ಲೇಖಕ: admin

ಮಡಿಕೇರಿ ಸೆ.23 : ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾದಕವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಮಾನವ ಕಳ್ಳಸಾಗಣಿಕೆ, ಮಕ್ಕಳ ಮೇಲಿನ ಅತ್ಯಾಚಾರ ಇತ್ಯಾದಿ ಅಂಶಗಳ ಕುರಿತು ನಿರಂತರ ಕಾರ್ಯಕ್ರಮ ರೂಪಿಸಿಕೊಂಡು ಬಂದಿದ್ದೇವೆ. ಅಂಕಿ ಅಂಶಗಳನ್ನು ಗಮನಿಸುವಾಗ ಮಕ್ಕಳು, ವಿದ್ಯಾರ್ಥಿಗಳು ಈ ಜಾಲದಲ್ಲಿ ಸೇರಿದ್ದಾರೆ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಜಾಗೃತಿಯ ನೆಲೆಯನ್ನು ರೂಪಿಸುವ ಪ್ರಯತ್ನ ಮಾಡಬೇಕಾಗಿದೆ. ಆ ಮೂಲಕ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ರಾಯಭಾರಿಗಳಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ವಿ.ಪ್ರಸಾದ್ ಅಭಿಪ್ರಾಯಪಟ್ಟರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಮಾಜಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳು ನೈಸರ್ಗಿಕ ಮತ್ತು ರಸಾಯನಿಕ ಮಾದರಿಯಲ್ಲಿ ಕಾಣಬಹುದು. ಒತ್ತಡ ಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸೋತ ಕಾರಣದಿಂದ, ಯುವಜನತೆಯ ಮಾದಕ ವ್ಯಸನಿಗಳಾಗಿದ್ದಾರೆ. ಎಂತಹ…

Read More

ಮಡಿಕೇರಿ ಸೆ.23 :  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ  ಕೆ.ರಾಮರಾಜನ್ ರ‍್ಯಾಗಿಂಗ್  ಕೃತ್ಯೆಯ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೈದ್ಯಕೀಯ ಕಾಲೇಜಿಗೆ ಇತರೆ ಜಿಲ್ಲೆ ಅಲ್ಲದೆ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ದಾಖಲಾಗಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರ‍್ಯಾಗಿಂಗ್ ಮಾಡದಂತೆ ಹಾಗೂ ರ‍್ಯಾಗಿಂಗ್ ಆಗುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡದಂತೆ ಸಲಹೆ ನೀಡಿದ ಅವರು, ರ‍್ಯಾಗಿಂಗ್  ಒಂದು ಅಪರಾಧವಾಗಿದ್ದು, ಅದಕ್ಕೆ ನೀಡಲಾಗುವ ಶಿಕ್ಷೆಯ ಪ್ರಮಾಣ, ದಂಡದ ಮಾಹಿತಿಯನ್ನು ವಿವರಿಸಿದರು. ರ‍್ಯಾಗಿಂಗ್ ನಿಂದಾಗಿ ವಿದ್ಯಾರ್ಥಿಯ ಮೇಲಾಗುವ ಮಾನಸಿಕ ಮತ್ತು ದೈಹಿಕ ಪರಿಣಾಮಗಳು, ಆತಂಕ , ಖಿನ್ನತೆ ಮತ್ತು ಕೆಲವು ಸಂಧರ್ಭಗಳಲ್ಲಿ ಆತ್ಮಹತ್ಯೆಗೆ ಕಾರಣವಾಗಬಹುದು, ಕೆಲವು ಒತ್ತಡ ಮತ್ತು ಆಘಾತವು ಸುಮಾರು ವರ್ಷಗಳವರೆಗೂ ಕಾಡಬಹುದು. ರ‍್ಯಾಗಿಂಗ್ ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ವಿದ್ಯಾರ್ಥಿಯ ಅಧ್ಯಯನದ…

Read More

ಕುಶಾಲನಗರ/ಕೂಡಿಗೆ, ಸೆ.23 : ಓಝೋನ್ ಪದರದ ರಕ್ಷಣೆ ನಮ್ಮೆಲ್ಲರ ಹೊಣೆ, ಮಾನವರಿಗೆ ಪರಿಸರ ಬಹಳ ಮುಖ್ಯ ಆದರೆ ಪರಿಸರಕ್ಕೆ ಮಾನವರು ಮುಖ್ಯವಲ್ಲ, ಇದನ್ನು ಅರಿತು ಪ್ರತಿಯೊಬ್ಬರೂ ಓಝೋನ್ ಪದರದ ರಕ್ಷಣೆಗೆ ಮುಂದಾಗಬೇಕೆಂದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ ನ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಛೇರಿ ಮತ್ತು ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ “ವಿಶ್ವ ಓಝೋನ್ ಪದರ ಸಂರಕ್ಷಣಾ ದಿನಾಚರಣೆ” ಕಾರ್ಯಕ್ರಮದಲ್ಲಿ ಓಝೋನ್ ರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಜೀವಸಂಕುಲದ ಉಳಿವಿಗೆ ಓಝೋನ್‌ ಪದರವನ್ನು ರಕ್ಷಿಸಲು ಪಣ ತೊಡಬೇಕಾಗಿದೆ ಎಂದರು. ಓಝೋನ್‌…

Read More

ವಿರಾಜಪೇಟೆ  ಸೆ.23 :  ಆರ್ಜಿ ಗ್ರಾಮದ ಪೆರಂಬಾಂಡಿಯಲ್ಲಿ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ವತಿಯಿಂದ ಗಣೇಶ ಪ್ರತಿಷ್ಟಾಪನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಪೆರಂಬಾಡಿ ಗ್ರಾಮದ ಸುತ್ತ ಮುತ್ತ ಇರುವ ಎಲ್ಲಾ ಸದಸ್ಯರನ್ನು ಒಟ್ಟು ಗೂಡಿಸಿ ಗಣಪತಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಂಗಳೂರಿನಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೆರುಂಬಾಡಿ ನಿವಾಸಿ ಸುಬ್ರಹ್ಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಬಿ.ಎಂ.ಗಿರಿ, ಸದಸ್ಯರಾದ ವಿನೋದ್ ಥರ್ಮಲ್, ಬಿ.ಜಿ ನಾರಾಯಣ, ಸುಭಾಷ್, ಸನ್ನಿ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಮಣಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ಎಂ ಗಣೇಶ್, ಉದ್ಯಮಿ ಉಲ್ಲಾಸ್ ಶೇಟ್, ನಿವೃತ್ತ ಶಿಕ್ಷಕಿ ವಾರೀಜ, ಬೋಜಪ್ಪ, ವಿಶ್ವನಾಥ್, ಚುಪ್ಪ ನಾಗರಾಜ್, ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸರ್ಕಾರದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗ್ರಾಮದ ಸದಸ್ಯರಾದ ಟಿ.ಕೆ ಕಾವೇರಪ್ಪ, ಬಿ.ಬಿ.ಈರಪ್ಪ, ಟಿ.ಕೆ ದೇವಯ್ಯ, ಸುರೇಶ್ ಬಾಲಕೃಷ್ಣ, ಜಿ.ಜಿ.ಬಾಬು, ಆಲಿ, ಉತ್ತಮ ಸೇವೆ ಸಲ್ಲಿಸಿದ…

Read More

ವಿರಾಜಪೇಟೆ ಸೆ.23 : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಕೊಡಗು ಬಾಲಾವಲೀಕಾರ್ ಉತ್ತಮ ಜೀವನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಬಿ.ಆರ್.ವಾಸುದೇವ, ಸಂಘದ ಅಭಿವೃದ್ಧಿಗೆ ಪ್ರತೀ ಸದಸ್ಯರು ಶ್ರಮಿಸಬೇಕೆಂದರು. ಮಾತ್ರವಲ್ಲದೆ ಸಮಾಜಮುಖಿ ದೃಷ್ಟಿಕೋನ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸದಸ್ಯರುಗಳು ನೀಡಿದ ಸಹಕಾರವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧನಾ ವರದಿಯನ್ನು ಓದಿ ಅಂಗೀಕರಿಸಲಾಯಿತು. ಬೈಲಾ ತಿದ್ದುಪಡಿಯು ನಡೆಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿಗಳಾದ ಬಿ. ಆರ್. ಉದಯ ಶಂಕರ್, ಸೇರುದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Read More

ಮಡಿಕೇರಿ ಸೆ.23 : ವಿರಾಜಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಿಳುಗುಂದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2023-24ನೇ ಸಾಲಿನ ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿರಾಜಪೇಟೆ ತಾಲೂಕು ಹಾಗೂ ಬಾಳೆಲೆ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಅಲ್ಲದೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಫಾತಿಮತ್ ಶಹಲ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ, ಫಾತಿಮತ್ ಜೋರ ಕವನ ವಾಚನದಲ್ಲಿ ಪ್ರಥಮ ಹಾಗೂ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಜೈನಭ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಮಟ್ಟದಲ್ಲಿ ಗೆಲುವು ಸಾಧಿಸಿ, ಜಿಲ್ಲಾ ಮಟ್ಟವನ್ನು ಶಾಲಾ ಮುಖ್ಯಶಿಕ್ಷಕಿ ಅರುಣ್ ಆನ್ಸಿ ಡಿಸೋಜ ತಿಳಿಸಿದ್ದಾರೆ.

Read More

ಮಡಿಕೇರಿ ಸೆ.23 : ಮಣಿಪಾಲ್ ಆಸ್ಪತ್ರೆ ಮೈಸೂರು ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಂ.ಯಾಕುಬ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್ ವಹಿಸಿದ್ದರು. ಮಣಿಪಾಲ್ ಆಸ್ಪತ್ರೆಯ ಡಾ.ಪ್ರದೀಪ್ ರಾಜಣ್ಣ ಮತ್ತು ಸಂಗಡಿಗರು ಹಿರಿಯ ಆರೋಗ್ಯ ತಪಾಸಣೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ನಗರ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಮಾಜಿ ಮೂಡಾಧ್ಯಕ್ಷ ಚುಮ್ಮಿದೇವಯ್ಯ, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಕಲೀಲ್ ಭಾಷ, ಕಾರ್ಯದರ್ಶಿ ರೌಹುಫ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಪ್ರಮುಖರಾದ ಅಂಬೇಕಲ್ ನವೀನ್, ವಿ.ಪಿ.ಸುರೇಶ್, ಬಿ.ಸಿ.ಜಗದೀಶ್, ಕವನ್ ಕೊತ್ತೋಳಿ, ಆರ್.ಪಿ.ಚಂದ್ರಶೇಖರ್, ಜಾನ್ಸನ್ ಪಿಂಟೋ, ಕೆ.ಎ.ಮೊಣ್ಣಪ್ಪ, ಸ್ವರ್ಣಲತಾ, ದಿವ್ಯ, ಪ್ರೇಮ ಕೃಷ್ಣಪ್ಪ, ರಿಯಾಜ್, ಕವನ್ ಇಬ್ರಾಹಿಂ, ಇಮ್ರಾನ್ ಸೇರಿದಂತೆ…

Read More

ಮಡಿಕೇರಿ ಸೆ.23 : ಸರ್ಕಾರಿ ದಾಖಲೆಗಳಲ್ಲಿ ಕೊಡಗರು ಅಥವಾ ಕೊಡವರು ಪದ ಬಳಕೆಗೆ ಬದಲಾಗಿ “ಕೊಡವ” ಎಂದು ಬಳಕೆ ಮಾಡಲು ರಾಜ್ಯ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿದೆ. ದಾಖಲೆಗಳಲ್ಲಿ ಕೊಡಗರು ಅಥವಾ ಕೊಡವರು ಎನ್ನುವ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ “ಕೊಡವ” ಶಾಸ್ತ್ರೀಯ ಪದ ಬಳಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರತರವಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಹಕಾರದೊಂದಿಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು “ಕೊಡವ” ಪದ ಬಳಕೆಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ನಾಚಪ್ಪ ಅವರು, ಇದು ಸಿಎನ್‍ಸಿ ಹೋರಾಟದ ಫಲವಾಗಿದ್ದು, ಯಶಸ್ಸಿನ ಚಾರಿತ್ರಿಕ ಮೈಲುಗಲ್ಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. “ಕೊಡವ” ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ.…

Read More

ಕಡಂಗ ಸೆ.23 :  ಕುಂಜಲಗೇರಿ ಶ್ರೀ ಗಣಪತಿ ಸೇವಾ ಸಮಿತಿ  ಗಣೆಶೋತ್ಸವವಕ್ಕೆ 25ರ ಸಂಭ್ರಮ ಆ ಪ್ರಯುಕ್ತ ರಜತಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ಗಣಪತಿ ಹೋಮ ನಂತರ ವಿಘ್ನನಿವಾರಕನ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯೋಂದಿಗೆ ಕಾರ್ಯಕ್ರಮ ಆರಂಭವಾಯಿತು. ಚರ್ಮಂಡ ಅಪ್ಪುಣು ಪೂವಯ್ಯ  ಉತ್ಸವ ಮೂರ್ತಿಯನ್ನು ನೀಡಿದರು. ಶ್ರೀ ಗಣಪತಿ ಸೇವಾ ಸಮಿತಿ  ಅಧ್ಯಕ್ಷ  ಮುಕ್ಕಾಟಿರ ಬಿನ್ನು ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯುತ್ ಇಲಾಖೆಯ ನಿವೃತ್ತ ಸುಪರಿಟೆಂಡೆಂಟ್ ಮುತ್ತಣ್ಣ, ವಿದ್ಯುತ್ ವಿಭಾಗದ ಆಪ್ತ ಸಹಾಯಕರು ಪಾಲ್ಗೊಂಡು ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಸಾಮನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಸುಭಾಷ್ ಚಂದ್ರ ಬೆಳ್ಳಾರೆ  ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ,  ಜೀವನ ಪಾಠ ಮತ್ತು ನಮ್ಮ ದೇಶದ ಸಂಸ್ಕೃತಿಯನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವ ವಿಚಾರವಾಗಿ ಮಾತನಾಡಿದರು. ಕುಳಿಯಕಂಡ ಪೊನ್ನಣ್ಣ  ಕುಂಜಲಗೇರಿಯ ಶ್ರೀ ಗಣಪತಿ ಸೇವಾ ಸಮಿತಿ  25 ವರ್ಷದ ಇತಿಹಾಸವನ್ನು ತಿಳಿಸಿದರು. ಪ್ರತಿ…

Read More

ಮಡಿಕೇರಿ ಸೆ.23 :  ವಿರಾಜಪೇಟೆಯ ಕಾವೇರಿ ಪದವಿ  ಕಾಲೇಜಿನ ಇತಿಹಾಸ ವಿಭಾಗದಿಂದ ಒಂದು ದಿನದ ಇತಿಹಾಸ ಕಾರ್ಯಗಾರ ನಡೆಯಿತು. ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಳಕಂಡ ಸುಜಾತ ಮಾತನಾಡಿ, ಇತಿಹಾಸವು ಮಹಾನ್ ವ್ಯಕ್ತಿಯ ಜೀವನ, ಸಾಧನೆ, ಬಲಿದಾನ, ನಮ್ಮ ದೇಶದ ನಾಡು-ನುಡಿ, ಸಂಸ್ಕೃತಿಯನ್ನು ತಿಳಿಯಬೇಕಾದರೆ, ಇತಿಹಾಸದಿಂದ ಆಗುವ ಪ್ರಯೋಜನವನ್ನು ಅರಿಯಬೇಕಾದರೆ ಇತಿಹಾಸ ವನ್ನು ಓದಲೇಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ  ಡಾ.ಆನಂದ್ ಕಾರ್ಲಾ ಮಾತನಾಡಿ, ಹಿಂದೆ ನಾವು ಹೇಗಿದ್ದೆವು ಎಂಬುದನ್ನು ತಿಳಿಯಬೇಕಾದರೆ ನಾವು ಇತಿಹಾಸವನ್ನು ಓದಲೇಬೇಕು, ರಾಷ್ಟ್ರದ ಅಭಿವೃದ್ಧಿಗೆ ಸ್ವಾತಂತ್ರ ಹೋರಾಟಗಾರ ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಆರಂಭದಲ್ಲಿ ಕಲಾ ವಿಭಾಗದ ರಾಧಿಕಾ ಮತ್ತು ತಂಡದವರು ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರು ಸಿ. ಪಿ.ಅನುಪಮ ಸ್ವಾಗತಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸೋನಿ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೌಶಲ್ಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮುತ್ತಣ್ಣ ವಂದಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕಿ  ಡಾ. ಕೆ.ಜಿ.ವೀಣಾ,…

Read More