಡೆದಿದೆ. ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಮರದ ಬೇರು ಸಡಿಲಗೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಎಂದಿನಂತೆ ಆಟೋ ಚಾಲಕರು ಆಟೋ ನಿಲ್ದಾಣದಲ್ಲಿ ಆಟೋ ನಿಲ್ಲಿಸಿದ್ದರು. ಈ ಸಂದರ್ಭ ಬೇರು ಸಹಿತ ಮರ ಉರುಳಿ ಬಿದ್ದಿದೆ, ಆದರೆ ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರ ತೆರವಿಗೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

Read More

ಮಡಿಕೇರಿ ಸೆ.28 : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಿಸರ್ಚ್ ಮೆಥಾಡಲಜಿ, ರಿಸರ್ಚ್ ಪಬ್ಲಿಕೇಷನ್ಸ್ ಮತ್ತು ಎಥಿಕ್ಸ್ ಎಂಬ ವಿಷಯದ ಮೇಲೆ 2023 ರ ಅ.3 ರಿಂದ 7 ರ ವರೆಗೆ ಕಾರ್ಯಾಗಾರವು ಅಕಾಡೆಮಿ ಕಚೇರಿಯಲ್ಲಿ (ಪ್ರೊ,.ಯು.ಆರ್.ರಾವ್ ವಿಜ್ಞಾನ ಭವನ, ಮೇ, ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿಕೆವಿಕೆ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು-560097) ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಾಗಾರವು ಸ್ನಾತಕೋತ್ತರ ವಿದ್ಯಾರ್ಥಿಗಳು/ ಅಧ್ಯಾಪಕರು ಹಾಗೂ ಯುವ ಸಂಶೋಧಕರಿಗೆ ಉಪಯುಕ್ತವಾಗಲಿದೆ. ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯಾದ್ಯಂತ ಸ್ನಾತಕೋತ್ತರ ವಿಜ್ಞಾನ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜು ಅಧ್ಯಾಪಕರು ಹಾಗೂ ಯುವ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಬಹುದು. ಭಾಗವಹಿಸಲಿಚ್ಚಿಸುವವರು ಸೆ.30 ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ವೆಬ್‍ಸೈಟ್ http://www.kstacademy.in ಅಥವಾ ವೈಜ್ಞಾನಿಕಾಧಿಕಾರಿಯಾದ ವಿ.ಕೆ.ಶ್ರೀನಿವಾಸು ದೂ. 9620767819 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ…

Read More

ಇಂಫಾಲ ಸೆ.28 : ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾದ ಹಿನ್ನೆಲೆ ಆಕ್ರೋಶಗೊಂಡ ಪ್ರತಿಭಟನಾಕಾರರು ಈಶಾನ್ಯ ರಾಜ್ಯ ಮಣಿಪುರದ ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದು, ರಾಜಧಾನಿ ಇಂಫಾಲದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಲಾಗಿದ್ದು, ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.  ಮೈತೇಯಿ ಸಮುದಾಯಕ್ಕೆ ಸೇರಿದ 17 ವರ್ಷದ ಬಾಲಕಿ ಮತ್ತು 20 ವರ್ಷದ ಯುವಕನ ಮೃತದೇಹಗಳ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Read More

ಮಡಿಕೇರಿ ಸೆ.28 :  ಚೆಟ್ಟಳ್ಳಿ ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಮ್ ಜಮಾಹತ್ ಕಮಿಟಿ ವತಿಯಿಂದ ಪ್ರವಾದಿ ಮೊಹಮ್ಮದ್ ‌ಪೈಗಂಬರ್ ಅವರ ಜನ್ಮದಿನವನ್ನು ಕಂಡಕರೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಮೌಲಿದ್ ಪಾರಾಯಣದೊಂದಿಗೆ ಈದ್ ಮಿಲಾದ್ ಕಾರ್ಯಕ್ರಮ ಆರಂಭಗೊಂಡಿತ್ತು. ಧ್ವಜಾರೋಹಣವನ್ನು ಮಹಲ್ ಅಧ್ಯಕ್ಷರಾದ ಪಿ.ಹೆಚ್ ಗಫೂರ್ ನೇರವೇರಿಸಿದರು. ಮಹಲ್ ‌ಖತೀಬರಾದ ಮುಸ್ತಫಾ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ನಂತರ ಕಂಡಕರೆಯಿಂದ ಕಾಫಿಬೋರ್ಡ್ ವರೆಗೆ‌ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿ ಸಂದೇಶ ನೀಡಿದ, ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಆಧುನಿಕ ಯುಗದ ಭರಾಟೆಯಲ್ಲಿ ಮುಳುಗುತ್ತಿರುವ ಇಂದಿನ ‌ಯುವ ಸಮೂಹ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನಚರಿತ್ರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಯುವ ಸಮೂಹದ ಯಾವುದೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಶಿಸ್ತಿನಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಇಡೀ ವಿಶ್ವಕ್ಕೆ ಸಾರಿರುವ ಸಂದೇಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕಾಗಿದೆ. ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ, ಪ್ರವಾದಿ ಪೈಗಂಬರ್ ಅವರು ನೀಡಿರುವ…

Read More