ಮಡಿಕೇರಿ ಅ.20 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಈಗಾಗಲೇ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆ ಹಾಗೂ ಮನೆಗಳಲ್ಲಿ ಗೊಂಬೆ ಜೋಡಣೆಯ ತೀರ್ಪುಗಾರಿಕೆ ಮುಕ್ತಾಯಗೊಂಡಿದೆ. ವಿಜೇತರನ್ನು ಆಯುಧ ಪೂಜೆ ದಿನದಂದು ಘೋಷಣೆಮಾಡಿ ಬಹುಮಾನ ವಿತರಿಸಲಾಗುವುದೆಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ. ಆಯುಧ ಪೂಜೆ ದಿನವಾದ 23 ರಂದು ಅಲಂಕೃತ ವಾಹನಗಳು ಸಂಜೆ 6.30 ಗಂಟೆ ಒಳಗೆ ಗಾಂಧಿ ಮೈದಾನಕ್ಕೆ ಬರಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಆಕರ್ಷಕ ವಾಹನಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಮಾಡಲಾಗುವುದು. ಸೈಕಲ್, ಲಾರಿ, ಬಸ್, ಜೆಸಿಬಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ. ಕಟ್ಟಡ ಅಲಂಕಾರ: ವಿಜಯದಶಮಿಯ ದಿನವಾದ 24 ರಂದು ಸಂಜೆ 6.30 ಗಂಟೆಯೊಳಗೆ ಕಟ್ಟಡಗಳ ಅಲಂಕಾರ ಪೂರ್ಣಗೊಳಿಸಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಕಟ್ಟಡ ಹಾಗೂ…
ಲೇಖಕ: admin
ಮಡಿಕೇರಿ ಅ.20 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶರನ್ನವರಾತ್ರಿಯ 5ನೇ ದಿನ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಅಲಂಕಾರ ಮಾಡಿ ಪೂಜಿಸಲಾಯಿತು. ಅ.21 ರಂದು ತಾವರೆ ಅಲಂಕಾರ ನೆರವೇರಲಿದೆ.
ಸುಂಟಿಕೊಪ್ಪ ಅ.20 : ಸುಂಟಿಕೊಪ್ಪ ಸ್ವಸ್ಥ ವಿಶೇಷ ಚೇತನ ಶಾಲೆ ವತಿಯಿಂದ ಸಿ.ಬಿ.ಆರ್ ಸಂಯೋಜಕ ಮುರುಗೇಶ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಸುಂಟಿಕೊಪ್ಪದ ಸ್ವಸ್ಥ ಶಾಲಾ ಸಭಾಗಂಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ, ಸ್ವಸ್ಥ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಗಂಗಾ ಚಂಗಪ್ಪ, ಮೇಲ್ವಿಚಾರಕರಾದ ವನಿತಾ ಚಂಗಪ್ಪ, ಸಹ ಶಿಕ್ಷಕ ಮತ್ತು ಶಿಕ್ಷಕತೇರ ಸಿಬ್ಬಂದಿಗಳು ಒಗ್ಗೂಡಿ ನೆನಪಿನ ಕಾಣಿಕೆ ಸನ್ಮಾನಿಸಿ ಗೌರವಿಸಿದರು. ಕಳೆದ 13 ವರ್ಷಗಳಿಂದ ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆಯಲ್ಲಿ ಸಮುದಾಯ ಆಧಾರಿತ ಪುನರ್ವಸತಿ ಯೋಜನೆಯಲ್ಲಿ ಸಂಯೋಜಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ತಮ್ಮ ವೃತ್ತಿಯನ್ನು ಆರಂಭಿಸಿದ ಮುರುಗೇಶ್ ವಿಶೇಷ ಚೇತನ ಮಕ್ಕಳು ಹಾಗೂ ವಿಶೇಷ ಚೇತನ ವ್ಯಕ್ತಿಗಳಿಗೆ ನೈಜ ಪಲಾನುಭವಿಗಳಿಗೆ ಸರಕಾರ ಇಲಾಖೆಗಳಿಂದ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ನೈಜ ಪಲಾನುಭವಿಗಳಿಗೆ ತಲುಪಿಸುವಲ್ಲಿ ಅತ್ತುತ್ತಮ ಸೇವೆ ಸಲ್ಲಿಸಿದ್ದರಲ್ಲದೆ ವಿಶೇಷಚೇತನರ ಪ್ರತಿಭೆಗಳನ್ನು ಅನಾವರಣಗೊಳಿಸಲು ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ಜಿಲ್ಲೆಯಾದ್ಯಂತ ತೆರಳಿ ವಿಶೇಷ ಚೇತನರನ್ನು ಗುರುತಿಸಿ ಸಹಾಯಕ್ಕೆ ಧಾವಿಸಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು…
ಮಡಿಕೇರಿ ಅ.20 : ಮಡಿಕೇರಿ ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನ ಅಲಂಕಾರ ಮಾಡಿ ಪೂಜಿಸಲಾಯಿತು.
ಮಡಿಕೇರಿ ಅ.20 : ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್.ಪಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಬಿಲ್ ನ್ನು ವಸೂಲಾತಿ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಘಟಕದ ಜಿಲ್ಲಾಧ್ಯಕ್ಷ ಮನುಸೋಮಯ್ಯ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಂದ ವಿದ್ಯುತ್ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿದರು. ಈ ಹಿಂದೆ ರಾಜ್ಯ ಸರ್ಕಾರದ ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ವಿದ್ಯುತ್ ಸಬ್ಸಿಡಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಐಪಿ ಸೆಟ್ ಗಳಿಗೆ 12 ಗಂಟೆ ಗುಣಾತ್ಮಕ ಫೇಸ್ ವಿದ್ಯುತ್ ನೀಡಿ ರೈತರ ಕಾಫಿ ತೋಟಗಳಿಗೆ ನೀರು ಹಾಯಿಸಲು ತಡೆರಹಿತ ವಿದ್ಯುತ್ ಸರಬರಾಜು ಮಾಡಬೇಕು, ವಿದ್ಯುತ್ ಉಪಕೇಂದ್ರವನ್ನು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು, ಕೆಳಮಟ್ಟದ ಮತ್ತು…
ಮಡಿಕೇರಿ ಅ.20 : ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹಾಕಿ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯ ಹಾಕಿ ತಂಡದ ಆಯ್ಕೆ ಶಿಬಿರದಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಗಳಾದ ಎ.ಟಿ.ಧವನ್, ನಮನ್ ಬೆಳ್ಯಪ್ಪ, ಶ್ರೀ ವಿಷ್ಣುರಾಜ್ ಹಾಗೂ ಪರ್ಲಿನ್ ಪೊನ್ನಮ್ಮ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಪರ್ಲಿನ್ ಪೊನ್ನಮ್ಮ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು, ಇವರು ಅ. 24 ರ ವರೆಗೆ ಚೆನ್ನೈ ನಲ್ಲಿ ನಡೆಯಲಿರುವ ಪ್ರಥಮ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕ – ಬಾಲಕಿಯರ ದಕ್ಷಿಣ ವಲಯ ಚಾಂಪಿಯನ್ ಶಿಪ್ 2023 ರಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಇವರಲ್ಲಿ ಅರಮನಮಾಡ ಉದಯ್ ಕುಮಾರ್ ಮತ್ತು ಭವ್ಯ ತಂಗಮ್ಮ ಅವರ ಪುತ್ರ, ನಮನ್ ಬೆಳ್ಯಪ್ಪ ವಕೀಲರಾದ ಅಚ್ಚಪಂಡ ಗಿರಿ ಮತ್ತು ಪದ್ಮ ದಂಪತಿಗಳ ಪುತ್ರಿ.
ಮಡಿಕೇರಿ ಅ.20 : ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ಇವರ ನೇತೃತ್ವದಲ್ಲಿ ನ.14 ರಿಂದ 24 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮತ್ತು 1108 ನಾರಾಯಣ ಕವಚದ ಮಹಾಯಜ್ಞದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ರಥ ಮೂರ್ನಾಡಿಗೆ ಆಗಮಿಸಿತು. ವಿರಾಜಪೇಟೆಯಿಂದ ಮೂರ್ನಾಡಿಗೆ ಆಗಮಿಸಿದ ರಥಕ್ಕೆ ಶ್ರೀಅಯ್ಯಪ್ಪ ದೇವಾಲಯದ ಬಳಿ ಶ್ರದ್ಧಾಭಕ್ತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಮಾತೃಶಕ್ತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಹೆಚ್‌ಪಿ ಪ್ರಮುಖರು ಗೋ ಸಂರಕ್ಷಣೆ ಮತ್ತು ಗೋ ರಥ ಯಾತ್ರೆ ಕುರಿತು ವಿವರಿಸಿದರು. ಗೋವುಗಳ ಸಂರಕ್ಷಣೆ ಹಿಂದೂಗಳ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಸಿಹಿ ಹಂಚಲಾಯಿತು. ನಂತರ ಗೋವುಗಳ ರಕ್ಷಣೆ ಕುರಿತು ಜಾಗೃತಿ ಮಾತುಗಳನ್ನಾಡಿ ಗೋ ಸಂರಕ್ಷಣಾ ರಥವನ್ನು ಶ್ರದ್ಧಾಭಕ್ತಿಯಿಂದ…
ಕುಶಾಲನಗರ ಅ.19 : ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಳ್ಳಲಾದ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘದ ಸಾಧು ಸಂತರು ಗುರುವಾರ ಕೊಡಗು ಜಿಲ್ಲೆಗೆ ಆಗಮಿಸಿದರು. ಕರ್ನಾಟಕ ತಮಿಳುನಾಡಿನ ಗಡಿ ಭಾಗ ಹೊಸೂರು ಮೂಲಕ ರಾಜ್ಯಕ್ಕೆ ಆಗಮಿಸಿ ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಸಂದರ್ಭ ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ಮಹಾ ಆರತಿ ಬಳಗದ ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ಮುರುಗಾನಂದ ಸರಸ್ವತಿ , ಶ್ರೀ ಮೇಘಾನಂದ ಸರಸ್ವತಿ, ಮತ್ತು ಶ್ರೀ ಶಿವರಾಮನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಗಮಿಸಿದ 20ಕ್ಕೂ ಅಧಿಕ ಸಾಧು ಸಂತರು ಆಗಮಿಸಿದರು. ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಕೊಕ್ಕಲೆರ ಧರಣಿ ಸೋಮಣ್ಣ, ಚೈತನ್ಯ ಮತ್ತಿತರರು ಸಾಧುಸಂತರನ್ನು ಜಿಲ್ಲೆಯ ಗಡಿಭಾಗದಲ್ಲಿ ಬರಮಾಡಿಕೊಂಡು ರಥಯಾತ್ರೆಯಲ್ಲಿ ತಂದ ಮಾತೆ ಕಾವೇರಿಗೆ ಪೂಜೆ ಸಲ್ಲಿಸಲಾಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸ್ಥಾಪಕರಾದ ಶ್ರೀ ಗಣೇಶ ಸ್ವರೂಪನಂದ ಗಿರಿ ಸ್ವಾಮೀಜಿ ಮತ್ತು…
ಮಡಿಕೇರಿ ಅ.19 : ಮೈಸೂರು ವಿಶ್ವವಿದ್ಯಾನಿಲಯದ 103ನೇ ಘಟಿಕೋತ್ಸವದಲ್ಲಿ ಎಂ.ಎ ತತ್ವಶಾಸ್ತ್ರ ವಿಷಯದಲ್ಲಿ ವಿರಾಜಪೇಟೆಯ ಮರಿಯಾ ವಿನ್ಸಿ ಜೋಸ್ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. 7 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. ಮರಿಯಾ ವಿನ್ಸಿ ಜೋಸ್ ಅವರು ಪ್ರಸ್ತುತ ಕೊಡಗು ವಿಶ್ವವಿದ್ಯಾನಿಲಯದ ವಿರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಇವರು ವಿರಾಜಪೇಟೆಯ ಹೆಗ್ಗಳ ಗ್ರಾಮದ ನಿರ್ಮಲ ಗಿರಿ ನಿವಾಸಿ ಪಿ.ಪಿ.ಜೋಸ್ ಹಾಗೂ ಅನ್ನಮ್ಮ ಜೋಸ್ ದಂಪತಿಯ ಕಿರಿಯ ಪುತ್ರಿ ಮತ್ತು ಜಾನ್ಸನ್ ಟಿ.ಟಿ ಅವರ ಪತ್ನಿ.
ಮಡಿಕೇರಿ ಅ.19 : ನಾಡಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅ.24 ರ ಬೆಳಗ್ಗೆ 6 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು ಗೋಣಿಕೊಪ್ಪ, ಪೊನ್ನಂಪೇಟೆ ಠಾಣಾ ಸರಹದ್ದಿನ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ.






