ಲೇಖಕ: admin

ಮಡಿಕೇರಿ ಸೆ.22 : ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭಗೊoಡಿದ್ದರೂ ಮಡಿಕೇರಿ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ನಗರಸಭೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆ, ಸೆ.29 ರಂದು ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ನಗರದ ಜನತೆಗೆ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಎಲ್ಲಾ ರಸ್ತೆಗಳು ಹದಗೆಟ್ಟು ಹೊಂಡ ಗುಂಡಿಗಳಾಗಿವೆ, ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಚಾಲಕರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ. ಕೆಲವು ಬಡಾವಣೆಗಳಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ. ದಸರಾ ಜನೋತ್ಸವದ ಸಂದರ್ಭ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಮಾಡುತ್ತವೆ. ಆದರೆ ಯಾವುದೇ ರಸ್ತೆಗಳು ದುರಸ್ತಿ ಕಾಣದೆ ಇರುವುದರಿಂದ ಕರಗಗಳು ಹೊಂಡ ಗುಂಡಿಗಳಾದ ಅಶುಚಿತ್ವದ ರಸ್ತೆಗಳಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಈ ಬಾರಿ ಕೂಡ ಎದುರಾಗಿದೆ. ದಸರಾ…

Read More

ಮಡಿಕೇರಿ ಸೆ.22 : ಮಡಿಕೇರಿ ದಸರಾ ಸಮಿತಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದಸರಾ ಆಚರಣೆಗೆ 2 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದಸರಾ ಜನೋತ್ಸವದ ಕುರಿತು ಚರ್ಚಿಸಿತು. 2 ಕೋಟಿ ರೂ. ಅನುದಾನ ನೀಡಿ ಸಹಕರಿಸುವಂತೆ ಕೋರಿಕೊಂಡಿತು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಹಾಗೂ ನಗರಸಭಾ ಅಧ್ಯಕ್ಷರೂ ಆದ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ಪ್ರಮುಖರಾದ ಟಿ.ಪಿ.ರಮೇಶ್, ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮತ್ತಿತರರು ಈ ಸಂದರ್ಭ ಹಾಜರಿದ್ದರು. ::: ಅನುದಾನದ ವಿಶ್ವಾಸ ::: ಮುಖ್ಯಮಂತ್ರಿಗಳನ್ನು ಭೇಟಿಯಾದ ಕುರಿತು ಮಾತನಾಡಿದ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕಾವೇರಿ ವಿವಾದ ಮತ್ತು ಬರದ ಪರಿಸ್ಥಿತಿಯ ಒತ್ತಡದ ನಡುವೆಯೂ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಂಭ್ರಮದ ದಸರಾ ಆಚರಣೆಗೆ ಹೆಚ್ಚಿನ ಅನುದಾನ…

Read More

ಮಡಿಕೇರಿ ಸೆ.22 : ರೈತರ ಸೇವೆಗಾಗಿಯೇ ಮೀಸಲಾಗಿರುವ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು ಎಂದು ಹಿರಿಯ ಸಹಕಾರಿ ಹಾಗೂ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಹೇಳಿದ್ದಾರೆ. ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮಹಾಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು ರೈತರ ಅಭ್ಯುದಯಕ್ಕೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ ಎಂದರು. ನನಗೆ ಸಹಕಾರಿ ಕ್ಷೇತ್ರ ಹೆಚ್ಚು ಪ್ರೀತಿಯ ಕ್ಷೇತ್ರವಾಗಿದೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕವೇ ನಾನು ಸಹಕಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡೆ. ಕೊಡಗು ಜಿಲ್ಲೆಯ ಬೆಳೆಗಾರರು ಹಾಗೂ ರೈತರು ಸಹಕಾರಿ ಕ್ಷೇತ್ರವನ್ನು ಅತಿಯಾಗಿ ನಂಬಿರುವುದರಿoದ ಉತ್ತಮ ಸೇವೆ ನೀಡುವುದು ಈ ಕ್ಷೇತ್ರದಲ್ಲಿರುವವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ನಾನು ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಮ್ಮ ಸಂಘದ ಗೋದಾಮು ವರ್ಷದಲ್ಲಿ 3-4 ಲಕ್ಷ ಕೆ.ಜಿ ಯಷ್ಟು ಏಲಕ್ಕಿ ದಾಸ್ತಾನು ಹೊಂದಿತ್ತು. ಆದರೆ ಈಗ ಕೊಡಗಿನಲ್ಲಿ ಏಲಕ್ಕಿ ಹೆಸರಿಲ್ಲದಂತೆ ನಾಶವಾಗುತ್ತಿದೆ ಎಂದು…

Read More

ಮಡಿಕೇರಿ ಸೆ.22 : ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಅವರು ಬರೆದಿರುವ ಕೊಡವ ಮಕ್ಕಡ ಕೂಟದ 73ನೇ ಪುಸ್ತಕ ಕೊಡವ ಭಾಷೆಯ “ಬೊಳ್ಳಿ ಬಿಲ್ಲ್” ಬಿಡುಗಡೆಗೊಂಡಿದೆ. ನಗರದ ಪತ್ರಿಕಾ ಭವನದಲ್ಲಿ ಡಿಎಫ್‍ಓ ಅಜ್ಜಿಕುಟ್ಟಿರ ಪೂವಯ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ಬೇರೆ ಕ್ಷೇತ್ರಗಳಂತಲ್ಲ, ಇದೊಂದು ವಿಭಿನ್ನ ಕ್ಷೇತ್ರವಾಗಿದ್ದು, ಕಬ್ಬಿಣದ ಕಡಲೆ ಇದ್ದಂತೆ, ಇದಕ್ಕೆ ಸ್ವಯಂ ಪ್ರತಿಭೆ ಅಗತ್ಯ ಎಂದರು. ಒಂದು ಒಳ್ಳೆಯ ಪುಸ್ತಕ ಮನುಷ್ಯನ ಒಳ್ಳೆಯ ಸ್ನೇಹಿತ ಇದ್ದ ಹಾಗೆ, ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕವು ಸಮಾಜದ ಅಂಕು-ಡೊಂಕು, ಪಿಡುಗುಗಳನ್ನು ಎತ್ತಿ ತೋರುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕೊಡಗಿನ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. “ಬೊಳ್ಳಿ ಬಿಲ್ಲ್” ಪುಸ್ತಕದ…

Read More

ಮಡಿಕೇರಿ ಸೆ.22 : ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯು ಸೆ.24 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಕರಾಟೆ ಅಸೋಸಿಯೇಷನ್ ಸಂಯೋಜಕ ಮಾದೇಟಿರ ಪಿ.ತಿಮ್ಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಬೆಳಗ್ಗೆ 10 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ ಹಾಗೂ ಶಿಕ್ಷಣ ಇಲಾಖೆ ಕ್ರೀಡಾ ಮುಖ್ಯಸ್ಥ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಕರಾಟೆ ಪಂದ್ಯಾವಳಿಗೆ ಮೈಸೂರು ಕರಾಟೆ ಅಸೋಸಿಯೇಷನ್‍ನ ತೀರ್ಪುಗಾರರು ಆಗಮಿಸಲಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿಗಳ ಸಹಿ ಹೊಂದಿರುವ ಅರ್ಹತಾ ಪತ್ರ ಮತ್ತು ಆಧಾರ್ ಕಾರ್ಡ್ ಗುರುತಿನ…

Read More

ಮಡಿಕೇರಿ ಸೆ.22 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮೈಸೂರಿನ ಗುರುಮಲ್ಲೇಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮೈಸೂರು ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರುಗಳಿಗೆ ಈಗಾಗಲೇ ನನ್ನ ಅರ್ಜಿ ಮತ್ತು ವೈಯುಕ್ತಿಕ ವಿವರಗಳನ್ನು ಸಲ್ಲಿಸಿದ್ದೇನೆ. ಸ್ಪರ್ಧಿಸಲು ಅವಕಾಶ ದೊರೆಯಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಜನಾರ್ಧನ ಪೂಜಾರಿ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕೂಡ ಮೈಸೂರು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ಆ ಸಂದರ್ಭ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಟಿಕೆಟ್ ದೊರಕಿದ್ದರಿಂದ ನನಗೆ ಸ್ಪರ್ಧಿಸಲು ಅವಕಾಶ ದೊರೆಯಲಿಲ್ಲ. ಜೆಡಿಎಸ್ ಪಕ್ಷದಲ್ಲಿಯೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭ ಮೈಸೂರು ಲೋಕಸಭಾ ಕ್ಷೇತ್ರದ…

Read More

ನಾಪೋಕ್ಲು ಸೆ.22 : ಮಕ್ಕಳ ಕ್ರೀಡಾ ಆಸಕ್ತಿಯನ್ನು ಅರಿತು ಅದಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಪಿ.ಸಿ. ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು. ನಾಪೋಕ್ಲುವಿನಲ್ಲಿ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪೆoಡಡಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಮಡಿಕೇರಿ ತಾಲೂಕು ಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ 2023 – 24ರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳು ಸದೃಢವಾಗಿ ಇರಬೇಕಾದರೆ ಉತ್ತಮ ಪೋಷಕಾಂಶಗಳುಳ್ಳ ಆಹಾರ ಸೇವನೆ ಅಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಶಾಲೆಗಳಿಗೆ ಇಲಾಖೆಯಿಂದ ವಿತರಿಸಲಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಲೋಪಗಳಿದ್ದರೆ ನನಗೆ ಮಾಹಿತಿಯನ್ನು ನೀಡಿ ಎಂದ ಅವರು ಶಾಲಾ ಶಿಕ್ಷಕರ…

Read More

ಕಡಂಗ ಸೆ.22 :  ಕಾಕೋಟುಪರಂಬು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಕಡಂಗ ವಿಜಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ವಿಜಯ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಲ್ಲಿಯಂಡ ಬಿದ್ದಪ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಆಗಮಿಸಿ, ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಎಂ.ಪ್ರಕಾಶ್,   ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಅದರಲ್ಲೂ ಮಕ್ಕಳಲ್ಲಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸಲು ಕಳೆದ 26 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು. ಸೋಲು ಗೆಲುವಿಗಿಂತಲು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು, ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮೂಡಿರಬೇಕು ಎಂದು ನುಡಿದರು. ವಿದ್ಯಾರ್ಥಿಗಳಿಗೆ ಭಕ್ತಿಗೀತೆ, ಅಭಿನಯ ಗೀತೆ, ಧಾರ್ಮಿಕ ಭಾಷಣ , ಕವನ , ವಚನ ಆಶುಭಾಷಣ , ಮಾಡಲಿಂಗ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಮೆರೆದರು. ಮುಂದಿನ ಹಂತ ತಾಲೂಕು ಮಟ್ಟಕ್ಕೆ ಹಲವಾರು ವಿದ್ಯಾರ್ಥಿಗಳು…

Read More

ಮಡಿಕೇರಿ ಸೆ.22 : ಕೊಡವ ಎಂಟ್ರೆಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಹಕಾರಿಯು 2023 ಮಾರ್ಚ್ ಅಂತ್ಯಕ್ಕೆ ರೂ.9.7 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.4 ರಷ್ಟು ಡಿವಿಡೆಂಟ್ ನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ. 2022-23 ನೇ ಸಾಲಿನಲ್ಲಿ 47 ಮಂದಿಗೆ 1,27,45000 ರೂ. ಜಾಮೀನು ಸಾಲ ನೀಡಿದ್ದು, ವಾಯಿದೆ ಮೀರಿದ ಸಾಲ ವಸೂಲಾತಿಗೆ ಬಾಕಿ ಇರುವುದಿಲ್ಲ. ಸದಸ್ಯರ ಸಹಕಾರದಿಂದ ಶೇ.100 ರಷ್ಟು ವಸೂಲಾತಿಯಾಗಿದೆ. ಸದಸ್ಯರ ಪಾಲು ಹಣ 2022ರ ಮಾರ್ಚ್ ಅಂತ್ಯಕ್ಕೆ 1 ಕೋಟಿ 70 ಸಾವಿರ ಇದ್ದು, 2023ರ ಮಾರ್ಚ್ ಅಂತ್ಯಕ್ಕೆ 1 ಕೋಟಿ 30 ಲಕ್ಷಗಳಷ್ಟು ಆಗಿರುತ್ತದೆ. 2024ರ ಅಂತ್ಯಕ್ಕೆ ರೂ.2 ಕೋಟಿ ಗುರಿ ನಿಗಧಿ ಪಡಿಸಲಾಗಿದೆ. ಸಂಘ 2019 ಮಾ.29 ರಲ್ಲಿ ಸೌಹಾರ್ದ ಕಾಯ್ದೆಯಡಿ ನೋಂದಣಿಗೊಂಡು 101 ಸಹಕಾರಿಗಳಿಂದ ರೂ.18.90 ಲಕ್ಷ ಪಾಲು ಬಂಡವಾಳದೊಂದಿಗೆ ವ್ಯವಹಾರ ಪ್ರಾರಂಭಿಸಿತು. 2023 ಮಾ.31ರ ಅಂತ್ಯಕ್ಕೆ 353 ಸಹಕಾರಿಗಳಿಂದ 1,31,80000 ರೂ.…

Read More

ಮಡಿಕೇರಿ ಸೆ.22 : ಕತ್ತಲೆಕಾಡುವಿನ ವಿನಾಯಕ ಭಕ್ತ ವೃಂದ ಗಣೇಶೋತ್ಸವ ಸಮಿತಿಗೆ ಗ್ರಾಮಸ್ಥರು ಹಾಗೂ ದಾನಿಗಳು ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಬಾರಿ 17ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸುತ್ತಿದ್ದು, ಪೂಜಾ ಕಾರ್ಯ ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಅಂದಾಜು 1 ಲಕ್ಷ ರೂ. ಮೊತ್ತದ ಪರಿಕರಗಳು ಕೊಡುಗೆ ರೂಪದಲ್ಲಿ ಬಂದಿದೆ. ಪ್ರತಿ ವರ್ಷ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಹಲವು ಅಗತ್ಯ ವಸ್ತುಗಳು ಸಮಿತಿಯ ಸಂಗ್ರಹದಲ್ಲಿರುವುದರಿಂದ ಗಣೇಶೋತ್ಸವ ಹಾಗೂ ಮುಂದಿನ ದಿನದಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇವುಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಂ.ಎಸ್. ಅಶೋಕ್, ಕಾರ್ಯದರ್ಶಿ ಬ್ರಿಜೇಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಮೈಸೂರಿನಿಂದ ಅಡುಗೆ ಪಾತ್ರೆ, ಗ್ಯಾಸ್ ಸ್ಟೌ, ಚೇರ್, ಟೇಬಲ್, ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲಾಯಿತು. ಈ ಸಂದರ್ಭ ಬ್ರಿಜೇಶ್ ರೈ, ಹೊನ್ನಪ್ಪ ಆಚಾರ್ಯ, ಸತೀಶ್ ರೈ ಇದ್ದರು. ಕೊಡುಗೆ ನೀಡಿದ ದಾನಿಗಳಿಗೆ ಧನ್ಯವಾದ ಅರ್ಪಿಸಿರುವ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಮುಂದಿನ…

Read More