ಮಡಿಕೇರಿ ಅ.20 : ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಬಾವ (ಖ.ಸಿ) ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು 2024 ಮಾರ್ಚ್ 3, 4 ಮತ್ತು 5 ರಂದು ಉಲಮಾ-ಉಮರ, ಸಾದತುಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಬದರ್ ಜಮಾಅತ್ ಸಮಿತಿ ಕಾರ್ಯದರ್ಶಿ ಎಸ್.ಎ.ಅಬ್ದುಲ್ ಖಾದರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 93538 34014 ನ್ನು ಸಂಪರ್ಕಿಸಬಹುದಾಗಿದೆ.
ಲೇಖಕ: admin
ಮಡಿಕೇರಿ ಅ.20 : ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಮಡಿಕೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿಯ ಕಸಬಾ ವೃತ್ತ ಮತ್ತು ಚೆರಂಬಾಣೆ ವೃತ್ತಕ್ಕೆ ಸಂಬಂಧಿಸಿದ 52 ಅಂಗನವಾಡಿ ಕೇಂದ್ರಗಳಿಗೆ ಪ್ರಥಮ ಚಿಕಿತ್ಸೆ ಬಾಕ್ಸ್, ಮಾಸ್ಕ್, ಬಕೆಟ್‍ಗಳನ್ನು ಅಂಗನವಾಡಿ ಕೇಂದ್ರದ ಬಳಕೆಗಾಗಿ ವಿತರಣೆ ಮಾಡಲಾಯಿತು. ಮಾತೃವಂದನ ಯೋಜನೆ ಅಡಿ ಕಾರ್ಯಕರ್ತರೆ ಮೊಬೈಲ್‍ನಲ್ಲಿ ಅರ್ಜಿಗಳನ್ನು ದಾಖಲೆ ಮಾಡುವ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ, ಕಾರ್ಯದರ್ಶಿ ಮುರುಳಿ ಅವರು ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಿದ್ದು, ಎಲ್ಲಾ ಫಲಾನುಭವಿಗಳಿಗೆ ಇದು ತಲುಪುವಂತೆ ಸಹಕರಿಸಲು ಕೋರಿದರು. ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಸಹಕಾರ, ಮಾರ್ಗದರ್ಶನ ನೀಡಲು ಕೋರಿದರು. ಇಲಾಖೆಯ ಯೋಜನೆಗಳನ್ನು ಸೂಕ್ತ ಸಮಯದಲ್ಲಿ ಸೂಕ್ತ ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಪೋಷಣ್ ಅಭಿಯಾನ…
ಮಡಿಕೇರಿ ಅ.20 : ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.28 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆಯು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮ ಆಯೋಜನೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಬೇಕು. ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿ ಸೂಚಿಸಿದರು. ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡುವ ಭಾಷಣಕಾರರನ್ನು ಕರೆಸುವುದು. ಎಸ್‍ಎಸ್‍ಎಲ್‍ಸಿ, ಪಿಯುಸಿ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸುವುದು ಸೇರಿದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಕುಡಿಯರ ಮುತ್ತಪ್ಪ ಅವರು ಪರಿಶಿಷ್ಟ ಪಂಗಡದಲ್ಲಿ ಹಲವು ಸಮಾಜಗಳಿದ್ದು, ವಾಲ್ಮೀಕಿ ಸಮಾಜದ ಜೊತೆ ಯರವ, ಕುಡಿಯ, ಮಲೆ ಕುಡಿಯ, ಸೋಲಿಗ, ಕಾಡುಕುರುಬ, ಜೇನುಕುರುಬ, ಬೆಟ್ಟ ಕುರುಬ ಹೀಗೆ ಹಲವು ಸಮಾಜಗಳಿದ್ದು, ಇತರ ಸಮಾಜದಲ್ಲಿ ದುಡಿದವರನ್ನು ಗುರುತಿಸಿ…
ವಿರಾಜಪೇಟೆ ಅ.20 : ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಶ್ರೀ ವನದುರ್ಗಿ ಗುಡಿಯಲ್ಲಿ ನವರಾತ್ರಿ ಪ್ರಯುಕ್ತ ಪಂಚಮಿ ಉತ್ಸವ ಶ್ರದ್ಧಾಭಕ್ತಿಯಿಂದ ಜರಿಗಿತು. ದೇವಾಲಯದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕುಂಕುಮಾರ್ಚನೆ, ದೇವಿ ಅಷ್ಟೋತ್ತರ ಪಠಣ ಹಾಗೂ ಪಾರಾಯಣ ಮಾಡಿ ವಿಶೇಷ ಪೂಜಾ ಸೇವೆಯನ್ನು ಸಲ್ಲಿಸಿದರು. ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ವಿನಾಯಕ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಅ.20 : ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ 14 ವರ್ಷದ ಒಳಗಿನ ಬಿಭಾಗದಲ್ಲಿ ಕುಶಾಲನಗರದ ವಿಶಾಲ್ ಗಣನೀಯ ಸಾಧನೆ ತೋರುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕನಕಪುರದ ವಡೇರಪುರದಲ್ಲಿನ ಜೈನ್ ಕ್ರೀಡಾ ಶಾಲೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಶೇಷ ಸಾಧನೆ ತೋರಿರುವ ವಿಶಾಲ್ ಕಾಫಿ ಉದ್ಯಮಿ ಡಿ.ಎಂ.ಆನಂದ್ ಹಾಗೂ ಭವ್ಯ ಅವರ ಪುತ್ರ. ಇವನು ಕುಶಾಲನಗರದ ಉದ್ಗಂ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯತ್ತ ಹೆಚ್ಚಿನ ಉತ್ಸುಕತೆ ತೋರುವ ಮೂಲಕ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಲವಾರು ಪ್ತಶಸ್ತಿ ಗಳಿಸಿದ್ದಾನೆ.
ಮಡಿಕೇರಿ ಅ.20 : ‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ-2022”ರ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಅಕ್ಟೋಬರ್ 12, 2023 ರ ವಿಭಾಗೀಯ ಪೀಠದ ತೀರ್ಪಿನಂತೆ ಇದೇ ಮಾ.8 2023 ರಂದು ಪ್ರಕಟಿತ 1:1 ರ ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸೆಲಿಂಗ್‍ಗೆ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಅಕ್ಟೋಬರ್, 19 ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್‍ಸೈಟ್ https://schooleducation.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಕ್ರಮವಾಗಿ ಗಣಿತ ಮತ್ತು ವಿಜ್ಞಾನ, ಸಮಾಜ ಪಾಠಗಳು, ಜೀವಶಾಸ್ತ್ರ ಹಾಗೂ ಆಂಗ್ಲ ಭಾಷಾ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೌನ್ಸಲಿಂಗ್ ಪ್ರಕ್ರಿಯೆಯು ಅಕ್ಟೋಬರ್, 21 ರಂದು ಬೆಳಗ್ಗೆ 10 ಗಂಟೆಯಿಂದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್‍ಸೈಟ್‍ನಲ್ಲಿ ಇರುವಂತೆ ಎಲ್ಲಾ ಅಗತ್ಯ ವಿವರಗಳನ್ನು ಪಡೆದುಕೊಂಡು ಸಕಾಲದಲ್ಲಿ ಕೌನ್ಸೆಲಿಂಗ್ ಸ್ಥಳದಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಸಂಬಂಧಪಟ್ಟ ಅಗತ್ಯ ದಾಕಲೆಗಳೊಂದಿಗೆ…
ಮಡಿಕೇರಿ ಅ.20 : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (4.1) ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆ ಘಟಕ. (5.4) ಬ್ಯಾಕ್ಯಾರ್ಡ್ ಮಿನಿ ಆರ್‍ಎಎಸ್ ಘಟಕಗಳ ಸ್ಥಾಪನೆ. (1.4)ಹೊಸಮೀನು ಕೃಷಿ ಕೊಳ ನಿರ್ಮಾಣ(ಪ.ಜಾತಿ). (11.2) ಸಾಂಪ್ರದಾಯಿಕ ಮೀನುಗಾರರಿಗೆ ಯಾಂತ್ರಿಕೃತ ಎಫ್‍ಆರ್‍ಪಿ ದೋಣಿಗಳು ಖರೀದಿಗೆ ಸಹಾಯಧನ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ. ಈ ಉಪ ಯೋಜನೆ ಪ್ರಾರಂಭಿಸಲು ಶೇ.40 ರಷ್ಟು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮತ್ತು ಶೇ.60 ರಷ್ಟು ಪ.ಜಾತಿ/ ಪ.ಪಂಗಡ/ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಚಿನ್ ತಿಳಿಸಿದ್ದಾರೆ.
ಸೋಮವಾರಪೇಟೆ ಅ.20 : ಅರಳುತ್ತಿರುವ ಮುಗ್ದ ಮನಸಿನಲ್ಲಿ ಸಂಸ್ಕಾರ ಬಿತ್ತಿ ಬೆಳೆಸಿ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ ಭಟ್ ತಿಳಿಸಿದರು. ಶರನ್ನವ ರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಸರಸ್ವತಿ ಪೂಜೆಯಂದು ಮಕ್ಕಳಿಗೆ ಅಕ್ಷರಾಭ್ಯಾಸದ ಸಂದರ್ಭ ಮಾತನಾಡಿದರು. ಮಕ್ಕಳಿಗೆ ಇಂದು ತಾಯಿ ಸರಸ್ವತಿಯ ಅನುಗ್ರಹದಿಂದ ಅಕ್ಷರ ಕಲಿಸುವ ಮೂಲಕ ಅವರ ಜೀವನದಲ್ಲಿ ಕಲಿಕೆಯ ಮುನ್ನುಡಿ ಬರೆಯು ತ್ತಿದ್ದೇವೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಬಹಳ ಕಾಳಜಿ ವಹಿಸಬೇಕು. ಮಕ್ಕಳು ತಾವು ಹೇಳಿಕೊಟ್ಟದ್ದನ್ನು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ನೋಡಿ ಕಲಿಯುತ್ತಾರೆ ಆದ್ದರಿಂದ ತಂದೆ-ತಾಯಿಗಳು ಮನೆಯಲ್ಲಿ ಜಾಗೃತರಾಗಿರಬೇಕು ಹಾಗೂ ಒಳ್ಳೆಯ ಮಾತುಗಳನ್ನು ಆಡಬೇಕು. ಇದು ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು. ಇಂದಿನ ಮಕ್ಕಳಲ್ಲಿ ಸಂಸ್ಕಾರ ಭಿತ್ತಬೇಕಾಗಿದೆ, ನಮ್ಮ ಆಚಾರ, ವಿಚಾರ ಕಲಿಸಬೇಕು ಆಗ ನಮ್ಮ ಸಂಪ್ರದಾಯ ಉಳಿಯುತ್ತದೆ ಎಂದು ಸಲಹೆ ನೀಡಿದರು. ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ಸರಸ್ವತಿ ಅಲಂಕಾರ ದೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ…
ಮಡಿಕೇರಿ ಅ.20 : ಮಡಿಕೇರಿ ಅ.20 : ಪುಟಾಣಿ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣದೊಂದಿಗೆ, ಸಾಮಾಜಿಕ ವ್ಯವಹಾರಗಳ ಕುರಿತು ಅವರಲ್ಲಿ ಅರಿವು ಮೂಡಿಸುವ ಮಕ್ಕಳ ಸಂತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಮಕ್ಕಳ ದಸರಾ ಉತ್ಸವ’ದ ಸಂಭ್ರಮ ಗಾಂಧಿ ಮೈದಾನದ ಉದ್ದಗಲಕ್ಕೂ ವ್ಯಾಪಿಸಿ ಸಂತಸ ಮೂಡಿಸಿತು. ಮಡಿಕೇರಿ ದಸರಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತ ‘ಮಕ್ಕಳ ದಸರಾ ಉತ್ಸವ’ಕ್ಕೆ ಇಂದು ಬೆಳಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ವೇಗಿ ಅವರು ಛದ್ಮವೇಷಧಾರಿ ಪುಟಾಣಿ ಮಕ್ಕಳೊಂದಿಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನ ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾದ ಮಕ್ಕಳ ದಸರಾ ಆಯೋಜನೆ ಶ್ಲಾಘನೀಯ. ದಸರಾ ಉತ್ಸವದ ಸಂದರ್ಭ ಮತ್ತೆಲ್ಲೂ ಕಂಡು ಬಾರದ ಮಕ್ಕಳ ದಸರಾವನ್ನು ಮಡಿಕೇರಿಯಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುವುತ್ತಿರುವುದು ಉತ್ತಮವಾದ ಪ್ರಯತ್ನ. ತಾನು ತನ್ನ ಸರ್ಕಾರಿ…
ಕುಶಾಲನಗರ, ಅ.20 : ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಇದ್ದು, ಜಗತ್ತನ್ನೇ ಸೃಷ್ಟಿಸಿದ ಇತಿಹಾಸಗಳು ಇವೆ. ಅಲ್ಲದೆ ಎಲ್ಲಾ ಸಮಾಜಕ್ಕೂ ನಾಗರಿಕತೆ, ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ ಎಂದು ಗೌಡಳ್ಳಿ – ಬೀಟಿಕಟ್ಟೆಯ ಗುರುಪಾದ ಶಿಲ್ಪಾಕಲಾ ಪ್ರಧಾನ ಶಿಲ್ಪಿ ಹಾಗೂ ಕಲಾವಿದ ಶಿಲ್ಪಿ ಮಂಜುನಾಥ್ ಆಚಾರ್ಯ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಹೆಬ್ಬಾಲೆ ಕಾಳಿಕಾಂಭ ದೇವಾಲಯ ಸಮಿತಿ ಆಶ್ರಯದಲ್ಲಿ ಹೆಬ್ಬಾಲೆ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ ದಿವಂಗತ ಪುಟ್ಟಮ್ಮ ಮತ್ತು ಹೆಬ್ಬಾಲೆ ದಿ.ನಂಜಾಚಾರ್ ಅವರ ಜ್ಞಾಪಕಾರ್ಥವಾಗಿ ಏರ್ಪಡಿಸಲಾಗಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಮಾಜಕ್ಕೆ ವಿಶ್ವಕರ್ಮರ ಕೊಡುಗೆಗಳು ” ಎಂಬ ವಿಷಯದ ಕುರಿತು ಮಾತನಾಡಿದರು. ಪ್ರಾಚೀನ ಕಾಲದಿಂದ ಬಂದ ವಿಶ್ವಕರ್ಮ ಪರಂಪರೆಯನ್ನು ನಾವು ಉಳಿಸುವತ್ತ ಚಿಂತನೆ ಮಾಡಬೇಕಿದೆ. ಚಿತ್ರಕಲೆ, ಶಿಲ್ಪಕಲೆ ಹೀಗೆ ಹಲವಾರು ಕರಕುಶಲ ಕಲೆ ಬಗ್ಗೆ ಜನರಿಗೆ ತಿಳಿಸಿದ ವಿಶ್ವಕರ್ಮವು ಕರ್ಮವನ್ನು…






