ಮಡಿಕೇರಿ ಸೆ.23 : ಭಾಗಮಂಡಲ ಕೆವಿಜಿ ಕೈಗಾರಿಕೆ ತರಬೇತಿ ಸಂಸ್ಥೆಯ 2023 -25 ನೇ ಸಾಲಿಗೆ ಪ್ರವೇಶ ಪಡೆದ ನೂತನ ತರಬೇತುದಾರರಿಗೆ ಸ್ವಾಗತ ಕೋರುವ ಮತ್ತು ಪೋಷಕರ ಸಭೆ ನಡೆಯಿತು. ಭಾಗಮಂಡಲ ಆರಕ್ಷಕಠಾಣ ಅಧಿಕಾರಿ ಶೋಭಾ ಲಮಾಣಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಮತ್ತು ಸಂಸ್ಥೆಯ ನೀತಿ ನಿಯಮಗಳ ಬಗ್ಗೆ ವಿವರಿಸಿದರು. ಕಿರಿಯ ತರಬೇತಿ ಅಧಿಕಾರಿ ಕೆ.ಪುನೀತ್ ಸಂಸ್ಥೆ ಮತ್ತು ತರಬೇತಿಯ ಮಾಹಿತಿ ನೀಡಿದರು. ಕಿರಿಯ ತರಬೇತಿ ಅಧಿಕಾರಿ ಕೆ.ಜಯಪ್ರಕಾಶ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಎಂ.ಕೆ.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ದರ್ಜೆ ಸಹಾಯಕ ಕೆ.ಟಿ.ಅರುಣ್ ವಂದಿಸಿದರು.
ಲೇಖಕ: admin
ಮಡಿಕೇರಿ ಸೆ.23 : 2023ನೇ ಸಾಲಿನ ಎನ್‌ಸಿಸಿ “ಎಐಟಿಎಸ್‌ಸಿ” ರಾಷ್ಟ್ರೀಯ ಮಟ್ಟದ ಶೂಟಿಂಗ್, ಮ್ಯಾಪ್ ರೀಡಿಂಗ್, ಹೆಲ್ತ್ ಮತ್ತು ಹೈಜಿನ್ ಹಾಗೂ ಅಪ್ಟಿಕಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ತಂಡ ಪಟ್ಟಮಾಡ ಪಿ.ಕಾರ್ತಿಕ್ ಕುಟ್ಟಪ್ಪ ಅವರ ನಾಯಕತ್ವದಲ್ಲಿ ಮುನ್ನಡೆಯಲಿದೆೆ. ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಪಟ್ಟಮಾಡ ಡಿ.ಪೊನ್ನಪ್ಪ ಹಾಗೂ ಹೇಮ ಪೊನ್ನಪ್ಪ ದಂಪತಿಯ ಪುತ್ರ ಕಾರ್ತಿಕ್ ಅವರು, ಪ್ರಸ್ತುತ ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಲಾ ದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ನಾಪೋಕ್ಲು ಸೆ.23 : ನಾಪೋಕ್ಲು ಪಟ್ಟಣದಲ್ಲಿ ಗಣೇಶೋತ್ಸವದ ಅಂಗವಾಗಿ ಗಣೇಶ್ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಹಾಗೂ ಸಮಿತಿ ಸದಸ್ಯರು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಪ್ರಕಟಣೆ ಹೊರಡಿಸಿದ್ದಾರೆ. ಇ0ದಿರಾ ನಗರದ ವಿವೇಕಾನಂದ ಗಣೇಶೋತ್ಸವ ಸೇವಾ ಸಮಿತಿ, ಹಳೆ ತಾಲೂಕಿನ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ, ಪಟ್ಟಣದ ರಾಮಮಂದಿರ ದೇವಸ್ಥಾನ ಸಮಿತಿ, ಹಳೆ ತಾಲೂಕು ಭಗವತಿ ದೇವಸ್ಥಾನದ ಗಣೇಶೋತ್ಸವ ಸಮಿತಿ ಹಾಗೂ ಕಕ್ಕುಂದ ಕಾಡು ವೆಂಕಟೇಶ್ವರ ದೇವಸ್ಥಾನದ ಗಣೇಶ ಮೂರ್ತಿಯ ಮೆರವಣಿಗೆಯೂ ಪಟ್ಟಣದ ಮಾರ್ಗವಾಗಿ ಕಾರೆಕಾಡು ಬಳಿಯ ಕಾವೇರಿ ಹೊಳೆಗೆ ತೆರಳುವುದರಿಂದ ಪಟ್ಟಣದ ಹಳೆ ತಾಲೂಕಿನಿಂದ ಮಾರುಕಟ್ಟೆ ವರೆಗೆ ಹಾಗೂ ನಾಪೋಕ್ಲು ಬಸ್ ನಿಲ್ದಾಣದಿಂದ ಬೇತು ರಸ್ತೆಯ ಮಕ್ಕಿ ದೇವಸ್ಥಾನದ ಕಮಾನುಗೇಟ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆಯ ಪ್ರಕಟಣೆ ಕೋರಿದೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಸೆ.23 : ಜಿಲ್ಲಾ ಜಾತ್ಯತೀತ ಜನತಾ ದಳ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಕೆ.ಎಂ.ಗಣೇಶ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ಜಿಲ್ಲಾಧ್ಯಕ್ಷ ಇಸಾಖ್ ಖಾನ್ ಹಾಗೂ ಪ್ರಮುಖರಾದ ಡೆನ್ನಿಬರೋಸ್, ಮೋಹನ್ ಮೌರ್ಯ ಜೊತೆಗೆ ಗಣೇಶ್ ಪಕ್ಷ ಸೇರ್ಪಡೆಗೊಂಡರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದ ಬಳಿಕ ಗಣೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದು ಅಂಗೀಕಾರವಾಗಿರಲಿಲ್ಲ. ಇದೀಗ ಮಾತೃಪಕ್ಷ ಕಾಂಗ್ರೆಸ್ ಗೆ ಗಣೇಶ್ ಮರಳಿದ್ದಾರೆ.
ನಾಪೋಕ್ಲು ಸೆ.23 : ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ದರದಲ್ಲಿ ಲಭಿಸುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಪಟ್ರಪಂಡ.ಎ ಮುದ್ದಪ್ಪ ಮನವಿ ಮಾಡಿದರು. ನಾಪೋಕ್ಲುವಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ 2022-23ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದ ನೂತನ ಕಟ್ಟಡದಲ್ಲಿ ಎಂಟು ಕೊಠಡಿಗಳಿದ್ದು, ಮಾಸಿಕ 90 ಸಾವಿರ ರೂ. ಬಾಡಿಗೆ ಲಭಿಸುತ್ತಿದೆ. ಇದರೊಂದಿಗೆ ವ್ಯಾಪಾರ-ವಹಿವಾಟು ವೃದ್ಧಿಸಿದರೆ ಸಂಘದ ಅಭಿವೃದ್ದಿ ಸಾಧ್ಯ ಎಂದರು. ಮಹಾಸಭೆಯಲ್ಲಿ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ ಉತ್ತಪ್ಪ, ನಿರ್ದೇಶಕರಾದ ಕೊಂಬಂಡ ಕೆ. ಗಣೇಶ್, ಕುಲ್ಲೇಟಿರ ಅರುಣ್ ಬೇಬ, ನಾಯಕಂಡ ಟಿ. ಮುತ್ತಪ್ಪ,ಬೊಟ್ಟೋಳಂಡ ಕೆ.ಕುಟ್ಟಪ್ಪ ,ಪಾಡಿಯಮ್ಮಂಡ ಮಹೇಶ್,ಕೇಟೋಳಿರ ಜಿ.ಮುತ್ತಮ್ಮ,ಹೆಚ್.ಎ.ಬೊಳ್ಳು,ಜಿ.ಆರ್. ರಾಮಣ್ಣ ಉಪಸ್ಥಿತರಿದ್ದರು ಕಾರ್ಯದರ್ಶಿ ಕೆ.ಎಸ್ ತಿಮಯ್ಯ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಭೆಯಲ್ಲಿ ಚರ್ಚೆಗಳು…
ಮಡಿಕೇರಿ ಸೆ.23 : ಪ್ರಸಕ್ತ(2023-24) ಸಾಲಿಗೆ ಪ್ರೀ ಮೆಟ್ರಿಕ್(ಮೆಟ್ರಿಕ್ ಪೂರ್ವ) ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳು ಹೊಸದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಎಸ್‍ಎಸ್‍ಪಿ ತಂತ್ರಾಂಶದಲ್ಲಿ https://ssp.karnataka.gov.in/ssp2324/homenew.aspx ಹಾಗೂ ನವೀಕರಣಕ್ಕೆ https://ssp.karnataka.gov.in/ssp2324/signin.aspx ಚಾಲನೆ ಇದ್ದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಶಾಲಾ ಕಾಲೇಜುಗಳ ಲಾಗಿನ್ ಮುಖಾಂತರ ಅನುಮೋದಿಸಿ ವಿಲೇವಾರಿ ಮಾಡಿಸಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ದೂ.ಸಂ. 08272-295829 ನ್ನು ಹಾಗೂ 3 ತಾಲ್ಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲ್ಲೂಕು ರಾಜೇಶ್ ಬಿ.ಆರ್. ಮೊ.ಸಂ.8073192914, ಸೋಮವಾರಪೇಟೆ ತಾಲ್ಲೂಕು ಟಿ.ಆರ್.ಹರೀಶ್ 9008685129, ವಿರಾಜಪೇಟೆ ತಾಲ್ಲೂಕು ಪ್ರಥನ್ ಕುಮಾರ್ ಸಿ.ಬಿ. 9900883654 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮಡಿಕೇರಿ ಸೆ.23 : ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ತಿಂಗಳು ‘ಜನತಾ ದರ್ಶನ’ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಸಂಬಂಧ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆ.25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ‘ಜನತಾ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಖ್ಯಮಂತ್ರಿ ಅವರು ಸೂಚನೆ ನೀಡಿರುತ್ತಾರೆ. ಅದರಂತೆ, ಕೊಡಗು ಜಿಲ್ಲೆಯಲ್ಲಿ ಸೆ.25 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಾಪೋಕ್ಲುವಿನ ಚೆರಿಯಪರಂಬು ಶಾದಿ ಮಹಲ್‍ನಲ್ಲಿ “ಜನತಾ ದರ್ಶನ” ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ‘ಜನತಾ ದರ್ಶನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಮಡಿಕೇರಿ ಸೆ.23 : ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ಅ.8 ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗದ ಆಟ ಪಂದ್ಯಾವಳಿ ನಡೆಯಲಿದೆ. ಅಕ್ಟೋಬರ್, 08 ರಂದು ಬೆಳಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಚೆಸ್ ಆಟಗಾರರು ತಮ್ಮ ಸ್ವಂತ ಚೆಸ್ ಸೆಟ್‍ಗಳನ್ನು ತರಬೇಕು. ಪ್ರವೇಶ ಶುಲ್ಕ ರೂ.300, ಆಟಗಾರರು ಅಕ್ಟೋಬರ್, 08 ರಂದು ಬೆಳಗ್ಗೆ 9.30 ರೊಳಗೆ ಹಾಜರಿರಬೇಕು. 1 ನೇ ಸುತ್ತು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ನೋಂದಣಿಗೆ ಅಗತ್ಯವಿರುವ ದಾಖಲೆಗಳಾದ ಹೆಸರು, ಜನ್ಮ ದಿನಾಂಕದ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲೆಯ ಹೆಸರು ಮತ್ತು ಶುಲ್ಕ ಪಾವತಿಯ ಸ್ಕ್ರೀನ್‍ಶಾಟ್, ವಿವರಗಳನ್ನು 6361643024 ಗೆ ವಾಟ್ಸಾಪ್ ಮಾಡಬೇಕು. ಹೆಚ್ಚಿನ ಮಾಹಿತಿಗೆ 6361643024 ನ್ನು ಸಂಪರ್ಕಿಸಬಹುದು.
ಮಡಿಕೇರಿ ಸೆ.23 : ಸರ್ಕಾರದ 5 ಗ್ಯಾರಂಟಿ ಯೋಜನೆಯನ್ನು ಫಲಾನುಭವಿಗಳಿಗೆ ಸರಿಯಾದ ಕ್ರಮದಲ್ಲಿ ತಲುಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್, 25 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ನಡೆಯಲಿದ್ದು, ಜನತಾ ದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಹಾಗೂ ಸಾರ್ವಜನಿಕರ ಹಾಗೂ ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಆದಷ್ಟು ಬೇಗ ಸ್ಥಳೀಯ ಮಟ್ಟದಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು. ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕುರಿತಂತೆ ಫಲಾನುಭವಿಗಳಿಗೆ ಹಣ ವರ್ಗಾವಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾಗೂ ನಾರಿ ಶಕ್ತಿ ಯೋಜನೆ ಕುರಿತಂತೆ ಬಸ್‍ನಲ್ಲಿ ಪ್ರಯಾಣಿಸಿದ ಫಲಾನುಭವಿಗಳ ಮಾಹಿತಿ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಅನ್ನಭಾಗ್ಯ ಯೋಜನೆ ಕುರಿತಂತೆ ಫಲಾನುಭವಿಗಳಿಂದ ಬಂದಂತಹ…
ಮಡಿಕೇರಿ ಸೆ.22 : ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ ಮತ್ತು ನಿರ್ದೇಶನದ, ಸ್ವಸ್ತಿಕ್ ಎಂಟರ್ ಟೈನ್‌ಮೆಂಟ್ ನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದ “ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾ ಡೆಹ್ರಡೂನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದು, ಸೆ.23 ರಂದು ಮಧ್ಯಾಹ್ನ 1 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಚಿತ್ರ ಇದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ, ತುಳು, ಕೊಂಕಣಿ ಹಾಗೂ ಕೊಡವ ಭಾಷೆಯ ಸುಮಾರು 73 ಚಿತ್ರಗಳು ಆಯ್ಕೆಗಾಗಿ ಅರ್ಜಿ ಸಲ್ಲಿಸಿದ್ದವು. ಆದರೆ ಅಂತಿಮವಾಗಿ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪ್ರಕೃತಿಯ ಮೇಲೆ ಬೆಳಕು ಚೆಲ್ಲಿದ “ಪೊಮ್ಮಾಲೆ ಕೊಡಗ್” ಚಿತ್ರ ಮಾತ್ರ ಆಯ್ಕೆಯಾಗುವಲ್ಲಿ ಯಶಸ್ವಿಯಾಯಿತು. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು, ವಿಶಿಷ್ಟವಾದ ಕೊಡಗಿನ ಸಂಸ್ಕೃತಿಗೆ ಸಿಕ್ಕಿದ ಗೌರವ ಇದಾಗಿದೆ. ಕೊಡಗಿನ ಸಂಸ್ಕೃತಿ ಮತ್ತು ಪ್ರಕೃತಿಯನ್ನು ನೈಜವಾಗಿ ಚಿತ್ರಿಸಿದ ತೃಪ್ತಿ ನನಗಿದೆ. ನನ್ನ ಚಿತ್ರಗಳ ಮೂಲಕ…






