ಲೇಖಕ: admin

ಮಡಿಕೇರಿ ಅ.25 : ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕತೆಯ ಜೊತೆಗೆ ಸಾಮರಸ್ಯ ಮತ್ತು ಸಹೋದರತ್ವವನ್ನು ಒಳಗೊಂಡು ಮಾದರಿಯಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ವಿಜಯದಶಮಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಸರಾ ಹಬ್ಬವು ಪ್ರತಿಯೊಬ್ಬರಲ್ಲಿ ಐಕ್ಯತೆ ಮತ್ತು ಭ್ರಾತೃತ್ವವನ್ನು ಮೂಡಿಸಿ ಒಗ್ಗಟ್ಟಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡುವುದು ವಿಶೇಷವಾಗಿದೆ ಎಂದರು. ರಾಷ್ಟçದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಅವುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಲು ಎಲ್ಲರೂ ಪ್ರಯತ್ನಿಸಬೇಕು. ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಟುತೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಭ್ರಾತೃತ್ವದಿಂದ ಬದುಕಿದಾಗ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಯು.ಟಿ.ಖಾದರ್ ಪ್ರತಿಪಾದಿಸಿದರು. ಪ್ರತಿಯೊಬ್ಬ ಮನುಷ್ಯರಿಗೂ ಒಂದೇ ರೀತಿಯ ಅಂಗಾಂಗಗಳನ್ನು ದೇವರು ಸೃಷ್ಟಿಸಿರುತ್ತಾನೆ. ಕಪ್ಪು, ಬಿಳುಪು ಅಥವಾ ಕಂದು ಬಣ್ಣ ಇರಬಹುದು. ಮನುಷ್ಯನ ಅಂಗಾಂಗ ರಚನೆ ಒಂದೇ ರೀತಿ ಇರುತ್ತದೆ. ಆದ್ದರಿಂದ ಎಲ್ಲರೂ…

Read More

ಮಡಿಕೇರಿ ಅ.25 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಹತ್ತು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಕರ್ಷಕ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ವರ್ಣರಂಜಿತ ತೆರೆ ಬಿದ್ದಿದೆ. ಈ ಬಾರಿ ದಶಮಂಟಪಗಳಲ್ಲಿ “ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ” ಕಥಾ ಸಾರಾಂಶ ಹೊಂದಿದ್ದ ಶ್ರೀಕೋದಂಡ ರಾಮ ದೇವಾಲಯದ ಮಂಟಪ ಪ್ರಥಮ ಬಹುಮಾನ ಗಳಿಸಿತು. 49ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಈ ದೇವಾಯದ ಮಂಟಪದ ಅಧ್ಯಕ್ಷರಾಗಿ ಗೋಪಿನಾಥ್ ಕಾರ್ಯನಿರ್ವಹಿಸಿದರು. ಸುಮಾರು ರೂ.20 ಲಕ್ಷ ರೂ.ವೆಚ್ಚದ ಮಂಟಪ 25 ಕಲಾಕೃತಿಗಳನ್ನು ಹೊಂದಿತ್ತು. “ಮಹಾಗಣಪತಿಯಿಂದ ಶತಮಾಹಿಷೆಯ ಸಂಹಾರ” ಕಥಾ ಸಾರಾಂಶವನ್ನು ಹೊಂದಿ 47ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಶ್ರೀಕೋಟೆ ಮಹಾಗಣಪತಿ ದೇವಾಲಯದ ಮಂಟಪ ಹಾಗೂ 48ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡು “ಕೃತಿಬಾಸ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ” ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ದ್ವಿತೀಯ ಬಹುಮಾನವನ್ನು ಹಂಚಿಕೊಂಡವು. ಶ್ರೀಕೋಟೆ ಮಹಾಗಣಪತಿ ಮಂಟಪಕ್ಕಾಗಿ ಸುಮಾರು ರೂ.31.5 ಲಕ್ಷ…

Read More

ಮಡಿಕೇರಿ ಅ.25 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪದ ಟ್ರ್ಯಾಕ್ಟರ್ ಮಗುಚಿಕೊಂಡ ಪರಿಣಾಮ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ. ನಾಲ್ವರು ಗಾಯಾಳುಗಳು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ ವಿದ್ಯುತ್ ದೀಪಾಲಂಕರಕ್ಕಾಗಿ ಬಂದಿದ್ದ ದಿಂಡಿಗಲ್ ನ ವ್ಯಕ್ತಿಯೊಬ್ಬರ ಕಾಲು ಮೂಳೆ ಮುರಿದಿದೆ. ಅದೃಷ್ಟವಶಾತ್ ಘಟನೆ ವೇಳೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತ್ತಾಗಿದೆ. ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪವು ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿತ್ತು. ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6 ರಿಂದ 10ರವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ಬಹುಮಾನಕ್ಕಾಗಿ ತೀರ್ಪುಗಾರರಿಗೆ ಬೆಳಗ್ಗೆ 4 ಗಂಟೆ ವೇಳೆಗೆ ಕಾವೇರಿ ಕಲಾಕ್ಷೇತ್ರದ ಬಳಿ ಕಥಾ ಸಾರಾಂಶವನ್ನು ಪ್ರದರ್ಶಿಸಬೇಕಾಗಿತ್ತು. ರಾಜಾಸೀಟು ಉದ್ಯಾನವನದ ಬಳಿ ಇರುವ ತನ್ನ ದೇವಾಲಯದಿಂದ ಹೊರಟ ಮಂಟಪ…

Read More

ಮಡಿಕೇರಿ ಅ.25 : ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್.ವೈದ್ಯ ಅವರು ಅಕ್ಟೋಬರ್, 26 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಅಕ್ಟೋಬರ್, 26 ರಂದು ಬೆಳಗ್ಗೆ 11 ಗಂಟೆಗೆ ಅಳಿವಿನ ಅಂಚಿನಲ್ಲಿರುವ ಮಹಾಶಿರಾ ತಳಿ ಮೀನಿನ ಮರು ಸಂತಾನೋತ್ಪತಿ ಹಾರಂಗಿಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 1.30 ಗಂಟೆಗೆ ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮದ ಬಳಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ನಿರ್ಮಾಣವಾಗಿರುವ ಮೀನು ಮಾರಾಟ ಕೇಂದ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪಿ.ಸಿ.ರವೀಂದ್ರ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಅ.25 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ 2022-23 ನೇ ಸಾಲಿನ 19 ನೇ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮವು ಅಕ್ಟೋಬರ್, 27 ರಂದು ಮಧ್ಯಾಹ್ನ 1.30 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ) ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪಿ.ಕೆ.ವೆಂಕಟೇಶ್ ಪ್ರಸನ್ನ, ಕೊಡಗು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಕನ್ನಡ ಉಪನ್ಯಾಸಕರಾದ ಡಾ.ಜಮೀರ್ ಅಹ್ಮದ್, ಪ್ರಶಸ್ತಿ ವಿಜೇತರಾದ ಕಟ್ರತನ ಲಲಿತ ಅಯ್ಯಣ್ಣ, ಈರಮಂಡ ಹರಿಣಿ ವಿಜಯ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ…

Read More

ಸುಂಟಿಕೊಪ್ಪ ಅ.25 : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 53ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಆಯುಧ ಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವರ್ಕ್ ಶಾಪ್ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಬರಿ ಆಟೋ ವರ್ಕ್ಸ್, ದ್ವಿತೀಯ ಬಹುಮಾನ ವೆಂಕಟರಮಣ ಟಯರ್ ವರ್ಕ್ಸ್ ಪಡೆಯಿತು. ಕಚೇರಿ ಅಲಂಕಾರ ಸ್ಪರ್ಧೆಯಲ್ಲಿ ಕೆ. ಇ.ಬಿ. ಪ್ರಥಮ, ಪೊಲೀಸ್ ಠಾಣೆ ದ್ವಿತೀಯ ಮತ್ತು ಗ್ರಾಮ ಪಂಚಾಯತಿ ಕಚೇರಿ ತೃತೀಯ ಬಹುಮಾನ ಗಳಿಸಿತು. ಅಂಗಡಿ ಅಲಂಕಾರ ಸ್ಪರ್ಧೆಯಲ್ಲಿ ಶ್ರೀಮಾನ್ ಎಂಟರ್ ಪ್ರೈಸಸ್ ಪ್ರಥಮ ಬಹುಮಾನ, ಅಶ್ರಫ್ ಸ್ಟೂಡೆಂಟ್ ಕಾರ್ನರ್ ದ್ವಿತೀಯ ಬಹುಮಾನ ಪಡೆಯಿತು. ಲಘು ವಾಹನ ಅಲಂಕಾರ ಸ್ಪರ್ಧೆಯಲ್ಲಿ ಆನಂದ ಪ್ರಥಮ, ನಾಗಪ್ಪ ದ್ವಿತೀಯ ಮತ್ತು ಪಟ್ಟೆಮನೆ ಹರ್ಷ ತೃತೀಯ ಬಹುಮಾನ ಪಡೆದರು. ಶಿವಮಣಿ ಅವರು ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು. ವಿಜೇತರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಸೇರಿದಂತೆ ವಾಹನ ಚಾಲಕರ ಸಂಘದ ಅಧ್ಯಕ್ಷ…

Read More

ಮಡಿಕೇರಿ ಅ.24 : 47ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, ಮಂಟಪಕ್ಕಾಗಿ ಸುಮಾರು ರೂ.31.5 ಲಕ್ಷ ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ದಸರಾ ಸಮಿತಿ ಅಧ್ಯಕ್ಷರಾಗಿ ಹೆಚ್.ಪಿ. ಲೋಕೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದಲ್ಲಿ 30 ಕಲಾಕೃತಿಗಳು ಇರಲಿದೆ. ದೇವಾಲಯ ಸಮಿತಿಯಲ್ಲಿ ಸುಮಾರು 372 ಮಂದಿ ಸದಸ್ಯರಿದ್ದಾರೆ. ಮಂಟಪದಲ್ಲಿ ಅಳವಡಿಸಲಾಗುತ್ತಿರುವ ಕಥೆಯನ್ನು ಆರ್.ಬಿ. ರವಿ ನಿರ್ದೇಶಿಸಿದ್ದಾರೆ. ಮಡಿಕೇರಿಯ ಫ್ಯೂಚರ್ ಇವೆಂಟ್ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್ಸ್ ಸೆಟ್ಟಿಂಗ್ ಮಾಡಲಿದೆ. ಮಡಿಕೇರಿಯ ಪೂಜಾ ಲೈಟಿಂಗ್ ಆರ್ಚ್ ಬೋರ್ಡ್ ವ್ಯವಸ್ಥೆ ಮಾಡಲಿದೆ. ಗಣೇಶ್ ಹಾಗೂ ಸೋಮಶೇಖರ್ ಟ್ರಾö್ಯಕ್ಟರ್ ಸೆಟ್ಟಿಂಗ್ ಮಾಡಲಿದ್ದಾರೆ. ಮಡಿಕೇರಿಯ ಬಿ.ಎನ್. ಕ್ರಿಯೇಷನ್‌ನ ಮೋಹನ್ ಹಾಗೂ ಪುನಿತ್ ಅವರು ವೆಲ್ಡಿಂಗ್, ಚಲನವಲನ ಹಾಗೂ ಫ್ಲಾರ್ಟ್ ಫಾರಂ ಸೆಟ್ಟಿಂಗ್ ಮಾಡಲಿದ್ದಾರೆ. ಮಡಿಕೇರಿಯ ಪೂಜಾ ಲೈಟಿಂಗ್‌ನ ರಘು ಮತ್ತು ತಂಡ ಕಲಾಕೃತಿಗಳಿಗೆ ವಿಶೇಷ ಎಫೆಕ್ಟ್ ನೀಡಲಿದ್ದಾರೆ. ಮಡಿಕೇರಿಯ…

Read More

ಮಡಿಕೇರಿ ಅ.24 : ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯವರಾ ಮಂಟಪ ಸಮಿತಿ ಈ ಬಾರಿ 93ನೇ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪರಶಿವನಿಂದ ಜಲಂಧರ ಸಂಹಾರ ಕಥಾ ಸಾರಾಂಶವನ್ನು ಹೊಂದಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಅಂಬೆಕಲ್ ನವೀನ್ ತಿಳಿಸಿದ್ದಾರೆ. ರೂ.20 ಲಕ್ಷ ವೆಚ್ಚದಲ್ಲಿ ಮಂಟಪ ತಯಾರಿಯಾಗಿದ್ದು, ಮಂಟಪದಲ್ಲಿ 23 ಕಲಾಕೃತಿಗಳು ಇರಲಿದೆ. ಮಂಟಪದಲ್ಲಿ ಕಾಲಿಕಟ್ ಏಷಿಯನೆಟ್ ಸ್ಟುಡಿಯೋ ಅಂತೋಣಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ, ದಿಂಡಿಗಲ್, ಎಂ.ಪಿ. ಲೈಟಿಂಗ್ ಬೋರ್ಡ್ ವ್ಯವಸ್ಥೆ ಮಾಡಲಿದ್ದಾರೆ. 150ಕ್ಕೂ ಅಧಿಕ ಮಂದಿ ಸದಸ್ಯರು ತಂಡದಲ್ಲಿದ್ದಾರೆ, ವಿಯನ್ ಇಂಜಿನಿಯರಿಂಗ್ ವರ್ಕ್ ಪ್ಲಾಟ್ ಫಾರ್ಮ, ಚಲನವಲನವನ್ನು ತಂಡದ ಸದಸ್ಯರೇ ಮಾಡಲಿದ್ದಾರೆ. ಮಡಿಕೇರಿಯ ಅಶ್ರಫ್, ಪ್ರಕಾಶ್ ತಂಡ ಸ್ಪೆಷಲ್ ಎಫೆಕ್ಟ್ ನೀಡಲಿದೆ. ಬೆಂಗಳೂರಿನ ಎಲ್ಲೋ ಸೌಂಡ್ಸ್ ಇರಲಿದೆ. ಕಲಾಕೃತಿಗಳನ್ನು ಅಸ್ತಿತ್ವ ಆರ್ಟಿ ಸುನಿ ಮತ್ತು ಮನು ತಂಡ ಕಲಾತ್ಮಕವಾಗಿ ಮಾಡುತ್ತಿದೆ. ಮೋಹನ್ ಮತ್ತು ಸಂಪತ್ ಟ್ಯಾಕ್ಟರ್, ಸೆಟ್ಟಿಂಗ್, ಬಿನ್ ಮತ್ತು ತಂಡ ಕಥಾ…

Read More

ಮಡಿಕೇರಿ ಅ.24 : ಕೋದಂಡ ರಾಮ ದಸರಾ ಮಂಟಪ ಸಮಿತಿ 49ನೇ ವರ್ಷದ ದಸರಾ ಉತ್ಸವ ಆಚರಿಸಿದ್ದು, “ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾಗಿ ಗೋಪಿನಾಥ್ ತಿಳಿಸಿದ್ದಾರೆ. ರೂ.20 ಲಕ್ಷ ರೂ.ವೆಚ್ಚದಲ್ಲಿ ಮಂಟಪ ನಿರ್ಮಾಣವಾಗಿದ್ದು, 25 ಕಲಾಕೃತಿಗಳಿದ್ದು, ಮೈಸೂರು ಜಿಲ್ಲೆಯ ಉದೂರಿನ ಮಹದೇವಪ್ಪ ಮತ್ತು ನಾಗರಾಜು ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ಮಡಿಕೇರಿ ಗೌತಮ್ ಮತ್ತು ಸಂದು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಫಯರ್‌ವರ್ಕ್ ಮಾಡಲಿದ್ದಾರೆ. ಪ್ಲಾಟ್‌ಫಾರ್ಮ್ ಸೆಟ್ಟಿಂಗ್ ಅನ್ನು ಸಮಿತಿಯ ಸದಸ್ಯರೇ ನಿರ್ವಹಿಸಲಿದ್ದಾರೆ. ಟ್ರಾ÷್ಯಕ್ಟ ಸೆಟ್ಟಿಂಗ್ ಹಾಗೂ ಚಲನವಲನವನ್ನು ಹೇಮರಾಜ್ ಮತ್ತು ತಂಡ ವಹಿಸಿಕೊಂಡಿದೆ. ಸೋಮದಾರಪೇಟೆ ಧ್ವನಿವರ್ಧಕವನ್ನು ಅಳವಡಿಸುತ್ತಿದೆ.

Read More

ಮಡಿಕೇರಿ ಅ.24 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 48ನೇ ವರ್ಷದ ಉತ್ಸವ ಆಚರಿಸುತ್ತಿದ್ದು, ಕೃತಿಬಾಸ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರುಗಳಾದ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ತಿಳಿಸಿದ್ದಾರೆ. ಎರಡು ಟ್ರಾ÷್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಈ ಬಾರಿ ದಿಂಡಿಗಲ್‌ನ ಕಳೇಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಮಡಿಕೇರಿಯ ಶಕ್ತಿ ವಿನಾಯಕ ಈವೆಂಟ್ ಮ್ಯಾನೇಜ್‌ಮೆಂಟ್‌ನ ಪ್ರಶಾಂತ್ ನೇತೃತ್ವದಲ್ಲಿ ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದೆ. ಪ್ಲಾಟ್‌ಫಾರಂನ್ನು ಟೀಂ ಕೆಎಂಟಿ ಮಾಡಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಟೀಂ ಕೆ.ಎಂ.ಟಿ.ಯ ಜಿ.ಸಿ.ಜಗದೀಶ್, ಪ್ರಸಾದ್ ಆಚಾರ್ಯ ತಂಡ ಮಾಡಲಿದೆ. ಒಟ್ಟು 17 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಮಡಿಕೇರಿಯ ಆರ್ವಿನ್ ಹಾಗೂ ರಾಕೇಶ್ ತಂಡ ಕಲಾಕೃತಿಗಳನ್ನು…

Read More