ಮಡಿಕೇರಿ ಆ.29 : ನ್ಯಾಯಯುತವಾಗಿ ತೆರಿಗೆ ಪಾವತಿಸಿ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತರಿಗೆ ನಿಯಮ ಬಾಹಿರ ಬೀದಿ ಬದಿ ವ್ಯಾಪಾರದಿಂದ ಅನ್ಯಾಯವಾಗುತ್ತಿದೆ ಎಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆತಂಕ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್‍ನ ನಗರಾಧ್ಯಕ್ಷ ಎಂ.ಧನಂಜಯ್ ಅಂಗಡಿ ಬಾಡಿಗೆ, ಮಾರಾಟ ಪರವಾನಿಗೆ ಶುಲ್ಕ, ಮಾರಾಟ ತೆರಿಗೆ, ಆದಾಯ ತೆರಿಗೆ, ವೃತ್ತಿಪರ ತೆರಿಗೆ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಶುಲ್ಕ, ತೂಕ ಮತ್ತು ಅಳತೆ ಇಲಾಖೆ ನೋಂದಣಿ ಶುಲ್ಕ ಸೇರಿದಂತೆ ಇನ್ನೂ ಅನೇಕ ವಿಧದಲ್ಲಿ ಶುಲ್ಕಗಳನ್ನು ಪಾವತಿಸಿ ವ್ಯಾಪಾರ ಮಾಡುತ್ತಿರುವ ವರ್ತಕ ಇತ್ತೀಚಿನ ದಿನಗಳಲ್ಲಿ ನಷ್ಟ ಅನುಭವಿಸುತ್ತಿದ್ದಾನೆ. ಯಾವುದೇ ಶುಲ್ಕ ಪಾವತಿಸದೆ ರಾಜಾರೋಷವಾಗಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ನೈಜ ವರ್ತಕರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಡಿಕೇರಿ ನಗರದ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು, ಹೂವು ಮಾತ್ರವಲ್ಲದೆ ಇತರ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಈ ವ್ಯಾಪಾರಿಗಳು ಯಾವುದೇ ತೆರಿಗೆ…
ಲೇಖಕ: admin
ಮಡಿಕೇರಿ ಆ.29 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರವು 100 ದಿನ ಪೂರೈಸಿ, ನುಡಿದಂತೆ ನಡೆದಿದೆ. ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಸರ್ಕಾರ ಯಶಸ್ಸಿನತ್ತ ಸಾಗಿದೆ. ಇದೇ ಮೇ,20 ರಂದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರ ಮನಃ ಗೆದ್ದಿದೆ. ಶಕ್ತಿ ಯೋಜನೆ: ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯು ಜೂನ್, 11 ರಂದು ಪ್ರಥಮ ಯೋಜನೆಯಾಗಿ ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ. ಕೊಡಗು ಜಿಲ್ಲೆಯಲ್ಲಿ ಆಗಸ್ಟ್, 27 ರವರೆಗೆ 11,10,983 ಮಂದಿ ಮಹಿಳೆಯರು ಬಸ್‍ನಲ್ಲಿ ಪ್ರಯಾಣ ಬೆಳೆಸಿದ್ದು, 4,10,54,728 ರೂ. ವೆಚ್ಚವನ್ನು ಸರ್ಕಾರ ಭರಿಸಿದೆ. ‘ಅನ್ನಭಾಗ್ಯ ಯೋಜನೆ’ : ಸರ್ಕಾರ ಬಿಪಿಎಲ್, ಎಎವೈ ಫಲಾನುಭವಿಗಳಿಗೆ ಈಗಾಗಲೆ ವಿತರಿಸುತ್ತಿರುವ 05 ಕೆ.ಜಿ ಅಕ್ಕಿಯೊಂದಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲು ಉದ್ದೇಶಿಸಿತ್ತು,…
ಮಡಿಕೇರಿ ಆ.29 : ಕೊಡಗು ಜಿಲ್ಲೆಯಲ್ಲಿ ಒಟ್ಟು 525 ಹಳ್ಳಿಗಳಿದ್ದು, ಅದರಲ್ಲಿ 2,93,378 ಸರ್ವೆ ನಂಬರ್ ಗಳಿದ್ದು, ಈ ಸರ್ವೆ ನಂಬರ್ ಗಳ ಪೈಕಿ 2,64,086 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶದ ಅನುಸಾರ ಈ ಬಾರಿಯ ರೈತರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು https://play.google.com/store/apps/details?id=com.csk.PR_Kharif_2023.cropsurvey ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 316 ಖಾಸಗಿ ನಿವಾಸಿಗಳನ್ನು ನೇಮಿಸಲಾಗಿರುತ್ತದೆ. ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅನ್ನು ಬಳಸಲು ಹೊಸ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್ ಫ್ರೂಟ್ಸ್ (FRUITS) ತಂತ್ರಾಂಶದ ಎಫ್‍ಐಡಿ (FID) ಸಂಖ್ಯೆಗೆ ಜೋಡಣೆಯಾಗಿರುವುದರಿಂದ ಅಪ್ಲಿಕೇಷನ್ ಬಳಸಲು…
ಮಡಿಕೇರಿ ಆ.29 : ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆಯ ಕಾಮಗಾರಿಯನ್ನು ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿದರು. ನಂತರ ಕಾಮಗಾರಿಯನ್ನ ತ್ವರಿತವಾಗಿ ಮುಗಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್‍ರಾಜ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ನಾಗರಿಕರು ಹಾಜರಿದ್ದರು.
ಮಡಿಕೇರಿ ಆ.29 : ಪ್ರಕೃತಿಯ ಆರಾಧಕರಾದ ಕೊಡವ ಬುಡಕಟ್ಟು ಜನಾಂಗ ಆಚರಿಸಿಕೊಂಡು ಬರುತ್ತಿರುವ “ಕೈಲ್ ಪೊಳ್ದ್” ಹಬ್ಬವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ 28 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. 29 ನೇ ವರ್ಷದ “ಕೈಲ್ ಪೊಳ್ದ್” ನ್ನು ಈ ಬಾರಿ ಸೆ.1 ರಂದು ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನ ಮಂದ್ ನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾಂಪ್ರದಾಯಿಕ ಕೈಲ್ ಪೊಳ್ದ್” ಹಬ್ಬವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ. ಗುರು ಹಿರಿಯರು, ಕಾವೇರಿ ಮಾತೆ, ಭೂತಾಯಿ, ಬೆಟ್ಟಗುಡ್ಡಗಳು ಮತ್ತು ಸೂರ್ಯಚಂದ್ರರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೀಧಿ ಅರ್ಪಿಸಲಾಗುವುದು. ಸಾಂಪ್ರದಾಯಿಕ ಕೋವಿಗಳನ್ನು ಥೋಕ್ ಪೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುವುದು. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಕೋವಿ ಹಕ್ಕನ್ನು ಪ್ರತಿಪಾದಿಸಲಾಗುವುದು. ಇದರೊಂದಿಗೆ ವಿವಿಧ ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಮತ್ತು ಕೊಡವ…
ಮಡಿಕೇರಿ ಆ.29 : ಗ್ರಾಮೀಣ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ಎಂದಿಗೂ ವಂಚಿತರಾಗಕೂಡದು ಮತ್ತು ಅವರ ಶೈಕ್ಷಣಿಕ ಗುರಿ ಸಾಧನೆಗೆ ಆರ್ಥಿಕ ಮುಗ್ಗಟ್ಟು ಎದುರಾಗಬಾರದೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ದಿವಂಗತ ಎ.ಕೆ.ಸುಬ್ಬಯ್ಯ ಮತ್ತು ಪೊನ್ನಮ್ಮ ಟ್ರಸ್ಟ್ ವತಿಯಿಂದ ಶಾಸಕರ ನಿವಾಸದಲ್ಲಿ ನಡೆದ ವಿವಿಧ ಪದವಿ ಶಿಕ್ಷಣ ಪಡೆಯುತ್ತಿರುವ 103 ವಿದ್ಯಾರ್ಥಿನಿಯರಿಗೆ ವಿದ್ಯಾನಿಧಿ ಚೆಕ್ ವಿತರಣೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಒಂದು ಭಾಗವಾಗಿದೆ. ತನ್ನ ತಾಯಿಯ ಆಶಯದಂತೆ ಹೆಣ್ಣು ಮಕ್ಕಳ ಮೇಲಿಟ್ಟಿರುವ ಮಮತೆಯನ್ನು ಉಳಿಸುವ ಹಾಗೂ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2021 ರಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿತೆಂದು ತಿಳಿಸಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಆಯ್ದ ವಿದ್ಯಾರ್ಥಿಗಳಿಂದ ನೂರಾರು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಶಕ್ತಿ ಬಳಗ ಹಾಗೂ ಇತರರ ಸಹಕಾರದಿಂದ ಒಟ್ಟು 103 ವಿದ್ಯಾರ್ಥಿಗಳನ್ನು ಗುರುತಿಸಿ, ವಿದ್ಯಾನಿಧಿಯ ಚೆಕ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರು ನಿಧಿಯನ್ನು ಸದುಪಯೋಗಪಡಿಸಿಕೊಂಡು…
ಮಡಿಕೇರಿ ಆ.29 : ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್, 31 ರಂದು ಬೆಳಗ್ಗೆ 11.30 ಗಂಟೆಗೆ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರಾದ ವಿಜಯ ತಿಳಿಸಿದ್ದಾರೆ.
ಮಡಿಕೇರಿ ಆ.29 : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‍ಟಿಇಟಿ-2023)ಯು ಸೆ.3 ರಂದು ಮೊದಲನೇ ಅಧಿವೇಶನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ 2ನೇ ಅಧಿವೇಶನ ಮಧ್ಯಾಹ್ನ 2 ರಿಂದ ಸಂಜೆ 4.30 ಗಂಟೆವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-01), ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-02) ಮತ್ತು ನಗರದ ಸಂತ ಮೈಕರಲ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಕಚೇರಿಯ ಪರೀಕ್ಷಾ ನೋಡಲ್ ಅಧಿಕಾರಿ ಕೆ.ಆರ್.ಬಿಂದು ಇವರ ಮೊ.ಸಂ.9611 720320 ನ್ನು ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ ತಿಳಿಸಿದ್ದಾರೆ.
ಮಡಿಕೇರಿ ಆ.29 : ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಆಹಾರ ವಸ್ತುಗಳ/ ಪದಾರ್ಥಗಳ ಉತ್ಪಾದಕರು, ಪ್ಯಾಕರ್‍ಗಳು, ಸಾಗಣಿಕೆದಾರರು, ಸಗಟು/ ಚಿಲ್ಲರೆ ಮಾರಾಟಗಾರರು, ವಿತರಕರು, ಹೋಟೆಲ್ ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್‍ಸ್ಟೋರ್, ಕ್ಲಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಹೋಮ್ ಸ್ಟೇ ಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರು ಘಟಕ/ ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣ ಘಟಕಗಳು, ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಪ್ರಸಾದ/ ಊಟೋಪಚಾರ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರಸ್ಥರು, ನ್ಯಾಯಬೆಲೆ ಅಂಗಡಿ, ಕಚೇರಿಗಳ ಕ್ಯಾಂಟೀನ್, ಸರ್ಕಾರಿ/ ಸರ್ಕಾರೇತರ ವಸತಿ ನಿಲಯಗಳು, ಅಕ್ಷರ ದಾಸೋಹದ ಶಾಲೆಗಳು, ಅಂಗನವಾಡಿಗಳು ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರಿಗೆ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮಡಿಕೇರಿ, ಕೊಡಗು ಜಿಲ್ಲೆ ಹಾಗೂ ಕೊಡಗು ಜಿಲ್ಲಾ ಚೇಂಬರ್ ಆಫ್…
ಮಡಿಕೇರಿ ಆ.29 : ಸಮಸ್ತ ಕೊಡಗು ಜಿಲ್ಲಾ ಜಂಞಯ್ಯತುಲ್ ಉಲಮಾದ ವತಿಯಿಂದ ಸಿದ್ದಾಪುರದಲ್ಲಿ ಆತ್ಮೀಯ ಸಂಗಮ ಹಾಗೂ ಮಳೆಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಯಿತು. ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ನಡೆದ ಕಾರ್ಯಕ್ರಮನ್ನು ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾದ ಕೇಂದ್ರ ಸದಸ್ಯ ಎಂ.ಅಬ್ದುಲ್ಲ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರವಾದಿ ಸ.ಅ ತೋರಿಸಿದ ಮಾದರಿ ಜೀವನವನ್ನು ಮೈಗೂಡಿಸಿಕೊಂಡು ಸಮುದಾಯಕ್ಕೆ ಅರಿವು ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು. ಕೇಂದ್ರ ತರಬೇತುದಾರ ಮುಹಮ್ಮದ್ ಫೈಝಿ ರಬೀಅ ಸಂದೇಶವನ್ನು ಹೇಳಿ, ಜನತೆ ಪ್ರವಾದಿ ಸ.ಅ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕೊಡಗಿನ ಸಮಸ್ತ ಚಾಲಕ ಶಕ್ತಿ ಎಂ.ಅಬ್ದುಲ್ ರಹಮಾನ್ ಮುಸ್ಲಿಯಾರ್, ವಿದ್ಯಾರ್ಥಿಗಳಿಗೆ ಸಮಸ್ತ ಸಂಘಟಿಸುವ ಮುಸಾಬಖಾ ಕಲಾ ಸಾಹಿತ್ಯ ಸ್ಪರ್ಧೆಯ ಅನಿವಾರ್ಯತೆ ಮತ್ತು ಅದರ ರೂಪುರೇಷೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೆ.ಪಿ.ಅಬೂಬಕ್ಕರ್ ಮೌಲವಿ, ಎಂ.ತಮ್ಲೀಖ್ ದಾರಿಮಿ, ಬಶೀರ್, ಹಸನಿ, ಹನೀಫ್, ರಝಾಕ್ ಫೈಝಿ, ಸೂಫಿ ದಾರಿಮಿ, ನೌಫಲ್ ಹುದವಿ ಮುಂತಾದ ಗಣ್ಯರು ಹಾಜರಿದ್ದರು. ಎಸ್‍ಕೆಜೆಎಂಸಿಸಿ ಪ್ರಧಾನ ಕಾರ್ಯದರ್ಶಿ…






