ಮಡಿಕೇರಿ ಸೆ.27 : ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ‘ಕೊಡವ ಅಭಿವೃದ್ಧಿ ನಿಗಮ’ ಕೇವಲ ಒಂದು ಚುನಾವಣಾ ಗಿಮಿಕ್ ಆಗಿತ್ತಷ್ಟೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ ಸಿಂಹ, ಅವರು ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣಾ ಹಂತದಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ, 10 ಕೋಟಿ ರೂ. ಅದಕ್ಕಾಗಿ ಮೀಸಲಿಟ್ಟಿದೆಯೆಂದು ತಿಳಿಸಿತ್ತು. ಆದರೆ, ಆದೇಶ ಪತ್ರದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲವೆಂದು ತಿಳಿಸಿದರು. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸರ್ಕಾರದ ಆದೇಶ ಪತ್ರದಲ್ಲಿ ಅದಕ್ಕಾಗಿ ಯಾವ ಲೆಕ್ಕ ಶೀರ್ಷಿಕೆಯಲ್ಲಿ ಹಣ ಮೀಸಲಿಡಲಾಗಿದೆ, ನಿಗಮದಿಂದ ನಡೆಯಬೇಕಾದ ಕಾರ್ಯಗಳು, ಕಛೇರಿ ಸಿಬ್ಬಂದಿಗಳು ಇತ್ಯಾದಿ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ನಮೂದಾಗಿರಬೇಕು. ಆದರೆ, ಹಿಂದಿನ ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಅಂತಹ ಯಾವುದೇ ಮಾಹಿತಿಗಳಿಲ್ಲವೆಂದು ಆದೇಶ ಪತ್ರವನ್ನು ಪ್ರದರ್ಶಿಸಿದರು. 2020ನೇ ಸಾಲಿನಲ್ಲಿ ಸರ್ಕಾರ ರಚಿಸಿದ ಮರಾಠ ಅಭಿವೃದ್ಧಿ ನಿಗಮದ…
ಲೇಖಕ: admin
ಮಡಿಕೇರಿ ಸೆ.23 : ಕೊಡಗು ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಸೆ.30 ಕುಶಾಲನಗರದಲ್ಲಿ ಜಿಲ್ಲಾ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ತಿಳಿಸಿದರು. ನಗರದಲ್ಲಿ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ರೈತ ಸಹಕಾರ ಭವನದಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ಕೊಡುಗೆ ಮತ್ತು ಶಾಲೆಗಳ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಜಿಲ್ಲೆಯ ಅನುದಾನ ರಹಿತ ಶಾಲೆಯ ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಒಕ್ಕೂಟದ ಅಧ್ಯಕ್ಷ ಕೋಳೇರ ಝರುಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎ.ಎಸ್. ಪೊನ್ನಣ್ಣ, ಮಂತರ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾಕುಶಾಲಪ್ಪ, ಎಸ್.ಎಲ್.ಬೋಜೆಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎ.ಸೌಮ್ಯ ಪೊನ್ನಪ್ಪ, ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಮುಖರಾದ ಡಾ.ಸಿ.ಜಿ.ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 120 ಅನುದಾನ…
ಮಡಿಕೇರಿ ಸೆ.27 : ಸಿವಿಲ್ ಡೆಫೆನ್ಸ್‍ನಲ್ಲಿ ಡಿವಿಶನ್ ವಾರ್ಡನ್ ಆಗಿ ಸೇವೆಯಲ್ಲಿರುವ ಜಿಲ್ಲೆಯ ಡಾ.ಕುಟ್ಟಂಡ ಸುನಿತಾ ಸಜನ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 2022ನೇ ಸಾಲಿನಲ್ಲಿನ ಉತ್ತಮ ಸೇವೆಗಾಗಿ ಪದಕ ಲಭಿಸಿದ್ದು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಪರಮೇಶ್ವರ್ ಪದಕ ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಜಿಲ್ಲೆಯ ಅಮ್ಮತ್ತಿ ಕಾರ್ಮಾಡುವಿನ ಕುಟ್ಟಂಡ ಸಜನ್ (ತಮನೆ ಐತಿಚಂಡ, ಕರಡ) ಅವರ ಪತ್ನಿ.
ಮಡಿಕೇರಿ ಸೆ.27 : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ 19 ವರ್ಷದೊಳಗಿನವರ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ರಾಜ್ಯ ತಂಡಕ್ಕೆ ಜಿಲ್ಲೆಯ ಬಾಲಕಿ ಶ್ರೀನಿತಿ ಪಿ.ರೈ ಆಯ್ಕೆಯಾಗಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಆಯ್ಕೆಯಾಗಿದ್ದಾಳೆ. ಮುಂಬರುವ ಅಕ್ಟೋಬರ್ 8 ರಿಂದ 16ರ ವರೆಗೆ ಗುಹವಾಟಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಿಕಿ ಪ್ರಸಾದ್ ನಾಯಕಿಯಾಗಿರುವ ಕರ್ನಾಟಕ ತಂಡದಲ್ಲಿ ಶ್ರೀನಿತಿ ಸ್ಥಾನ ಪಡೆದಿದ್ದಾಳೆ. ಬೆಂಗಳೂರಿನ ಅಕ್ಷಯನಗರದಲ್ಲಿರುವ ಸೆಂಟ್ ಆ್ಯನ್ಸ್ ಐಸಿಎಸ್‍ಸಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೀನಿತಿ ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರುವಿನ ಹೆಮ್ಮೆತ್ತಾಳು ಗ್ರಾಮ ನಿವಾಸಿ ಬಿ.ಜಿ.ಪ್ರಕಾಶ್ ರೈ ಹಾಗೂ ವಿನುತಾ ರೈ ದಂಪತಿ ಪುತ್ರಿ.
ಮಡಿಕೇರಿ ಸೆ.27 : ಅಪಘಾತದಿಂದ ಹಾನಿಗೊಳಗಾದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯ ದುರಸ್ತಿ ಕಾರ್ಯವನ್ನು ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಪರಿಶೀಲಿಸಿದರು. ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಿರ್ದೇಶಕರಾದ ಕೇಕಡ ವಿಜುದೇವಯ್ಯ, ನಂದಿನೆರವಂಡ ರವಿಬಸಪ್ಪ, ಮಂಡಿರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ ಹಾಗೂ ಚೊಟ್ಟೆಯಂಡ ಸಂಜು ಕಾವೇರಪ್ಪ ಮೈಸೂರಿಗೆ ತೆರಳಿ ಪ್ರತಿಮೆ ಪರಿಶೀಲಿಸಿದರು. ಪ್ರತಿಮೆಯ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದ್ದು, ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸುವ ಸಂದರ್ಭ ಗೌರವಯುತವಾಗಿ ಮೆರವಣಿಗೆ ನಡೆಸುವ ಕುರಿತು ಮಡಿಕೇರಿ ಕೊಡವ ಸಮಾಜ, ಜಿಲ್ಲಾಡಳಿತ, ನಗರಸಭೆ, ಶಾಸಕರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು ಎಂದು ಮುತ್ತಪ್ಪ ಹೇಳಿದರು.
ಚಾಮರಾಜನಗರ ಸೆ.27 : ಕೋಣನಕೆರೆಯ ಸರ್ಕಾರಿ ಗಿರಿಜನ ಆಶ್ರಮ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ನೀಡಿದರು. ಮಲೈ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರಕ್ಕೆ ತೆರಳುವ ಮಾರ್ಗದಲ್ಲಿ ಮಾರ್ಗ ಮಧ್ಯೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಊಟದ ಗುಣಮಟ್ಟ, ಗ್ರಂಥಾಲಯ, ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿದರು.
ಮಡಿಕೇರಿ ಸೆ.27 : ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣ ಮಾರಕವಾಗಿದ್ದು, ನಿಯಮ ಬಾಹಿರ ಭೂಪರಿವರ್ತನೆಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಆದ್ದರಿಂದ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಪ್ರಮುಖ ಹಾಗೂ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಲಹದಲ್ಲಿ ತೊಡಗಿವೆ. ಆದರೆ ಕಾವೇರಿ ನದಿ ಹುಟ್ಟುವ ಕೊಡಗಿನ ಸ್ಥಿತಿಗತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಹಾಲಿಗಾಗಿ ಕಿತ್ತಾಟ ನಡೆಯುತ್ತಿದೆ, ಆದರೆ ಹಾಲು ಕೊಡುವ ಹಸುವಿಗೆ ಏನಾಗಿದೆ ಎಂದು ಯಾರೂ ಚಿಂತಿಸುತ್ತಿಲ್ಲ. ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣದಿಂದ ಕಾವೇರಿ ಜಲಮೂಲಕ್ಕೆ ಅಪಾಯ ಎದುರಾಗಿದೆ. ತೋಟ, ಗದ್ದೆಗಳು ನಿಯಮ ಬಾಹಿರವಾಗಿ ಭೂಪರಿವರ್ತನೆಯಾಗುತ್ತಿವೆ. ಹೊರಗಿನವರು ಬಂದು ರೆಸಾರ್ಟ್, ಲೇಔಟ್ ಗಳನ್ನು ಮಾಡಿ ನಗರೀಕರಣಗೊಳಿಸುತ್ತಿದ್ದಾರೆ.…
ನಾಪೋಕ್ಲು ಸೆ.27 : ನಾಪೋಕ್ಲು ನಾಡು ಕೊಡವ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ 733 ಸದಸ್ಯರಿದ್ದು, ಪ್ರಸಕ್ತ ವರ್ಷ ಸಂಘವು ರೂ.3,95,131 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಂಡ ಸುಧೀರ್ ಅಯ್ಯಪ್ಪ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ 2022-23ನೇ ಸಾಲಿನ ಸಹಕಾರಿಯ 5ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ಸಂಘವು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಸಂಘದ ಏಳಿಗೆಗಾಗಿ ಸದಸ್ಯರು ಸಹಕರಿಸಬೇಕೆಂದರು. ಸಭೆಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಮಂಡೀರ.ಎ. ರಾಜಪ್ಪ ಚoಗಪ್ಪ, ನಿರ್ದೇಶಕರಾದ ಮಾಳೆಯಂಡ ಎ.ಅಯ್ಯಪ್ಪ, ಬೊಳ್ಯಯಂಡ.ಪಿ.ಹರೀಶ್ ಕಾರ್ಯಪ್ಪ, ಮುಕ್ಕಾಟೀರ.ಎಮ್.ವಿನಯ, ಕನ್ನಂಬೀರ.ಸಿ.ತಿಮ್ಮಯ್ಯ, ಕುಂಡ್ಯೋಳ0ಡ.ಸಿ.ಪೂವಯ್ಯ, ಕಾಟುಮಣಿಯಂಡ ಎಮ್.ಉಮೇಶ್, ಚೋಕಿರ.ಎಸ್.ಚಿಣ್ಣಪ್ಪ, ಚೇನಂಡ.ಈ.ಗಿರೀಶ್ ಪೂಣಚ್ಚ , ಮೂವೇರ.ರೇಖಾ ಪ್ರಕಾಶ್, ಬಿದ್ದಂಡ ಉಷಾ ಪೂವಯ್ಯ, ಕೋಟೇರ ನೈಲಾ ಚಂಗಪ್ಪ, ಕುಲ್ಲೇಟ್ಟಿರ.ಜಿ.ಅಜಿತ್ ನಾಣಯ್ಯ, ಬಿದ್ದಾಟಂಡ.ಎ.ರಮೇಶ್ ಚಂಗಪ್ಪ ಹಾಗೂ ಮುಖ್ಯಕಾರ್ಯನಿರ್ವಹಕರಾದ ಎಸ್.ಪಿ.ದೇವಯ್ಯ, ಸಿಬ್ಬಂದಿ ಕೆ.ಜಿ.ಸರಸ್ವತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ವರದಿ : ದುಗ್ಗಳ…
ನಾಪೋಕ್ಲು ಸೆ.27 : ನಾಪೋಕ್ಲುವಿನ ಕೆಪಿಎಸ್ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಕ್ಕಬ್ಬೆ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಫಾಜಿಲಾ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ವಿ.ಎ. ಆಯುಷತ್ ತರ್ಫಿಯ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ಹಾಕಿ ಹಾಗೂ ಬಾಲಕಿಯರ ಹಾಕಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಪಿ.ಕುಟ್ಟಪ್ಪ, ನಿರ್ದೇಶಕ ಅಂಜಪರವಂಡ ಕುಶಾಲಪ್ಪ, ಮುಖ್ಯ ಶಿಕ್ಷಕ ಡಿ.ಅನಿಲ್ ರಾಜ್, ದೈಹಿಕ ತರಬೇತಿ ಶಿಕ್ಷಕ ಕೆ.ಡಿ.ಬೋಪಣ್ಣ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಸೆ.27 : ಕಾಡಾನೆ ದಾಳಿಯಿಂದ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡಂಗ ಮರೂರು ಭದ್ರಕಾಳಿ ದೇವಾಲಯದ ಬಳಿ ನಡೆದಿದೆ. ಅಮ್ಮಂಡ ಸುಬ್ರಮಣಿ (75) ಎಂಬುವವರೆ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ವಿರಾಜಪೇಟೆ ಹೊರವಲಯದ ಕಡಂಗ ಮರೂರು ಪ್ರತ್ಯಕ್ಷವಾಗಿರುವ ಕಾಡಾನೆಗಳನ್ನು ಕಾಡಿಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.






