ಮಡಿಕೇರಿ ಅ.26 : ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ನನ್ನ ಮಣ್ಣು, ನನ್ನ ದೇಶ’ (ಮೇರಿ ಮಾಟಿ, ಮೇರಾ ದೇಶ್) ಅಭಿಯಾನದ ಪ್ರಯುಕ್ತ ಕೊಡಗು ಜಿಲ್ಲೆಯ 5 ತಾಲ್ಲೂಕುಗಳಿಂದ ಸಂಗ್ರಹಿಸಲಾದ ಮಾದರಿ ಮಣ್ಣಿನ ಬಿಂದಿಗೆಗಳನ್ನು ನವದೆಹಲಿಗೆ ತಲುಪಿಸುವ ಸಂಬಂಧ ಗುರುವಾರ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರ ಸಮ್ಮುಖದಲ್ಲಿ ರಾಯಭಾರಿಗಳಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ, ನೆಹರು ಯುವ ಕೇಂದ್ರ,ಜಿಲ್ಲಾ ಪಂಚಾಯತ್, ಜಿಲ್ಲಾ ಅಂಚೆ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತಾಲ್ಲೂಕು ಪಂಚಾಯಿತಿ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟ ಇವರ ವತಿಯಿಂದ ಆಯೋಜಿಸಲಾಗಿದ್ದ ಮೇರ ದೇಶ್ ಮೇರ ಮಾಟಿ ಅಮೃತ್ ಕಳಸ ಯಾತ್ರೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ವೆಂಕಟರಾಜ ಅವರು ಮಾತನಾಡಿ ಅಮೃತ ಕಳಸ ಯಾತ್ರೆಗೆ ಅಭಿನಂದನೆ ತಿಳಿಸಿದರು. ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಭದ್ರತೆ ನೀಡಬೇಕು. ಹಾಗೆಯೇ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು…
ಲೇಖಕ: admin
ಮಡಿಕೇರಿ ಅ.26 : ಕುಶಾಲನಗರ ಸಮೀಪದ ಹಾರಂಗಿ ಮೀನುಗಾರಿಕಾ ಕ್ಷೇತ್ರದಲ್ಲಿ ಬೃಹತ್ ಮತ್ಸ್ಯಾಲಯ ಕೇಂದ್ರ ಪ್ರಾರಂಭಿಸುವ ಚಿಂತನೆ ಹೊಂದಲಾಗಿದೆ ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ. ಅವರು ಹಾರಂಗಿಯಲ್ಲಿ ಮೀನುಗಾರಿಕಾ ಇಲಾಖೆಯ ಅಪರೂಪದ ತಳಿಯಾದ ಮಹಾಶಿರ್ ಮೀನು ಮರಿಗಳ ಉತ್ಪಾದನಾ ಮತ್ತು ಪಾಲನಾ ಕೇಂದ್ರಕ್ಕೆ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶ ವಿದೇಶಗಳಲ್ಲಿ ಮೀನಿಗೆ ಬೇಡಿಕೆ ಇದ್ದು ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನದಿ ಕೆರೆಗಳಲ್ಲಿ ಮೀನು ಮರಿ ತಳಿಗಳನ್ನು ಬೆಳೆಸಲು ಸರ್ಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಆಸಕ್ತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸರ್ಕಾರದ ಮೂಲಕ ಪ್ರೋತ್ಸಾಹ ಧನ ಕೂಡ ಕಲ್ಪಿಸಲಾಗುತ್ತಿದೆ. ರಾಜ್ಯ, ನೆರೆ ರಾಜ್ಯಗಳು ಹಾಗೂ ವಿದೇಶಗಳಿಗೆ ಕೂಡ ಮೀನು ಸರಬರಾಜು ಮಾಡುವ ವ್ಯವಸ್ಥೆಗೆ ಸಹಾಯಹಸ್ತ ಕಲ್ಪಿಸಲಾಗುತ್ತಿದೆ ಎಂದರು. ನಾಡಿನಲ್ಲಿ ಸಿಹಿ ನೀರಿನ ಮೀನು ಉತ್ಪಾದನೆಗೆ ಹೆಚ್ಚು ಒತ್ತು…
ಮಡಿಕೇರಿ ಅ.26 : ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಕಾರೊಂದು ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಘಟನೆ ನಾಪೋಕ್ಲು -ಮಡಿಕೇರಿ ಮುಖ್ಯರಸ್ತೆಯ ಪಾಲೂರು ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಕಡೆಯಿಂದ ನಾಪೋಕ್ಲು ಮಾರ್ಗವಾಗಿ ಎಮ್ಮೆಮಾಡುವಿಗೆ ತೆರಳುತ್ತಿದ್ದ ಮೈಸೂರು ಮೂಲದ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಮಾರುತಿ ಆಲ್ಟೊ ಕಾರು ಪಾಲೂರು ಗ್ರಾಮದ ವಿಷ್ಣುಮೂರ್ತಿ ದೇವಾಲಯದ ಮುಂಭಾಗದ ರಸ್ತೆಯ ಇಳಿಜಾರಿನಲ್ಲಿ ಗುರುವಾರ ನಸುಕು 3 ಗಂಟೆ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಸುಮಾರು 20 ಅಡಿ ಆಳದ ತೋಡಿಗೆ ಉರುಳಿ ಬಿದ್ದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತವಾದ ಕಾರನ್ನು ಕೊಟ್ಟಮುಡಿ ಗ್ರಾಮದ ಯುವಕರು ಟ್ರ್ಯಾಕ್ಟರ್ ಬಳಸಿ ಮೇಲೆತ್ತಲು ಸಹಕರಿಸಿದರು.
ಮೂರ್ನಾಡು ಅ.26 : ಮೂರ್ನಾಡುವಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಬಯಲು ಅಲಂಕೃತ ವೇದಿಕೆಯಲ್ಲಿ 30ನೇ ವರ್ಷದ ಆಯುಧ ಪೂಜೆ ನೆರವೇರಿತು. ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯನ್ನು ನೆರವೇರಿಸಿ, ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ತೆರಳಲಾಯಿತು. ಈ ಸಂದರ್ಭ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ಚಂದ್ರಯಾನ-3, ಮದ್ಯಪಾನದಿಂದ ಆಗುವ ಅಪಘಾತಗಳ ಸ್ತಬ್ದ ಚಿತ್ರಣ, ಐತಿಹಾಸಿಕ ಹಿನ್ನಲೆಯುಳ್ಳ ಶ್ರೀರಾಮನಿಂದ ರಾವಣದ ಸಂಹಾರ, ದುರ್ಗೆಯಿಂದ ದುರ್ಗಾಸುರನ ವಧೆ, ಶುಂಭನ ವಧೆ, ಶಿವಾಂಶನಿಂದ ಕಾಲಾಂಶನ ವಧೆಯ ಚಿತ್ರಣಗಳು, ಭಾರತದ ಚಂದ್ರಯಾನ-3 ಯಶಸ್ವಿ ಉಡಾವಣೆ ಹಾಗೂ ಸುರಕ್ಷಿತ ಲ್ಯಾಂಡಿಂಗ್, ರೈತ ದೇಶದ ಬೆನ್ನುಲೆಬು, ಸರ್ಕಾರಿ ಶಾಲೆಗಳನ್ನು ಉಳಿಸಿ ಹೀಗೆ ಇನ್ನು ಹಲವಾರು ಸ್ತಬ್ದ ಚಿತ್ರಗಳು ಮತ್ತು ವಿಟ್ಲದ ಕಲಾ ರಸಿಕ ಆಟ್ರ್ಸ್ ಬೊಂಬೆ ಬಳಗದ ಗೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಗಳು ವೀಕ್ಷಕರ ಗಮನ ಸೆಳೆದವು.…
ಮಡಿಕೇರಿ ಅ.26 : ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ನಡೆದಿದೆ. ಬಿರುನಾಣಿ ಗ್ರಾಮದ ಕಳಕೂರ್ ನಿವಾಸಿ ಕಳಕಂಡ ಬೋಪಯ್ಯ (ಶಶಿ-52 ವರ್ಷ) ಅವರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬೋಪಯ್ಯ ಅವರು ಇದೇ ಅ.24 ರಂದು ಮನೆ ಬಿಟ್ಟು ತೆರಳಿದ್ದು, ಇವರಿಗಾಗಿ ಕುಟುಬಸ್ಥರು ಹುಡುಕಾಟ ನಡೆಸಿದರು. ಈ ಸಂದರ್ಭ ಬೋಪಯ್ಯ ಅವರಿಗೆ ಸೇರಿದ ಹಳೇ ಮನೆಯಲ್ಲಿ ಗುಂಡು ಹೊಡೆದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಅ.26 : ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಈ ಸಂದರ್ಭ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಪಕ್ಷದ ಕಾರ್ಯಕರ್ತರುಗಳೊಂದಿಗೆ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ದಸರಾ ಉತ್ಸವದ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನ ಹಲವಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು.
ಕಕ್ಕಬ್ಬೆ ಅ.26 : ಕುಂಜಿಲ ಸಮೀಪದ ಇತಿಹಾಸ ಪ್ರಸಿದ್ಧ ಪಯ್-ನರಿ ದರ್ಗಾ ವಠಾರದಲ್ಲಿ ಬೃಹತ್ ಮೀಲಾದ್ ಸಮ್ಮೇಳನ ಹಾಗೂ ಶಅರೇ ಮುಬಾರಕ್ ಪ್ರದರ್ಶನ ನಡೆಯಿತು. ಅಲ್ ಅಮೀನ್ ಹಾಗೂ ಅಲ್ ಹಬೀಬ್ ಎಂಬ ಎರಡು ತಂಡಗಳಾಗಿ ಸುಮಾರು ನಲವತ್ತಕ್ಕಿಂತಲು ಹೆಚ್ಚಿನ ಸ್ಪರ್ಧೆ ನಡೆಯಿತು. ಖ್ಯಾತ ಸೂಫಿ ವರ್ಯರು ಸಾತ್ವಿಕ ಪಂಡಿತರಾದ ಶೃಖ್ ಶಂಸುದ್ದೀನ್ ಅಲ್ ಖಾದಿರಿ ಮೌಲೂದ್ ಪಾರಾಯಣ ನಡೆಸಿದರು. ಅಬೂ ಸಈದ್ ಹುಸೈನ್ ಉಸ್ತಾದ್, ಹುಸೈನ್ ಸಖಾಫಿ ಎಮ್ಮೆಮಾಡು, ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಮುಹಮ್ಮದ್ ಸಖಾಫಿ ಆಝಾದ್ ನಗರ, ನಾಪೋಕ್ಲು ಖತೀಬ್ ಅಹ್ಸನಿ,ಕೊಳಕೇರಿ ಖತ್ವೀಬ್,ಹಫೀಳ್ ಸಅದಿ ಮುಂತಾದ ಉಲಮಾಗಳ ಸಾನ್ನಿಧ್ಯ ವಹಿಸಿದರು. ಅಬ್ದುಲ್ ಅಜೀಜ್ ಅಲ್ ಐದರೂಸಿ ಪ್ರೌಢ ಗಾಂಭೀರ್ಯದ ದುಆ ನೆರವೇರಿಸಿದರು. ಮುಸ್ಥಫಾ ಸಖಾಫಿ ತೆನ್ನಲ ನಫೀಸತ್ ಮಾಲೆ ಹಾಡಿದರು. ಶಿವಮೊಗ್ಗ ತಂಗಳ್ ಪ್ರಾರ್ಥನೆ ನೆರವೇರಿಸಿದರು. ನಿಝಾರ್ ಅಹ್ಸನಿ ಉಸ್ತಾದ್ ನಿರೂಪಿಸಿದರು. ವರದಿ : ಸಜಿದ್ ಪಯ್ಯಡಿ
ಮಡಿಕೇರಿ ಅ.26 : ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಹಾಗೂ ಒಳನಾಡುಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರಿಗೆ ಮನವಿ ಮಾಡಿದರು. ಹಾರಂಗಿಯ ಮಹಶೀರ್ ಮೀನುಮರಿಗಳ ಉತ್ಪಾದನಾ ಹಾಗೂ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿರುವ ಖಾಲಿ ಜಾಗದಲ್ಲಿ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸಲು ಕ್ರಮ ಕೈಗೊಂಡು ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಬಲಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರವು ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಅಡಿ 1986-87 ರಲ್ಲಿ ಸ್ಥಾಪನೆಯಾಗಿದ್ದು, ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಮರಿ ಉತ್ಪಾದನೆ, ಪಾಲನೆ ಹಾಗೂ ನದಿ ಬಿತ್ತನೆ ಮಾಡುವ ಮೂಲಕ ವಿಶಿಷ್ಟ ಪ್ರಭೇದದ ಬಿಳಿಮೀನನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಕೇಂದ್ರದಲ್ಲಿ ಒಟ್ಟು 80 ಸಂಖ್ಯೆ ಮೀನು ಕೊಳಗಳಿದ್ದು,…
ಮಡಿಕೇರಿ, ಅ.26 : ಹಾಕಿ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ದಕ್ಷಿಣ ವಲಯ ಸಬ್ ಜೂನಿಯರ್-2023 ಬಾಲಕ ಹಾಗೂ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಬಹುತೇಕ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಹಾಕಿ ಕರ್ನಾಟಕ ಬಾಲಕರ ತಂಡ ಚಾಂಪಿಯನ್ ಪಟ್ಟ ಗಳಿಸುವದರೊಂದಿಗೆ ಚಿನ್ನದ ಬಹುಮಾನಕ್ಕೆ ಮುತ್ತಿಕ್ಕಿದೆ. ತಮಿಳುನಾಡಿನ ಚೆನ್ನೈನ ಎಗ್ಮೋರ್ ನ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯಾವಳಿಯಲ್ಲಿ ತಮಿಳುನಾಡು ಹಾಕಿ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಗಳಿಸಿತು. ತಂಡದ ಪರವಾಗಿ ನಿಶಾಂತ್ ಎಂ., ಜಶನ್ ದೇವಯ್ಯ ಹಾಗೂ ರೋಹಿತ್ ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಟ್ಟರು. ಸುಪ್ರಿತ್ ಜೆ. ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ತೆಲಂಗಾಣ ಹಾಕಿ ವಿರುದ್ಧ 9-0 ಗೋಲುಗಳ ಅಂತರದಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಕರ್ನಾಟಕ ತಂಡದ ಪರ ಮೇವಡ ಜಶನ್ ತಮ್ಮಯ್ಯ ಹಾಗೂ ಸುಪ್ರಿತ್ ಜೆ. ತಲಾ ಮೂರು ಗೋಲು ಬಾರಿಸಿದರೆ, ಹೆಚ್.ಹೆಚ್.ದೀಕ್ಷಿತ್ -2, ನಮನ್…
ಕಡಂಗ ಅ.26 : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈಎಸ್) 30ನೇ ವರ್ಷಾಚರಣೆಯ ಪ್ರಯುಕ್ತ ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ 2024 ರ ಜ. 24ರಂದು ಮಂಗಳೂರಿನಲ್ಲಿ ನಡೆಯುವ ಮಹಾ ಸಮ್ಮೇಳನದ ಪ್ರಚಾರಾರ್ಥ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ರಾಜ್ಯ ಸಮಿತಿ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮವು ಕಡಂಗದ ಬದ್ರಿಯ ಮದ್ರಸದಲ್ಲಿ ನಡೆಯಿತು. 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಸಮಾಜ ಸೇವೆ ಸಹಿತ ಹಲವಾರು ಕಾರ್ಯಕ್ರಮಗಳನ್ನು ವಿವಿಧ ಘಟಕಗಳಲ್ಲಿ ಹಮ್ಮಿಕೊಂಡಿದ್ದು, ಅವುಗಳೆಲ್ಲವನ್ನೂ ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಿ ಸೇವಾ ಮನೋಭಾವವಿರುವ ಉತ್ತಮ ಕಾರ್ಯಕರ್ತರನ್ನು ಸೃಷ್ಟಿಸುವಂತೆಯೂ ಮಂಗಳೂರಿನಲ್ಲಿ ನಡೆಯುವ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆಯೂ ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಹಫೀಳ್ ಸಅದಿ ಕರೆ ನೀಡಿದರು. ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಾತನಾಡಿ ಕಾರ್ಯಚಟುವಟಿಕೆಗಳ ರೂಪುರೇಷೆಗಳನ್ನು ವಿವರಿಸಿದರು. ಕೋಶಾಧಿಕಾರಿ ಅಡ್ವಕೇಟ್ ಹಂಝತ್ ಉಡುಪಿ, ದಅವಾ ವಿಭಾಗ ಕಾರ್ಯದರ್ಶಿ ಸಯ್ಯಿದ್ ಶಾಫಿ ನಈಮಿ ತಂಙ್ಙಳ್, ಸಾಂತ್ವನ…






