ಮಡಿಕೇರಿ, ಸೆ.20 : “ಕರ್ನಾಟಕ “ವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಸೆ.28ರಂದು ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ “ಸಿರಿ ಸಂಭ್ರಮ” ಎಂಬ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಆಸಕ್ತ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವ ಕವಿಗಳು ಹೆಸರು ನೋಂದಾಯಿಸಲು ಹೆಚ್ಚಿನ ಮಾಹಿತಿಗಾಗಿ ಲೋಕೇಶ್ ಸಾಗರ್( 9980988123), ಕುಡೇಕಲ್ ಸಂತೋಷ್(9972538584) ಇವರುಗಳನ್ನು ಸಂಪರ್ಕಿಸಬಹುದಾಗಿದೆ.
ಲೇಖಕ: admin
ವಿರಾಜಪೇಟೆ ಸೆ.19 : ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಗಣಪತಿ ಗುಡಿಯಲ್ಲಿ 41 ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಗಣಹೋಮ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನದ ಅರ್ಚಕರುಗಳಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ರವರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಮೀಪದಲ್ಲಿಯೇ ಇರುವ ಸಭಾ ಭವನದ ನೂತನ ವಧು ವರರ ಕೊಠಡಿಯನ್ನು ದೇವಸ್ಥಾನದ ಉಪಾಧ್ಯಕ್ಷರಾದ ನಂದ ಬಿ. ಜಿ. ರವರು ಉದ್ಘಾಟಿಸಿದರು. ಗಣೇಶೋತ್ಸವದ ಪ್ರಯುಕ್ತ ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ -ರಾಧಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಕ್ಕಳು ರಾಧಕೃಷ್ಣರಾಗಿ ಮಿಂಚಿದರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ದೇವಸ್ಥಾನವನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಡಿಕೇರಿ ಸೆ.19 : ಕೊಡಗು ಜಿಲ್ಲೆಯಾದ್ಯಂತ ವಿಘ್ನ ನಿವಾರಕ ಶ್ರೀ ಗಣಪತಿಯ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯ ಶ್ರೀ ಕೋಟೆ ಗಣಪತಿ ದೇಗುಲದಲ್ಲಿ ಮಂಗಳವಾರ ಬೆಳಗ್ಗಿನಿಂದಲೆ ವಿಶೇಷ ಪೂಜೆ, ಹೋಮ ಹವನಾದಿ ಧಾರ್ಮಿಕ ಕಾರ್ಯಗಳು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಸರದಿಯ ಸಾಲಿನಲ್ಲಿ ನಿಂತು ಭಕ್ತಾದಿಗಳು ದೇವರ ದರ್ಶನ ಪಡೆದರಲ್ಲದೆ, ಈಡುಗಾಯಿ ಸೇವೆ ಸಲ್ಲಿಸುತ್ತಿದ್ದ ದೃಶ್ಯಗಳು ಕಂಡು ಬಂದಿತು. ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸುಮಾರು 37 ಕಡೆಗಳಲ್ಲಿ ವಿವಿಧ ಉತ್ಸವ ಸಮಿತಿಗಳಿಂದ ಗಣಪತಿಯ ಪ್ರತಿಷ್ಟಾಪನೆ, ವಿಶೇಷ ಪೂಜೆ, ಮಧ್ಯಾಹ್ನ ಅನ್ನದಾನ ಕಾರ್ಯಕ್ರಮಗಳು ನಡೆದವು. ಕೆಲ ಸಮಿತಿಗಳು ಸಂಜೆಯ ವೇಳೆ ಗಣಪತಿಯ ಉತ್ಸವ ಮೂರ್ತಿಯನ್ನು ನಗರದಲ್ಲಿ ಮೆರವಣಿಗೆ ನಡೆಸುವ ಮೂಲಕ ಗೌರಿ ಕೆರೆಯಲ್ಲಿ ವಿಸರ್ಜಿಸಿದರು. ವಿರಾಜಪೇಟೆಯಲ್ಲಿ ಗೌರಮ್ಮನ ನಗರ ಪ್ರದಕ್ಷಿಣೆ ಸೇವೆ- ವಿರಾಜಪೇಟೆಯ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಪ್ರದೇಶ ಗೌರಮ್ಮನ ಪಲ್ಲಕ್ಕಿಯ ನಗರ ಪ್ರದಕ್ಷಿಣೆ ಸೇವೆ…
ಮಡಿಕೇರಿ ಸೆ.19 : ನಾಡಿನಲ್ಲಿ ಗಣೇಶೋತ್ಸವದ ಸಡಗರ ಮನೆ ಮಾಡಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಕೊಡಗಿನಲ್ಲೂ ಜೋರಾಗಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಪುಟಾಣಿ ನಗರದ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು ಶಿವ ಪಾರ್ವತಿಯರ ಕೈಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೇರವೇರಿಸಿದ್ದಾರೆ. ಐದು ದಿನಗಳ ಕಾಲ ಸ್ಥಳೀಯ ನಿವಾಸಿಗಳಿಂದ ಗಣಪತಿ ಮೂರ್ತಿಗೆ ಸಂಕಲ್ಪ ಪೂಜೆಗಳು ನಡೆಯಲಿದೆ. ಕೆಲವು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಸೇವಾ ಸಮಿತಿ ಗಣೇಶೋತ್ಸವವನ್ನು ಆಚರಿಸಲು ಶ್ರಮ ವಹಿಸುತ್ತಿತ್ತು. ಇಂದು ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಸ್ವಂತ ಕಟ್ಟಡವನ್ನು ಕೂಡ ಹೊಂದಿ ಇಲ್ಲೇ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನುವ ಬೇಧಭಾವವಿಲ್ಲದೆ ಇಲ್ಲಿರುವ ಎಲ್ಲರೂ ಗಣೇಶನ ಅರಾಧಾನೆಯಲ್ಲಿ ತೋಡಗಿಸಿಕೊಂಡಿದ್ದಾರೆ. ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು…
ಮಡಿಕೇರಿ ಸೆ.19 : ನಗರದ ವಿಜಯನಗರದಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ ಪ್ರಯುಕ್ತ ವಿಶೇಷ ಪೂಜಾದಿ ಸೇವೆಗಳು ನೆರವೇರಿದವು. ಉತ್ಸವದ ಅಂಗವಾಗಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಾಮೂಹಿಕ ಗಣಹೋಮ ನಡೆದು ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಮಹಾ ಮಂಗಳಾರತಿ ನೆರವೇರಿತು. ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು. ದೇವಾಲಾಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಹೋಮ, ಪೂಜಾದಿ ಸೇವೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಮಡಿಕೇರಿ ಸೆ.19 : ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ತಿಂಗಳು ‘ಜನತಾ ದರ್ಶನ’ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಸಂಬಂಧ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಖ್ಯಮಂತ್ರಿ ಅವರು ಅವರು ಸೂಚನೆ ನೀಡಿರುತ್ತಾರೆ. ಅದರಂತೆ, ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್, 25 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲಾಡಳಿತವು ‘ಜನತಾ ದರ್ಶನ’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸಿ ಸಾರ್ವಜನಿಕರಿಗೆ ಅದರ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ, ಸೆಪ್ಟೆಂಬರ್ 21 ಮತ್ತು 22 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಸಾರ್ವಜನಿಕರು ಅವರ ಲಿಖಿತ ಅಹವಾಲುಗಳನ್ನು ಅಗತ್ಯ ದಾಖಲೆಗಳ ಸಹಿತ ಜಿಲ್ಲಾಡಳಿತ ಭವನದ ನೆಲಮಹಡಿಯಲ್ಲಿರುವ ‘ಸ್ಪಂದನ ಕೇಂದ್ರ’ದಲ್ಲಿ ತೆರೆದಿರುವ ‘ಜನತಾ ದರ್ಶನ’…
ಮಡಿಕೇರಿ ಸೆ.19 : ಶ್ರೀ ಕಾವೇರಿ ತುಲಾ ಸಂಕ್ರಮಣದ ಪವಿತ್ರ ಕಾವೇರಿ ತೀರ್ಥೋದ್ಭವ ಪ್ರಸಕ್ತ ಸಾಲಿನ ಅ.18 ರ ಬೆಳಗ್ಗಿನ ಜಾವ 1.27 ಗಂಟೆಗೆ (ಅ.17ರ ಮಧ್ಯರಾತ್ರಿ ಕಳೆದು) ಸಲ್ಲುವ ಕರ್ಕಾಟಕ ಲಗ್ನದಲ್ಲಿ ಘಟಿಸಲಿದೆ. ಕಾವೇರಿಯ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಜಾತ್ರೆಗೆ ಪೂರ್ವಭಾವಿಯಾಗಿ ಸೆ.27 ರಂದು ಬೆಳಿಗ್ಗೆ 9.29 ಗಂಟೆಗೆ ತುಲಾ ಲಗ್ನದಲ್ಲಿ ಭಾಗಮಂಡಲದಲ್ಲಿ “ಪತ್ತಾಯಕ್ಕೆ ಅಕ್ಕಿ ಹಾಕಲಾಗುವುದು” ಕಾರ್ಯಕ್ರಮ ಸಂಪ್ರದಾಯದಂತೆ ನಡೆಯಲಿದೆ. ಅ.5 ರಂದು ಬೆಳಿಗ್ಗೆ 8.31 ನಿಮಿಷಕ್ಕೆ ತುಲಾ ಲಗ್ನದಲ್ಲಿ “ಆಜ್ಞಾ ಮೂಹೂರ್ತ”, ಅ.15 ರಂದು ಬೆಳಿಗ್ಗೆ 11.45 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಸಂಜೆ 4.5ಕ್ಕೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇಡುವುದು ಕಾರ್ಯಕ್ರಮಗಳು ನಡೆಯಲಿದೆ.
ಮಡಿಕೇರಿ ಸೆ.19 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿರುವ ‘ಬಹುಭಾಷಾ ಕವಿಗೋಷ್ಠಿ’ಯನ್ನು ಅಕ್ಟೋಬರ್ 18 ರ ಬುಧವಾರದಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ/ ಕವಿಯಿತ್ರಿಯರಿಂದ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಿಯಿತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ಅಕ್ಟೋಬರ್ 3 ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು (ಹಿಂದಿ ಮತ್ತು ಇಂಗ್ಲೀಷ್ ಹೊರತುಪಡಿಸಿ) ‘ಕನ್ನಡ’ಲಿಪಿಯಲ್ಲೆ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ(4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ(6 ರಿಂದ 12 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕವನಗಳನ್ನು ಕಳುಹಿಸುವವರು ತಮ್ಮ…
ಮಡಿಕೇರಿ ಸೆ.19 : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಸಂಶೋಧಕರಾದ ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಕೆ.ಕೆ.ಮುತ್ತಮ್ಮ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಸಮಾಜ ಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಕೊಡಗು ಜಿಲ್ಲೆಯ ಯರವ ಬುಡಕಟ್ಟು ಜನಾಂಗದ “ಬುಡಕಟ್ಟು ಮಹಿಳೆಯರ ಆರೋಗ್ಯ ಸ್ಥಿತಿ” ಕುರಿತು ಮುತ್ತಮ್ಮ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಪ್ರೊ.ವಿನಯ್ ರಜತ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದರು. ಮುತ್ತಮ್ಮ ಅವರು ಹೆಬ್ಬೆಟ್ಟಗೇರಿ ಗ್ರಾಮದ ದಿ.ಕೊಕ್ಕಲೇರ ಕಾಳಯ್ಯ ಹಾಗೂ ಕಾವೇರಿ ಕಾಳಯ್ಯ ಅವರ ಪುತ್ರಿ ಮತ್ತು ಬೇಂಗೂರು ಗ್ರಾಮದ ಪಟ್ಟಮಾಡ ಉದಯ್ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.
ಮಡಿಕೇರಿ ಸೆ.19 : ಕೊಡವರು ತಮ್ಮ ತಾಯಿ ನೆಲದಲ್ಲೇ ಇಂದು ಅತಂತ್ರರು ಮತ್ತು ಅನಾಥರೂ ಆಗಿದ್ದು, ಕೊಡವರ ಹೆಗ್ಗುರುತು ಹಾಗೂ ಅಸ್ತಿತ್ವದ ಬಗ್ಗೆ ಭಯ ಕಾಡುತ್ತಿದೆ. ಆದ್ದರಿಂದ ಕೊಡವರಂತಹ ಸೂಕ್ಷ್ಮ ಬುಡಕಟ್ಟು ಜನಾಂಗದ ಬಗ್ಗೆ ವಿಶೇಷ ಕಾಳಜಿ ತೋರಿ ರಕ್ಷಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜ್ಯಾಂಗದತ್ತ ಋಣಭಾರವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಜಿಲ್ಲೆಯಾದ್ಯಂತ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ದಿನದ ಕೊಡವ ಜಾಗೃತಿ ಸಭೆ ಸೂರ್ಲಬಿ ನಾಡ್ ಮಂದ್, ಗಡಿನಾಡು ನಾಡ್ ಮಂದ್-ಬಿಳಿಗೇರಿ-ಮಾದಾಪುರದಲ್ಲಿ ನಡೆಯಿತು. ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಸಂವಿಧಾನದ ವಿಧಿಗಳಡಿಯಲ್ಲಿ ಕೊಡವ ಸಮುದಾಯಕ್ಕೆ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಅತ್ಯಂತ ಶ್ರೇಷ್ಠ ಮತ್ತು ಸರ್ವ ಶಾಶ್ವತವೂ ಆಗಿರುವುದರಿಂದ…






